ನಮಸ್ಕಾರ ವೀಕ್ಷಕರೇ ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಹುದ್ದೆಗಳಿಗೆ ನೇಮಕಾತಿ (VAO Recruitment) ಪ್ರಕಟಣೆ ಇದೀಗ ಸದ್ಯದಲ್ಲಿ ಹೊರ ಬೀಳಲಿದೆ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಅಧಿಕೃತ ಅಧಿಸೂಚನೆ ಪ್ರಕಟವಾಗುವ ನೀರಿಕ್ಷೆ ಇರುವುದರಿಂದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಯಾರೆಲ್ಲಾ ಕಾಯ್ತಾ ಇದ್ದೀರ ದಯವಿಟ್ಟು ಈಗಿನಿಂದಲೇ ಹುದ್ದೆಗಳಿಗೆ ತಯಾರಿಯನ್ನು ನಡೆಸಿ ನಿಮ್ಮ ಕನಸಿನ ಉದ್ಯೋಗವನ್ನಾಗಿಸಿಕೊಳ್ಳಬಹುದು.
VAO Recruitment Karnataka Kannada
ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು, ಈ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಹುದ್ದೆಗಳಿಗೆ ನೇರ ನೇಮಕಾತಿ
ಸಾಮಾನ್ಯವಾಗಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ಪಡೆದುಕೊಂಡು ಜೀವನದಲ್ಲಿ ಸೆಟಲ್ ಆಗಬೇಕು ಅಂತ ತುಂಬಾ ಜನ ಕಾಯ್ತಾ ಇರ್ತಾರೆ ಇದಕ್ಕೆ ಕೇವಲ ಪಿಯುಸಿ ಮುಗ್ಸಿದ್ರೆ ಸಾಕು, ಆರಾಮವಾಗಿ ಈ ಉದ್ಯೋಗವನ್ನು ಪಡೆದುಕೊಳ್ಳಬಹುದು.
ಸರ್ಕಾರಿ ಉದ್ಯೋಗ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳುವುದಕ್ಕೂ ಅದೃಷ್ಟ ಬೇಕು ಹಾಗಾಗಿ ತುಂಬಾ ಜನ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗವನ್ನಾಗಿ ತಿಳಿಸಿಕೊಡಬೇಕು ಅಂತ ಕಷ್ಟಪಟ್ಟು ಹೊಡೆದು ರಾತ್ರಿ ಓದುತ್ತಿರುತ್ತಾರೆ. ಇಂಥವರಿಗೆ ಅಂತನೇ ಇದೀಗ ಹೊಚ್ಚಹೊಸ ನೇಮಕಾತಿಯನ್ನು ಸದ್ಯದಲ್ಲೇ ಶುರು ಮಾಡಲಿದ್ದು ಖಂಡಿತ ಈ ಹುದ್ದೆಗೆ ತಯಾರು ನಡೆಸುತ್ತಿರುವವರಿಗೆ ಇದೊಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು.
| ನೇಮಕಾತಿ ಪ್ರಾಧಿಕಾರ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) |
| ಹುದ್ದೆ ಹೆಸರು | ಗ್ರಾಮ ಆಡಳಿತ ಅಧಿಕಾರಿ (Village Administrative Officer – VAO) |
| ಇಲಾಖೆ | ಕಂದಾಯ ಇಲಾಖೆ |
| ಒಟ್ಟು ಹುದ್ದೆಗಳು | 500 |
ಶೈಕ್ಷಣಿಕ ಅರ್ಹತೆ ಏನು ಬೇಕು:
ಕರ್ನಾಟಕ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ (VAO Recruitment) ಹುದ್ದೆಗಳ ನೇಮಕಾತಿಗೆ ನಿಗದಿತ ವಿದ್ಯಾರ್ಥಿಯನ್ನು ಕೇಳಿದ್ದು ಈ ಅರ್ಹತೆ ನಿಮ್ಮಲ್ಲಿ ಇದ್ದರೆ ಖಂಡಿತವಾಗಿಯೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು
ವೇತನ ವಿವರ:
ತಂದೆಯ ಇಲಾಖೆಯಲ್ಲಿನ ಗ್ರಾಮ ಆಡಳಿತ ಅಧಿಕಾರಿ (VAO Recruitment) ಹುದ್ದೆಗಳನ್ನು ನೇಮಕಾತಿ ಮಾಡಿಕೊಂಡ ನಂತರ ವೇತನ ಶ್ರೇಣಿಯಲ್ಲಿ ಸಾಕಷ್ಟು ಬದಲಾವಣೆಗಳು ಇದ್ದರೂ ಸಹ ಒಂದು ಅಂದಾಜಿನ ಪ್ರಕಾರ ಈ ಕೆಳಗೆ ಕೊಟ್ಟಿರುವ ವೇತನ ಶ್ರೇಣಿ ನಿರೀಕ್ಷಿಸಬಹುದು
ಪ್ರಾರಂಭದಲ್ಲಿ ವೇತನ ಸುಮಾರು – 21,400 ಇಂದ ಗರಿಷ್ಠ 42,000 ವೇತನವನ್ನು ನೀಡಲಾಗುತ್ತದೆ
ಇದರ ಜೊತೆಗೆ ಸರ್ಕಾರಿ ವೇತನ ಶ್ರೇಣಿಯ ಅನ್ವಯ ಇತರೆ ಭಾಗ್ಯಗಳು ಡಿಎ ಹೆಚ್ಆರ್‌ಎ (DA, HRA) ಮತ್ತು ಇತರೆ ಸರ್ಕಾರಿ ಸೌಲಭ್ಯಗಳು ಸಹ ಈ ಹುದ್ದೆಗೆ ಲಭ್ಯವಿದ್ದು ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಅಂತಾನೇ ಹೇಳಬಹುದು.

ಅರ್ಜಿ ಶುಲ್ಕ ವಿವರ :
ಈ ಕೆಳಗೆ ಕೊಟ್ಟಿರುವ ಅರ್ಜಿ ಶುಲ್ಕವು ಕೇವಲ ಒಂದು ಅಂದಾಜಿನ ಪ್ರಕಾರ ಅಷ್ಟೇ ಇದು ಪ್ರಾಧಿಕಾರದ ನಿಯಮಗಳ ಪ್ರಕಾರ ಬದಲಾವಣೆ ಆಗಬಹುದು ಹಾಗಾಗಿ ವಿಲೇಜ್ ಅಕೌಂಟೆಂಟ್ (VAO Recruitment) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಬಂದ ನಂತರ ಈ ಅರ್ಜಿ ಶುಲ್ಕದ ಬಗ್ಗೆ ಪಕ್ಕಾ ಮಾಹಿತಿ ತಿಳಿಯುತ್ತದೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿತ ಅರ್ಜಿ ಶುಲ್ಕವನ್ನು ವಿಧಿಸಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಈ ಹುದ್ದೆಗಳಿಗೆ ಕೆಟಗರಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.
| ಸಾಮಾನ್ಯ/OBC: | ₹500-₹600 |
| SC/ST: ಅಂದಾಜು | ₹250-₹300 |
ವಯೋಮಿತಿಯ ಸಂಪೂರ್ಣ ವಿವರ:
- ಕನಿಷ್ಠ ವಯೋಮಿತಿ :18 ವರ್ಷ
- ಗರಿಷ್ಠ ವಯೋಮಿತಿ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ
- ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ
- ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ
ವಯೋಮಿತಿ ಸಡಿಲಿಕೆ ಮಾಹಿತಿ:
- ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ
- ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳಿಗೆ ಮಾಡಲಾಗಿದೆ
- ಇತರೆ ವಿಶೇಷ ವರ್ಗಗಳಿಗೆ ಸರ್ಕಾರದ ನಿಯಮಗಳ ಅನುಸಾರವಾಗಿ ವಯೋಮಿತಿಸಲಿಕೆಯನ್ನು ಮಾಡಲಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ದಾಖಲೆಗಳು:
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಆಧಾರ್ ಕಾರ್ಡ್
- ಮಾರ್ಕ್ಸ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ದಾಖಲಾತಿ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಮೀಸಲಾತಿ ಕೋರುವ ಅಭ್ಯರ್ಥಿಗಳು ಪ್ರಮಾಣ ಪತ್ರಗಳು:
- ಕನ್ನಡ ಮಾಧ್ಯಮ ಪ್ರಮಾಣ ಪತ್ರ
- ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ
- ಅಂಗವಿಕಲ ಪ್ರಮಾಣ ಪತ್ರ
- ವಿಧವೆಯ ಪ್ರಮಾಣ ಪತ್ರ
- ಮಾಜಿ ಸೈನಿಕ ಪ್ರಮಾಣ ಪತ್ರ
ವಿಶೇಷ ಸೂಚನೆ:
| ಈ ಹುದ್ದೆಗಳಿಗೆ ಪ್ರಸ್ತುತ ಅರ್ಜಿ ಸಲ್ಲಿಸುವ ಅವಕಾಶವನ್ನ ಬಿಟ್ಟಿಲ್ಲ ಮುಂದಿನ ದಿನಗಳಲ್ಲಿ ಹುದ್ದೆಗಳಿಗೆ ಅರ್ಜಿ (VAO Recruitment) ಸಲ್ಲಿಸಲು ಅವಕಾಶವನ್ನ ಬಿಡಲಿದ್ದು ಪ್ರಸ್ತುತ ಅನುಮೋದನೆ ಈ ಹುದ್ದೆಗಳಿಗೆ ಅನುಮೋದನೆ ದೊರೆತಿದೆ ಹಾಗಾಗಿ ಹುದ್ದೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚಿನ ಕಠಿಣ ಪರಿಶ್ರಮದೊಂದಿಗೆ ತಯಾರಿ ನಡೆಸಿ. |
ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ?
| ಸೂಚನೆ : ಅಂಕಗಳ ಆಧಾರದ ಮೇಲೆ ಆಯ್ಕೆ ಇರುವುದಿಲ್ಲ |
- ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆಯನ್ನು ನಡೆಸಲಿದ್ದು
- ದಾಖಲಾತಿ ಪರಿಶೀಲನೆಯನ್ನು ತದನಂತರ ಮಾಡಲಾಗುತ್ತದೆ
ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಕನ್ನಡ ಇಂಗ್ಲಿಷ್ ಮತ್ತು ಗಣಿತ ವಿಷಯಗಳು ಪ್ರಶ್ನೋತ್ತರಗಳನ್ನ ನೋಡಬಹುದು
ಅರ್ಜಿ ಸಲ್ಲಿಸುವುದು ಹೇಗೆ?
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
- ವಿ ಎ ಓ (VAO Recruitment Notification) ರಿಕ್ರೂಟ್ಮೆಂಟ್ ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ
- ಆನ್ ಲೈನ್ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ
- ಅಗತ್ಯ ದಾಖಲೆಗಳೊಂದಿಗೆ ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕವನ್ನ ಪಾವತಿಸಿ
- ಅರ್ಜಿ ಸಲ್ಲಿಸಿದ ನಂತರ ಬಂದಿರುವಂತಹ ಅರ್ಜಿ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
| ಅರ್ಜಿ ಸಲ್ಲಿಸಲು ಅಧಿಸೂಚನೆಯ ಪ್ರಕಟ ದಿನಾಂಕ | ಶೀಘ್ರದಲ್ಲೇ |
| ಅರ್ಜಿ ಪ್ರಾರಂಭ ದಿನಾಂಕ | ಶೀಘ್ರದಲ್ಲೇ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಶೀಘ್ರದಲ್ಲೇ |
| ಪರೀಕ್ಷಾ ದಿನಾಂಕ | ಶೀಘ್ರದಲ್ಲೇ |
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು:
| ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಜಾಲತಾಣ | https://kea.kar.nic.in |
| ಕಂದಾಯ ಇಲಾಖೆಯ ವೆಬ್ಸೈಟ್ | https://revenue.karnataka.gov.in |
ಅಂತಿಮ ಮಾತು:
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅಧಿಕೃತ ಅಧಿಸೂಚನೆ ಹೊರಬೀಳುವ ಮುನ್ನ ಎಲ್ಲ ರೀತಿಯಾದ ತಯಾರಿಯನ್ನ ನಡೆಸಿ ಅಧಿಕೃತ ಅಧಿಸೂಚನೆ ಹೊರಬಿದ್ದ ನಂತರ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನಿಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಲು ಎಲ್ಲ ರೀತಿಯಾದ ತಯಾರಿಯನ್ನು ನಡೆಸಿ ಪರೀಕ್ಷೆ ದಿನಾಂಕ ಪ್ರಕಟವಾದ ನಂತರ ನಾವು ಮತ್ತೊಮ್ಮೆ ನಿಮಗೆ ಅಪ್ಡೇಟ್ ನೀಡುತ್ತೇವೆ.
ಇತರೆ ಪ್ರಮುಖ ಲಿಂಕುಗಳು :-
- Sewing Machine : ಕರ್ನಾಟಕದ ಈ ಎರಡು ಜಿಲ್ಲೆಯ ಮಹಿಳೆಯರಿಗೆ
- DLSA: ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026
- Arecanut Plantation Subsidy : ₹1 ಲಕ್ಷದವರೆಗೆ ಅಡಿಕೆ ತೋಟಕ್ಕೆ ಸಬ್ಸಿಡಿ!

