ಸ್ನೇಹಿತರೆ ನೀವು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಲ್ಲಿ ಖಾಲಿ ಇರುವಂತಹ ಅನೇಕ ಹುದ್ದೆಗಳ ಬರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಇದೀಗ ಇಲಾಖೆ ಪ್ರಕಟ ಮಾಡಿದ್ದೂ ಇಂದಿನಿಂದ ಆನ್ಲೈನ್ ಅರ್ಜಿ ಆರಂಭವಾಗಿದೆ. ನೀವೇನಾದರೂ UPSC ಯಲ್ಲಿ ಉದ್ಯೋಗ ಮಾಡಲು ಆಸಕ್ತಿ ಮತ್ತು ಅರ್ಹತೆಯನ್ನು ಹೊಂದಿದ್ದರೆ “ಕೇಂದ್ರ ಲೋಕಸೇವಾ ಆಯೋಗದ” ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಕೂಡ ಸಲ್ಲಿಸಬಹುದು “ನಿಮ್ಮ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಮಾರ್ಚ್ 12, 2026 ಒಳಗೆ ಇರಲಿ”
ಕೇಂದ್ರ ಲೋಕಸೇವಾ ಆಯೋಗದ (UPSC)ಕೆಲಸ ಮಾಡಲು ಎದುರು ನೋಡುತ್ತಿರುವ ಯುವಕ ಯುವತಿಯರಿಗೆ ಇದೊಂದು ಸುವರ್ಣ ಅವಕಾಶ ಅಂತಾನೆ ಹೇಳಬಹುದು. ಅಭ್ಯರ್ಥಿಗಳೇ ನೀವು ಈ ಹುದ್ದೆಯ ಬಗ್ಗೆ ಸಂಬಂಧಪಟ್ಟ “ಹುದ್ದೆಗಳ ಸಂಖ್ಯೆ, ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು, ಕರ್ತವ್ಯ ನಿರ್ವಹಿಸುವ ಸ್ಥಳವಾದರೂ ಎಲ್ಲಿ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನಗಳು ಹೇಗೆ ವಯೋಮಿತಿ ಮಾನದಂಡ ಹೀಗೆ ಇನ್ನಿತರ ಮಾಹಿತಿಯನ್ನು ಕೇಳಗೆ ನಿಮಗಾಗಿ ಸಂಪೂರ್ಣವಾಗಿ ವಿವರಣೆಯನ್ನು ನೀಡಲಾಗಿದೆ”.
UPSC Recruitment In Kannada
ಕೇಂದ್ರ ಲೋಕಸೇವಾ ಆಯೋಗ (UPSC) 349 ಸಹಾಯಕ ಕಮಾಂಡೆಂಟ್ ಗಳು ಗ್ರೂಪ್ ಎ ನೇಮಕಾತಿ 2026ರ ಅಧಿಸೂಚನೆಯನ್ನು ಫೆಬ್ರವರಿ 2026 ರಂದು ಅಧಿಕೃತ ವೆಬ್ಸೈಟ್ www.upsc.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.

UPSC ಹುದ್ದೆಗಳ ಮುಖ್ಯ ಹೈಲೆಟ್ಸ್ :-
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಲ್ಲಿ ಕಮಾಂಡೆಂಟ್ ಗಳು (ಗ್ರೂಪ್ ಎ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಈ ಹುದ್ದೆಯ ಬಗ್ಗೆ ಸರಳವಾಗಿ ವೇಗವಾಗಿ ಮಾಹಿತಿ ತಿಳಿಯಲು ಮುಖ್ಯ ಪಾಯಿಂಟ್ ಅನ್ನ ಈ ಕೆಳಗೆ ಚಾರ್ಟ್ ಮೂಲಕ ಅಭ್ಯರ್ಥಿಗಳಿಗೆ ಅರ್ಥವಾಗುವ ಹಾಗೆ ತಿಳಿಸಲಾಗಿದೆ.
| ವಿವರಣೆ | ಮಾಹಿತಿ |
|---|---|
| ಸಂಸ್ಥೆ | ಕೇಂದ್ರ ಲೋಕಸೇವಾ ಆಯೋಗ |
| ಹುದ್ದೆಯ ಹೆಸರು | ಕೇಂದ್ರ ಸಶಾಸ್ತ್ರ ಪೊಲೀಸ್ ಪಡೆಗಳಲ್ಲಿ ಸಹಾಯಕ ಕಮಾಂಡೆಂಟ್ ಗಳು BSF, CRPF, CISF,SSB, ITBP |
| ಒಟ್ಟು ಹುದ್ದೆಗಳು | 349 ಹುದ್ದೆಗಳು |
| ಅರ್ಜಿ ಆರಂಭದ ದಿನಾಂಕ | ಫೆಬ್ರವರಿ 20 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಮಾರ್ಚ್ 12 2026 |
| ಪರೀಕ್ಷೆಯ ದಿನಾಂಕ | 19 ಜುಲೈ 2026 |
| ವಯೋಮಿತಿ | 20 ರಿಂದ 25 ವರ್ಷಗಳು |
| ಆಯ್ಕೆ ವಿಧಾನ | ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ |
| ಅರ್ಜಿ ಶುಲ್ಕ | ₹200(SC/ST/ಮಹಿಳೆಯರಿಗೆ ವಿನಾಯಿತಿ ಇದೆ) |
| ಅಧಿಕೃತ ವೆಬ್ಸೈಟ್ | www.upsc.gov.in |
ಒಟ್ಟು ಹುದ್ದೆಗಳ ಸಂಖ್ಯೆ :-
ಕೇಂದ್ರ ಲೋಕಸೇವಾ ಆಯೋಗ ಸಹಾಯಕ ಕಮಾಂಡೆಂಟ್ ಗಳು ನೇಮಕಾತಿ 2026ರ ಅಧಿಸೂಚನೆಯ ಪ್ರಕಾರ ಒಟ್ಟು 369 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.ಇಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವವರು 20 ವರ್ಷದಿಂದ 25 ವರ್ಷ ವಯಸ್ಸಿನ ಅಭ್ಯರ್ಥಿಗಳು ಈ ಸಹಾಯ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅರ್ಹರು.
ಹುದ್ದೆಗಳ ಹೆಸರು :-
ಪ್ರೆಂಡ್ಸ್ ನೀವು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ ಹಾಗಾದ್ರೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಿಮಗೆ ಉತ್ತಮ ವೃತ್ತಿ ಜೀವನವನ್ನು ರೂಪಿಸಿಕೊಳಲ್ಲು ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ. ಬಿಡುಗಡೆ ಮಾಡಿದೆ
- ಗಡಿ ಭದ್ರತಾ (BSF)
- ಕೇಂದ್ರ ಮೀಸಲು ಪೊಲೀಸ (CRPF)
- ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)
- ಸಶಸ್ತ್ರ ಸಿಮಾ ಬಲ (SSB)
- ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)
ಈ ಮೇಲೆ ನೀಡಲಾದ ಪ್ರಮುಖ ಹುದ್ದೆಗಳು ಖಾಲಿ ಇರುವಂತಹ ನೋಟಿಫಿಕೇಶನ್ ಈಗಾಗಲೇ ಹೊರ ಬಿದ್ದಿದ್ದು ಇಂದಿನಿಂದ (UPSC) ಆನ್ಲೈನ್ ಅರ್ಜಿ ಆರಂಭವಾಗಿದೆ ಕೊನೆಯ ದಿನಾಂಕದ ವರೆಗೆ ಕಾಯದೆ ಈಗಲೇ ಹೋಗಿ ಅರ್ಜಿ ಸಲ್ಲಿಸಿ.
ಯಾವ ಯಾವ ಹುದ್ದೆಗಳು ಎಸ್ಟೆಸ್ಟ್ ಇವೆ ?
ಮೇಲೆ ಕೊಟ್ಟಿರುವ ಅಂಶಗಳನ್ನು ಅಭ್ಯರ್ಥಿಗಳು ಓದುತ್ತಾ ಬಂದಲ್ಲಿ ನಂತರ UPSC ಯಲ್ಲಿ ಇಷ್ಟೊಂದು ಹುದ್ದೆಗಳಿವೆ ಅವುಗಳಲ್ಲಿ ನನಗೆ ಯೋಗ್ಯವಾದ ಹುದ್ದೆ ಯಾವುದು ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ನಿಮ್ಮ ಪ್ರಶ್ನೆಗೆ ಒಂದು ಸುಂದರ ಚಾರ್ಟ್ ಮೂಲಕ ತಿಳಿಸಿಕೊಡುತ್ತೇನೆ ನೋಡಿ
| ಕ್ರಮ ಸಂಖ್ಯೆ | ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| 1 | ಗಡಿ ಭದ್ರತಾ (BSF)ಕಮಾಂಡೆಂಟ್ | 108 |
| 2 | ಕೇಂದ್ರ ಮೀಸಲು ಪೊಲೀಸ (CRPF) | 106 |
| 3 | ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) | 70 |
| 4 | ಸಶಸ್ತ್ರ ಸಿಮಾ ಬಲ (SSB) | 53 |
| 5 | ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) | 12 |
ನಾನು ಉದ್ಯೋಗ ಪಡೆದರೆ ಹೇಗೆ ಕೆಲಸ ನಿರ್ವಹಿಸಬೇಕು?
ಕೆಲವು ಅಭ್ಯರ್ಥಿಗಳಿಗೆ UPSC ಇಲಾಖೆಯು ನೀಡಲಾದ ಇಷ್ಟೊಂದು ಹುದ್ದೆಗಳಿಗೆ ನಾವು ಅರ್ಜಿಯನ್ನು ಸಲ್ಲಿಸಿದರೆ ಇಲ್ಲಿ ಯಾವ ಯಾವ ರೀತಿಯಲ್ಲಿ ಕೆಲಸವನ್ನ ನಿರ್ವಹಿಸಬೇಕು ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಬಹಳಷ್ಟು ಕಾಡುತ್ತಿರುತ್ತದೆ. ಹಾಗಾಗಿ ಈ ಹುದ್ದೆಗಳೆಲ್ಲ ಯಾವ ರೀತಿಯ ಕೆಲಸವನ್ನು ನಿರ್ವಹಿಸುತ್ತದೆ ಎನ್ನುವ ವಿವರವನ್ನು ಈಗಲೇ ತಿಳಿಯಿರಿ.
1.ತಂಡ ನಿರ್ವಹಣೆ(Team Management) – ದಳದ ದಿನನಿತ್ಯದ ಕಾರ್ಯಗಳು ನಿರ್ವಹಣೆ ಶಾರೀರಿಕ ತರಬೇತಿ ಶಶಾಸ್ತ್ರ ತರಬೇತಿ ಮೇಲ್ವಿಚಾರಣೆ.
2.ಫೀಲ್ಡ್ ಕಾರ್ಯಗಳು(Field Tasks) – ಪೆಟ್ರೋಲ್ ಗಾಡಿಯ ನಿಯಂತ್ರಣ ಉಗ್ರತಂತ್ರ ವಿರುದ್ಧ ಕಾರ್ಯಾಚರಣೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಶಕ್ತಿ ನಿಯಂತ್ರಣ ಕಾರ್ಯ ಭದ್ರತಾ ಕಾರ್ಯ ನಿರ್ವಹಿಸಬೇಕು
3.ಆಡಳಿತ ನಿರ್ವಹಣೆ(Management Report) – ವರದಿ ತಯಾರಿ ಡಿಸಿಪ್ಲಿನ್ ಪಾದನೆ ದಳದ ಕೆಲಸಗಳ ಪರಿಶೀಲನೆ ಸ್ಥಳೀಯ ಅಧಿಕಾರಿಗಳು ಮತ್ತು ಸಮುದಾಯದೊಂದಿಗೆ ಸಂಪರ್ಕ ಸಾಧನ
4.ಆಫೀಸ್ ಡಿಸಿಪ್ಲಿನರಿ ಕೆಲಸಗಳು(Office disciplinary works) – ಲಿಖಿತ ವರದಿ ತಹಶೀಲ್ದಾರ್ ವರದಿ ಅಧಿಕೃತ ದಾಖಲೆ ನಿರ್ವಹಣೆ ತಂಡದ ಕಾರ್ಯ ಕ್ಷಮತೆ ವಿಶ್ಲೇಷಣೆ ಮತ್ತು ಸುಧಾರಣೆ.
ಉದ್ಯೋಗದ ಸ್ಥಳ:-
ಕೇಂದ್ರ ಲೋಕಸೇವಾ ಆಯೋಗದಲ್ಲಿ(UPSC) ಖಾಲಿ ಇರುವ ಕಮಾಂಡೆಂಟ್ ಹುದ್ದೆಗಳ ಕೆಲಸ ನಿರ್ವಹಿಸುವ ಸ್ಥಳಗಳು
ಗಡಿ ಭದ್ರತಾ (Border Service Force):
- ಭಾರತ-ಪಾಕಿಸ್ತಾನ
- ಭಾರತ – ಬಾಂಗ್ಲಾದೇಶ ಸೀಮೆ
- ರಾಜಸ್ಥಾನ್
- ಪಂಜಾಬ್
- ಹಿಮಾಚಲ ಪ್ರದೇಶ
- ಮತ್ತಿತರ ಗಡಿ ಪ್ರದೇಶಗಳು
ಕೇಂದ್ರ ಮೀಸಲು ಪೊಲೀಸ (Central Reserve Police Force)
- ದೇಶಾದ್ಯಂತ ಉಗ್ರ ತಂತ್ರ ಆಂತರಿಕ ಭದ್ರತೆ ಕಾರ್ಯ
- ಪ್ರಮುಖ ರಾಜ್ಯಗಳು ಜಮ್ಮು ಕಾಶ್ಮೀರ
- ಉತ್ತರ ಪ್ರದೇಶ
- ಛತೀಸ್ ಗಡ್
- ಜಾರ್ಖಂಡ್
- ಕೆಲವೊಂದು ಹಂತಗಳಲ್ಲಿ ಬೇರೆ ರಾಜ್ಯಗಳಿಗೆ ಹೋಗಬೇಕಾಗುತ್ತದೆ
ಕೇಂದ್ರ ಕೈಗಾರಿಕಾ ಭದ್ರತಾ ಪಡೆ(Central Industrial Security Force)
- ದೇಶದಿಂದ ಪ್ರಮುಖ ಉದ್ಯಮ ಕೇಂದ್ರಗಳು ಮತ್ತು ವಿಮಾನ ನಿಲ್ದಾಣಗಳು
- ನಗರ ಪ್ರದೇಶಗಳಲ್ಲಿ ಕಚೇರಿ ಮತ್ತು ಫೀಲ್ಡ್ ವರ್ಕ್ ಕಾರ್ಯ
- ಮುಖ್ಯಸ್ಥಳಗಳು: ಎಲೆಕ್ಟ್ರಾನಿಕ್ಸ್ ಎನರ್ಜಿ ಟೆರಿಟೋರಿಯಲ್ ಘಟಕಗಳು ವಿಮಾನ ನಿಲ್ದಾಣಗಳು ರೈಲ್ವೆ ನಿಲ್ದಾಣಗಳು ನ್ಯೂಕ್ಲಿಯರ್ ಅಂಡ್ ಡಿಫೆನ್ಸ್ ಘಟಕಗಳು.
ಸಶಸ್ತ್ರ ಸಿಮಾ ಬಲ (Armed Border Force)
- ಭದ್ರತಾ ಕಾರ್ಯಗಳು ಆಗಿದೆ ಗಡಿ ನಿಯಂತ್ರಣ ಪೆಟ್ರೋಲ್ ಪೆಟ್ರೋಲ್ ನಿರೀಕ್ಷಾ ಕಾರ್ಯ ಆಂತರಿಕ ಭದ್ರತೆ ಸೀಮಾ ಸಮೀಪದ ಗ್ರಾಮೀಣ ಪ್ರದೇಶಗಳಲ್ಲಿ ಶಾಂತಿ ಕಾಯ್ದುಕೊಳ್ಳಲು ಸಹಾಯ
- ಭಾರತ – ನೇಪಾಳ ಸೀಮೆ
- ಭಾರತ – ಭೂತಾನ್
- ಉತ್ತರಕಾಂಡ್
- ಸಿಕ್ಕಿಂ
- ಉತ್ತರ ಭಾರತ
- ಹಿಮಾಲಯ ಪ್ರದೇಶಗಳು
ಕೆಲಸದ ಸಮಯ :-
2026ರ UPSC ಕಮಾಂಡೆಂಟ್ ನೇಮಕಾತಿಯ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕೆಲಸದ ಅವಧಿಯನ್ನ ತಿಳಿಯಲು ಬಯಸಿದರೆ ಈ ಕೆಳಗೆ ವಿವರಣೆ ನೀಡಲಾಗಿದೆ.
| ವಿವರ | ಮಾಹಿತಿ |
|---|---|
| ತರಬೇತಿ ನಡೆಯುವ ಅವಧಿ (Duration) | 44 ವಾರಗಳು ಸುಮಾರು 10 ಅಥವಾ 11 ತಿಂಗಳುಗಳು |
| ದೈನಂದಿನ ಕೆಲಸದ ನಿರ್ದಿಷ್ಟ ಸಮಯ | 8 ಗಂಟೆಗಳು |
| ವಾರದ ಒಟ್ಟು ಅವಧಿ | 40 ಗಂಟೆಗಳು |
| ಶಿಫ್ಟ್ (Shifts) ಯಾವ ರೀತಿ ಇರುತ್ತದೆ | ಸಾಮಾನ್ಯ ಶಿಫ್ಟ್ (ಕೆಲವೊಮ್ಮೆ ಸರದಿಯಂತೆ) |
| ತರಬೇತಿ ನಂತರದ ಸ್ಥಿತಿ ಹೇಗೆ | ಪೂರ್ಣಗೊಂಡ ನಂತರ ಪ್ರಮಾಣಪತ್ರ ನೀಡಲಾಗುತ್ತದೆ |
| ಪರೀಕ್ಷೆ ನಡೆಯುವ ಅವಧಿ | 2 ರಿಂದ 3 ಗಂಟೆಗಳು |
ಶೈಕ್ಷಣಿಕ ಅರ್ಹತೆಗಳು:-
UPSC ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಲು ಕೆಲವೊಂದು ವಿದ್ಯಾರ್ಥಿಯನ್ನು ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತದೆ.
- ಅಭ್ಯರ್ಥಿಯು ಭಾರತದಲ್ಲಿ ಕೇಂದ್ರ ಅಥವಾ ರಾಜ್ಯ ಶಾಸಕಾಂಗದ ಕಾಯ್ದೆಯಿಂದ ಸಂಯೋಜಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
- ಅಥವಾ ಸಂಸತ್ತಿನ ಕಾಯ್ದೆಯಿಂದ ಸ್ಥಾಪಿಸಲಾದ ಶಿಕ್ಷಣ ಸಂಸ್ಥೆಗಳಿಂದ ಕ್ಯೂಆರ್ ವಿಶ್ವವಿದ್ಯಾಲಯದ ಅನುದಾನ ಆಯೋಗ ಕಾಯ್ದೆ 1956ರ ಸೆಕ್ಷನ್ 3 ಅಡಿಯಲ್ಲಿ ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ ಸಮಾನ ಅರ್ಹತೆಯನ್ನು ಹೊಂದಿರಬೇಕು
- ಅರ್ಹ ಅಭ್ಯರ್ಥಿಗಳು ನಿಯಮಗಳಲ್ಲಿ ನಿಗದಿಪಡಿಸಿದ ಸಮಯದ ಮಿತಿ ಒಳಗೆ ಅಗತ್ಯವಿರುವ ಅರ್ಹತಾ ಪರೀಕ್ಷೆಯಲ್ಲಿ (ಪದವಿ ಪ್ರಮಾಣ ಪತ್ರ ಅಂತಿಮ ಅಂಕಪಟ್ಟಿ ತಾತ್ಕಾಲಿಕ ಪದವಿ ಪ್ರಮಾಣ ಪತ್ರ)ಉತ್ತೀರ್ಣರಾದ ಪುರಾವೆಯನ್ನು ಹಾಜರುಪಡಿಸಬೇಕು ದೂರ ಶಿಕ್ಷಣ ಅರೆಕಾಲಿಕ ಮೂಲಕ ಪಡೆದ ಪದವಿ ಸ್ನಾತೋಕೋತ್ತರ ಪದವಿ ಡಿಪ್ಲೋಮೋ ಅರ್ಹತೆಗಳನ್ನು ಪರಿಗಣಿಸಲಾಗುವುದಿಲ್ಲ
- ಅಥವಾ ಸಮಾನ ಅರ್ಹತೆಯನ್ನು ಹೊಂದಿರಬೇಕು ಶೈಕ್ಷಣಿಕವಾಗಿ ಅರ್ಹತೆ ಪಡೆಯುವ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಫಲಿತಾಂಶಗಳ ಬಗ್ಗೆ ತಿಳಿಸಲಾದ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ.
ವಯೋಮಿತಿ:-
- ನೀವೇನಾದರೂ ರಾಜ್ಯ ಲೋಕಸೇವಾ ಆಯೋಗದಲ್ಲಿ ಇಲಾಖೆಯಲ್ಲಿ ಕೆಲಸ ಮಾಡಬೇಕೆಂದು ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ವಯಸ್ಸಿನ ಮಿತಿಯು ಕನಿಷ್ಠ 20 ವರ್ಷಗಳು ಹಾಗೆಯೇ ಗರಿಷ್ಠ ವಯೋಮಿತಿಯು 25 ವರ್ಷದ ಒಳಗೆ ಇದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸುವ ಮುಕ್ತ ಅವಕಾಶವನ್ನು ಇಲಾಖೆ ನೀಡಿದೆ
ವಯೋಮಿತಿ ಸಡಿಲಿಕೆ :-
UPSC ಹುದ್ದೆಗೆ ಇಲಾಖೆ ಅಧಿಕೃತ ನೋಟಿಫಿಕೇಶನ್ ನಲ್ಲಿ ವಯೋಮಿತಿ ಸಡಿಲಿಕೆಯನ್ನು ನೀಡಿದ್ದಾರೆ. ಯಾವ ರೀತಿ ತಡಿಲಿಕ್ಕೆ ಇದೆ ಎನ್ನುವುದನ್ನು ತಿಳಿಯೋಣ.
- OBC: 3 ವರ್ಷ ಹೆಚ್ಚುವರಿ
- SC/ST: 5 ವರ್ಷ ಹೆಚ್ಚುವರಿ
- PWD (ಅಂಗವಿಕಲ ವ್ಯಕ್ತಿಗಳು): 10 ವರ್ಷ ಹೆಚ್ಚುವರಿ
- ಮಾಜಿ ಸೈನಿಕರು:
- 10 ವರ್ಷ ಹೆಚ್ಚುವರಿ ವಯೋಮಿತಿ
- 6 ತಿಂಗಳ ಸೇವೆ ಇದ್ದರೆ ಮತ್ತಷ್ಟು 3 ವರ್ಷ
- ಈಗಾಗಲೇ ಸರ್ಕಾರಿ ಉದ್ಯೋಗ ಇದ್ದರೆ ಸಡಿಲಿಕೆ ಅನ್ವಯಿಸದು
- ಮಾಜಿ ಸೈನಿಕರು ಮತ್ತು ಅವರ ಮಕ್ಕಳ ಶಿಷ್ಯವೃತ್ತಿ ಪರಿಗಣನೆ
- ಶಾಂತಿಕಾಲದಲ್ಲಿ ಕೊಲ್ಲಲ್ಪಟ್ಟ/ಅಂಗವಿಕಲ ಮಾಜಿ ಸೈನಿಕರು ಮತ್ತು ಅವರ ಮಕ್ಕಳು
- ಮೃತ ಅಥವಾ ಅಂಗವಿಕಲ ಮಾಜಿ ಸೈನಿಕರ ಮಕ್ಕಳು
- ಸೇವೆ ಸಲ್ಲಿಸುತ್ತಿರುವ ಯೋಧರ ಮಕ್ಕಳು
- ಸೇವೆಯಲ್ಲಿರುವ ಅಧಿಕಾರಿಗಳ ಮಕ್ಕಳು
- ಮಾಜಿ ಸೈನಿಕರು
ಸಂಬಳ:-
- ಕೇಂದ್ರ ಸರ್ಕಾರ ಪೊಲೀಸ್ ಪಡೆಗಳಲ್ಲಿ ಸಹಾಯಕ ಕಮಾಂಡೆಂಟ್ ಗಳು ವೇತನ ಶ್ರೇಣಿ
- ಹುದ್ದೆಗೆ ಸೇರಿದ ಮೊದಲ ಹಂತದಲ್ಲಿ ₹56000 ರಿಂದ ವೇತನವನ್ನು ನಿಗದಿಪಡಿಸಲಾಗಿದೆ ನಂತರದಲ್ಲಿ ₹1,77,500 ಇನ್ನು ಹೆಚ್ಚು ಸಹ ಆಗಬಹುದು
- ಹಾಗೆಯೇ ಅನುಭವ ಹೆಚ್ಚಾದಂತೆ ವೇತನ ಶ್ರೇಣಿಯನ್ನು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.
ಅರ್ಜಿ ಶುಲ್ಕ(Application Fee) :-
ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಂಸ್ಥೆಯು ಅರ್ಜಿ ಶುಲ್ಕವನ್ನು ಮನಸ್ಸಿಗೆ ಬಂದಂತೆ ತಿಳಿಸಿಲ್ಲ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನ ಸಲ್ಲಿಸಬೇಕೆ ಎನ್ನುವ ಉದ್ದೇಶದಿಂದ ಕಡಿಮೆ ಪ್ರಮಾಣದ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
- ಸಾಮಾನ್ಯ / OBC ಅಭ್ಯರ್ಥಿಗಳು:₹200
- SC / ST / PwD ಅಭ್ಯರ್ಥಿಗಳು: 0
- ಮಹಿಳಾ ಅಭ್ಯರ್ಥಿಗಳು: ₹0
- ಲಿಂಗ ಸಮಾನತೆ ಮತ್ತು ಉತ್ತೇಜನಕ್ಕಾಗಿ ಕಡಿತ
ಅರ್ಜಿ ಶುಲ್ಕ ಪಾವತಿಸುವುದು ಹೇಗೆ :-
- ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕ
- ಬ್ಯಾಂಕ್ / ಆನ್ಲೈನ್ ಮೂಲಕ ಪಾವತಿಸಬಹುದು
- ಸಮಾನ ಹಕ್ಕುಗಾಗಿ ಕಡಿಮೆ ಶುಲ್ಕ ನೀಡಲಾಗಿದೆ
- ಈಗಿನ ಡಿಜಿಟಲ್ ಯುಗದಲ್ಲಿ ಯಾರೂ ಸಹ ಬ್ಯಾಂಕಿಗೆ ಹೋಗಿ ಅರ್ಜಿ ಶುಲ್ಕವನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ ಆನ್ಲೈನ್ ಪೇಮೆಂಟ್ ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಂಡು ಆನ್ಲೈನ್ ಮೂಲಕವೇ ಪಾವತಿಸಬಹುದು
ಆಯ್ಕೆ ಪ್ರಕ್ರಿಯೆ :-
- ಲಿಖಿತ ಪರೀಕ್ಷೆ
- ದೈಹಿಕ ಗುಣಮಟ್ಟ ಪರೀಕ್ಷೆಗಳು
- ದೈಹಿಕ ದಕ್ಷತೆ ಪರೀಕ್ಷೆಗಳು
- ಸಂದರ್ಶನ
- ವೈದ್ಯಕೀಯ ಪರೀಕ್ಷೆ
- ಅಂತಿಮ ಆಯ್ಕೆ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ :-
ನೀವೇನಾದರೂ ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಓದಿಕೊಂಡು ನಾನು ಈ ಹುದ್ದೆಗೆ ಅರ್ಜಿ ಸಲ್ಲಿಸುತ್ತೇನೆ ನನ್ನಲ್ಲಿ ಆ ಎಲ್ಲಾ ಅರ್ಹತೆಗಳು ಇದೆ ಎಂದು ನಿಮ್ಮ ಮನಸ್ಸಿನಲ್ಲಿ ಬಂದರೆ ಈ ಕೆಳಗೆ ಕೊಟ್ಟಿರುವ ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸುತ್ತಾ ಬನ್ನಿ.
- ಅರ್ಜಿ ಆನ್ಲೈನ್ ಮೂಲಕ ಸಲ್ಲಿಸಬೇಕು.
- ಅಧಿಕೃತ ವೆಬ್ಸೈಟ್ ತೆರೆಯಿರಿ: https://upsconline.nic.in/
- ಹೊಸ ಖಾತೆ ರೆಜಿಸ್ಟರ್ ಮಾಡಿ, ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಶಿಕ್ಷಣ/ಅನುಭವ ವಿವರಗಳು, ಸಂಪರ್ಕ ವಿವರಗಳನ್ನ ಭರ್ತಿ ಮಾಡಿ.
- ಎಲ್ಲಾ ದಾಖಲೆಗಳು (Certificates, Mark sheets, ID proof) ಸ್ಪಷ್ಟ ಪಿಡಿಎಫ್ / ಫೋಟೋ ಪ್ರತಿಗಳಾಗಿರಬೇಕು.
- ಆನ್ಲೈನ್ (ಕಾರ್ಡ್/ನೆಟ್ಬ್ಯಾಂಕಿಂಗ್) ಅಥವಾ challan ಮೂಲಕ ಬ್ಯಾಂಕ್ನಲ್ಲಿ ಅರ್ಜಿಯ ಶುಲ್ಕ ಪಾವತಿಸಿ.
- ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಸಿದ ನಂತರ Confirmation / Acknowledgment ಪಡೆಯಬೇಕು. ಇದು ಬಹಳ ಮುಖ್ಯವಾಗಿರುತ್ತದೆ.
- ಅರ್ಜಿದಾರರು ಕೊನೆಯ ದಿನಾಂಕಕ್ಕೆ ಮೊದಲು ಅರ್ಜಿಯನ್ನು ಪೂರ್ಣಗೊಂಡಂತೆ ಸಲ್ಲಿಸಬೇಕು.
- ಭರ್ತಿ ಮಾಡಲಾದ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಪರಿಶೀಲನೆ ಮಾಡಿ ನಂತರ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :-
ಅಭ್ಯರ್ಥಿಗಳು ಕೆಳಗೆ ಕೊಡಲಾದ ಪ್ರಮುಖ ದಿನಾಂಕಗಳ ವಿವರಗಳನ್ನು ಸರಿಯಾಗಿ ಓದಿಕೊಂಡು ಹಾಗೆ ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಿ. ನಿಮಗೆ ಯಾವುದಾದರೂ ಗೊಂದಲವಿದ್ದರೆ ಮತ್ತೊಮ್ಮೆ ಓದಿ ನಂತರದಲ್ಲಿ ಅರ್ಜಿ ಸಲ್ಲಿಸಿ
| ವಿವರಗಳು(UPSC) | ದಿನಾಂಕ |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 12 ಮಾರ್ಚ್ 2026 |
| ಅರ್ಜಿ ಸಲ್ಲಿಸಲು ಪ್ರಾರಂಭದ ಮುಖ್ಯ ದಿನಾಂಕ | 20 ಫೆಬ್ರವರಿ 2026 |
| ಅರ್ಜಿ ಸಲ್ಲಿಸಲು ಮುಖ್ಯ ಕೊನೆಯ ದಿನಾಂಕ | ಮಾರ್ಚ್ 12, 2026 |
ಪ್ರಮುಖ ಲಿಂಕುಗಳು :-
| ವಿವರಗಳು | ಲಿಂಕ್ |
| ನೋಟಿಫೆಕೇಷನ್ ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ PDF | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಈ ಹುದ್ದೆಯ ಬಗ್ಗೆ ನನ್ನ ಕೊನೆಯ ಮಾತು:
ಭಾರತೀಯ ಸೇನೆಯಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿದ ಅಭ್ಯರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು UPSC ಸಂಸ್ಥೆ ಬೃಹತ್ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು. ವೇತನ ಜೊತೆಗೆ ಇತರೆ ಭತ್ಯೆಗಳು ನಿಮಗೆ ಆರ್ಥಿಕ ಭದ್ರತೆ ನೀಡುತ್ತವೆ. ಹಾಗೆಯೇ ಉದ್ಯೋಗದ ಸ್ಥಳವು ತಾಂತ್ರಿಕ ಕೆಲಸ ಮತ್ತು ವಾಸ್ತವ ಅನುಭವಕ್ಕೆ ಅನುಭವಕ್ಕೆ ಅನುಕೂಲವಾಗುತ್ತದೆ ಹೀಗಾಗಿ ನಿಮ್ಮ ಆಯ್ಕೆಯ ಅವಕಾಶಗಳು ಬಹಳ ಹೆಚ್ಚಾಗುತ್ತವೆ ಮತ್ತು ಸ್ವಂತ ಕೆಲಸದಲ್ಲಿ ಶಾಶ್ವತವಾಗಿ ವಿಶ್ವಾಸವು ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಬರಲಿದೆ.
UPSC ಕಮಾಂಡೆಂಟ್ ಹುದ್ದೆಗಳಲ್ಲಿ ವಿವಿಧ ಭಾಗಗಳಲ್ಲಿ ಕೆಲಸ ಮಾಡುವ ಈ ಅವಕಾಶ ಮತ್ತೊಮ್ಮೆ ನಿಮಗೆ ಬರಲು ಸಾಧ್ಯವಾಗದೆ ಇರಬಹುದು. ಕೊನೆಯ ದಿನಾಂಕದ ವರೆಗೆ ಕಾಯದೆ ಈಗಲೇ ಹೋಗಿ ಅರ್ಜಿ ಸಲ್ಲಿಸಿ.
ಪದೇ ಪದೇ ಕೇಳಲ್ಪಡುವ ಪ್ರಶ್ನೆಗಳು:-
ಪರೀಕ್ಷೆಯು 19 ಜೂಲೈ 2026ರಂದು ನಡೆಯುತ್ತದೆ
ಅಭ್ಯರ್ಥಿಯು ಭಾರತದಲ್ಲಿ ಕೇಂದ್ರ ಅಥವಾ ರಾಜ್ಯ ಶಾಸಕಾಂಗದ ಕಾಯ್ದೆಯಿಂದ ಸಂಯೋಜಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ಇತರೆ ಪ್ರಮುಖ ಸರ್ಕಾರಿ ಹುದ್ದೆಗಳ ಲಿಂಕುಗಳು:-
Panchayat Raj Commissionerate : PUC ಪಾಸ್ ಆದ್ರೆ ಸಾಕು! ಪಂಚಾಯತ್ ರಾಜ್ನಲ್ಲಿ 25,311 ಸರ್ಕಾರಿ ಹುದ್ದೆಗಳು!
VAO Recruitment : ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಹುದ್ದೆಗಳಿಗೆ ನೇರ ನೇಮಕಾತಿ 2026!

