ಕರ್ನಾಟಕದಲ್ಲಿ ಅತಿ ಅದ್ಭುತವಾದ 10 ಸ್ಥಳಗಳ (Top 10 Tourist Places) ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನೀವು ಜೀವನದಲ್ಲಿ ಒಂದು ಸಾರಿಯಾದರೂ ಇಲ್ಲಿ ವಿಸಿಟ್ ಮಾಡಲೇಬೇಕು ಅಷ್ಟು ಅದ್ಭುತವಾದ ಸ್ಥಳ ಇವುಗಳಾಗಿದ್ದು ಪುರಾತನ ಕಾಲದಿಂದಲೂ ಸಹ ಈ ಸ್ಥಳಗಳಿಗೆ ತುಂಬಾನೇ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಹಾಗೂ ಇವು ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿವೆ.
Top 10 Tourist Places In Karnataka
ಹಾಗಾಗಿ ಈ ಸ್ಥಳಗಳ ಬಗ್ಗೆ ಈ ಕೆಳಗೆ ಸಂಪೂರ್ಣವಾದ ವಿವರವನ್ನು ನೀಡಲಾಗಿದ್ದು ಹತ್ತಿರದ ನಗರ ಸೇರಿದಂತೆ ಒಟ್ಟು ಎಷ್ಟು ಕಿಲೋಮೀಟರ್ ಆಗುತ್ತದೆ ಅನ್ನುವಂತ ಮಾಹಿತಿಯನ್ನು ಸಹ ನೀವು ನೋಡಬಹುದು ನೀವು ಹೊಸದಾಗಿ ಒಂದು ಟೂರಿಸ್ಟ್ ಪ್ಲಾನ್ ಮಾಡ್ತಾ ಇದ್ರೆ ಖಂಡಿತವಾಗಿಯೂ ಈ ಸ್ಥಳಗಳಿಗೆ ನೀವು ಭೇಟಿ ನೀಡಿ ಉತ್ತಮ ಅನುಭವವನ್ನು ಹಾಗೂ ಒಂದು ಒಳ್ಳೆಯ ಸಂಸ್ಕೃತಿಯ ಬಿಂಬಗಳನ್ನ ನೀವು ಅಳವಡಿಸಿಕೊಳ್ಳಬಹುದು.
ಕರ್ನಾಟಕದಲ್ಲಿ ಅತಿ ಅದ್ಭುತವಾದ 10 ಸ್ಥಳಗಳ ವಿವರಗಳು (Top 10 Tourist Places In Karnataka) :
ಕರ್ನಾಟಕದಲ್ಲಿ ಅತಿ ಅದ್ಭುತವಾದ 10 ಪ್ರವಾಸಿ ತಾಣಗಳ ಬಗ್ಗೆ ಈ ಕೆಳಗೆ ಹಂತ ಹಂತವಾದ ಮಾಹಿತಿಯನ್ನು ನೀಡಲಾಗಿದ್ದು ನೀವು ಸಹ ಹೊಸದಾಗಿ ಒಂದು ಟೂರಿಸ್ಟ್ ಪ್ಲಾನ್ ಮಾಡ್ತಾ ಇದ್ರೆ ಖಂಡಿತವಾಗಿಯೂ ಈ 10 ಸ್ಥಳಕ್ಕೆ ವಿಸಿಟ್ ಮಾಡಬಹುದು.
1.ಹಂಪಿ (Hampi)

- ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವಂತ ಒಂದು ಅದ್ಭುತ ಸ್ಥಳ ಹಂಪಿ
- ಇದು ವಿಜಯನಗರ ಸಾಮ್ರಾಜ್ಯದ ಘತ ವೈಭವವನ್ನು ಸಾರುವ ಅವಶೇಷಗಳಿಗೆ ಪ್ರಸಿದ್ಧವಾಗಿರುವಂತ ಒಂದು ಸುಂದರವಾದ ಸ್ಥಳ
- ಇಲ್ಲಿ ಬೃಹತ್ ಬಂಡೆಗಳು ಸೇರಿದಂತೆ ಕಲ್ಲಿನ ರಥ ಮತ್ತು ವಿರೂಪಾಕ್ಷ ದೇವಾಲಯ ಪ್ರಮುಖ ಆಕರ್ಷಣೆಗಳು ಆಗಿದೆ
- ಈ ಸ್ಥಳ ವಿಜಯನಗರ ಜಿಲ್ಲೆಯಲ್ಲಿದೆ
- ಬೆಂಗಳೂರಿಂದ ಸುಮಾರು 340 ಕಿಲೋಮೀಟರ್ ದೂರದಲ್ಲಿದೆ
- ತುಂಗಭದ್ರ ಡ್ಯಾಮ್ ಮತ್ತು ಆನೆಗೊಂದಿಯಿಂದ ಸುಮಾರು ಹದಿನೈದು ಕಿಲೋಮೀಟರ್ ಹತ್ತಿರದಲ್ಲಿದೆ
- ಉತ್ತಮವಾದ ಪ್ರವಾಸಿ ಅನುಭವವನ್ನು ಪಡೆದುಕೊಳ್ಳಲು ಈ ತಾಣಕ್ಕೆ ಒಂದು ಸಾರಿ ಭೇಟಿ ನೀಡಿ
2.ಮೈಸೂರು ಅರಮನೆ (Mysore Palace):

- ಮೈಸೂರು ಅಂದಾಕ್ಷಣ ಮೊದಲಿಗೆ ನೆನಪಾಗುವುದು ಮೈಸೂರು ಅರಮನೆ.
- ಈ ಅರಮನೆಯು ಇಂಡೋ ಸಾರ್ಸನಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ
- ಇದು ಭಾರತದ ಅತ್ಯಂತ ಸುಂದರವಾದ ಅರಮನೆಗಳಲ್ಲಿ ಒಂದಾಗಿದ್ದು ಇಲ್ಲಿ ನಡೆಯುವ ದಸರಾ ಉತ್ಸವ ವಿಶ್ವವಿಖ್ಯಾತವಾಗಿದೆ
- ಇದು ಮೈಸೂರು ಜಿಲ್ಲೆಯಲ್ಲಿದೆ
- ಬೆಂಗಳೂರಿನಿಂದ ಸುಮಾರು 145 ಕಿಲೋ ಮೀಟರ್ ದೂರವನ್ನು ಹೊಂದಿದೆ
- ಶ್ರೀರಂಗಪಟ್ಟಣ ಮತ್ತು ಚಾಮುಂಡಿ ಬೆಟ್ಟ ಸುಮಾರು ಹದಿನೈದು ಕಿಲೋಮೀಟರ್ ಅಂತರದಲ್ಲಿದೆ
- ಯಾರಾದರೂ ಒಂದು ಹೊಸ ಟೂರಿಸ್ಟ್ ಪ್ಲಾನ್ ಮಾಡ್ತಾ ಇದ್ರೆ ಖಂಡಿತವಾಗಿಯೂ ಮೈಸೂರು ಅರಮನೆಗೆ ಒಂದು ಸಾರಿ ಭೇಟಿ ನೀಡಿ
3.ಗೋಕರ್ಣ (Gokarna):

- ಗೋಕರ್ಣ ಗೋವಾ ಗೆ ಹೋಲಿಸಿದರೆ ಇದು ಶಾಂತಿಯುತವಾದ ಪರ್ಯಾಯ ತಾಣವಾಗಿದೆ
- ಮಹಾಬಲೇಶ್ವರ ದೇವಾಲಯಕ್ಕೆ ಇದು ಹೆಸರುವಾಸಿಯಾಗಿದೆ
- ಇಂತಹ ಅದ್ಭುತವಾದ ಸ್ಥಳವನ್ನು ಒಂದು ಸರಿಯಾದ ಕಣ್ಣು ತುಂಬಿ ಕೊಳ್ಳಬೇಕು ಎನ್ನುವುದು ಸಾಕಷ್ಟು ಜನರ ಒಂದು ಆಸೆಯಾಗಿದೆ
- ಗೋಕರ್ಣವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
- ಬೆಂಗಳೂರಿನಿಂದ ಸುಮಾರು 485 km ದೂರದಲ್ಲಿದೆ
- ಹತ್ತಿರದಲ್ಲಿ ಮುರುಡೇಶ್ವರ 78 ಕಿಲೋಮೀಟರ್ ನಲ್ಲಿ ಇದೆ
ಹೊಸದಾಗಿ ಟೂರಿಸ್ಟ್ ಬ್ಯಾನ್ ಮಾಡುತ್ತಿರುವವರಿಗೆ ಗೋಕರ್ಣ ಒಂದು ಅದ್ಭುತ ಸ್ಥಳ ಆಗಿದೆ
4.ಕೊಡಗು / ಕೂರ್ಗ್ (Coorg)

- ಕೊಡಗು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ
- ಇಲ್ಲಿ ಗಿರಿಧಾಮವಿದ್ದು ಕಾಫಿ ತೋಟಗಳು ಸೇರಿದಂತೆ ಮಂಜಿನಿಂದ ಕೂಡಿದ ಭೂ ದೃಶ್ಯಗಳು ಮತ್ತು ಅಬ್ಬಿ ಜಲಪಾತ ಇಲ್ಲಿನ ಪ್ರಮುಖ ಆಕರ್ಷಣೀಯ ಸ್ಥಳಗಳಾಗಿವೆ
- ಇದು ಕೊಡಗು ಜಿಲ್ಲೆಯಲ್ಲಿದೆ
- ಸುಮಾರು 250 ಕಿಲೋ ಮೀಟರ್ ಬೆಂಗಳೂರಿನಿಂದ ದೂರವನ್ನು ಹೊಂದಿದೆ
- ಹತ್ತಿರದಲ್ಲಿ ದುಬಾರೆ ಆನೆ ಶಿಬಿರ ಮತ್ತು ಬೈಲಕುಪ್ಪೆ ಟಿಬೆಟಿಯನ್ ಕ್ಯಾಂಪುಗಳನ್ನು ವಿಸಿಟ್ ಮಾಡಬಹುದು
5.ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು (Badami, Aihole, Pattadakal):

- ಚಾಲುಕ್ಯರ ಕಾಲದಲ್ಲಿ ಗುಹಾಂತರ ದೇವಾಲಯಗಳು ಸೇರಿದಂತೆ ಕೆಂಪು ಮರಳು ಕಲ್ಲಿನ ಬಂಡೆಗಳಿಗೆ ಬಾದಾಮಿ ಪ್ರಸಿದ್ಧವಾದ ಸ್ಥಳವಾಗಿದೆ
- ಪಟ್ಟದಕಲ್ಲು ಶಿಲ್ಪಕಲೆಗೆ ಹೆಸರಾದ ಐತಿಹಾಸಿಕ ಸ್ಥಳವಾಗಿದ್ದು ಇತಿಹಾಸ ಪ್ರಸಿದ್ಧವಾದ ಹಲವಾರು ಕುರುಹುಗಳನ್ನು ನೋಡಬಹುದು
- ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ
- ಸುಮಾರು 450 km ಬೆಂಗಳೂರು ನಿಂದ ದೂರವನ್ನ ಹೊಂದಿದೆ
- ಹತ್ತಿರದಲ್ಲಿ ಕೂಡಲಸಂಗಮ ಹಾಗೂ ಹಂಪಿ 140 ಕಿಲೋಮೀಟರ್ ದೂರದಲ್ಲಿದೆ
ಹೊಸದಾಗಿ ಟೂರಿಸ್ಟ್ ಪ್ಲಾನ್ ಮಾಡುವ ಹಲವರಿಗೆ ಈ ಪ್ರೇಕ್ಷಣೀಯ ಸ್ಥಳ ಹಾಗೂ ಐತಿಹಾಸಿಕ ಸ್ಥಳ ತುಂಬಾನೇ ಮೆರಗನ್ನ ಮೂಡಿಸುತ್ತದೆ
6.ಜೋಗ ಜಲಪಾತ (Jog Falls):

- ವಿಶ್ವ ವಿಖ್ಯಾತ ಜೋಗ ಜಲಪಾತ ಶರಾವತಿ ನದಿಯಿಂದ ಸೃಷ್ಟಿಯಾಗುವಂತ ಇದು ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ
- ಮಳೆಗಾಲದಲ್ಲಿ ಇದರ ದೃಶ್ಯ ಅತ್ಯಂತ ರಮಣೀಯವಾಗಿರುತ್ತೆ
- ಇದು ಶಿವಮೊಗ್ಗ ಜಿಲ್ಲೆಯಲ್ಲಿದೆ
- ಬೆಂಗಳೂರಿನಿಂದ ಸುಮಾರು 400 ಕಿಲೋಮೀಟರ್ ದೂರವನ್ನು ಹೊಂದಿದೆ
- ಹತ್ತಿರದ ಪ್ರವಾಸಿ ತಾಣಗಳು ಹೊನ್ನಾವರ ಅಥವಾ ಇಕ್ಕೇರಿ 60 ಕಿಲೋಮೀಟರ್ ದೂರದಲ್ಲಿದೆ
ಸಾಯೋದ್ರೊಳಗೆ ಒಮ್ಮೆಯಾದರೂ ಜೋಗದ ಗುಂಡಿಯನ್ನು ನೋಡಬೇಕು ಎಂದು ರಾಜಕುಮಾರವರು ಹೇಳಿದ್ದಾರೆ ನೀವೇನಾದ್ರೂ ಒಂದು ಟೂರಿಸ್ಟ್ ಪ್ಲಾನ್ ಮಾಡ್ತಾ ಇದ್ರೆ ಬರುವ ಮಳೆಗಾಲದಲ್ಲಿ ಈ ಸುಂದರವಾದ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ.
7.ಬಂಡೀಪುರ ರಾಷ್ಟ್ರೀಯ ಉದ್ಯಾನವನ (Bandipur National Park)

- ಬಂಡಿಪುರ ರಾಷ್ಟ್ರೀಯ ಉದ್ಯಾನವನ ಹುಲಿಗಳ ಸಂರಕ್ಷಿತ ಪ್ರದೇಶವಾಗಿರುವ ಇದು ವನ್ಯಜೀವಿ ಪ್ರಿಯರಿಗೆ ಸ್ವರ್ಗವಾದ ತಾಣವಾಗಿದೆ
- ಸಫಾರಿ ಮೂಲಕ ಆನೆಗಳು ಸೇರಿದಂತೆ ಹುಲಿಗಳು ಮತ್ತು ಜಿಂಕೆಗಳನ್ನ ಇಲ್ಲಿ ಕಾಣಬಹುದಾಗಿದೆ
- ಚಾಮರಾಜನಗರ ಜಿಲ್ಲೆಯಲ್ಲಿದೆ
- ಬೆಂಗಳೂರಿನಿಂದ ಸುಮಾರು 220 ಕಿಲೋ ಮೀಟರ್ ದೂರದಲ್ಲಿದೆ
- ಹತ್ತಿರದಲ್ಲಿ ಮಧುಮಲೈ ಮತ್ತು ಮೈಸೂರು ಸುಮಾರು 80 ಕಿಲೋಮೀಟರ್ ಅಂತರದಲ್ಲಿದೆ
ಹೊಸದಾಗಿ ಪ್ಲಾನ್ ಮಾಡ್ತಾ ಇರುವವರು ಖಂಡಿತವಾಗಿಯೂ ಈ ಅದ್ಭುತ ಸ್ಥಳಕ್ಕೆ ಬಿಜೆಪಿ ಮಾಡಬಹುದು
8.ಮುರುಡೇಶ್ವರ (Murudeshwar):

- ಮುರುಡೇಶ್ವರ ಅರಬ್ಬಿ ಸಮುದ್ರದ ದಡದಲ್ಲಿರುವ ವಿಶ್ವದ ಎರಡನೇ ಅತಿ ಎತ್ತರದ ಶಿವನ ವಿಗ್ರಹ ಹೊಂದಿರುವಂತಹ ಒಂದು ಬೃಹತ್ ರಾಜಗೋಪುರಕ್ಕೆ ಇದು ಪ್ರಖ್ಯಾತಿ ಪಡೆದಿದೆ
- ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
- ಬೆಂಗಳೂರಿನಿಂದ ಸುಮಾರು 490 ಕಿಲೋಮೀಟರ್ ದೂರದಲ್ಲಿದೆ
- ಹತ್ತಿರದಲ್ಲಿ ಭಟ್ಕಳ ಅಥವಾ ಇಡುಗುಂಜಿ ಗಣಪತಿ ದೇವಾಲಯಗಳು ನೋಡಬಹುದು
ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಇಲ್ಲಿನ ಅದ್ಭುತವಾದ ಮುರುಡೇಶ್ವರ ಬೀಚ್ ಹಾಗೂ ದೇವಸ್ಥಾನವನ್ನು ಮರೆಯಲು ಸಾಧ್ಯವೇ ಇಲ್ಲ
9.ಚಿಕ್ಕಮಗಳೂರು (Chikmagalur):

- ಚಿಕ್ಕಮಗಳೂರು ಕರ್ನಾಟಕದ ಕಾಫಿ ನಾಡು ಎಂದೇ ಪ್ರಖ್ಯಾತಿ ಪಡೆದಿರುವಂಥ ಚಿಕ್ಕಮಗಳೂರು ಇದು ಟ್ರಕ್ಕಿಂಗ್ ಗೆ ಜನಪ್ರಿಯವಾಗಿದೆ
- ಮುಳ್ಳಿನ ಗಿರಿ ಅತ್ಯಂತ ರಾಜ್ಯದ ಎತ್ತರವಾದ ಶಿಖರ ಇದಾಗಿದ್ದು ಇಲ್ಲಿನ ಪ್ರಮುಖ ಆಕರ್ಷಣೀಯ ಸ್ಥಳ ಇದಾಗಿದೆ
- ಇದು ಚಿಕ್ಕಮಂಗಳೂರು ಜಿಲ್ಲೆಯಲ್ಲಿದೆ
- ಸುಮಾರು 245 ಕಿ.ಮೀ ಬೆಂಗಳೂರಿನಿಂದ ದೂರವನ್ನು ಹೊಂದಿದೆ
- ಹತ್ತಿರದಲ್ಲಿ ಬೇಲೂರು ಮತ್ತು ಹಳೇಬೀಡು ಸುಮಾರು 25 ರಿಂದ 30 ಕಿಲೋಮೀಟರ್ ಅಂತರದಲ್ಲಿದೆ
ಒಮ್ಮೆ ಈ ಚಾರಣಕ್ಕೆ ಬಂದು ಹೋದರೆ ನಿಮ್ಮ ಜೀವನದಲ್ಲಿ ಎಂದೂ ಸಹ ಮರೆಯಲು ಸಾಧ್ಯವೇ ಇಲ್ಲ
10.ಉಡುಪಿ (Udupi):

- ಉಡುಪಿಯ ಶ್ರೀ ಕೃಷ್ಣ ಮಠ ರುಚಿಕರವಾದ ಉಡುಪಿ ಊಟಕ್ಕೆ ಇದು ಪ್ರಸಿದ್ಧವಾಗಿದೆ
- ಇಲ್ಲಿನ ಮಲ್ಪೆ ಬೀಚ್ ಮತ್ತು ಸೇಂಟ್ ಮೇರಿ ದೀಪ ನೋಡಲೇಬೇಕಾದ ಒಂದು ಸುಂದರವಾದ ಸ್ಥಳವಾಗಿದೆ
- ಉಡುಪಿ ಜಿಲ್ಲೆಯಲ್ಲಿದೆ
- ಬೆಂಗಳೂರಿನಿಂದ ಸುಮಾರು 45 ಕಿ.ಮೀ ದೂರದಲ್ಲಿದೆ
- ಹತ್ತಿರದ ಪ್ರವಾಸಿ ತಾಣಗಳು ಮಲ್ಪೆ ಮತ್ತು ಮಣಿಪಾಲ ಸುಮಾರು 6 ಕಿಲೋಮೀಟರ್ ಅಂತರದಲ್ಲಿದೆ
ಇತರೆ ಯೋಜನೆಯ ಪ್ರಮುಖ ಲಿಂಕುಗಳು:
- ಗೃಹಲಕ್ಷ್ಮಿ ಯೋಜನೆ : ಖಾತೆಗೆ ಬಂತು ₹2,000! ಹಣ ಜಮಾ ಚೆಕ್ ಮಾಡುವ ಲಿಂಕ್!
- PMAY 2.0: ಆಧಾರ್ ಇದ್ದರೆ ಸಾಕು, ಸ್ವಂತ ಮನೆಗೆ ಸರ್ಕಾರ ಕೊಡುತ್ತೆ ₹2.7 ಲಕ್ಷ ಸಹಾಯಧನ!
- PMAY 2.0: ಆಧಾರ್ ಇದ್ದರೆ ಸಾಕು, ಸ್ವಂತ ಮನೆಗೆ ಸರ್ಕಾರ ಕೊಡುತ್ತೆ ₹2.7 ಲಕ್ಷ ಸಹಾಯಧನ!
- Old House Repairing Loan : ರೂ 8 ಲಕ್ಷ ಸಾಲ!ನಿಮ್ಮ ಹಳೆಯ ಮನೆ ದುರಸ್ತಿಗೆ ಕೆನರಾ ಬ್ಯಾಂಕ್ ಸಹಾಯಹಸ್ತ!

