ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ , ಟ್ಯಾಕ್ಸಿ, ಸರಕು ವಾಹನ ಖರೀದಿ , ಪ್ರಯಾಣಿಕರ ಆಟೋ ರಿಕ್ಷಕರಿಗೆ ಸರ್ಕಾರದಿಂದ ಭರ್ಜರಿ ಸಹಾಯಧನ ಸಿಗಲಿದೆ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತ ಸಮುದಾಯ ಗಳಿಗೆ ಟ್ಯಾಕ್ಸಿ / ಸರಕು ವಾಹನ / ಪ್ರಯಾಣಿಕ ಆಟೋರಿಕ್ಷಾ ಖರೀದಿಗೆ ಗರಿಷ್ಠ ರೂ. 2,50,000/- ವರೆಗೆ ಸಹಾಯಧನ! ಯೋಜನೆಯನ್ನು ಜಾರಿಗೆ ತಂದಿದೆ. ಸಂಪೂರ್ಣ ಮಾಹಿತಿ ಈ ಕೆಳಗೆ ಓದಿರಿ..

ಯೋಜನೆಯ ಉದ್ದೇಶ
ಯೋಜನೆ ಅಡಿಯಲ್ಲಿ 75% ವರೆಗೆ ಸಹಾಯಧನವನ್ನು ಟ್ಯಾಕ್ಸಿ, ಆಟೋ ಹಾಗೆ ಗೂಡ್ಸ್ ವಾಹನವನ್ನು ಖರೀದಿ ಮಾಡಲು ಧನ ಸಹಾಯವನ್ನು ಮಾಡಲಾಗುತ್ತಿದೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಈ ಒಂದು ಯೋಜನೆ ಜಾರಿಯಾಗುತ್ತಿದ್ದು ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ನಿಮಗೂ ಕೂಡ ಯೋಜನೆಯ ಬಗ್ಗೆ ಮಾಹಿತಿ ಬೇಕು ನೀವು ಸಹ ಈ ಟ್ಯಾಕ್ಸಿ ಆಟೋರಿಕ್ಷಾ ಅಥವಾ ಗೂಡ್ಸ್ ವಾಹನವನ್ನು ಖರೀದಿ ಮಾಡುತ್ತೀರಾ ಅಂತ ಅಂದ್ರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಹಾಯಧನದ ಮೊತ್ತ ವಿವರಣೆ
ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ವಾಹನ ವೆಚ್ಚದ ಶೇಕಡ 75% ಅಥವಾ ಗರಿಷ್ಠ 4 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ ಒಬಿಸಿ ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ವಾಹನ ವೆಚ್ಚದ ಶೇಕಡ 50% ರಷ್ಟು ಅಥವಾ ಗರಿಷ್ಠ 3 ಲಕ್ಷದವರೆಗೆ ಸಹಾಯಧನವನ್ನು ವಾಹನ ಖರೀದಿಗೆ ನೀಡಲಾಗುತ್ತಿದೆ.
- ಎಸ್ಸಿ ಎಸ್ಟಿ -75% ಅಥವಾ ಗರಿಷ್ಠ 4 ಲಕ್ಷ
- ಒಬಿಸಿ ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳಿಗೆ – 50% ರಷ್ಟು ಅಥವಾ ಗರಿಷ್ಠ 3 ಲಕ್ಷ
ವಾಹನ ಖರೀದಿಗೆ ಹೆಚ್ಚುವರಿ ಹಣ ಬೇಕಾದಲ್ಲಿ ಅದನ್ನ ಬ್ಯಾಂಕ್ ಮೂಲಕ ಸಾಲ ಸೌಲಭ್ಯವಾಗಿ ಪಡೆಯಬಹುದು.
ಇದನ್ನು ಓದಿ :- ಆಸ್ತಿ ನೋಂದಣಿ ಶುಲ್ಕ ಎರಡು ಪಟ್ಟು ಹೆಚ್ಚಳ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ
- ಅರ್ಜಿದಾರರು ರಾಜ್ಯ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿರಬೇಕು
- ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
- ಕನಿಷ್ಠ 18 ವರ್ಷ ಗರಿಷ್ಠ 50 ವರ್ಷಗಳ ವಯೋಮಿತಿ ಒಳಗೆ ಇರಬೇಕು
- ಕುಟುಂಬದ ವಾರ್ಷಿಕ ಆದಾಯ 4:30 ಲಕ್ಷ ಮೀರಿರಬಾರದು
- ಅರ್ಜಿದಾರರು ಯಾವುದೇ ರಾಜ್ಯ ಅಥವಾ ಕೇಂದ್ರ ಸರಕಾರ ಅಥವಾ ಸಾರ್ವಜನಿಕ ವಲಯದ ಘಟಕಗಳಲ್ಲಿ ಉದ್ಯೋಗಿ ಆಗಿರಬಾರದು
- ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ನೀಡಲಾದ ಸಂಬಂಧಿತ ಚಾಲನೆ ಪರವಾನಿಗೆ ಪತ್ರವನ್ನು ಹೊಂದಿರಬೇಕಾಗುತ್ತದೆ
- ಅರ್ಜಿದಾರರ ಕುಟುಂಬ ಯಾವುದೇ ಸರಕಾರ ಯೋಜನೆ ಅಡಿಯಲ್ಲಿ ವಾಹನವನ್ನು ಖರೀದಿ ಮಾಡಿರಬಾರದು
- ಕೆಎಂಬಿಸಿಯಲ್ಲಿ ಸಾಲ ಸುಸ್ತಿದಾರ ಆಗಿರಬಾರದು ಹಾಗೂ ಇನ್ನಿತರ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಡ್ರೈವಿಂಗ್ ಲೈಸೆನ್ಸ್
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಪಾಸ್ಪೋರ್ಟ್ ಆಳತೆಯ ಭಾವಚಿತ್ರ
- ಮೊಬೈಲ್ ನಂಬರ್ ಹಾಗೂ ಇತ್ಯಾದಿ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಭರ್ತಿ ಮಾಡಿದ ನಂತರ ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ನಂತರ ಸಮಿತಿಯಿಂದ ಅನುಮೋದನೆಯನ್ನು ಪಡೆಯಲಾಗುತ್ತೆ ನೀವು ಅರ್ಹರಾಗಿದ್ದರೆ ಈ ಹಣ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುತ್ತೆ.