ನಿಮ್ಮ ಮನೆಯ ಹೆಣ್ಣುಮಗಳ ಭವಿಷ್ಯವನ್ನ ರೂಪಿವ ಚಿಂತೆ ನಿಮ್ಮನ್ನ ದಿನದಿಂದ ದಿನ ಕಾಡುತ್ತಿದೆಯೇ ? ಅಥವಾ ಸರ್ಕಾರ ಗಂಡು ಮಕ್ಕಳಿಗೆ ಬೇಡ, ಹೆಣ್ಣುಮಕ್ಕಳ ಉಜ್ವಲ ಭವಿಷ್ಯವನ್ನ ರೂಪಿಸಲು ಯಾವುದಾದರು ಸಣ್ಣ ಉಳಿತಾಯ ಯೋಜನೆ (Small Savings Scheme) ರೂಪಿಸಬಹುದಿತ್ತು ಎಂದು ಇನ್ನು 2026ನೇ ವರ್ಷ ಬಂದರು ಯೋಚುಸುತ್ತಿದ್ದೀರಾ? ಈ ಯೋಚನೆ ಇಂದ ಮೊದಲು ಹೊರ ಬನ್ನಿ. ಕೇವಲ ಹೆಣ್ಣುಮಕ್ಕಳಿಗಾಗಿ ಒಂದು ಅದ್ಭುತ ಯೋಜನೆಯನ್ನ ನಮ್ಮ ಕೇಂದ್ರ ಸರ್ಕಾರ ಅಂದರೆ ನರೇಂದ್ರ ಮೋದಿ ಸರ್ಕಾರ ಸುಮಾರು 2015ರ ಜನವರಿ 22 ರಂದು ಅಧಿಕೃತವಾಗಿ ಜಾರಿಗೆ ತಂದಿದ್ದಾರೆ.
ಹೌದು ನೀವು ಇಲ್ಲಿ ನೋಡುತ್ತಿರುವುದು ಅಥವಾ ಯೋಜನೆ ಬಗ್ಗೆ ಯಲ್ಲಿಯಾದರು ಕೇಳಿದರೆ ಸುಳ್ಳೆಂದು ಭಾವಿಸಬೇಡಿ ನಿಮ್ಮ ಮನೆಯಲ್ಲಿ 10 ವರ್ಷದೊಳಗಿನ ಮುದ್ದಾದ ಹೆಣ್ಣುಮಗು ಇದ್ದಾರೆ ಆ ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (SSY) ಖಾತೆ ಯನ್ನ ಓಪನ್ ಮಾಡಿಸಿ. ನಿಮ್ಮ ಮಗಳ ಮುಂದಿನ ಭವಿಷ್ಯಕ್ಕೆ ಈ ಯೋಜನೆ ದಾರಿ ದೀಪವಾಗುತ್ತದೆ.

ಏನಿದು ಸುಕನ್ಯಾ ಸಮೃದ್ಧಿ ಯೋಜನೆ (SSY) ?ಹೆಣ್ಣು ಮಗುವಿನ ಜನನ ಪ್ರಮಾಣಪತ್ರ (Birth Certificate)
ಪ್ರಸ್ತುತ 2026 ನೇ ಸಾಲಿನಲ್ಲಿ ನಿಮ್ಮ ಮಗಳ ಉತ್ತಮ ಜೀವನವನ್ನ ರೂಪಿಸಲು ಖಂಡಿತವಾಗಿಯೂ ಇಂದೇ ಈ ಯೋಜನೆ ಬಗ್ಗೆ ತಿಳಿಯಲೇ ಬೇಕು. ತಿಳಿಯದಿದ್ದರೂ ತಿಳಿಸಲೇಬೇಕು ಎಂಬ ನನ್ನ ಹಠ ದಿಂದ ಇಂದು ನಮ್ಮ ಕನ್ನಡ ಹೆಲ್ಪ್ ವೆಬ್ ಸೈಟ್ ನಲ್ಲಿ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ (Details) ತಿಳಿಸಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಹರಿಯಾಣದ ಪಾಣಿಪತ್ ನಲ್ಲಿ ಈ ಯೋಜನೆಯನ್ನು ಉದ್ಘಾಟಿಸಿದರು. ಇದು ಕೇಂದ್ರ ಸರ್ಕಾರದ ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಂದರೆ ಹೆಣ್ಣು ಮಗುವನ್ನು ಉಳಿಸಿ ಹೆಣ್ಣು ಮಗುವನ್ನು ಓದಿಸಿ ಅನ್ನುವ ಅಭಿಯಾನದ ಒಂದು ಪ್ರಮುಖ ಭಾಗವಾಗಿದೆ. ಇಂದಿನ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆಯ ಖರ್ಚು ವೆಚ್ಚಗಳಿಗಾಗಿ ಪೋಷಕರು ಉಳಿತಾಯ ಮಾಡುವಂತೆ ಪ್ರೋತ್ಸಾಹಿಸುವ ಗುರಿಯನ್ನು ಈ ಯೋಜನೆ ಒಳಗೊಂಡಿದೆ.
ಅಷ್ಟೇ ಅಲ್ಲದೆ ಈ ಯೋಜನೆ ಜಾರಿಗೆ ಬಂದು ಈಗ 11 ವರ್ಷಗಳು ಪೂರೈಸಿವೆ ಅಂದರೆ 2026ರ ಜನವರಿ ವೇಳೆಗೆ ಡಿಸೆಂಬರ್ 25ರ ಮಾಹಿತಿಯಂತೆ ದೇಶಾದ್ಯಂತ ಸುಮಾರು 4.53 ಕೋಟಿಗೂ ಹೆಚ್ಚು ಖಾತೆಗಳನ್ನು ಹೆಣ್ಣು ಮಕ್ಕಳ ಪೋಷಕರು ತೆರೆದಿದ್ದಾರೆ. ಆದರೆ ಇನ್ನೂ ಸಹ ಈ ಒಂದು ಯೋಜನೆಯ ಬಗ್ಗೆ ಸ್ವಲ್ಪನೂ ಅರಿವಿಲ್ಲದೆ ಇರುವಂತಹ ಪೋಷಕರು ನಮ್ಮ ಗ್ರಾಮೀಣ ಭಾಗದಲ್ಲಿ ಹಾಗೆ ನಗರ ಭಾಗದಲ್ಲಿಯೂ ಸಹ ಇದ್ದಾರೆ.
ಈ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆಗೆ “ಯಾರು ಅರ್ಜಿ ಸಲ್ಲಿಸಬಹುದು?”, “ಹೇಗೆ ಅರ್ಜಿ ಸಲ್ಲಿಸುವುದು?”, “ಅರ್ಹ ಅಭ್ಯರ್ಥಿಗಳು ಯಾರು?”, “ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ಹಣ ರಿಟರ್ನ್ ನಮಗೆ ಸಿಗುತ್ತದೆ?” ಹಾಗೆ “ಯಾವಾಗ ಸಿಗುತ್ತದೆ?” ಇವೆಲ್ಲವನ್ನ ವಿವರಣಾತ್ಮಕವಾಗಿ ಈ ಕೆಳಗೆ ತಿಳಿಯುತ್ತಾ ಹೋಗೋಣ.
SSY ಯೋಜನೆಯ ಪ್ರಯೋಜನ ತಿಳಿದರೆ ನೀವೇ ಒಂದು ಸರಿ ಶಾಕ್ ಆಗ್ತೀಯಾ!
ಹೌದು, ಈ ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನ ತಿಳಿದ ಮೇಲೆ ನೀವು ಶಾಕ್ ಆಗದು ಗ್ಯಾರಂಟಿ! ಏಕೆಂದರೆ ಅಷ್ಟೊಂದು ಬೆನಿಫಿಟ್ ಗಳು ಈ ಯೋಜನೆ ಅಡಿಯಲ್ಲಿ ಸರ್ಕಾರ ಹೆಣ್ಣು ಮಕ್ಕಳಿಗಾಗಿ ಒದಗಿಸಿದೆ.
- ನೀವು ಯಾವುದೇ ಇತರೆ ಸರ್ಕಾರಿ ಉಳಿತಾಯ ಯೋಜನೆಗಳನ್ನ ನಿಮ್ಮ ಮಗಳ ಹೆಸರಿನಲ್ಲಿ ಮಾಡಲು ಮುಂದಾದರೆ, ಅದಕ್ಕಿಂತ 10ಪಟ್ಟು ಉತ್ತಮ ಈ ಸುಕನ್ಯಾ ಸಮೃದ್ಧಿ ಯೋಜನೆ. ಹೇಗಂದರೆ ನೀವು ಈ ಸಣ್ಣ ಉಳಿತಾಯ ಯೋಜನೆ ಅಡಿಯಲ್ಲಿ ಪ್ರಸ್ತುತವಾಗಿ ಸುಮಾರು 8.2% ಬಡ್ಡಿ ದರವನ್ನ ಪಡೆಯಬಹುದು.
- ಈ ಯೋಜನೆಯಲ್ಲಿ ಪೋಷಕರು ಹಾಕುವ ಹಣ, ಅದಕ್ಕೆ ಬರುವ ಬಡ್ಡಿ ಮತ್ತು ಕೊನೆಯಲ್ಲಿ ಸಿಗುವ ಒಟ್ಟು ಮೊತ್ತ – ಈ ಯಾವುದಕ್ಕೂ ನೀವು ಸರ್ಕಾರಕ್ಕೆ ಒಂದು ರೂಪಾಯಿ ಕೂಡ ಟ್ಯಾಕ್ಸ್ (ತೆರಿಗೆ) ಕಟ್ಟಬೇಕಿಲ್ಲ.
- ಪೋಷಕರು ತಮ್ಮ ಮಗಳ ಹೆಸರಿನಲ್ಲಿ 15 ವರ್ಷಗಳ ಕಾಲ ಹಣವನ್ನ ಪೋಸ್ಟ್ ಆಫೀಸ್ ಅಲ್ಲಿ ಕಟ್ಟುತ್ತಾ ಬಂದರೆ ಸಾಕು 21ನೇ ವರ್ಷಕ್ಕೆ ನಿಮ್ಮ ಮಗಳ ಕೈಯಲ್ಲಿ ತುಂಬಾ ದೊಡ್ಡ ಮೊತ್ತವನ್ನ ನೀವು ನೋಡಲಿದ್ದೀರಿ.
- ನಿಮ್ಮ ಮಗಳ ಹೆಸರಿನಲ್ಲಿ ನೀವು ಖಾತೆಯನ್ನು ತೆರೆಯಲು ಅತಿ ಸಣ್ಣ ಪ್ರಮಾಣದ ಹಣವನ್ನ ಎಷ್ಟು ಕಟ್ಟಬಹುದು ಗೊತ್ತಾ? ಕೇವಲ ರೂ 250/- ಪಾವತಿಸುವ ಮೂಲಕ ನೀವು ನಿಮ್ಮ ಮಗಳ ಹೆಸರಿನಲ್ಲಿ ಈ ಯೋಜನೆಯನ್ನು ನಡೆಸಿಕೊಳ್ಳುತ್ತಾ ಬರಬಹುದು. ಹಾಗೆಯೇ ಗರಿಷ್ಠ ಠೇವಣಿಮುತ್ತ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇದು ದೊಡ್ಡ ಮಟ್ಟದ ಹೂಡಿಕೆ ಪ್ರಮಾಣವಾಗಿದೆ.
- ನೀವು 10 ವರ್ಷದ ಒಳಗೆ ನಿಮ್ಮ ಮಗಳ ಹೆಸರಿನಲ್ಲಿ ಈ ಖಾತೆಯನ್ನು ತೆರೆದಿರುತ್ತೀರಾ, ಆದರೆ ಕೆಲವು ವರ್ಷಗಳ ಬಳಿಕ ಉದ್ಯೋಗ ಅಥವಾ ವಾಸಸ್ಥಳ ಬದಲಾವಣೆ ದೇಶದ ಯಾವುದೇ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಗೆ ಖಾತೆಯನ್ನು ಸುಲಭವಾಗಿ ವರ್ಗಾಯಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ.
ಈ ಯೋಚನೆಯನ್ನ ಸರ್ಕಾರ ಹೆಣ್ಣು ಮಕ್ಕಳಿಗಾಗಿ ಮಾತ್ರ ಯಾಕೆ ರೂಪಿಸಿತು ?
ಭಾರತ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇವಲ ಹೆಣ್ಣು ಮಕ್ಕಳಿಗಾಗಿ ರೂಪಿಸಲು ಮುಖ್ಯ ಕಾರಣ, ಸಾಮಾಜಿಕ ಅಸಮ ನತೆಯನ್ನ ಹೋಗಲಾಡಿಸುವುದು. ಭಾರತದ ಅನೇಕ ಕುಟುಂಬದಲ್ಲಿ ಇಂದಿಗೂ ಹೆಣ್ಣು ಮಗು ಹುಟ್ಟಿದಾಗ ಅವನ ಶಿಕ್ಷಣ ಮತ್ತು ಮದುವೆಯ ಖರ್ಚು ಪೋಷಕರಿಗೆ ದೊಡ್ಡ ಹೊರೆಯಾಗಿ ಪರಿಗಣಿಸುತ್ತಿದೆ. ಈ ಆರ್ಥಿಕ ಆತಂಕದಿಂದ ಹೆಣ್ಣು ಮಕ್ಕಳ ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸುವ ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ ಅಥವಾ ಬಾಲ್ಯ ವಿವಾಹದ ಮಾಡಲು ಮುಂದಾಗುತ್ತಾರೆ. ಹಾಗಾಗಿ ಮಗು ಹುಟ್ಟಿದಾಗಿನಿಂದಲೇ ಸಣ್ಣ ಮೊತ್ತವನ್ನ ಉಳಿತಾಯ ಮಾಡಲು ಪ್ರೋತ್ಸಾಹಿಸುವ ಮೂಲಕ ಹೆಣ್ಣು ಮಗು ಬೆಳೆದು ದೊಡ್ಡವಳಾದಾಗ ಅವಳ ಉನ್ನತ ಶಿಕ್ಷಣ ಮತ್ತು ಭವಿಷ್ಯದ ಕನಸಿಗೆ ಆರ್ಥಿಕ ಆರ್ಥಿಕ ಬುನಾದಿ ಹಾಕುವ ಸರ್ಕಾರದ ಮೂಲ ಧ್ಯೇಯೋದ್ದೇಶವಾಗಿದೆ.
ಮತ್ತೊಂದು ಪ್ರಮುಖ ಕಾರಣವೇನೆಂದರೆ ಲಿಂಗ ತಾರತಮ್ಯ ತಡೆಗಟ್ಟುವುದು ಮತ್ತು ಮಹಿಳಾ ಸಬಲೀಕರಣ. ಭೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದಡಿ ಜಾರಿಗೆ ಬಂದ ಈ ಯೋಜನೆಯು ಹೆಣ್ಣು ಮಕ್ಕಳನ್ನು ಕುಟುಂಬದ ಹೊರೆ ಎಂದು ಭಾವಿಸದೆ ಆಸ್ತಿ(property) ಎಂದು ಪರಿಗಣಿಸುವಂತೆ ಮಾಡಬೇಕೆಂದು ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತು. ಈ ಯೋಜನೆ ಅಡಿಯಲ್ಲಿ ಉಳಿತಾಯ ಯೋಜನೆಗಿಂತ ಹೆಚ್ಚಿನ ಬಡ್ಡಿ ದರ ಮತ್ತು ತೆರಿಗೆ ವಿನಾಯಿತಿಯನ್ನು ನೀಡುವ ಮೂಲಕ ಪೋಷಕರು ಗಂಡು ಮಗುವಿನಷ್ಟೇ ಪ್ರಾಮುಖ್ಯತೆಯನ್ನ ತನ್ನ ಹೆಣ್ಣು ಮಗುವಿಗೂ ಕೊಡಬೇಕು ಇದು ಸರ್ಕಾರದ ಆಶಯವಾಗಿದೆ. “ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ನಾನಮಾನವನ್ನು ಹೆಚ್ಚಿಸಲು ಮತ್ತು ಅವರು ಸ್ವಾವಲಂಬಿಯಾಗಿ ಬದುಕಲು ಈ ಯೋಜನೆ ಪ್ರಮುಖ ಮೈಲಿಗಲ್ ಆಗಿದೆ”.
ನೀವು ನಿಮ್ಮ ಮಗಳ ಹೆಸರಿನಲ್ಲಿ ತಿಂಗಳಿಗೆ ಎಷ್ಟು ಉಳಿತಾಯ ಮಾಡಲು ಯೋಚಿಸಬಹುದು(SSY Savings Plan):-
2026 ನೇ ಸಾಲಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನ ತೆರೆಯಲು ಸರ್ಕಾರವೇ ಒಂದಿಷ್ಟು ಪ್ಲಾನ್ ಗಳನ್ನ ಯೋಜಿಸಿದೆ. ಈ ಯೋಜನೆಯು ಸುಮಾರು ವರ್ಷಗಳ ಹಿಂದೆಯೇ ರೂಪಿಸಿರುವಂಥದ್ದು. ಇವುಗಳಲ್ಲಿ 2026 ಬಂದರು ಯಾವುದೇ ರೀತಿಯ ಗೊಂದಲ, ಬದಲಾವಣೆಗಳು ಇಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಬಡ್ಡಿ ಪ್ರಮಾಣ ಮಾತ್ರ ಸರ್ಕಾರ ಹೆಚ್ಚಿಸುತ್ತಾ ಬಂದಿದೆ. ಇದು ಪೋಷಕರಿಗೆ ಒಂದು ರೀತಿಯ ಬೆನಿಫಿಟ್ ಅಂದರೆ ತಪ್ಪಾಗುವುದಿಲ್ಲ.
| ದಿನದ (Daily) ಉಳಿತಾಯ (ಅಂದಾಜು) | ತಿಂಗಳ (Monthly) ಉಳಿತಾಯ (₹) | ವಾರ್ಷಿಕ ಹೂಡಿಕೆ (Yearly) (₹) | ನೀವು ಕಟ್ಟುವ ಒಟ್ಟು ಅಸಲು (Total Deposit 15 Yrs) (15 ವರ್ಷ) | 21 ವರ್ಷಕ್ಕೆ ಸಿಗುವ ಒಟ್ಟು ಮೊತ್ತ (Maturity at 21 Yrs)(ಅಂದಾಜು) |
|---|---|---|---|---|
| ₹ 8 | ₹ 250 | ₹ 3,000 | ₹ 45,000 | ₹ 1.38 ಲಕ್ಷ |
| ₹ 17 | ₹ 500 | ₹ 6,000 | ₹ 90,000 | ₹ 2.77 ಲಕ್ಷ |
| ₹ 33 | ₹ 1,000 | ₹ 12,000 | ₹ 1,80,000 | ₹ 5.54 ಲಕ್ಷ |
| ₹ 66 | ₹ 2,000 | ₹ 24,000 | ₹ 3,60,000 | ₹ 11.08 ಲಕ್ಷ |
| ₹ 100 | ₹ 3,000 | ₹ 36,000 | ₹ 5,40,000 | ₹ 16.63 ಲಕ್ಷ |
| ₹ 166 | ₹ 5,000 | ₹ 60,000 | ₹ 9,00,000 | ₹ 27.71 ಲಕ್ಷ |
| ₹ 266 | ₹ 8,000 | ₹ 96,000 | ₹ 14,40,000 | ₹ 44.34 ಲಕ್ಷ |
| ₹ 333 | ₹ 10,000 | ₹ 1,20,000 | ₹ 18,00,000 | ₹ 55.43 ಲಕ್ಷ |
| ₹ 411 | ₹ 12,500 | ₹ 1,50,000 | ₹ 22,50,000 | ₹ 69.28 ಲಕ್ಷ |
ಬಡ್ಡಿ ದರದ ಬಗ್ಗೆ ಪಕ್ಕ ಮಾಹಿತಿ :-
- ಪ್ರಸ್ತುತ ಬಡ್ಡಿ ದರ: ನೀವು ನಿಮ್ಮ ಮನೆಯಲ್ಲಿ ವಾರ್ಷಿಕ 8.2%.
- ಅವಧಿ: ಜನವರಿ 2026 ರಿಂದ ಮಾರ್ಚ್ 2026ರ ತ್ರೈಮಾಸಿಕದವರೆಗೆ.
- ವಿಶೇಷತೆ: ಇದು ಇತರ ಸಣ್ಣ ಉಳಿತಾಯ ಯೋಜನೆಗಳಿಗಿಂತ (PPF, FD) ಹೆಚ್ಚಿನ ಬಡ್ಡಿ ನೀಡುವ ಸರ್ಕಾರಿ ಯೋಜನೆಯಾಗಿದೆ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳ ವಿವರ:-
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ತಂದೆ ತಾಯಿ ಐಡಿ ಪ್ರೂಫ್ ಹಾಗೂ ಇನ್ನಿತರಾಗದೆ ದಾಖಲೆಗಳು
- ಹೆಣ್ಣು ಮಗುವಿನ ಜನನ ಪ್ರಮಾಣಪತ್ರ (Birth Certificate)
ಯಾರು ಈ ಯೋಜನೆಯ ಲಾಭಕ್ಕೆ ಹೂಡಿಕೆ ಮಾಡಬಹುದು?
- 0 ಇಂದ 10 ವರ್ಷದ ಹೆಣ್ಣು ಮಕ್ಕಳ ಪೋಷಕರು
- ತೆರಿಗೆ ಉಳಿತಾಯ ಬಯಸುವ ಉದ್ಯೋಗಿಗಳು
- ಸ್ವಯಂ ಉದ್ಯೋಗಿಗಳು
- ದೀರ್ಘಕಾಲದ ಸುರಕ್ಷಿತ ಹೂಡಿಕೆ ಬಯಸುವ ವ್ಯಕ್ತಿಗಳು
ಈ ಯೋಜನೆಗೆ ಖಾತೆ ತೆರೆಯುವ ವಿವಿಧ ಸ್ಥಳಗಳು:-
ಈ ಯೋಜನೆಗೆ ಖಾತೆ ತೆರೆಯುವ ವಿವಿಧ ಸ್ಥಳಗಳ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಅರ್ಜಿ ಸಲ್ಲಿಸುವ ತಂದೆ ತಾಯಿಗಳು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅಧಿಕೃತ ಸ್ಥಳದಲ್ಲಿ ಈ ಯೋಜನೆಯ ಖಾತೆಯನ್ನು ತೆರೆದು ಲಾಭವನ್ನು ಪಡೆದುಕೊಳ್ಳಬಹುದು.
- ಎಲ್ಲಾ ಅಂಚೆ ಕಚೇರಿಗಳು
- ಅಧಿಕೃತ ಬ್ಯಾಂಕ್ ಗಳು
- ಕೆನರಾ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಆಕ್ಸಿಸ್ ಬ್ಯಾಂಕ್
- ಬ್ಯಾಂಕ್ ಆಫ್ ಇಂಡಿಯಾ
ಹಾಗೂ ಇನ್ನಿತರ ಮಾನ್ಯ ಪಡೆದಿರುವಂತಹ ವಾಣಿಜ್ಯ ಬ್ಯಾಂಕುಗಳಲ್ಲಿ ಈ ಯೋಜನೆಯ ಲಾಭವನ್ನು ಪಡೆಯಲು ಅಕೌಂಟ್ ಮಾಡಿಸಬಹುದು.
ಪ್ರಮುಖ ಸೂಚನೆಗಳು:
| ಈ ಯೋಜನೆಗೆ ಕನಿಷ್ಠ 250 ಜಮಾ ಮಾಡದಿದ್ದರೆ ಖಾತೆ ಇನ್ ಆಕ್ಟಿವ್ ಆಗಬಹುದು ಖಾತೆಯನ್ನು ಭಾರತದಲ್ಲಿ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಟ್ರಾನ್ಸ್ಫರ್ ಮಾಡಬಹುದಾಗಿದೆ ದಂಡ ಪಾವತಿಸಿ ಮರುಚಕ್ರಿಯಗೊಳಿಸಬಹುದು |
ಮೆಚುರಿಟಿ ಅಥವಾ ಮುಕ್ತಾಯ:
ಖಾತೆ ತೆರೆದ ದಿನಾಂಕದಿಂದ ಹಿಡಿದು 21 ವರ್ಷಗಳ ನಂತರ ಅಥವಾ ಮಗಳು 18 ವರ್ಷ ತುಂಬಿದ ನಂತರ ಮದುವೆಯಾದರೆ ಮದುವೆಗೆ ಒಂದು ತಿಂಗಳು ಮೊದಲು ಅಥವಾ ಮೂರು ತಿಂಗಳು ನಂತರ ಕ್ಲೋಸ್ ಮಾಡಬಹುದಾಗಿದೆ.
ತೆರಿಗೆಯ ಪ್ರಯೋಜನಗಳು:
ಈ ಯೋಜನೆಯನ್ನು ಮಾಡಿಸುವುದರಿಂದ ಜಮಾ ಮಾಡಿದ ಮೊತ್ತಕ್ಕೆ ಸೆಕ್ಷನ್ 80 c ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ
ಗಳಿಸಿದ ಬಡ್ಡಿ ತೆರಿಗೆ ಮುಕ್ತವಾಗುತ್ತದೆ
ಮೆಚುರಿಟಿ ನಂತರ ತೆರಿಗೆ ಮುಕ್ತ ಅಂದರೆ ಇದು ಸಂಪೂರ್ಣವಾಗಿ EEE (Exempt-Exempt-Exempt) ಯೋಜನೆಯ ಆಗಿದೆ.
ಸಮಪ್ತಿ:-
ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಅತ್ಯಂತ ಸುರಕ್ಷಿತವಾದ ಹಾಗೂ ಲಾಭದಾಯಕವಾದ ಉಳಿತಾಯ ಯೋಜನೆ ಇದಾಗಿದ್ದು ತಂದೆ ತಾಯಿಗಳು ಹೆಣ್ಣು ಮಕ್ಕಳನ್ನು ಹೆತ್ತರೆ ಖಂಡಿತವಾಗಿಯೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ ಈ ಮೇಲೆ ತಿಳಿಸಿರುವ ಸಂಪೂರ್ಣವಾದ ಮಾಹಿತಿ ಜೊತೆಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಅಧಿಕೃತ ವ್ಯಕ್ತಿಯಲ್ಲಿ ನೀಡಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿಯನ್ನು ಓದಿಕೊಂಡು ಯೋಜನೆಯ ಲಾಭವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿ.
ಇತರೆ ಪ್ರಮುಖ ಲಿಂಕುಗಳು :
- Panchayat Raj Commissionerate : PUC ಪಾಸ್ ಆದ್ರೆ ಸಾಕು! ಪಂಚಾಯತ್ ರಾಜ್ನಲ್ಲಿ 25,311 ಸರ್ಕಾರಿ ಹುದ್ದೆಗಳು!
- VAO Recruitment : ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಹುದ್ದೆಗಳಿಗೆ ನೇರ ನೇಮಕಾತಿ 2026!
- KMF SHIMUL : ರೂ ₹1,55,200/- : 194 ಹುದ್ದೆಗಳು – ಅರ್ಜಿ ದಿನಾಂಕ ವಿಸ್ತರಣೆ!
- Free Training Skill : ಮಹಿಳೆಯರಿಗೆ 31 ದಿನ ಉಚಿತ

