ಕರ್ನಾಟಕ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿಯ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ ಇದೀಗ ಡಿಜಿಟಲ್ ಟಚ್ ಕೊಡಲು ಸರ್ಕಾರ ಮುಂದಾಗಿದೆ.
Shakti Scheme Smart Card in Kannada
ಹೌದು ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಮಾಡಲು ಮುಂದಾಗಿರುವ ಸರ್ಕಾರ ಮಹಿಳೆಯರಿಗೆ ಈ ಸ್ಮಾರ್ಟ್ ಕಾರ್ಡ್ ವಿತರಣೆಯಿಂದ ಆಧಾರ್ ಕಾರ್ಡ್ ಬಳಕೆಯನ್ನು ನಿಷೇಧಿಸಲಾಗುತ್ತದೆ. ನಂತರ ಕಡ್ಡಾಯವಾಗಿ ಈ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಿ ಶಕ್ತಿ ಯೋಜನೆಯ ಉಚಿತ ಲಾಭವನ್ನು ಪಡೆದುಕೊಳ್ಳಬಹುದು.
ಹಾಗಾದರೆ ಈ ಉಚಿತ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ? ಎಲ್ಲಿ ಸಿಗುತ್ತದೆ? ಹೇಗೆ ಅಪ್ಲಿಕೇಶನ್ ಹಾಕುವುದು? ಯಾರು ಅರ್ಹರು? ಈ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಸಂಪೂರ್ಣವಾಗಿ ನೀಡಲಾಗಿದ್ದು ಶಕ್ತಿ ಯೋಜನೆಯ ಲಾಭ ಪಡೆಯುವ ಮಹಿಳಾ ಅಭ್ಯರ್ಥಿಗಳು ಈ ಯೋಜನೆಗೆ ಯೋಜನೆಯ ಬಗ್ಗೆ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.
ಯೋಜನೆಯ ಬಗ್ಗೆ:
‘ಶಕ್ತಿ’ ಯೋಜನೆಯು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು ಇದರ ಮೂಲಕ ಕರ್ನಾಟಕದ ಮಹಿಳೆಯರು ಸೇರಿದಂತೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಬಸ್ ಪ್ರಯಾಣವನ್ನ ಮಾಡಲು ಜಾರಿಗೆ ತಂದಿರುವಂತ ಯೋಜನೆ ಇದಾಗಿದೆ.
ಈ ಯೋಜನೆಯ ಮೂಲಕ ಕರ್ನಾಟಕದ ಮಹಿಳೆಯರಿಗೆ ರಾಜ್ಯ ಸರ್ಕಾರ ಕೊಟ್ಟಿರುವಂತಹ ಒಂದು ಭರ್ಜರಿ ಗುಡ್ ನ್ಯೂಸ್ ಇದಾಗಿದ್ದು ಈ ಶಕ್ತಿ ಯೋಜನೆಗೆ ಇದೀಗ ಮತ್ತೊಂದು ಹೊಸ ರೂಪವನ್ನು ತರಲು ಸರ್ಕಾರ ಮುಂದಾಗಿದೆ.
ಸ್ಮಾರ್ಟ್ ಕಾರ್ಡ್ ನೀಡುವುದರ ಹಿಂದಿನ ಉದ್ದೇಶ:
ಪ್ರಯಾಣಿಕರಿಗೆ ಸುಲಭ ಮತ್ತು ಸುರಕ್ಷಿತವಾದ ಪ್ರಯಾಣವನ್ನ ಮಾಡಲು ಈ ಸ್ಮಾರ್ಟ್ ಕಾರ್ಡ್ ಬಳಕೆಯನ್ನು ಜಾರಿಗೆ ತರಲು ಮುಂದಾಗಿದೆ, ಆಧಾರ್ ಕಾರ್ಡ್ ಕಳೆದುಕೊಳ್ಳುವಂತಹ ಅಥವಾ ದುರ್ಬಳಕೆ ಮಾಡುವಂತಹ ಸಮಸ್ಯೆಯ ನಿವಾರಣೆಯನ್ನು ಈ ಸ್ಮಾರ್ಟ್ ಕಾರ್ಡ್ ಬಳಕೆಯಿಂದ ತಪ್ಪಿಸಬಹುದು.
ಡಿಜಿಟಲ್ ವ್ಯವಸ್ಥೆಯ ಮೂಲಕ ಸ್ಪಷ್ಟ ದಾಖಲೆ ನಿರ್ವಹಣೆ ಮಾಡಲು ಸಹಕಾರಿ ಆಗಲಿದೆ ನಕಲಿ ಪ್ರಯಾಣವನ್ನು ತಡೆಯುವುದು ಸರ್ಕಾರದ ಮೂಲ ಉದ್ದೇಶವಾಗಿದೆ.
ಈ ಯೋಜನೆಗೆ ಅರ್ಹತೆ ಯಾರಿಗಿದೆ:
- ಕರ್ನಾಟಕದ ಕಾಯಂ ನಿವಾಸಿಯಾಗಿರುವ ಮಹಿಳೆಯರು
- ಲಿಂಗತ್ವ ಅಲ್ಪಸಂಖ್ಯಾತರು
- ಶಕ್ತಿ ಯೋಜನೆಯ ಲಾಭ ಪಡೆಯುತ್ತಿರುವವರು
- 18 ವರ್ಷ ಮೇಲ್ಪಟ್ಟವರು (ಸರ್ಕಾರದ ಮಾರ್ಗಸೂಚಿಯಂತೆ)
ಸ್ಮಾರ್ಟ್ ಕಾರ್ಡ್ ಪಡೆಯುವುದರ ಹಿಂದಿನ ಉದ್ದೇಶ:
- ಆಧಾರ್ ಕಾರ್ಡ್ ಕಡ್ಡಾಯವಿಲ್ಲ
- ಸರ್ಕಾರಿ ಬಸ್ಸಿಗೆ ಹತ್ತುವಾಗ ಕಾರ್ಡ್ ತೋರಿಸಿದರೆ ಸಾಕು
- ಸುಲಭ ವೇಗವಾದ ಮತ್ತು ಸುರಕ್ಷಿತ ಪ್ರಯಾಣವನ್ನು ಮಾಡಬಹುದು ಹಾಗೂ ಇನ್ನಿತರ ಉಪಯೋಗಗಳನ್ನು ಪಡೆದುಕೊಳ್ಳಬಹುದು
ಪ್ರಮುಖ ಪ್ರಯೋಜನಗಳು:
- ಉದ್ಯೋಗ ಶಿಕ್ಷಣ ಆರೋಗ್ಯ ಸೇವೆಗೆ ಸುಲಭ ಪ್ರವೇಶವನ್ನು ಮಾಡಬಹುದು
- ಮಹಿಳೆಯರ ಸ್ವಾವಲಂಬನೆಯ ಹೆಚ್ಚಳ ಮಾಡಬಹುದು
- ಲಿಂಗತ್ವ ಅಲ್ಪಸಂಖ್ಯಾತರಿಗೆ ಗೌರವಯುತ ಪ್ರಯಾಣ ಸೌಲಭ್ಯ
- ಡಿಜಿಟಲ್ ವ್ಯವಸ್ಥೆಯಿಂದ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು
ಯಾವ ಸಂಸ್ಥೆಗಳು ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಮಾಡುತ್ತವೆ:
- ರಾಜ್ಯ ಸರ್ಕಾರದ ನಾಲ್ಕು ಸಾರಿಗೆ ನಿಗಮಗಳ ಮೂಲಕ ಸ್ಮಾರ್ಟ್ ಕಾರ್ಡ್ ವಿತರಣೆ ಸೌಲಭ್ಯ ಸಿಗಲಿದೆ
- ಕೆ ಎಸ್ ಆರ್ ಟಿ ಸಿ (KSRTC)
- ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ (NWKRTC)
- ಕೆ ಕೆ ಆರ್ ಟಿ ಸಿ (KKRTC)
- ಬಿ ಎಂ ಟಿ ಸಿ (BMTC)
ಸ್ಮಾರ್ಟ್ ಕಾರ್ಡ್ ಪಡೆಯುವ ವಿಧಾನ:
ಈ ಕೆಳಗೆ ಕೊಟ್ಟಿರುವ ಕೆಲವು ವಿಧಾನಗಳ ಮೂಲಕ ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಮಹಿಳೆಯರಿಗೆ ಮಾಡಲಾಗುತ್ತದೆ.
- ನಿಮ್ಮ ಹತ್ತಿರದ ಸರ್ಕಾರಿ ಬಸ್ ಡಿಪೋ ಅಥವಾ ನಿಗದಿತ ಕೇಂದ್ರಗಳಿಗೆ ಭೇಟಿ ನೀಡಬೇಕು
- ಆಧಾರ್ ಕಾರ್ಡ್ ಹಾಗೂ ವಿಳಾಸ ಪುರವೆಯನ್ನ ಸಲ್ಲಿಸಬೇಕು
- ಅವರು ಕೊಟ್ಟಿರುವ ಅರ್ಜಿ ಪ್ರತಿಯನ್ನು ಭರ್ತಿ ಮಾಡಬೇಕು
- ಫೋಟೋ ತೆಗೆದುಕೊಳ್ಳಲಾಗುತ್ತದೆ
- ಪರಿಶೀಲನೆ ನಂತರ ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಮಾಡಲಾಗುತ್ತದೆ
ಕೊನೆಯ ಮಾತು:
ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಅಡಿ ಉಚಿತವಾಗಿ ಸ್ಮಾರ್ಟ್ ಕಾರ್ಡ್ ನೀಡುವಂತಹ ನಿರ್ಧಾರವು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಇನ್ನಷ್ಟು ಸುಗಮವಾಗಿ ಪ್ರಯಾಣ ನಡೆಸಲು ಸಾಧ್ಯವಾಗುತ್ತದೆ ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಲು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ನಡೆಸಲು ಈ ಒಂದು ಯೋಜನೆ ತುಂಬಾನೇ ಸಹಕಾರಿಯಾಗಲಿದ್ದು ಇದು ಪ್ರಸ್ತುತ ಡಿಜಿಟಲ್ ವ್ಯವಸ್ಥೆಗೆ ಅಡಿಗಲ್ಲು ಹಾಕಿದಂತೆ ಆಗುತ್ತದೆ.

