Gram Panchayat Scholarship In Kannada
ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಧನ ನೀಡುವ ಉದ್ದೇಶದಿಂದ 2026 ಪ್ರೆಬ್ರವರಿಯಲ್ಲಿ ಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ (Scholarship) ಯೋಜನೆಯನ್ನು ಜಾರಿಗೆ ತಂದಿದೆ “8ನೇ ತರಗತಿ ಮೇಲ್ಪಟ್ಟ ಹಾಗು ಪಿಯುಸಿ, ಯಾವುದೇ ಪದವಿ, ಡಿಪ್ಲೋಮಾ”, ಸ್ನಾತಕೋತ್ತರ ಪದವಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಬರೋಬ್ಬರಿ ₹10,000 ವರೆಗೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ರಾಜ್ಯ ವಿದ್ಯಾರ್ಥಿವೇತನ ಮಂಡಳಿ ಮೂಲಕ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಕಾಲಾವಕಾಶವನ್ನು ಸರ್ಕಾರ ವಿಸ್ತರಿಸಿದ್ದು. ತಾಂತ್ರಿಕ ಕಾರಣಗಳು ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ಊರಿನ ಗ್ರಾಮ ಪಂಚಾಯಿತಿಯಿಂದ ಈ ಸ್ಕಾಲರ್ಶಿಪ್ ಮೊತ್ತವನ್ನ ಪಡೆಯಬಹುದು. ಸಂಪೂರ್ಣ ಮಾಹಿತಿ ಕೆಳಗಿನ ಲೇಖನದಲ್ಲಿ ತಿಳಿಸುತ್ತೇನೆ.
ಪ್ರತಿಭಾವಂತ ವಿದ್ಯಾರ್ಥಿಗಳು ಹಣದ ಕೊರತೆಯಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂಬ ಉದ್ದೇಶದಿಂದ ಈ ಸ್ಕಾಲರ್ಶಿಪ್ (Scholarship) ಅನ್ನು ನೀಡಲಾಗುತ್ತಿದ್ದು ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಕೆಲವೊಂದು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ 2 ರೀತಿಯಲ್ಲೂ ಅರ್ಜಿಯನ್ನು ಸಲ್ಲಿಸುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ.
ಗಮನಿಸಿ:- ಪ್ರೀತಿಯ ವಿದ್ಯಾರ್ಥಿಗಳೇ ಶಿಕ್ಷಣ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದ ಆಶಾಕಿರಣ ಹಾಗಾಗಿ ಈ ವಿದ್ಯಾರ್ಥಿ ವೇತನ (Scholarship) ದಿಂದ ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ
ಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ ಯೋಜನೆಯ ಉದ್ದೇಶ:-
ಪ್ರತಿಯೊಬ್ಬ ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳು ತಮ್ಮಂತೆ ಆಗಬಾರದು ಉತ್ತಮ ಶಿಕ್ಷಣ ಪಡಿಯಬೇಕು ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಬೇಕು ಎಂಬ ಆಸೆ ಇರುವುದು ಸಹಜ ಆದರೆ ಇಂದಿನ ದಿನಮಾನಗಳಲ್ಲಿ ಏರುತ್ತಿರುವ ಶಿಕ್ಷಣದ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಮಾಧ್ಯಮ ವರ್ಗದ ಮತ್ತು ಬಡ ಕುಟುಂಬಗಳಿಗೆ ಹೇಳಲಾಗದ ಸಂಕಷ್ಟವಾಗಿದೆ
ಕಾಲೇಜುಗಳಿಗೆ ಸೇರಲು ಅಥವಾ ಶಿಕ್ಷಣಕ್ಕೆ ಅಗತ್ಯವಾದಪ್ಲೀಸ್ ಪುಸ್ತಕಗಳು ಯೂನಿಫಾರಂ ನೋಟ್ಸ್ ಹಾಗೂ ಇತ್ಯಾದಿ ಪರಿಕರಗಳನ್ನು ಖರೀದಿಸಲು ಪರದಾಡುತ್ತಿರುವ ಎಷ್ಟೋ ವಿದ್ಯಾರ್ಥಿಗಳನ್ನು ನಾವು ನೋಡಬಹುದು ಅಂತಹ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವ ನಿಟ್ಟಿನಲ್ಲಿ ಸರ್ಕಾರ ಈ ಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತಂದಿದ್ದು
ಇಂಥ ಗೋಲ್ಡನ್ ಚಾನ್ಸ್ ಯಾವುದೇ ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳಬೇಡಿ ಇದೇ ತಕ್ಷಣ ಅರ್ಜಿಯನ್ನು ಸಲ್ಲಿಸಲು ಕೆಳಗೆ ಕೊಡಲಾದ ದಾಖಲೆಗಳನ್ನು ಸಿದ್ಧಪಡಿಸಿ ಅರ್ಜಿಯನ್ನು ಸಲ್ಲಿಸಿ. ಕೊನೆಯ ದಿನಾಂಕ ಮುಗಿದ ನಂತರ ಹಣದ ಕೊರತೆ ಇದ್ದಾಗ ನಾನು ಸಹ ಅರ್ಜಿ ಸಲ್ಲಿಸಬೇಕು ಎಂದು ಚಿಂತಿಸುವ ಬದಲು ಈಗಲೇ ಹೋಗಿ ಅರ್ಜಿ ಸಲ್ಲಿಸಿ.
ವಿದ್ಯಾರ್ಥಿ ವೇತನದ ಕಿರು ಪರಿಚಯ:-
| ವಿದ್ಯಾರ್ಥಿ ವೇತನದ ಹೆಸರು | ಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ (Scholarship) |
| ಅರ್ಹ ವಿದ್ಯಾರ್ಥಿಗಳು | 8th to 10th ಮತ್ತು PUC ಪದವಿ ಪೋಸ್ಟ್ ಗ್ರಾಜುಯೇಷನ್, ಡಿಪ್ಲೋಮೋ, ಸ್ನಾತಕೋತ್ತರ ಪದವಿ, |
| ರಾಜ್ಯ | ಕರ್ನಾಟಕ ಗ್ರಾಮೀಣ ಭಾಗದ ಸರ್ಕಾರ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು |
| ಪ್ರೋತ್ಸಾಹ ಧನದ ಮೊತ್ತ | ₹10,000/- |
| ಅರ್ಜಿ ಸಲ್ಲಿಸುವುದು ಹೇಗೆ | ವಿದ್ಯಾರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ |
ಶೈಕ್ಷಣಿಕ ಅರ್ಹತೆ :-
- 8th to 10th ಮತ್ತು PUC (1ನೇ ಮತ್ತು 2ನೇ ವರ್ಷ),
- ಡಿಗ್ರಿ, ಪೋಸ್ಟ್ ಗ್ರ್ಯಾಜುಯೇಷನ್, ಡಿಪ್ಲೊಮಾ / ITI / ಪಾಲಿಟೆಕ್ನಿಕ್ / ಇಂಜಿನಿಯರಿಂಗ್ / ನರ್ಸಿಂಗ್ ಇತ್ಯಾದಿ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿ ವೇತನದ ಮೊತ್ತ ಎಷ್ಟು ಸಿಗುತ್ತದೆ:-
- 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು :-₹1,000 ದಂತೆ ಮೂರು ವರ್ಷಕ್ಕೆ ₹3000
- ಪಿಯುಸಿ ಐಟಿಐ ಡಿಪ್ಲೋಮೋ ವಿದ್ಯಾರ್ಥಿಗಳು:- ₹5000
- ಪದವಿ ವಿದ್ಯಾರ್ಥಿಗಳಿಗೆ:- ₹4,000 ನಾಲ್ಕು ಸಾವಿರದಿಂದ ₹8,000
- ಸ್ನಾತಕೋತ್ತರ ವಿದ್ಯಾರ್ಥಿಗಳು:- ₹6,000 ದಿಂದ ₹10,000
- Hostel ವಿದ್ಯಾರ್ಥಿಗಳು :-₹20000
ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು
- ಅಭ್ಯರ್ಥಿಯು ಕರ್ನಾಟಕದ ಕಡ್ಡಾಯ ನಿವಾಸಿ ಆಗಿರಬೇಕು
- ಭಾರತೀಯ ನಾಗರೀಕರಾಗಿರಬೇಕು
- ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆ ಹೊಂದಿರಬೇಕು ಹಾಗೆಯೇ ಕನಿಷ್ಠ 60% ಅಂಕವನ್ನ ಪಡೆದುಕೊಂಡಿರಬೇಕು
- 7ನೇ ತರಗತಿ ಒಳಗಿನ ಯಾವುದೇ ವಿದ್ಯಾರ್ಥಿಗಳಿಗೂ ಈ ಪ್ರೋತ್ಸಾಹ ಧನ ಸಿಗುವುದಿಲ್ಲ. ಬದಲಾಗಿ “8ನೇ ತರಗತಿ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೆ ಪಿಯುಸಿ, ಯಾವುದೇ ಪದವಿ, ಡಿಪ್ಲೋಮಾ”, ಸ್ನಾತಕೋತ್ತರ ಪದವಿ ಓದುತ್ತಿರಿವ ಎಲ್ಲಾ ವಿದ್ಯಾರ್ಥಿಗಳು ಕೂಡ ನಿಮ್ಮ ಊರಿನ ಗ್ರಾಮ ಪಂಚಾಯಿತಿಯಿಂದ ಈ ಸ್ಕಾಲರ್ಶಿಪ್ ಮೊತ್ತವನ್ನ ಪಡೆಯಬಹುದು.
- ಕುಟುಂಬದ ವಾರ್ಷಿಕ ಆದಾಯವು 2 ಲಕ್ಷದಿಂದ 2.5 ಲಕ್ಷದ ಒಳಗೆ ಇರಬೇಕು.
ಈ ವಿದ್ಯಾರ್ಥಿ ವೇತನವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೇಗೆ ಸಹಾಯವಾಗಲಿದೆ:-
- ಹಣದ ತೊಂದರೆಯಿಂದಾಗಿ ಶಾಲಾ ಅಥವಾ ಕಾಲೇಜನ್ನು ಬಿಡುವ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಇದು ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ.(Scholarship)
- ಗ್ರಾಮೀಣ ಭಾಗದ ಬಡ ಕುಟುಂಬದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಪಡೆದುಕೊಂಡು ಸಮಾಜದಲ್ಲಿ ಘನತೆ ಗೌರವ ಹೆಚ್ಚುತ್ತದೆ.
- ಈ ಒಂದು ಪ್ರೋತ್ಸಾಹ ಧನದಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಇತ್ತೀಚಿನ ದಿನಗಳಲ್ಲಿ ತುಂಬಾನೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಇಂತ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿನ ತಮ್ಮ ಉನ್ನತ ಶಿಕ್ಷಣವನ್ನು ಮುಗಿಸಿ ದೇಶ – ವಿದೇಶದಲ್ಲಿ ತಮ್ಮ ಹೆಸರಿನ ಜೊತೆಗೆ ತಮ್ಮ ದೇಶದ ಹೆಸರನ್ನು ಕೂಡ ಅಗ್ರಸ್ಥಾನಕ್ಕೆ ಕೊಂಡೊಯ್ಯುತ್ತಾರೆ.
- ಬಡ ತಂದೆ ತಾಯಿಯರಿಗೆ ತಮ್ಮ ಮಕ್ಕಳ ಶಿಕ್ಷಣವನ್ನು ಉನ್ನತ ಮಟ್ಟಕೆ ಕೊಂಡೊಯ್ಯಲು ಈ Scholarship ಸಹಾಯಕ
- ಸಮಾಜದಲ್ಲಿ ಕೇವಲ ಶ್ರೀಮಂತರು ಮಾತ್ರ ಕೆಲಸ ತೆಗೆದು ಕೊಳ್ಳುವುದು ಅಷ್ಟೇ ಅಲ್ಲ ಗ್ರಾಮೀಣ ಭಾಗದ ಸಾಮಾನ್ಯ ವರ್ಗದವರು ಸಹ ಸರ್ಕಾರೀ ಉದ್ಯೋಗವನ್ನು ಪಡೆಯುವ ಅವಕಾಶ
- ವಿಶೇಷವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ತಲುಪುವುದರಿಂದ ಸಮಾಜದ ಎಲ್ಲಾ ಮಕ್ಕಳು ಸ್ಥಿರವಾಗಿ ಸಮಾನವಾದ ಶಿಕ್ಷಣವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:-
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಶಾಲೆ/ಕಾಲೇಜಿನ ಬೋನಾಫೈಡ್ / ದಾಖಲಾತಿ ಪ್ರಮಾಣಪತ್ರ
- 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
- ಬ್ಯಾಂಕ್ ಖಾತೆ ಪಾಸ್‌ಬುಕ್ (ಆಧಾರ್ ಲಿಂಕ್ ಅಗತ್ಯ)
- ಆದಾಯ ಪ್ರಮಾಣಪತ್ರ
- ವಾಸ ಪ್ರಮಾಣ ಪತ್ರ (Residence Certificate)
- ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
ಅರ್ಜಿಸಲ್ಲಿಸುವ ವಿಧಾನ:-
ಗ್ರಾಮ ಪಂಚಾಯಿತಿಯ ಈ ಸ್ಕಾಲರ್ಶಿಪ್ ಪಡೆಯಲು ನಿಮಗೆ ಗೊಂದಲವಿದ್ದರೆ:-
ನಿಮ್ಮ ಊರಿನ ಗ್ರಾಮ ಪಂಚಾಯಿತಿ ಕಚೇರಿಗೆ ಮೊದಲು ಭೇಟಿ ನೀಡಿ ಅಥವಾ ಅಲ್ಲಿನ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿನೀಡಿ. ಗ್ರಾಮ ಪಂಚಾಯಿತಿಯಲ್ಲಿರುವ PDO ಅಥವಾ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಳಿ ವಿದ್ಯಾರ್ಥಿಗಳಿಗೆ ಸಿಗುವ ಶೈಕ್ಷಣಿಕ ಪ್ರೋತ್ಸಾಹ ಧನಕ್ಕೆ (Scholarship) ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಿ.
ನಿಮ್ಮ ಫೋನ್ ಮುಕಾಂತರ ಅರ್ಜಿ ಸಲ್ಲಿಸುವ ವಿಧಾನ :
- ಮೊದಲು ನಿಮ್ಮ ಫೋನ್ ಮೂಲಕ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಕಾಲೇಜು ದೃಢೀಕರಣ ಪತ್ರ, ಹಳೆಯ ಅಂಕಪಟ್ಟಿ, ಬ್ಯಾಂಕ್ ಪಾಸ್ ಬುಕ್, ಇವುಗಳ ಫೋಟೋ ತೆಗೆದಿಟ್ಟುಕೊಳ್ಳಿ.
- ನಿಮ್ಮ ಮೊಬೈಲ್ ಕ್ರೋಮ್ ಬ್ರೌಸರ್ ನಲ್ಲಿ ಸೇವಾ ಸಿಂಧು ವೆಬ್ ಸೈಟ್ ಗೆ ಹೋಗಿ ಬ್ರೌಸರ್ ನ ಬಲಭಾಗದಲ್ಲಿ ಮೂರು ಡಾಟ್ ಇರುತ್ತವೆ ಅದರ ಮೇಲೆ ಪ್ರೆಸ್ ಮಾಡಿ “Desktop Site” ಆನ್ ಮಾಡಿ.
- ನಂತರ ನಿಮ್ಮ ಸರಿಯಾಗಿರುವಂತಹ ಮೊಬೈಲ್ ನಂಬರ್ ಹಾಕಿ ಓಟಿಪಿ ಬರುತ್ತದೆ ಅದನ್ನು ಸರಿಯಾಗಿ ಹಾಕಿ ಲಾಗಿನ್ ಮಾಡಿಕೊಳ್ಳಿ ಹಾಗೆ ಅಲ್ಲಿ “Apply for Service” ಕ್ಲಿಕ್ ಮಾಡಿ, ಸರ್ಚ್ ಬಾಕ್ಸ್‌ನಲ್ಲಿ “Incentive” ಎಂದು ಟೈಪ್ ಮಾಡಿ.
ಓಪನ್ ಆದ ಅರ್ಜಿಯಲ್ಲಿ ನಿಮ್ಮ ಹೆಸರು, ಕಾಲೇಜು, ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ ಕೊನೆಯಲ್ಲಿ ಸಬ್ಮಿಟ್ ಬಟನ್ ಇರುತ್ತದೆ ಕೆಳಗೆ ಪ್ರೆಸ್ ಮಾಡಿ ಮೊಬೈಲ್ ಗೆ ಬರುವಂತಹ ಅರ್ಜಿ ಸಂಖ್ಯೆಯನ್ನು ಸ್ಕ್ರೀನ್ಶಾಟ್ ತೆಗೆದಿಟ್ಟುಕೊಳ್ಳಿ.
ಗಮನಿಸಬೇಕಾದ ಮುಖ್ಯ ಅಂಶಗಳು:-
- ಎಲ್ಲಾ ದಾಖಲೆಗಳು ಲಭ್ಯವಾಗಿರಬೇಕು ಮತ್ತು ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕಾರವಾಗಬಹುದು
- ಈ ಸ್ಕಾಲರ್ಶಿಪ್ (Scholarship) ಪಡೆಯಲು ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬಹುದು
- ಕೊನೆಯ ದಿನಾಂಕದೊಳಗೆ ಎಲ್ಲಾ ಹಂತವನ್ನು ಪೂರ್ಣಗೊಳಿಸಿ
- ಯಾವುದೇ ಗೊಂದಲಾ ಅಥವಾ ಪ್ರಶ್ನೆಗಳಿಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಗೆ ಅಥವಾ ಸಹಾಯವಾಣಿಗೆ ಸಂಖ್ಯೆಯನ್ನು ಸಂಪರ್ಕಿಸಬಹುದು
- ಯೋಜನೆ ಪ್ರಗತಿ ಮತ್ತು ಪ್ರಕಟಣೆಗಳ ಕುರಿತು ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಿ
| ಪ್ರಮುಖ ಸೂಚನೆ : ಅರ್ಜಿ ಸಲ್ಲಿಸಲು ಈ ಒಂದು ಯಾವುದೇ ಪ್ರೋಸೆಸ್ ನಿಮಗೆ ಕಷ್ಟವಾದರೂ ಕೂಡ ನಿಮ್ಮ ಊರಿನಲ್ಲಿ ಇರುವ “ಗ್ರಾಮ ಒನ್” ಅಥವಾ “ಬಾಪೂಜಿ ಸೇವಾ ಕೇಂದ್ರಕ್ಕೆ” ಭೇಟಿ ನೀಡಿ ಅವರು ನಿಮ್ಮಗೆ ತಿಳಿಸುವ ಎಲ್ಲ ದಾಖಲೆಗಳನ್ನ ಅವರ ಬಳಿ ಕೊಂಡೊಯ್ದರೆ ಕೆಲವೇ ನಿಮಿಷದಲ್ಲಿ ಅರ್ಜಿ ಹಾಕಿ ಕೊಡುತ್ತಾರೆ ಜೊತೆಗೆ ನಿಮ್ಮಿಂದ ಅವರು ಅರ್ಜಿ ಶುಲ್ಕ ವನ್ನ ಬಯಸುತ್ತಾರೆ. |
ಸಂಪರ್ಕಿಸಬಹುದು :-
- ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿ
- ಇಮೇಲ್: studentsupport@rdpr.karnataka.gov.in
- ಸಹಾಯವಾಣಿ: 080-2234 5678 (ಉದಾಹರಣೆಗೆ)
ಕೊನೆಯ ಮಾತು:
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಅವರ ಶಿಕ್ಷಣವನ್ನು ಉತ್ತೇಜಿಸಿ ವಿದ್ಯಾರ್ಥಿಗಳಲ್ಲಿ ಓದುವ ಹಂಬಲವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಕಡೆಯಿಂದ 10000 ವಿದ್ಯಾರ್ಥಿ ವೇತನವನ್ನು(Scholarship) ನೀಡುತ್ತಿದ್ದು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಹಾಗೂ ಸಾಮಾನ್ಯ ವರ್ಗದವರ ಮಕ್ಕಳು ಸಮಾಜದಲ್ಲಿ ಘನತೆ ಗೌರವವನ್ನು ಸಂಪಾದಿಸಲಿ ಹಾಗೆ ತಂದೆ ತಾಯಿಗಳಿಗೆ ಮಕ್ಕಳ ಶಿಕ್ಷಣದ ಹೊರೆ ಕಡಿಮೆ ಆಗಲಿ ಎಂದು ಇದರ ಆಶಾಕಿರಣವಾಗಿದೆ.
ಇನ್ನು ಹೆಚ್ಚಿನ ಉದ್ಯೋಗಗಳು, ಸ್ಕಾಲರ್ಷಿಪ್ ಗಳು, ಹಾಗೆಯೇ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಗಳು ದಿನೇ ದಿನೇ ನಿಮಗೆ ಬೇಕಾದಲ್ಲಿ ನಮ್ಮ ಕನ್ನಡಹೆಲ್ಪ್ ವೆಬ್ಸೈಟ್ ಅನ್ನ ಫಾಲೋ ಮಾಡಿ.
ಇತರೆ ಯೋಜನೆಯ ಲಿಂಕುಗಳು :-
- ಬ್ಯಾಂಕ್ ಆಫ್ ಬರೋಡಾ ಭರ್ಜರಿ ನೇಮಕಾತಿ!
- RBI Recruitment 2026 : 10th ಪಾಸ್ ಅಭ್ಯರ್ಥಿಗಳಿಗೆ RBI ಯಿಂದ ಭರ್ಜರಿ ಸಿಹಿ ಸುದ್ದಿ!
- 10ನೇ ತರಗತಿ (SSLC) ಪಾಸಾದ ಅಭ್ಯರ್ಥಿಗಳಿಂದ ಭರ್ಜರಿ ಉದ್ಯೋಗಾವಕಾಶ!
- ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ! 2273 CBO ಹುದ್ದೆಗಳು


Akkirampura
Hi