SC ST Land Purchase Scheme Karnataka: ಸಮಾಜ ಕಲ್ಯಾಣ ಇಲಾಖೆಯಿಂದ ಭೂ ಒಡೆತನ ಯೋಜನೆಯನ್ನು ಜಾರಿಗೆ ತರಲಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿದುಕೊಳ್ಳೋಣ.

ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳಾ ಕೃಷಿಕರಿಗೆ ಭೂಮಿಯ ಒಡೆತನ ಪಡೆಯಲು ಒಂದು ಅದ್ಭುತ ಅವಕಾಶವನ್ನ ನೀಡಿರುವಂತದ್ದು , ಭೂಮಿ ಖರೀದಿಸಲು ಸಹಾಯಧನವನ್ನು ಸಹ ನೀಡಲಾಗುತ್ತೆ ಮತ್ತು 50 % ಅಷ್ಟು ಕೇವಲ 4% ಬಡ್ಡಿ ದರದಲ್ಲಿ ಸಾಲವನ್ನು ನಿಗದಿಪಡಿಸಲಾಗಿದೆ.
ಯೋಜನೆಯ ಉದ್ದೇಶ
ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳೆಯರು ಸ್ವಂತವಾಗಿ ಒಂದು ಕೃಷಿ ಭೂಮಿಯನ್ನ ಹೊಂದಲು ಸಹಾಯ ಮಾಡುವುದು ಇದರಿಂದ ಅವರಿಗೆ ಶಾಶ್ವತವಾದ ಆದಾಯದ ಮೂಲವನ್ನು ಸೃಷ್ಟಿ ಮಾಡುವಂತಹ ಒಂದು ಸರ್ಕಾರದ ಯೋಜನೆ ಇದಾಗಿದೆ.
ಆರ್ಥಿಕ ಸಹಾಯ
ಒಟ್ಟು ಭೂಮಿಯ ಬೆಲೆ 25 ಲಕ್ಷ ಇದು ಪ್ರದೇಶವನ್ನ ಆಧರಿಸಿ ನಿಗದಿಪಡಿಸಲಾಗಿದೆ ಇದಕ್ಕೆ ಸಹಾಯಧನ 50 ಪರ್ಸೆಂಟ್ ಅಂದರೆ 25 ಲಕ್ಷ ಇದ್ದರೆ 12.5ಲಕ್ಷದಷ್ಟು ಸಹಾಯ ಧನ ಸಿಗಲಿದೆ.
ಈ ಯೋಜನೆಗೆ ಅರ್ಹತೆ
- ಪರಿಶಿಷ್ಟ ಜಾತಿಯ ಸಮುದಾಯದವರಾಗಿರಬೇಕು
- ಮಹಿಳಾ ಅಭ್ಯರ್ಥಿ ಆಗಿರಬೇಕು
- ಭೂ ರಹಿತ ಕೃಷಿ ಕಾರ್ಮಿಕರ ಆಗಿರಬೇಕು
- ಕೃಷಿ ಕಾರ್ಯಗಳಲ್ಲಿ ನಿರತರಾಗಿರಬೇಕು
- ಆದಾಯ ಮತ್ತು ಇತರ ಮಾನದಂಡಗಳನ್ನು ನಿಗದಿಪಡಿಸಲಾಗಿದೆ
ಬೇಕಾಗುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಭೂ ರಹಿತ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಫೋಟೋಗಳು ಹಾಗೂ ಇತರೆ ಸಂಬಂಧಿಸಿದ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಸೆಪ್ಟೆಂಬರ್ 2025 ಈ ದಿನಾಂಕಕ್ಕೆ ಮುಂಚೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಆಫ್ ಲೈನ್ ಮೂಲಕ ಸಹ ಅರ್ಜಿಯನ್ನು ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಅಧಿಕೃತ ಸೇವಾ ಸೆಂಟರ್ ಅನ್ನ ಸಂಪರ್ಕಿಸಬಹುದು
ಹಸಿ ಅಡಿಕೆ ಇಂದಿನ ದರ ಶಿವಮೊಗ್ಗ ಕರ್ನಾಟಕ…ರೈತರಿಗೆ ಸಂತಸದ ಸುದ್ದಿ…
- ಗ್ರಾಮ ಒನ್ ಸೆಂಟರ್
- ಕರ್ನಾಟಕ ಒನ್ ಸೆಂಟರ್
- ಬೆಂಗಳೂರು ಒನ್ ಸೆಂಟರ್
ಇಂತಹ ಸಂಸ್ಥೆಯ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಕರ್ನಾಟಕ ಒನ್ ಸೆಂಟರ್ ಬೆಂಗಳೂರು ಒನ್ ಸೆಂಟರ್ ಅಲ್ಲಿ ಅಧಿಕಾರಿಗಳು ನಿಮಗೆ ಫಾರ್ಮ್ ನೀಡಿ ಅದನ್ನ ಭರ್ತಿ ಮಾಡಲು ಮತ್ತು ದಾಖಲೆಗಳನ್ನು ಜೋಡಿಸಲು ಸಹಾಯ ಮಾಡುತ್ತಾರೆ.
ಅರ್ಜಿ ಸಲ್ಲಿಸಿದ ನಂತರ
ಅರ್ಜಿ ಸ್ಪೀಕರಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅದನ್ನ ಪರಿಶೀಲಿಸುತ್ತಾರೆ ಅದಾದ ನಂತರ ಅದಕ್ಕೆ ಬೇಕಾಗಿರುವಂತಹ ಅರ್ಹ ದಾಖಲೆಗಳು ಸರಿಯಾಗಿದ್ದರೆ ಮುಂದಿನ ಪ್ರಕ್ರಿಯೆಗಾಗಿ ಆಯ್ಕೆ ಮಾಡಲಾಗುತ್ತೆ. ಆಯ್ಕೆಯಾದ ಪಟ್ಟಿಯನ್ನು ಸರ್ಕಾರಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ ಆಯ್ಕೆ ಆದ ನಂತರ ಸಹಾಯಧನ ಮತ್ತು ಸಾಲದ ಪ್ರಕ್ರಿಯೆ ಬಗ್ಗೆ ನಿಮಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ.