RBI News : ₹20 ಲಕ್ಷ ಶೂರಿಟಿ ಇಲ್ಲದೆ ಸಿಗತ್ತೆ! RBI ಗುಡ್ ನ್ಯೂಸ್! ಉದ್ಯಮ ಆರಂಭಿಸಲು ಚಿನ್ನದ ಅವಕಾಶ!

RBI News

ನಮಸ್ಕಾರ ಸ್ನೇಹಿತರೇ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಗರ್ಜರಿ ಗುಡ್ ನ್ಯೂಸ್! ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ (RBI News)ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರ ಪರವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಏನದು ಮಹತ್ವ ನಿರ್ಧಾರ? ಇಲ್ಲಿದೆ ಸಂಪೂರ್ಣ ಮಾಹಿತಿ.


RBI News ಹೊಸ ರೂಲ್ಸ್‌, ಶ್ಯೂರಿಟಿ ಇಲ್ಲದೇ 20 ಲಕ್ಷ ಸಾಲ

RBI ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರು “ಯಾವುದೇ ಶೂರಿಟಿ ಇಲ್ಲದೆ ಪಡೆದುಕೊಳ್ಳುವ ಸಾಲದ ಮಿತಿಯನ್ನು ದುಪ್ಪಟ್ಟು ಗೊಳಿಸಿದೆ”. (RBI News) ಉದ್ಯಮಿಗಳು ಶೂರಿಟಿ ಇಲ್ಲದೆ ಎಷ್ಟು ಹಣ ಪಡೆದುಕೊಳ್ಳಬಹುದು? ಇದರಿಂದ ಯಾರಿಗೆ ಅನುಕೂಲವಾಗಲಿದೆ? ಇದೇ ರೀತಿ ಇನ್ನು ಏನೇನು ಪ್ರಯೋಜನಗಳನ್ನು ಪಡೆದುಕೊಳ್ಳಬಹದು? ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ಇದೇ ರೀತಿಯ ಇನ್ನಷ್ಟು ಹೊಸ ಹೊಸ ವಿಷಯಗಳ ಬಗ್ಗೆ ಮಾಹಿತಿ ಬೇಕಿದ್ದರೆ, ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

ಹೈಲೈಟ್ಸ್:

ಸಂಸ್ಥೆಯ ಹೆಸರು: ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ

ಉದ್ಯಮಿಗಳಿಗೆ ಸಿಗುವ ಲಾಭ: ಯಾವುದೇ ಶೂರಿಟಿ ಇಲ್ಲದೆ ಸಾಲದ ಮಿತಿ ಹೆಚ್ಚಳ

ಇತರೆ ಸೌಲಭ್ಯಗಳು: ಬ್ಯಾಂಕ್ ಖಾತೆಯ ಹಣ ಕಳ್ಳತನವಾದರೆ 25,000 ಪರಿಹಾರ ಹಣ ಪಡೆದುಕೊಳ್ಳಬಹುದು

RBI ಸಂಸ್ಥೆಯ ಮಹತ್ವದ ಘೋಷಣೆ ಬಗ್ಗೆ:

ದೇಶದ ಹಣಕಾಸಿನ ಸ್ಥಿರತೆ, ಗ್ರಾಹಕರ ಹಿತರಕ್ಷಣೆ, ಬ್ಯಾಂಕಿಂಗ್ ದ್ರವ್ಯತೆ (RBI News ) ಹಾಗೂ ಡಿಜಿಟಲ್ ಹಣಕಾಸಿನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲು RBI ಬೃಹತ್ ಯೋಜನೆಗಳನ್ನು ಜಾರಿಗೊಳಿಸಿದೆ.

RBI ಗೋವರ್ನರ್ ಸಂಜಯ್ ಮಲ್ಹೋತ್ರಾರವರು RBI ನಲ್ಲಿ ತಗೆದುಕೊಂಡ ಹಲವಾರು ವಿವಿಧ ಕ್ರಮಗಳ ಬಗ್ಗೆ ಘೋಷಣೆ ಮಾಡಿದ್ದು, ಅವರ ಈ ಘೋಷಣೆಯಲ್ಲಿ ಗ್ರಾಹಕರ ಭದ್ರತೆಗೆ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ಅವರು ಘೋಷಣೆ ಮಾಡಿದ ಪ್ರಮುಖ ಕ್ರಮಗಳಲ್ಲಿ ಡಿಜಿಟಲ್ ಹಣಕಾಸು ವಂತನೆಯನ್ನು ತಡೆಯಲು ಬ್ಯಾಂಕ್ ಗಳಿಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಣೆ ಮಾಡಿದ್ದಾರೆ. ಜೊತೆಗೆ ಸಾಲವನ್ನು ವಸೂಲಿ ಮಾಡುವ ಏಜೆಂಟ್ ಗಳ ಕಿರುಕುಳವನ್ನು ತಪ್ಪಿಸಲು ಹೊಸ ನಿಯಮಾವಳಿಗಳನ್ನು ಪ್ರಕಟಿಸಲಾಗಿದೆ.

ಈ ನಿರ್ಧಾರವು ನಗರ ಸಹಕಾರಿ ಬ್ಯಾಂಕ್ (RBI News) ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ ಇತರೆ ಹಣಕಾಸು ಸಂಸ್ಥೆಗಳಲ್ಲಿಯೂ ವ್ಯವಹಾರದ ವಾತಾವರಣವನ್ನು ಇನ್ನಷ್ಟು ಸುಗಮ ಗೊಳಿಸಿದೆ.

ಮಹತ್ವದ ಘೋಷಣೆಯಲ್ಲಿ ಏನೇನು ಒಳಗೊಂಡಿದೆ?

ಸಂಜಯ್ ಮಲ್ಹೋತ್ರಾರವರು RBI ನಲ್ಲಿ ಹೊಸ ಮಾರ್ಗಸೂಚಿಯನ್ನು ಘೋಷಣೆಮಾಡಿದ್ದು, ಆ ಮಹತ್ವದ ಘೋಷಣೆಯಲ್ಲಿ ಯಾವೆಲ್ಲ ಅಂಶಗಳು ಕೂಡಿದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

1. ಶೂರಿಟಿ ಇಲ್ಲದೆ ಪಡೆಯುವ ಸಾಲದ ಮಿತಿ ಹೆಚ್ಚಳ:

ಸಂಜಯ್ ಮಲ್ಹೋತ್ರಾರವರು ತಮ್ಮ ಮಹತ್ವದ ಘೋಷಣೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಯಾವುದೇ ಆಸ್ತಿಯನ್ನು ಅಡಮಾನವಿಲ್ಲದೆ ಅಥವಾ ಶೂರಿಟಿ ಇಲ್ಲದೆ ಪಡೆದುಕೊಳ್ಳುವ ಸಾಲದ ಮಿತಿಯನ್ನು ಹೆಚ್ಚಳ ಮಾಡಿದ್ದಾರೆ.

ಮೊದಲು ಯಾವುದೇ ಶೂರಿಟಿ ಇಲ್ಲದೆ ₹10,00,000 ದ ವರೆಗೂ ಸಾಲವನ್ನು ಪಡೆದುಕೊಳ್ಳಬಹುದಾಗಿತ್ತು. ಆದರೆ ಈಗ ಸಾಲದ ಮಿತಿಯನ್ನು ಹೆಚ್ಚಿಸಿ ಯಾವುದೇ ಶೂರಿಟಿ ಅಥವಾ ಆಸ್ತಿಯ ಅಡಮಾನವಿಲ್ಲದೆ ₹20,00,000 ದ ವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಇವುಗಳ ಜೊತೆಗೆ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೂ ಕೂಡ ಶೂರಿಟಿ ಇಲ್ಲದೆ ಸಾಲದ ಮಿತಿಯನ್ನು ಹೆಚ್ಚಿಸಿದ್ದು, ಮಹಿಳೆಯರ ನೆರವಿಗೂ ನಿಲ್ಲುವ ಪ್ರಯತ್ನ ಮಾಡಿದೆ.

2. ಗ್ರಾಹಕರ ಸುರಕ್ಷತೆ ಹಾಗೂ ಹಣ ವಂಚನೆಗೆ ತಡೆ:

ಸಂಜಯ್ ಮಲ್ಹೋತ್ರಾರವರ ಘೋಷಣೆಯಲ್ಲಿ ಖಾತೆದಾರರ ಭಾಗಿ ಇಲ್ಲದೆ, ತಮ್ಮ ಖಾತೆಯ ಹಣ ವಂಚನೆಯಾದರೆ ಅವರು ₹25,000 ದ ವರೆಗೆ ಪರಿಹಾರ ಹಣ ಪಡೆದುಕೊಳ್ಳಬಹುದು.

ಈ ಪರಿಹಾರ ಹಣವನ್ನು ಪಡೆದುಕೊಳ್ಳಬೇಕಾದರೆ ಹಣ ವಂಚನೆಯಾದ 3 ದಿನಗಳ ಒಳಗೆ ಬ್ಯಾಂಕ್ ನಲ್ಲಿ ದೂರು ನೀಡಬೇಕು. ದೂರು ನೀಡಿದ 30 ದಿನಗಳ ಒಳಗೆ ಬ್ಯಾಂಕ್ (RBI News) ಯಾವುದೇ ಕ್ರಮ ಕೈಗೊಳ್ಳದಿದ್ದರೆ RBI ಓಂಬುಡ್ಸ್ಮನ್ ಪೋರ್ಟಲ್ ಮೂಲಕ ದೂರು ದಾಖಲಿಸಬಹುದಾಗಿದೆ.

3. ಸುಲಭ ಸಾಲ ಸೌಲಭ್ಯ:

RBI ಹೊಸ ಡಿಜಿಟಲ್ ಪ್ಲಾಟ್ಫಾರ್ಮ್ ರೂಪಿಸಲು ನಿರ್ಧರಿಸಿದ್ದು, ಈ ನಿರ್ಧಾರವು ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳು ಹಾಗೂ ರೈತರಿಗೆ ಸಾಲ ಸೌಲಭ್ಯವನ್ನು ಪಡೆಯಲು ಸುಲಭವಾಗುತ್ತದೆ. ಇದರಿಂದಾಗಿ ಅರ್ಹ ಫಲಾನುಭವಿಗಳು ಯಾವುದೇ ಕಚೇರಿಯ ಅಲೆದಾಟವಿಲ್ಲದೆ, ಕ್ಷಣಮಾತ್ರದಲ್ಲಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸುಲಭವಾಗಿ ಶೂರಿಟಿ ಇಲ್ಲದ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

4. ಡಿಜಿಟಲ್ ಪಾವತಿಯಲ್ಲಿ ಮಹತ್ತರ ಬದಲಾವಣೆ:

ಯುಪಿಐ ವ್ಯವಸ್ಥೆಯನ್ನು ಭಾರತಕ್ಕೆ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೊಂಡೊಯ್ಯಲು ಸಂಜಯ್ ಮಲ್ಹೋತ್ರಾರವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಇವರ ಈ ನಿರ್ಧಾರದಿಂದ ವಿದೇಶದಲ್ಲಿಯೂ ಭಾರತೀಯ ರೂಪಾಯಿಯಲ್ಲೇ ವಹಿವಾಟು ನಡೆಸಲು ಅವಕಾಶವನ್ನು ನೀಡಲಾಗಿದೆ.

ಇದರ ಜೊತೆಗೆ ಇಂಟರ್ನೆಟ್ ಇಲ್ಲದಿದ್ದರೂ ಹಣವನ್ನು ಪಾವತಿ ಮಾಡಲು UPI 123 Pay ನಂತಹ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಿದೆ.

5. ಡಿಜಿಟಲ್ ರೂಪಾಯಿಗಳ ಪರಿಚಯ:

RBI ಇ-ರೂಪಾಯಿ ಎನ್ನುವ ಡಿಜಿಟಲ್ ಕರೆನ್ಸಿಯನ್ನು (RBI News) ಪರಿಚಯಿಸಿದ್ದು, ನಗದು ಹಣಗಳ ಬಳಕೆಯನ್ನು ಕಡಿಮೆ ಮಾಡುವ ಹಾಗೂ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ಇ-ರೂಪಾಯಿ ಎನ್ನುವ ಡಿಜಿಟಲ್ ಕರೆನ್ಸಿಯು ಪೇಪರ್ ನೋಟುಗಳಷ್ಟೇ ಮೌಲ್ಯವನ್ನು ಹೊಂದಿದ್ದು, ಇದು ನಕಲಿ ನೋಟುಗಳ ಹಾವಳಿಯನ್ನು ತಪ್ಪಿಸುತ್ತದೆ.

6. ಬ್ಯಾಂಕಿಂಗ್ ಸಂಸ್ಥೆಗಳಲ್ಲಿ AI ಬಳಕೆ:

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಮಾನಾಸ್ಪದ ವಹಿವಾಟುಗಳನ್ನು ತಡೆದು ಗ್ರಾಹಕರ ಖಾತೆಯನ್ನು ಸುರಕ್ಷಿತವಾಗಿಡಲು ಬ್ಯಾಂಕಿಂಗ್ ವಲಯಗಳಲ್ಲಿ AI ತಂತ್ರಜ್ಞಾನವನ್ನು ಬಳಸುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಯಾವುದೇ ರೀತಿಯ ಹಣಕಾಸಿನ ವಂಚನೆಗಳಾಗುವುದಿಲ್ಲ.

ಇದರಿಂದಾಗುವ ಪ್ರಯೋಜನಗಳು:

  • ಸ್ವಂತ ಉದ್ಯಮ ಪ್ರಾರಂಭಿಸಲು ಅವಕಾಶ:

ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳು ಹಾಗೂ ರೈತರು ಯಾವುದೇ ಶೂರಿಟಿ ಇಲ್ಲದೆ ಕಡಿಮೆ ಬಡ್ಡಿದರದಲ್ಲಿ ದೊಡ್ಡ ಮೊತ್ತದ ಸಾಲವನ್ನು ಪಡೆಯುವ ಮೂಲಕ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಂಡವಾಳವಾಗಿ ಈ ಹಣವನ್ನು ಬಳಸಿಕೊಳ್ಳಬಹುದು ಹಾಗೂ ಸಾಲವನ್ನು ಮರುಪಾವತಿ ಮಾಡುವಾಗ ಹೆಚ್ಚಿನ ಆರ್ಥಿಕ ಹೊರೆ ಇರುವುದಿಲ್ಲ.

ಜೊತೆಗೆ ಮಹಿಳೆಯರಿಗೆ ಸ್ವ ಸಹಾಯ ಸಂಘಗಳಲ್ಲಿ ಕೂಡ ಶೂರಿಟಿ ಇಲ್ಲದೆ 20,00,000 ವರೆಗೆ ಸಾಲವನ್ನು ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿರುವುದರಿಂದ, ಗ್ರಾಮೀಣ ಭಾಗದ ಮಹಿಳೆಯರು ಉನ್ನತ ಮಟ್ಟದ ಉದ್ಯಮವನ್ನು ಪ್ರಾರಂಭಿಸಲು ಇದು ನೆರವಾಗುತ್ತದೆ.

  • ಸುಲಭವಾಗಿ ಡಿಜಿಟಲ್ ವ್ಯವಹಾರವನ್ನು ನಡೆಸಲು ಅವಕಾಶ:

ಗ್ರಾಮೀಣ ಭಾಗದ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಇಂಟರ್ನೆಟ್ ಬಳಕೆಯ ಅಗತ್ಯವಿಲ್ಲದ UPI 123 Pay ಗಳಂತಹ ಸೌಲಭ್ಯಗಳನ್ನು ಒದಗಿಸುವ ಮೂಲಕ ಹಣವನ್ನು ಸುಲಭವಾಗಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಜೊತೆಗೆ, ಡಿಜಿಟಲ್ ಮೂಲಕ ಎಲ್ಲಾ ವ್ಯವಹಾರಗಳು ನಡೆಯುವುದರಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.

  • ಗ್ರಾಹಕರ ಹಣದ ಸುರಕ್ಷತೆ ಹೆಚ್ಚಳ:

ಗ್ರಾಹಕರ ಕಡೆಯಿಂದ ಯಾವುದೇ ರೀತಿಯ ತಪಿಲ್ಲದೆ ಅವರ ಖಾತೆಯ ಹಣ ವಂಚನೆಯಾದಾಗ ಸರಿಯಾದ ಸಮಯದಲ್ಲಿ ದೂರು ನೀಡಿದರೆ ಹಣವನ್ನು RBI ಹಿಂದಿರುಗಿಸುತ್ತದೆ.

ಗ್ರಾಹಕರ ದೂರಿಗೆ ಸ್ಪಂದಿಸುವುದು ಬ್ಯಾಂಕ್ ನ (RBI News) ಜವಾಬ್ದಾರಿಯಾಗಿರುವುದರಿಂದ, ಒಂದು ವೇಳೆ ಗ್ರಾಹಕರ ದೂರನ್ನು ನಿರ್ಲಕ್ಷಿಸಿದರೆ ಅದಕ್ಕೆ ಪ್ರತಿಯಾಗಿ ಬ್ಯಾಂಕ್ ಗಳು ಗ್ರಾಹಕರಿಗೆ ದಂಡವನ್ನು ನೀಡಬೇಕಾಗುತ್ತದೆ.

  • ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕಾರಿ:

RBI ಬ್ಯಾಂಕುಗಳು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೂರಿಟಿ ಇಲ್ಲದೆ ಹೆಚ್ಚಿನ ಸಾಲ ಸೌಲಭ್ಯವನ್ನು ಒದಗಿಸುವ ಮೂಲಕ ಎಲ್ಲರಿಗೂ ಉದ್ಯೋಗಾವಕಾಶವನ್ನು ಸ್ಟುಷ್ಟಿಸಿ, ದೇಶದಲ್ಲಿ ನಿರುದ್ಯೋಗಿಗಳ ಸಮಸ್ಯೆಯನ್ನು ಕಡಿಮೆ ಮಾಡುವುದು. ಹಾಗೂ e-Rupee ಗಳಂತಹ ಡಿಜಿಟಲ್ ಕರೆನ್ಸಿಗಳ ಬಳಕೆಯಿಂದ ನಕಲಿ ನೋಟುಗಳ ಹಾವಳಿ ಕಡಿಮೆಯಾಗುತ್ತದೆ.


ಕೊನೆಯ ಮಾತು:

RBI ಗೋವೆರ್ನರ್ ಗಳು ಸಂಜಯ್ ಮಲ್ಹೋತ್ರಾರವರು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಹೊಸ ಕ್ರಮಗಳನ್ನು ಘೋಷಣೆ ಮಾಡಿದ್ದು, RBI ನ ಈ ಘೋಷಣೆಯಿಂದಾಗಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸಿದರೆ, ಬ್ಯಾಂಕ್ ಖಾತೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ಮುಂದಾಗಿದೆ.

ನೀವು ಕೂಡ ಯಾವುದರರು ಉದ್ಯಮವನ್ನು ಪ್ರಾರಂಭಿಸಬೇಕೆಂದಿದ್ದರೆ, RBI ನಲ್ಲಿ ಯಾವುದೇ ಶೂರಿಟಿ ಇಲ್ಲದೆ ಹೆಚ್ಚಿನ ಸಾಲವನ್ನು ಪಡೆದುಕೊಂಡು ನಿಮ್ಮ ಉದ್ಯಮವನ್ನು ಪ್ರಾರಂಭಿಸಲು ಈ ಹಣವನ್ನು ಬಂಡವಾಳವಾಗಿ ಬಳಸಿಕೊಳ್ಳಿ.

Official Website Click Here

ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *