RBI : ರೂ53,550/- ವೇತನ – ಭಾರಿ ಸರ್ಕಾರಿ ಉದ್ಯೋಗಾವಕಾಶ! 10ನೇ ತರಗತಿ ಪಾಸ್ ಆಗಿದ್ರೆ ಸಾಕು!

RBI

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಇದೀಗ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 572 ಆಫೀಸ್ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಕೇವಲ ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳು 15-01-2026 ರಿಂದ ಅರ್ಜಿ ಸಲ್ಲಿಸಬಹುದು ಹಾಗೆ 04-02-2026 ರಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ಹಾಗೂ ಅರ್ಧ ಅಭ್ಯರ್ಥಿಗಳು RBI ವೆಬ್‌ಸೈಟ್ rbi.org.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

RBI Jobs Recruitment In Kannada

ಅದೆಷ್ಟು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಬಂದು ಕೆಲಸ ಅಂತ ಪಡೆದರೆ ಅದು ಭಾರತೀಯ ರಿಸರ್ವ್ ಬ್ಯಾಂಕ್ ಅಂತ ಗೌರ್ಮೆಂಟ್ ಸಂಸ್ಥೆಯಲ್ಲಿಯೇ ತಮ್ಮ ವೃತ್ತಿ ಜೀವನವನ್ನು ಶುರು ಮಾಡಬೇಕು ಎಂದು ಕನಸನ್ನ ಹೊತ್ತಿರುವಂತಹ ವಿದ್ಯಾರ್ಥಿಗಳಿಗೆ “RBI ಕಡೆಯಿಂದ 2026 ಫೆಬ್ರವರಿ ತಿಂಗಳಲ್ಲಿ ಬಂತು ಹೊಸ ನೋಟಿಫಿಕೇಶನ್”. ಇಂಥ ಉತ್ತಮ ಅವಕಾಶವನ್ನ ಮಿಸ್ ಮಾಡ್ಕೊಳ್ಳದೇ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.

ಪ್ರಿಯ ಉದ್ಯೋಗ ಪ್ರಿಯರೆ ಇಷ್ಟೆಲ್ಲಾ ಎಜುಕೇಶನ್ ಕ್ವಾಲಿಫಿಕೇಷನ್ ಮುಗಿಸಿದರು ಇನ್ನೂ ಒಂದು ಉದ್ಯೋಗ ಸಿಗಲಿಲ್ಲ ಎಂದು ಚಿಂತಿಸುತ್ತಿದ್ದೀರಾ ? ಆ ಚಿಂತೆಗೆ ಹೇಳಿ ಗುಡ್ ಬಾಯ್ ! ಉದ್ಯೋಗ ಹುಡುಕುತ್ತಿರುವವರನ್ನು ಕೈ ಬಿಸಿ ತನ್ನತ್ತ ಕರೆಯುತ್ತಿದೆ ಭಾರತೀಯ ರಿಸರ್ವ್ ಬ್ಯಾಂಕ್ ಸಂಸ್ಥೆ.

RBI ಹುದ್ದೆಗಳ ಅವಲೋಕನ :-

ವಿಷಯವಿವರಗಳು
ಸಂಸ್ಥೆಭಾರತೀಯ ರಿಸರ್ವ್ ಬ್ಯಾಂಕ್ (RBI)
ಪದವಿಕಚೇರಿ ಪರಿಚಾರಕ
ಪೋಸ್ಟ್ ಸಂಖ್ಯೆ572
ಸಂಬಳ ಶ್ರೇಣಿ₹24,250 – ₹53,550
ಅರ್ಹತಾ ಮಾನದಂಡ10ನೇ ತರಗತಿ (SSC/ಮೆಟ್ರಿಕ್ಯುಲೇಶನ್) उत्तೀರ್ಣ, 01/01/2026 ರಂತೆ ಪದವಿಪೂರ್ವ ವಿದ್ಯಾರ್ಥಿ; ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಲ್ಲ
ವಯಸ್ಸಿನ ಮಿತಿ18 – 25 ವರ್ಷ
ಅರ್ಜಿ ಪ್ರಾರಂಭ ದಿನಾಂಕ15/01/2026
ಅರ್ಜಿ ಕೊನೆಯ ದಿನಾಂಕ04/02/2026
ಅಧಿಕೃತ ಜಾಲತಾಣhttps://rbi.org.in/

ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಟ್ಟು ಹುದ್ದೆಗಳ ವಿವರ :-

ಸೀರಿಕಚೇರಿ ಹೆಸರುಹುದ್ದೆಗಳ ಸಂಖ್ಯೆಸ್ಪೆಷಲ್ ಟಿಪ್ಪಣಿ
1ಅಹಮದಾಬಾದ್29
2ಬೆಂಗಳೂರು16
3ಭೋಪಾಲ್16
4ಭುವನೇಶ್ವರ36
5ಚಂಡೀಗಢ2
6ಚೆನ್ನೈ9
7ಗುವಾಹಟಿ52ಅನುಭವ
8ಹೈದರಾಬಾದ್36
9ಜೈಪುರ42
10ಕಾನ್ಪುರ & ಲಕ್ನೋ113
11ಕೋಲ್ಕತ್ತಾ90
12ಮುಂಬೈ33
13ನವ ದೆಹಲಿ61ಅನುವಾದ
14ಪಾಟ್ನಾ37
ಒಟ್ಟು572

ಅಭ್ಯರ್ಥಿಗಳಲ್ಲಿ ಇರಬೇಕಾದ ಶೆಕ್ಷಣಿಕ ಅರ್ಹತೆ :-

1️⃣ ಪ್ರಾಥಮಿಕ ಅರ್ಹತೆ (Eligibility)

  • ಅಭ್ಯರ್ಥಿಯು 01/01/2026 ರಂತೆ ಪದವಿಪೂರ್ವ ವಿದ್ಯಾರ್ಥಿ ಆಗಿರಬೇಕು.
  • ಪದವೀಧರರು ಮತ್ತು ಹೆಚ್ಚಿನ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
  • ಸಂಬಂಧಪಟ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ 10ನೇ ತರಗತಿ (SSC/ಮೆಟ್ರಿಕ್ಯುಲೇಶನ್) ಉತ್ತೀರ್ಣ.

2️⃣ ಅಗತ್ಯ ಅರ್ಹತೆ (Essential Qualification) – ಮಾಜಿ ಸೈನಿಕರ ವರ್ಗ

  • 10ನೇ ತರಗತಿ (SSC/ಮೆಟ್ರಿಕ್ಯುಲೇಶನ್) ಉತ್ತೀರ್ಣ.
  • ಕನಿಷ್ಠ 15 ವರ್ಷಗಳ ರಕ್ಷಣಾ ಸೇವೆ ಸಲ್ಲಿಸಿರಬೇಕು.
  • ಸಶಸ್ತ್ರ ಪಡೆಗಳ ಹೊರಗೆ ಪದವಿ ಪಡೆದಿಲ್ಲ.

3️⃣ ಅಪೇಕ್ಷಣೀಯ (Desirable/Additional Skill)

  • ಓದಲು, ಬರೆಯಲು, ಮಾತನಾಡಲು ಮತ್ತು ಭಾಷೆಯನ್ನು ಅರ್ಥಮಾಡಿಕೊಳ್ಳಲು ತಿಳಿದಿರಬೇಕು.
  • ನೇಮಕಾತಿ ಕಚೇರಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆ ಕಚೇರಿ ವ್ಯಾಪ್ತಿಯ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಭಾಷೆಯಲ್ಲಿ ಪ್ರವೀಣರಾಗಿರಬೇಕು.

4️⃣ ಅನುಭವ (Experience)

  • ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಅನುಕೂಲ ಪಡೆಯಬಹುದು.
  • ಗರಿಷ್ಠ 3 ವರ್ಷಗಳ ಅನುಭವ ಪರಿಗಣಿಸಲಾಗುತ್ತದೆ.

ಆಯ್ಕೆ ಮಾಡಿಕೊಳ್ಳುವ ರೀತಿ :-

ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಕೆಳಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಕೊಳ್ಳುವ ಪ್ರಕ್ರಿಯೆಯನ್ನು ನೋಡಬಹುದು.

ಅಭ್ಯರ್ಥಿಗಳೆಲ್ಲ ಆನ್ಲೈನ್ ಪರೀಕ್ಷೆ ಮತ್ತು ಭಾಷಾ ಪ್ರಾವೀಣ್ಯತೆಗೆ (LPT) ಒಳಪಡಿಸಲಾಗುತ್ತದೆ.

ಆನ್‌ಲೈನ್ ಪರೀಕ್ಷೆ (MCQ):

  • ಸಮಯ: 90 ನಿಮಿಷಗಳು
  • ಸಾಮಾನ್ಯ ಜ್ಞಾನ: 30, 30
  • ತಾರ್ಕಿಕತೆ: 30 ಪ್ರಶ್ನೆಗಳು, 30 ಅಂಕಗಳು
  • ಸಂಖ್ಯಾತ್ಮಕ ಸಾಮರ್ಥ್ಯ: 30, 30
  • ಅರ್ಹತೆ: ಪ್ರತಿಯೊಂದು ವಿಭಾಗದಲ್ಲೂ ಪ್ರತ್ಯೇಕ ಅರ್ಹತೆ
  • ಋಣಾತ್ಮಕ ಅಂಕಗಳು: ತಪ್ಪು ಉತ್ತರಕ್ಕೆ -1/4 ಅಂಕ
  • ಸಾಮಾನ್ಯ ಇಂಗ್ಲಿಷ್: 30, 30
  • ಒಟ್ಟು: 120 ಪ್ರಶ್ನೆಗಳು, 120 ಅಂಕಗಳು

ಭಾಷಾ ಪ್ರಾವೀಣ್ಯತೆಗೆ (LPT)

  • ಆನ್‌ಲೈನ್ ಪರೀಕ್ಷೆಯಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾತ್ರ
  • ಸಂಬಂಧಪಟ್ಟ ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸ್ಥಳೀಯ ಭಾಷೆ
  • ಓದಲು, ಬರೆಯಲು, ಮಾತನಾಡಲು, ಅರ್ಥಮಾಡಿಕೊಳ್ಳಲು ಪಾರಂಗತತೆ
  • LPTನಲ್ಲಿ ವಿಫಲರಾದ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಹೋಗಲಾರರು

ಈ ಹುದ್ದೆಗಳಿಗೆ ನೀವು ಪಡೆಯುವ ವೇತನ ಎಷ್ಟು ಗೊತ್ತ ?

ಹಂತಮೂಲ ವೇತನ (₹)ಇನ್‌ಕ್ರಿಮೆಂಟ್ (₹)ಮುಂದಿನ ವೇತನ (₹)ಅವಧಿ (ವರ್ಷ)
124,25084027,6104
227,61098030,5503
330,5501,20034,1503
434,1501,62037,3902
537,3901,99045,3504
645,3502,70050,7502
750,7502,80053,5501

ಪ್ರಸ್ತುತ ಒಟ್ಟು ವೇತನ (Current Total Salary)

  • ಆರಂಭಿಕ ಮಾಸಿಕ ಒಟ್ಟು ವೇತನ (HRA ಇಲ್ಲದೆ): ₹46,029 /-

ಮನೆ ಬಾಡಿಗೆ ಭತ್ಯೆ (HRA)

ಬ್ಯಾಂಕಿನ ವಸತಿ ಸೌಲಭ್ಯದಲ್ಲಿ ವಾಸಿಸದಿದ್ದರೆ

  • ಪ್ರಾಥಮಿಕ ವೇತನದ 15% ಹೆಚ್ಚುವರಿ HRA (ಮನೆ ಬಾಡಿಗೆ ಭತ್ಯೆ)
  • ಉದಾಹರಣೆ: ₹46,029 × 15% ≈ ₹6,904/- ಹೆಚ್ಚಾಗಿ ತಿಂಗಳಿಗೆ

ಅರ್ಜಿ ಶುಲ್ಕ :-

  • General / OBC / EWS ಅಭ್ಯರ್ಥಿಗಳಿಗೆ ಒಟ್ಟು ₹531 (GST ಸೇರಿಸಿ) ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
  • ಈಗಾಗಲೇ RBI ಯಲ್ಲಿ ಕೆಲಸ ಮಾಡುತ್ತಿರುವವರು ಅವರಿಗೆ ಅರ್ಜಿ ಹಾಕಲು ಯಾವುದೇ ಶುಲ್ಕವಿಲ್ಲ.
  • SC / ST / PwBD / ಮಾಜಿ ಸೈನಿಕರು ಅಭ್ಯರ್ಥಿಗಳಿಗೆ ಒಟ್ಟು ₹59 (GST ಸೇರಿಸಿ) ನಿಗದಿಪಡಿಸಲಾಗಿದೆ.

ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ :-

ಆತ್ಮೀಯ ಉದ್ಯೋಗ ಮಿತ್ರರೇ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಅಧಿಕೃತ ಅಧಿಸೂಚನೆಯ ಪ್ರಕಾರ

  • ಕನಿಷ್ಠ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಾಗಿರಬೇಕು.
  • ಹಾಗೆಯೇ ಗರಿಷ್ಠ 25 ವರ್ಷದೊಳಗಿನ ಅಭ್ಯರ್ಥಿಗಳಾಗಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದೆ.

ವಯೋಮಿತಿ ಸಡಿಲಿಕೆ

ವರ್ಗವಯೋಮಿತಿ ಸಡಿಲಿಕೆಗರಿಷ್ಠ ವಯಸ್ಸು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC / ST)5 ವರ್ಷ30 ವರ್ಷ
ಇತರ ಹಿಂದುಳಿದ ವರ್ಗ (OBC)3 ವರ್ಷ28 ವರ್ಷ
PwBD – GEN / EWS10 ವರ್ಷಅನ್ವಯವಾಗುವಂತೆ
PwBD – OBC13 ವರ್ಷಅನ್ವಯವಾಗುವಂತೆ
PwBD – SC / ST15 ವರ್ಷಅನ್ವಯವಾಗುವಂತೆ
ಮಾಜಿ ಸೈನಿಕರುಸೇನಾ ಸೇವೆಯ ವರ್ಷಗಳು + 3 ವರ್ಷಗರಿಷ್ಠ 50 ವರ್ಷ
ವಿಧವೆಯರು / ವಿಚ್ಛೇದಿತರು / ಮರುವಿವಾಹವಾಗದ ಮಹಿಳೆಯರು35 ವರ್ಷ
ಮೇಲಿನ ಮಹಿಳೆಯರು (SC / ST)40 ವರ್ಷ
RBI ಕೆಲಸದ ಅನುಭವ ಹೊಂದಿರುವವರುಅನುಭವದ ವರ್ಷಗಳುಗರಿಷ್ಠ 3 ವರ್ಷ

ಮುಖ್ಯ ದಿನಾಂಕಗಳು :-

  • ಅರ್ಜಿ ಮತ್ತು ಅರ್ಜಿ ಶುಲ್ಕ ಪಾವತಿ ಮಾಡುವ ಪ್ರಾರಂಭದ ದಿನಾಂಕ ಜನವರಿ 15, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 04, 2026
  • ಫೆಬ್ರವರಿ 28 / ಮಾರ್ಚ್ 01 ಆನ್‌ಲೈನ್ ಪರೀಕ್ಷೆ ಇರುತ್ತದೆ

ಈ ಹುದ್ದೆಯ ಪ್ರಮುಖ ಲಿಂಕುಗಳು :-

ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :

Leave a Reply

Your email address will not be published. Required fields are marked *