ಕರ್ನಾಟಕ ರಾಜ್ಯದ ಎಲ್ಲಾ ರೈತ ಕುಟುಂಬದ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ! ಬಡ ಹಾಗು ಮಾಧ್ಯಮ ವರ್ಗದ ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ರೈತ ವಿದ್ಯಾ ನಿಧಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
Raitha Vidya Nidhi Scholarship
ವಿದ್ಯಾರ್ಥಿಗಳೇ, ನೀವೇನಾದರೂ 2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇರಬೇಕಾದ ಅರ್ಹತೆಗಳೇನು? ಎಷ್ಟು ಸ್ಕಾಲರ್ಷಿಪ್ ನ ಹಣ ಪಡೆಯಬಹುದು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ
ಇಂದಿನ ಡಿಜಿಟಲ್ ಯುಗದಲ್ಲಿ ಪೋಷಕರಿಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುವುದೇ ಒಂದು ರೀತಿಯ ತಲೆನೋವಿನ ಕೆಲಸವಾಗಿದೆ. ಅದರಲ್ಲೂ ರೈತರಿಗೆ ತುಂಬ ಕಷ್ಟ ಸಾದ್ಯ ಶಾಲಾ ಕಾಲೇಜುಗಳಲ್ಲಿ ದಿನದಿಂದ ದಿನ ಏರುತ್ತಿರು ಫೀಸ್, ಪಠ್ಯಪುಸ್ತಕಗಳ ಬೆಲೆ, ಹಾಸ್ಟೆಲ್, ಪಿಜಿ ಹಾಗೆಯೇ ಮನೆಯಿಂದ ಕಾಲೇಜಿಗೆ ತೆರಳುವ ಪ್ರಯಾಣದ ಖರ್ಚು ಇವೆಲ್ಲವೂ ಪೋಷಕರನ್ನ ಕಾಡುವ ಅತಿ ದೊಡ್ಡ ಸಮಸ್ಯೆಯಾಗಿದೆ.

ಯಾರು ಈ ವಿದ್ಯಾರ್ಥಿವೇತನ ಪಡೆಯಬಹುದು ನಾನು ಪಿಯುಸಿ ಓದುತ್ತಿದ್ದೇನೆ ನನಗೂ ಸಿಗುತ್ತಾ ಎಷ್ಟು ಸಿಗುತ್ತೆ ಎಂಬ ಗೊಂದಲಗಳಿದ್ದರೆ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಭೇಟಿ ನೀಡಿ. ಸಂಪೂರ್ಣ ಮಾಹಿತಿ ತಿಳಿಯುವಿರಿ
ವಿದ್ಯಾರ್ಥಿವೇತನದ ಕಿರು ವಿಮರ್ಶೆ:
| ವಿದ್ಯಾರ್ಥಿ ವೇತನದ ಹೆಸರು | ರೈತ ವಿದ್ಯಾ ನಿಧಿ ಸ್ಕಾಲರ್ಷಿಪ್ (Raitha Vidya Nidhi Scholarship) |
| ಶೈಕ್ಷಣಿಕ ವರ್ಷ | 2025-26 ನೇ ಸಾಲಿನ ಶೈಕ್ಷಣಿಕ ವರ್ಷ |
| ಅಧಿಕೃತ ಪೋರ್ಟಲ್ | ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (NSP Scholarship) |
| ವಿದ್ಯಾರ್ಥಿವೇತನದಡಿಯಲ್ಲಿ ಸಹಾಯಧನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು | ಕರ್ನಾಟಕ ರಾಜ್ಯದ ರೈತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳು |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಶೀಘ್ರದಲ್ಲಿ ಬಿಡುಗಡೆ |
| ಅರ್ಜಿ ಸಲ್ಲಿಸಲುವ ವಿಧಾನ | ಆನ್ಲೈನ್ ಮೂಲಕ |
ವಿದ್ಯಾರ್ಥಿವೇತನದ ಕುರಿತು:
ರೈತರ ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವುದನ್ನು ತಪ್ಪಿಸಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ ರೈತರು ಕೃಷಿಯನ್ನು ಅವಲಂಬಿಸಿ ಬದುಕುತ್ತಿರುವ ಜನ ಒಂದು ಸರಿ ಬೆಳೆ ಸರಿಯಾಗಿ ಬಂದರೆ ಮತ್ತೊಂದು ಸರಿ ಕೈಕೊಟ್ಟರು ಕೊಡಬಹುದು ಹಾಗಿರುವಾಗ ಸಾಲ ಮಾಡಿ ಬೆಳೆಗಳಿಗೆ ಹಾಕುವುದೇ ಕಷ್ಟ ಅದರಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹುಡುಕೆ ಮಾಡಲು ಸಾಧ್ಯವಾಗುವುದಿಲ್ಲ.
ಅದರಿಂದ ರೈತರು ಮಕ್ಕನ್ನು ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಇದನ್ನು ಮನಗಂಡ ಕರ್ನಾಟಕ ಸರ್ಕಾರ ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುವುದು ಇದರ ಪ್ರಮುಖ ಗುರಿಯಾಗಿದೆ.
ವಿದ್ಯಾರ್ಥಿವೇತನವನ್ನು ನೀಡುವುದರ ಮುಖ್ಯ ಉದ್ದೇಶ:
1. ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಬಿಡದೆ ಮುಂದುವರೆಸಲು ಸಹಾಯ:
ವಿದ್ಯಾರ್ಥಿಗಳು ಹಣದ ಕೊರತೆಯಿಂದಾಗಿ ಶಿಕ್ಷಣವನ್ನು ಮುಟುಕುಗೊಳಿಸದೆ ಉನ್ನತ ಶಿಕ್ಷಣವನ್ನು ಪಡೆದು ಉನ್ನತ ಕಂಪನಿಯಲ್ಲಿ ಉದ್ಯೋಗವನ್ನು ಪಡೆದು ತಮ್ಮ ತಂದೆ ತಾಯಿ ನೋಡಿಕೊಳ್ಳಲು ಸಹಾಯಕ ವಾಗುತ್ತದೆ.
2. ಬಡ ಹಾಗು ಮಾಧ್ಯಮ ವರ್ಗದ ವಿದ್ಯಾರ್ಥಿಗಳ ಸ್ವಾವಲಂಬನೆಯನ್ನು ಹೆಚ್ಚಿಸುವುದು:
ಪ್ರದಾನ ಮಂತ್ರಿ ವಿದ್ಯಾ ನಿಧಿ ಯೋಜನೆಯ ವಿದ್ಯಾರ್ಥಿವೇತನದಡಿಯಲ್ಲಿ ಸಹಾಯಧನವನ್ನು ನೀಡುವ ಮೂಲಕ ಪರೀಕ್ಷಾ ಶುಲ್ಕ, ಪ್ರವೇಶ ಶುಲ್ಕ, ಶಿಕ್ಷಣಕ್ಕೆ ಅಗತ್ಯವಾದ ಪುಸ್ತಕಗಳು ಹಾಗೂ ಭೋದನಾ ಶುಲ್ಕದಂತಹ ಶೈಕ್ಷಣಿಕ ವೆಚ್ಚವನ್ನು ತಾವೇ ಭರಿಸಲು ಅವಕಾಶ ಕಲ್ಪಿಸುವ ಮೂಲಕ ಶೈಕ್ಷಣಿಕ ಖರ್ಚಿಗೆ ಪೋಷಕರ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸಿ ಸ್ವಾವಲಂಬಿಯಾಗಿ ಶಿಕ್ಷಣವನ್ನು ಮುಂದುವರೆಸಲು ಅವಕಾಶ ಕಲ್ಪಿಸುವುದು.
3. ಉನ್ನತ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸುವುದು:
ಕರ್ನಾಟಕ ಸರ್ಕಾರವು ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಮಾತ್ರ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವಂತೆ ಪ್ರೇರೇಪಿಸಲಾಗಿದೆ.
4. ಎಲ್ಲರಿಗೂ ಸಮಾನ ಅವಕಾಶ:
ಕರ್ನಾಟಕದಲ್ಲಿರುವ ಎಲ್ಲಾ ರೈತ ವರ್ಗದ ವಿದ್ಯಾರ್ಥಿಗಳುಗೂ ಕೂಡ ಈ ವಿದ್ಯಾರ್ಥಿವೇತನಕ್ಕೆ ಅವಕಾಶ ಕಲ್ಪಿಸಿ, ಎಲ್ಲಾರಿಗೂ ಸಮಾನ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಶೈಕ್ಷಣಿಕ ಅಸಮಾನತೆಯನ್ನು ತಡೆಗಟ್ಟುವುದು.
5. ಶಿಕ್ಷಣಕ್ಕೆ ನೆರವು:
ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸುತ್ತಿದ್ದಾರೆ. ಇದನ್ನು ಗಮನಿಸಿದ ಸರ್ಕಾರವು, ಈ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ರೈತ ವಿದ್ಯಾ ನಿಧಿ ಸ್ಕಾಲರ್ಷಿಪ್ ಅನ್ನು ನೀಡಲು ಮುಂದಾಗಿದೆ.
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾದ ವಿದ್ಯಾರ್ಥಿಗಳು ಯಾರು?
- ರೈತ ಕುಟುಂಬದ ಮಕ್ಕಳು
- ವಿದ್ಯಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ವಿದ್ಯಾರ್ಥಿಯ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು
- ಕುಟುಂಬದ ವಾರ್ಷಿಕ ಆದಾಯವು ₹2.50 ಲಕ್ಷ ಮೀರಿರಬಾರದು.
- ವಿದ್ಯಾರ್ಥಿಗಳು ಮಾನ್ಯತೆ ಪಡೆದ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಷಿಪ್ ಮೊತ್ತ:
| ಕೋರ್ಸ್ ಹೆಸರು | ಹುಡುಗಿಯರು | ಹುಡುಗರು |
| 8 ರಿಂದ 10ನೇ ತರಗತಿ | ₹2500 | ₹2000 |
| ಪಿಯುಸಿ / ಡಿಪ್ಲೋಮಾ / ಐಟಿಐ | ₹2,500 | ₹3,000 |
| ಪದವಿ (BA ,BCom, Bsc) | ₹5,000 | ₹5,500 |
| ವೃತ್ತಿಪರ ಕೋರ್ಸ್ (ಎಂಜಿನಿಯರಿಂಗ್ / ವೈದ್ಯಕೀಯ / ಸ್ನಾತಕೋತ್ತರ ಪದವಿ ) | ₹10,000 | ₹11,000 |
ವಿದ್ಯಾರ್ಥಿಗಳಿಗಾಗುವ ಪ್ರಯೋಜನ:
- ಆರ್ಥಿಕ ನೆರವು:
ಕಾಲೇಜು ಶುಲ್ಕ ಪುಸ್ತಕಗಳು ವಸತಿ ಪ್ರಯಾಣ ಮತ್ತು ಇತರೆ ವಿದ್ಯಾಭ್ಯಾಸದ ವೆಚ್ಚಗಳನ್ನು ನಿಭಾಯಿಸಲು ಈ ವಿದ್ಯಾರ್ಥಿ ವೇತನ ಸಹಾಯಕವಾಗುತ್ತದೆ
- ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ಉನ್ನತ ಶಿಕ್ಷಣಕ್ಕೆ ಪ್ರೇರೇಪಿಸುವುದು:
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ಅಗತ್ಯವಾದ ಹಣಕಾಸಿನ ನೆರವನ್ನು ಸರ್ಕಾರವು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸುವುದರಿಂದ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲದೆ, ವಿದ್ಯಾರ್ಥಿಗಳು ಪೂರ್ಣ ಗಮನವನ್ನು ಓದುವ ಕಡೆಗೆ ಕೇಂದ್ರೀಕರಿಸುವ ಮೂಲಕ ತಮ್ಮ ಶೈಕ್ಷಣಿಕ ಗುರಿಯನ್ನು ತಲುಪಬಹುದಾಗಿದೆ.
- ಮಧ್ಯವರ್ತಿಗಳ ಹಾವಳಿಯಿಂದ ತಡೆ:
ಈ ಸಹಾಯಧನವನ್ನು ಪಡೆಯಲು ಅರ್ಹರಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮಾ ಆಗುವುದರಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.
- ಪೋಷಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು:
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಜೀವನ ನಡೆಸುವುದೇ ಕಷ್ಟಕರವಾಗುತ್ತಿರುವಾಗ ತಮ್ಮ ಮಕ್ಕಳ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ ತಮ್ಮ ಪೋಷಕರೊಂದಿಗೆ ಕೂಲಿ ಕೆಲಸಕ್ಕೆ ಹೋಗಿತ್ತಿದ್ದರು. ಆದರೆ ಈಗ ಈ ವಿದ್ಯಾರ್ಥಿವೇತನದಡಿಯಲ್ಲಿ ಸಿಗುವ ಸಹಾಯಧನದಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಖರ್ಚನ್ನು ನಿಭಾಯಿಸಿಕೊಳ್ಳುವುದರಿಂದ ಪೋಷಕರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಿದೆ.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ವಿದ್ಯಾರ್ಥಿಗಳ ಆಧಾರ್ ಸಂಖ್ಯೆ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಹಿಂದಿನ ಶೈಕ್ಷಣಿಕ ವರ್ಷದ ಅಂಕ ಪಟ್ಟಿ
- ಪ್ರಸ್ತುತ ಸಾಲಿನ ಪ್ರವೇಶಾತಿ ಪ್ರಮಾಣಪತ್ರ
- ಫೀಸ್ ರಿಸಿಪ್ಟ್
- ರೈತರ FID ಅಥವಾ ಜಮೀನಿನ ದಾಖಲೆಗಳು
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿಯಲ್ಲಿರೈತ ವಿದ್ಯಾ ನಿಧಿ ವಿದ್ಯಾರ್ಥಿ ವೇತನ (Raitha Vidya Nidhi Scholarship) ಕ್ಕೆ ಅರ್ಜಿ ಸಲ್ಲಿಸಲು ಅರ್ಹ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು NSP ಅಧಿಕೃತ ಪೋರ್ಟಲ್ https://scholarships.gov.in/ ಗೆ ಭೇಟಿ ನೀಡಿ.
- ನಂತರ ಕ್ರಿಯೇಟ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ. ಹೊಸ ಬಳಕೆದಾರರಾಗಿದ್ದರೆ, ಉಸೆರ್ ಐಡಿ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
- ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಶಿಕ್ಷಣಿಕ ವಿವರಗಳನ್ನ ಭರ್ತಿ ಮಾಡಿ.
- ಈ ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅಪ್ಲೋಡ್ ಮಾಡಿದ ಎಲ್ಲಾ ದಾಖಲೆಗಳು ಹಾಗೂ ಭರ್ತಿ ಮಾಡಿದ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಖಚಿತ ಪಡಿಸಿಕೊಂಡು ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :
ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ (Raitha Vidya Nidhi Scholarship) ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದು, ಅರ್ಹ ವಿದ್ಯಾರ್ಥಿಗಳು ಈ ಕೆಳಗೆ ನೀಡಲಾದ ಇಲಾಖೆಯಡಿಯಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅಂತಿಮ ತೀರ್ಮಾನ:
ರೈತ ವಿದ್ಯಾನಿಧಿ ಯೋಜನೆಯು ಕರ್ನಾಟಕ ಸರ್ಕಾರದ ರೈತರ ಹಿತದೃಷ್ಟಿಯಿಂದ ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯಲಿ ಉತ್ತಮ ಉದ್ಯೋಗವನ್ನು ಪಡೆದು ಗೌರವಯುತ್ತ ಜೀವನ ನಡೆಸಲಿ ಎಂಬ ಉದ್ದೇಶದಿಂದ ಈ ಸ್ಕಾಲರ್ಶಿಪ್ ನೀಡಲಾಗುತ್ತಿದ್ದು. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಆದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸರ್ಕಾರ ಅಧಿಕೃತವಾಗಿ ಇನ್ನು ಸೂಚಿಸಿಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಸೈಬರ್ ಸೆಂಟರ್ ಅಲ್ಲಿ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಿ
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ
ಕೋರ್ಸ್ ಗಳಿಗೆ ಅನುಗುಣವಾಗಿ ₹2000 ದಿಂದ ₹11,000 ವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ
NSP ಅಧಿಕೃತ ಪೋರ್ಟಲ್ https://scholarships.gov.in/ ಗೆ ಭೇಟಿ ನೀಡಿ.
ಇತರೆ ಸರ್ಕಾರಿ ಯೋಜನೆಗಳ ಪ್ರಮುಖ ಲಿಂಕುಗಳು:-
- PMVY: ಕುಶಲಕರ್ಮಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ₹3 ಲಕ್ಷ ಸಾಲ + ಉಚಿತ ಟೂಲ್ ಕಿಟ್!
- SBM: ₹20,000/- ಸಹಾಯಧನ ಪಡೆಯಲು ಸುಲಭ ವಿಧಾನ! ನಿಮ್ಮ ಮನೆಯಲ್ಲಿ ಶೌಚಾಲಯ ಇಲ್ಲವೇ? ಹಾಗಿದ್ದರೆ ಇಲ್ಲಿ ಅರ್ಜಿ ಸಲ್ಲಿಸಿ
- PM-KISAN: PM ಕಿಸಾನ್ 22ನೇ ಕಂತು ಬಿಡುಗಡೆ ಯಾವಾಗ? ಸರ್ಕಾರದ ಅಧಿಕೃತ ಮಾಹಿತಿ ಇಲ್ಲಿದೆ!
- PMKSY: ನಿಮ್ಮ ಜಮೀನಿಗೆ ಡ್ರಿಪ್ ಮತ್ತು ಸ್ಪ್ರಿಂಕ್ಲರ್ ಅಳವಡಿಸಲು 90% ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ

