Railway Recruitment : ನಮಸ್ಕಾರ ಸ್ನೇಹಿತರೆ, ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ! ರೈಲ್ವೆ ನೇಮಕಾತಿ ಮಂಡಳಿ (Railway Recruitment)ಯು 2026 ರಲ್ಲಿ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
RRB Recruitment 2026 in Kannada
RRB ಗ್ರೂಪ್ D ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಇಂದಿನಿಂದಲೇ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 02-03-2026 ಎಂದು ನಿಗದಿಪಡಿಸಲಾಗಿದೆ. ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ, ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ಗೊಂದಲಗಳಿದ್ದರೆ, ಈ ಕೆಳಗೆ ನೀಡಿರುವ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನಿಮ್ಮ ಗೊಂದಲವನ್ನು ನಿವಾರಿಸಿಕೊಳ್ಳಿ. ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಿ.
ಹುದ್ದೆಯ ವಿಮರ್ಶೆ:
| ಸಂಸ್ಥೆಯ ಹೆಸರು | ರೈಲ್ವೆ ನೇಮಕಾತಿ ಮಂಡಳಿ (Railway Recruitment) |
| ಹುದ್ದೆಯ ಹೆಸರು | ಗ್ರೂಪ್ D ಸಹಾಯಕ ಹುದ್ದೆಗಳ ನೇಮಕಾತಿ |
| ಹುದ್ದೆಯ ಸಂಖ್ಯೆ | 21997 |
| ಹುದ್ದೆಯ ಸ್ಥಳ | ಅಖಿಲ ಭಾರತ |
| ಅರ್ಹತೆ | 10th ಪಾಸ್ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 02-03-2026 |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಹುದ್ದೆಯ ವಿಶ್ಲೇಷಣೆ:
ರೈಲ್ವೆ ನೇಮಕಾತಿ ಮಂಡಳಿಯು ಒಟ್ಟು 21,997 ಗ್ರೂಪ್ D ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, 18 ರಿಂದ 33 ವರ್ಷ ವಯೋಮಿತಿ ಹೊಂದಿರುವ SSLC, ITI ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹುದ್ದೆಯು ಭಾರತದಾದ್ಯಂತ ಇರುವ 21 ರೈಲ್ವೆ ನೇಮಕಾತಿ ಮಂಡಳಿ (Railway Recruitment)ಯ ವಲಯಗಳಲ್ಲಿ ಹಂಚಿಕೆಯಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ:
| ಹುದ್ದೆಯ ವಿವರ | ಒಟ್ಟು ಹುದ್ದೆಗಳು |
| ಪಾಯಿಂಟ್ಸ್ ಮನ್ | 376 ಹುದ್ದೆಗಳು |
| ಸಹಾಯಕ (ವಿದ್ಯುತ್) | 1,344 ಹುದ್ದೆಗಳು |
| ಸಹಾಯಕ (ಇಂಜಿನಿಯರ್) | 1,993 ಹುದ್ದೆಗಳು |
| ಸಹಾಯಕ (ವಿಜ್ಞಾನ ಮತ್ತು ತಂತ್ರಜ್ಞಾನ) | 2,020 ಹುದ್ದೆಗಳು |
| ಸಹಾಯಕ (ಯಾಂತ್ರಿಕ) | 3,077 ಹುದ್ದೆಗಳು |
| ಟ್ರ್ಯಾಕ್ ಮೇಂಟೇನರ್ ಗ್ರೇಡ್-IV | 13,187 ಹುದ್ದೆಗಳು |
ಶೈಕ್ಷಣಿಕ ಅರ್ಹತೆ:
RRB ಗ್ರೂಪ್ D (Railway Recruitment) ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ITI ಪೂರ್ಣಗೊಳಿಸಿರಬೇಕು.
| ವಿಶೇಷ ಸೂಚನೆ: “ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವರೆಗೂ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ” |
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 01-01-2026 ರಂತೆ,
- ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ: 33 ವರ್ಷಗಳು ಇರಬೇಕು.
ವಯಸ್ಸಿನ ಸಡಿಲಿಕೆ:
ಕೆಲವು ವರ್ಗಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ, ಅದನ್ನು ಈ ಕೆಳಗೆ ನೋಡಬಹುದಾಗಿದೆ,
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: 3 ವರ್ಷಗಳು
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: 5 ವರ್ಷಗಳು
- ಪಿಡಬ್ಲ್ಯೂಬಿಡಿ (ಯುಆರ್/ ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ: 10 ವರ್ಷಗಳು
- ಪಿಡಬ್ಲ್ಯೂಬಿಡಿ (OBC) ಅಭ್ಯರ್ಥಿಗಳಿಗೆ : 13 ವರ್ಷಗಳು
- ಪಿಡಬ್ಲ್ಯೂಬಿಡಿ (SC/ST) ಅಭ್ಯರ್ಥಿಗಳಿಗೆ: 15 ವರ್ಷಗಳು
ವೇತನ ಶ್ರೇಣಿ:
RRB ಗ್ರೂಪ್ D ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಯು ಮಾಸಿಕ ₹18,000 ವೇತನ ಪಡೆಯಲು ಹಾಗೂ ಇದರ ಜೊತೆಗೆ ಇತರ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ:
- ಸಾಮಾನ್ಯ, ಇತರ ಹಿಂದುಳಿದ ವರ್ಗ (ಒಬಿಸಿ), ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹500/- ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳು ಮೊದಲ ಹಂತದ ಪರೀಕ್ಷೆಗೆ ಹಾಜರಾದ ನಂತರ ₹400/- ಹಣವನ್ನು ಮರುಪಾವತಿ ಮಾಡಲಾಗುವುದು.
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪಿಡಬ್ಲ್ಯೂಬಿಡಿ, ಮಹಿಳೆಯರು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹250/- ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳು ಮೊದಲ ಹಂತದ ಪರೀಕ್ಷೆಗೆ ಹಾಜರಾದ ನಂತರ ಸಂಪೂರ್ಣ ಅಂದರೆ ₹250/- ಹಣವನ್ನು ಮರುಪಾವತಿ ಮಾಡಲಾಗುವುದು.
ಪಾವತಿ ಮೋಡ್: ಆನ್ಲೈನ್
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ದೈಹಿಕ ದಕ್ಷತೆ ಪರೀಕ್ಷೆ
- ದಾಖಲಾತಿ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ಕ್ರಮ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ಸೈಟ್ http://indianrailways.gov.in/ ಗೆ ಭೇಟಿ ನೀಡಿ
- ವೃತ್ತಿ ವಿಭಾಗವನ್ನು ಕ್ಲಿಕ್ ಮಾಡಿ ಅರ್ಜಿ ಫಾರ್ಮ್ ಓಪನ್ ಆಗುತ್ತದೆ.
- ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ
- ನಂತರ ಅರ್ಜಿ ಫಾರ್ಮ್ ನಲ್ಲಿ ಕೇಳಲಾದ ವೈಯಕ್ತಿಕ ಹಾಗೂ ಅಗತ್ಯ ವಿವರವನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನಂತರ ನಿಮ್ಮ ವರ್ಗಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ.
- ನಂತರ ಅರ್ಜಿಯನ್ನು ಸಲ್ಲಿಸಿ ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸುವ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಈಗಾಗಲೇ ಆರಂಭ ಗೊಂಡಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2026
ಅಧಿಕೃತ ಲಿಂಕುಗಳು:
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ನುಡಿ:
ರೈಲ್ವೆ ನೇಮಕಾತಿ (Railway Recruitment) ಮಂಡಳಿಯು ಗ್ರೂಪ್ D ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದಲೇ ಆರಂಭಗೊಂಡಿದ್ದು, ಅರ್ಹ ಮತ್ತುಆಸಕ್ತ ಅಭ್ಯರ್ಥಿಗಳು ಇಂದೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ. ನಂತರದ ದಿನಗಳಲ್ಲಿ ತಾಂತ್ರಿಕ ಸಮಸ್ಯೆಗಲುಂಟಾಗಬಹುದು.
ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :
- ಬ್ಯಾಂಕ್ ಆಫ್ ಬರೋಡಾ ಭರ್ಜರಿ ನೇಮಕಾತಿ!
- RBI Recruitment 2026 : 10th ಪಾಸ್ ಅಭ್ಯರ್ಥಿಗಳಿಗೆ RBI ಯಿಂದ ಭರ್ಜರಿ ಸಿಹಿ ಸುದ್ದಿ!
- ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ!
- ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ವಿದ್ಯಾರ್ಥಿವೇತನ ಅರ್ಜಿ
- 10ನೇ ತರಗತಿ (SSLC) ಪಾಸಾದ ಅಭ್ಯರ್ಥಿಗಳಿಂದ ಭರ್ಜರಿ ಉದ್ಯೋಗಾವಕಾಶ!

