RailOne App : ರೈಲು ಪ್ರಯಾಣಿಕರಿಗೆ ದೊಡ್ಡ ಬದಲಾವಣೆ : ಮಾರ್ಚ್ 1ರಿಂದ UTS App ಬಂದ್! ರೈಲು ಟಿಕೆಟ್‌ಗೆ ಹೊಸ RailOne App ಕಡ್ಡಾಯ!

RailOne App

ಭಾರತೀಯ ರೈಲ್ವೆ ಇಲಾಖೆ (Indian Railways) ಹೊಚ್ಚ ಹೊಸ ಡಿಜಿಟಲ್ ಕ್ರಾಂತಿ ಮಾಡಲು ಮುಂದಾಗಿದೆ ಹೌದು 2026 ಮಾರ್ಚ್ 1 ರಿಂದ ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಧಿಕೃತವಾಗಿ ಹೊಚ್ಚ ಹೊಸ ಯಾಪನ್ನು ಬಿಡುಗಡೆ ಮಾಡಲಿದ್ದು ಯುಟಿಎಸ್ ಆನ್ ಮೊಬೈಲ್ (UTS on Mobile App) ಆಪ್ ಅನ್ನ ಮುಂದಿನ ದಿನಗಳಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

RailOne App ಸಂಪೂರ್ಣ ಮಾಹಿತಿ


ಇದರಿಂದಾಗಿ ಈಗ ಎಲ್ಲಾ ಪ್ರಯಾಣಿಕರು ವಿಶೇಷವಾಗಿ Southern Railway (ದಕ್ಷಿಣ ರೈಲ್ವೆ) ವ್ಯಾಪ್ತಿಯಲ್ಲಿರುವ ಪ್ರಯಾಣಿಕರು (ಹೊಸ RailOne App) ಗೆ ಬದಲಾವಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಇನ್ಸ್ಟಾಲ್ ಮಾಡುವುದು ಹೇಗೆ? ಅದರ ಪ್ರಯೋಜನಗಳು ಏನು? ಹಾಗೆ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

RailOne App ಬಗ್ಗೆ ತಿಳಿದುಕೊಳ್ಳಿ:

RailOne App ಸೂಪರ್ ಅಪ್ಲಿಕೇಶನ್ ಆಗಿದ್ದು ಇದು ಯುಪಿಎಸ್ ಎನ್ ಟಿ ಇ ಎಸ್ ಮತ್ತು ಐ ಆರ್ ಸಿ ಟಿ ಸಿ ರೈಲ್ ಕನ್ನೆಕ್ಟ್ ನಿಂದ (UTS, NTES, and IRCTC Rail Connect) ಸೇವೆಗಳನ್ನ ಒಂದೇ ಇಂಟರ್ಫೇಸ್ ಮೂಲಕ ಕ್ರೂಡೀಕರಿಸಿ ಮಾಹಿತಿ ಕೊಡುತ್ತದೆ.

ಇದು ಜಿಪಿಎಸ್ ಸೇರಿದಂತೆ ಮಲ್ಟಿ ಪೇಮೆಂಟ್ ಆಪ್ಷನ್, ಟಿಕೆಟ್ ಹಿಸ್ಟರಿ, ಸೇರಿದಂತೆ ನೋಟಿಫಿಕೇಶನ್ ಹಾಗೂ ಸೆಕ್ಯೂರ್ ಲಾಗಿನ್ ಸಿಸ್ಟಮ್ ಅನ್ನು ಒಳಗೊಂಡಿರುವ ಒಂದು ಅದ್ಭುತ ಡಿಜಿಟಲ್ ಟೆಕ್ನಾಲಜಿ ಹೊಂದಿರುವಂತಹ ಆಪ್ ಇದಾಗಿದೆ.

RailOne App ನ ಪ್ರಯೋಜನಗಳು (Benefits):

  • ಒಂದೇ ಆಪ್ ನಲ್ಲಿ ಎಲ್ಲಾ ಟಿಕೆಟ್ ಸೇವೆಗಳು
  • Unreserved (ಸಾಮಾನ್ಯ) ಟಿಕೆಟ್ ಬುಕ್ಕಿಂಗ್ ಸುಲಭ
  • ವೇಗವಾದ ಟಿಕೆಟ್ ಖರೀದಿ ಪ್ರಕ್ರಿಯೆ
  • ಯುಪಿಐ , ಡೆಬಿಟ್ ಕಾರ್ಡ್ , ಕ್ರೆಡಿಟ್ ಕಾರ್ಡ್ (UPI / Debit / Credit Card ) ಮೂಲಕ ಪಾವತಿ ಟಿಕೆಟ್ ಬುಕಿಂಗ್
  • ಪೇಪರ್ ಲೆಸ್ ಟಿಕೆಟ್ ಸೌಲಭ್ಯ ಸುರಕ್ಷಿತ ಮತ್ತು ಅಧಿಕೃತ
RailOne App

ಅರ್ಹತೆ (Eligibility):

RailOne App ಬಳಸಲು ಬೇಕಾಗಿರುವ ಅರ್ಹತೆ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ

  • ಭಾರತೀಯ ನಾಗರಿಕರಾಗಿರಬೇಕು
  • ಆಂಡ್ರಾಯ್ಡ್ ಅಥವಾ ಐಫೋನ್ ಮೊಬೈಲ್ ಹೊಂದಿದವರು
  • ಭಾರತೀಯ ರೈಲ್ವೆ ಪ್ರಯಾಣಿಕರು
  • ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಇರುವವರು
  • ಯಾವುದೇ ವಯಸ್ಸಿನ ಮಿತಿ ಇಲ್ಲ

RailOne App ಪ್ರಮುಖ ವೈಶಿಷ್ಟ್ಯಗಳು (Features):

  • ಉಪನಗರ ಮತ್ತು ಸ್ಥಳೀಯ ರೈಲು ಟಿಕೆಟ್ ಬುಕಿಂಗ್ (Suburban & Local Train Ticket Booking)
  • GPS ಆಧಾರಿತ ಪ್ರಯಾಣ ದೃಢೀಕರಣ (GPS Based Journey Validation)
  • ಬಹು ಪಾವತಿ ಆಯ್ಕೆಗಳು (Multiple Payment Options0
  • ಟಿಕೆಟ್ ಇತಿಹಾಸ ಮತ್ತು ದಾಖಲೆಗಳು (Ticket History & Records)
  • ಅಧಿಸೂಚನೆಗಳು ಮತ್ತು ನವೀಕರಣಗಳು (Notifications & Updates)
  • ತ್ವರಿತ ಡಿಜಿಟಲ್ ಟಿಕೆಟ್ (Instant Digital Ticket)
  • ಸುರಕ್ಷಿತ ಲಾಗಿನ್ ವ್ಯವಸ್ಥೆ 9Secure Login System0

RailOne App ಎಲ್ಲಿ ಸಿಗುತ್ತದೆ? (Where to get App):

ರೈಲ್ ಒನ್ ಆಪ್ ಅನ್ನ ನೀವು ಈ ಅಧಿಕೃತ ಯಾಪ್ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಇಲ್ಲಿ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಇರುವಂತಹ ಫೀಚರ್ಸ್ ಅನ್ನ ಪಡೆದುಕೊಳ್ಳಬಹುದು.

ಪ್ರಯಾಣಿಕರಿಗೆ ಸೂಚನೆ:

Indian Railways / CRIS ಪ್ರಕಟಿಸಿದ ಅಧಿಕೃತ App ಮಾತ್ರ ಡೌನ್‌ಲೋಡ್ ಮಾಡಿ
RailOne App

RailOne App ಬಳಸುವ ವಿಧಾನ (How to Use)

  • ಮೊದಲು ಯಾಪ್ APP ತೆರೆಯಿರಿ
  • ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ /ಲಾಗಿನ್ ಮಾಡಿ
  • ಓಟಿಪಿ ಮೂಲಕ ವೆರಿಫೈ ಮಾಡಿ
  • ಹೋಂ ಸ್ಕ್ರೀನ್ನಲ್ಲಿ Unreserved Ticket ಆಯ್ಕೆ ಮಾಡಿ
  • ಸ್ಟೇಷನ್ ಆಯ್ಕೆ ಮಾಡಿ ಎಲ್ಲಿಂದ – ಎಲ್ಲಿಗೆ
  • ಟಿಕೆಟ್ ಟೈಪ್ ಆಯ್ಕೆ ಮಾಡಿ
  • ಪೇಮೆಂಟ್ ಮಾಡಿ
  • ಮೊಬೈಲ್ ನಲ್ಲಿ ಡಿಜಿಟಲ್ ಟಿಕೆಟ್ ಪಡೆಯಿರಿ

ಕೊನೆಯ ಮಾತು (Last Speech):

UTS on Mobile App ಮೊಬೈಲ್ ಆಪ್ ತೆಗೆದುಕೊಂಡಿರುವುದರಿಂದ ರೈಲು ಪ್ರಯಾಣಿಕರಿಗೆ ಅತಿ ಅವಶ್ಯಕವಾಗಿದೆ ಇದರಿಂದ ಟಿಕೆಟ್ ಬುಕಿಂಗ್ ಸೇರಿದಂತೆ ಇನ್ನಷ್ಟು ಸುಲಭವಾದ ಮಾಹಿತಿ ಸಿಗುತ್ತದೆ ಹಾಗೂ ವೇಗವಾಗಿ ಮತ್ತು ಪಾರದರ್ಶಕತೆಯಿಂದ ಯಾಪನ್ನು ಬಳಸಬಹುದಾಗಿದೆ, RailOne App ಡೌನ್‌ಲೋಡ್ ಮಾಡದಿದ್ದರೆ, ಇಂದೇ Install ಮಾಡಿ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ ರೈಲು ಪ್ರಯಾಣವನ್ನು ಡಿಜಿಟಲ್ ಮತ್ತು ಸುಲಭವಾಗಿಸಿಕೊಳ್ಳಿ.

ಇತರೆ ಯೋಜನೆಯ ಪ್ರಮುಖ ಲಿಂಕುಗಳು:

₹3,000/- ವೃದ್ದಾಪ್ಯ ಪಿಂಚಣಿ! ಕಾರ್ಮಿಕರಿಗೆ ಸರ್ಕಾರದಿಂದ ಭರ್ಜರಿ ಸುದ್ದಿ!

ಕರ್ನಾಟಕದ ಟಾಪ್ 10 ಅದ್ಭುತ ಸ್ಥಳಗಳು ! ಜೀವನದಲ್ಲಿ ಒಮ್ಮೆ ಆದ್ರೂ ನೀವು ನೋಡಲೇ ಬೇಕು!

PMVBRY : ₹15,000 ವರೆಗೆ ಪ್ರೋತ್ಸಾಹ ಧನ

5 thoughts on “RailOne App : ರೈಲು ಪ್ರಯಾಣಿಕರಿಗೆ ದೊಡ್ಡ ಬದಲಾವಣೆ : ಮಾರ್ಚ್ 1ರಿಂದ UTS App ಬಂದ್! ರೈಲು ಟಿಕೆಟ್‌ಗೆ ಹೊಸ RailOne App ಕಡ್ಡಾಯ!

Leave a Reply

Your email address will not be published. Required fields are marked *