ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಹಾಲುಣಿಸುವ ತಾಯಂದಿರಿಗೆ ₹6,000/-

Pradhan Mantri Matru Vandana Yojana (PMMVY) : ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ಮತ್ತು ಪೋಷಣೆಯನ್ನು ಕಾಪಾಡಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆ ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಯೋಜನೆ ಇದಾಗಿದೆ ಈ ಯೋಜನೆಯಡಿಯಲ್ಲಿ ಮೊದಲ ಮಗುವಿಗೆ 5000 ಎರಡನೇ ಮಗುವಿಗೆ 6 ಸಾವಿರ ಸಹಾಯಧನವನ್ನು ನೀಡಲಾಗುತ್ತೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಈ ಲೇಖನವನ್ನ ಪೂರ್ತಿಯಾಗಿ ಕೊನೆಯ ತನಕ ಓದಿ.


Pradhan Mantri Matru Vandana Yojana (PMMVY)
Pradhan Mantri Matru Vandana Yojana (PMMVY)

ಈ ಯೋಜನೆಯ ಪ್ರಮುಖ ಉದ್ದೇಶ

ಈ ಯೋಜನೆ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ಮತ್ತು ಪೋಷಣೆ ಯನ್ನು ಕಾಪಾಡಿಕೊಳ್ಳಲು ಮತ್ತು ಕೆಲಸ ಮಾಡುವ ಮಹಿಳೆಯರಿಗೆ ಗರ್ಭಧಾರಣೆ ಸಮಯದಲ್ಲಿ ಆದಾಯ ನಷ್ಟವನ್ನು ಭರ್ತಿ ಮಾಡುವ ಒಂದು ಉದ್ದೇಶದಿಂದ ಹೆಣ್ಣು ಮಗುವಿನ ಜನನ ಪ್ರೋತ್ಸಾಹಿಸಿ ಲಿಂಗ ಅನುಪಾತವನ್ನು ಸುಧಾರಿಸುವಂತಹ ಒಂದು ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿರುವಂಥದ್ದು ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಗೆ ನೀವು ಅರ್ಹರಿದ್ದೀರಾ ಪರಿಶೀಲಿಸಿಕೊಳ್ಳಿ

ಅರ್ಜಿದಾರರು ಕನಿಷ್ಠ 19 ವರ್ಷ ವಯಮಿತಿ ಆಗಿರ್ಬೇಕು

ಅರ್ಜಿ ದಾರಿ ಗರ್ಭಿಣಿ ಆಗಿರಬೇಕು

ಈ ಯೋಜನೆ ಮೊದಲ ಎರಡು ಜೀವಂತ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ

ಅರ್ಜಿ ಸಲ್ಲಿಸುವ ಸಮಯ ಮಗುವಿನ ಜನನ 270 ದಿನಗಳ ಅಂದ್ರೆ 9 ತಿಂಗಳು ಒಳಗೆ ಅರ್ಜಿಯನ್ನು ಸಲ್ಲಿಸಬೇಕು ಎರಡನೇ ಮಗು ಹೆಣ್ಣು ಮಗುವಾಗಿದ್ದರೆ ಮಾತ್ರ ಈ ಯೋಜನೆಯ ಅರ್ಹತೆ ಇರುತ್ತದೆ ಯಾರಿಗೆ ಮುಖ್ಯವಾಗಿ ಅರ್ಹತೆ ಇದೆ ಅವರು ಮಾತ್ರ ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯೋಜನೆಯ ಅರ್ಹತೆ :

ಈ ಯೋಜನೆಗೆ ಯಾರೆಲ್ಲಾ ಅರ್ಹರು ಅನ್ನುವುದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲಾಗಿದೆ.

  • ಮಹಿಳೆಯರು ಹಾಗೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರು
  • 40 ಪರ್ಸೆಂಟ್ ಅದಕ್ಕಿಂತ ಹೆಚ್ಚು ಅಂಗವಿಕಲ ಇರುವಂತಹ ಮಹಿಳೆಯರು
  • ಆಯುಷ್ಮಾನ್ ಭಾರತ ಕಾರ್ಡ್ ಹೊಂದಿರುವಂತಹ ಮಹಿಳೆಯರು
  • ಈ ಶ್ರಾಮ್ ಕಾರ್ಡ್ ಇರುವ ಮಹಿಳೆಯರು
  • ಕಿಸನ್ ಸಮ್ಮಾನ್ ನಿಧಿ ಲಾಭಾರ್ಥಿಯನ್ನು ಹೊಂದಿರುವಂತ ಮಹಿಳೆಯರು
  • ವಾರ್ಷಿಕ ಕುಟುಂಬದ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ಮಹಿಳೆಯರು
  • ಗರ್ಭಿಣಿ ಮತ್ತು ಹಾಲುಣಿಸುವ ಅಂಗನವಾಡಿ ಕೆಲಸಗಾರ್ತಿ ಅಥವಾ ಆಶಾ ಕಾರ್ಯಕರ್ತೆಯರು
  • ಎನ್ ಎಫ್ ಎಸ್ ಸಿ 2013ರಲ್ಲಿ ರೇಷನ್ ಕಾರ್ಡ್ ಇರುವ ಮಹಿಳೆಯರು ಈ ಒಂದು ಯೋಜನೆಗೆ ಅರ್ಹತೆಯನ್ನು ಹೊಂದಿದ್ದಾರೆ.

ಈ ಯೋಜನೆಗೆ ಇವರೆಲ್ಲ ಅರ್ಹತೆ ಇರುವುದಿಲ್ಲ

ಸರ್ಕಾರಿ ಉದ್ಯೋಗದಲ್ಲಿರುವ ಅಂತಹ ಮಹಿಳೆಯರು ಅಥವಾ ಇತರ ಯಾವುದೇ ಯೋಜನೆ ಅಡಿಯಲ್ಲಿ ಇದೇ ರೀತಿ ಪ್ರಯೋಜನವನ್ನು ಪಡೆಯುತ್ತಿರುವ ಮಹಿಳೆಯರು ಅನರ್ಹರು

ಸಿಗುವ ಹಣದ ಮೊತ್ತ

ಮೊದಲ ಕಂತು 3000 (ಗರ್ಭಧಾರಣೆ ನೋಂದಣಿ ಮತ್ತು ಎಏನ್ ಸಿ ತಪಾಸಣೆಯ ನಂತರ)

ಎರಡನೇ ಕಂತು 2 ಸಾವಿರ ( ಹೆರಿಗೆ ನೋಂದಣಿ ಮತ್ತು ಮಗುವಿಗೆ ಎಲ್ಲಾ ಅನಿಸಿಕೆಗಳು ಪೂರ್ಣಗೊಳ್ಳ ನಂತರ ) ಸಾಂಸ್ಥಿಕ ಹೆರಿಗೆ ಮಾಡಿದರೆ ಜೆ ಎಸ್ ವೈ ಯೋಜನೆಯಿಂದ ಒಂದು ಸಾವಿರ ಸಿಗುವುದರಿಂದ ಒಟ್ಟು ಆರು ಸಾವಿರ ಸಿಗುತ್ತೆ.

ಎರಡನೇ ಹೆಣ್ಣು ಮಗುವಿಗೆ ಒಟ್ಟು 6000 ಒಂದೇ ಕಾಂತಿ ನದಿ ಸಿಗುತ್ತದೆ

ಗರ್ಭಪಾತ ಮೃತ ಜನನ ಅಂತ ಸಂದರ್ಭದಲ್ಲಿ ಮುಂದಿನ ಗರ್ಭಧಾರಣೆಯನ್ನು ಹೊಸ ಪ್ರಕರಣ ಎಂದು ಪರಿಗಣಿಸಲಾಗುತ್ತದೆ ಮತ್ತು ಅರ್ಜಿ ಸಲ್ಲಿಸಬಹುದು.

ಬೇಕಾದ ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಗರ್ಭಧಾರಣೆ ಪುಷ್ಟಿ
  • ಎಲ್‌ಎಂಪಿ ದಿನಾಂಕ
  • ಎಎನ್‌ಸಿ ದಿನಾಂಕ
  • ಮಗುವಿನ ಜನನ ಪ್ರಮಾಣ ಪತ್ರ
  • ಲಸಿಕೆ ಕಾರ್ಡ್ ಮುಂತಾದ ಅಗತ್ಯ ದಾಖಲೆಗಳು ಬೇಕಾಗುತ್ತವೆ

ಈ ಯೋಜನೆಗೆ ಅರ್ಹತೆ ಪಡೆಯಲು ಬೇಕಾದ ದಾಖಲೆಗಳು

  • ಎಸ್ಸಿ ಎಸ್ಟಿ ಸರ್ಟಿಫಿಕೇಟ್
  • ದಿವ್ಯಂಗ ಸರ್ಟಿಫಿಕೇಟ್
  • ಬಿಪಿಎಲ್ ರೇಷನ್ ಕಾರ್ಡ್
  • ಆಯುಷ್ಮಾನ್ ಭಾರತ್ ಕಾರ್ಡ್
  • ಕಿಶನ್ ಸನ್ಮಾನ್ ಖಾತೆ
  • ಆದಾಯ ಪ್ರಮಾಣ ಪತ್ರ
  • ಎನ್‌ಎಫ್‌ಎಸ್‌ಸಿ ರೇಷನ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವಂತಹ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಮತ್ತು ಅರ್ಹತೆಯನ್ನು ಪೂರೈಸಿದರೆ ಹಣ ನೇರವಾಗಿ ಚೆಕ್ ಮೂಲಕ ಬರುತ್ತೆ ಅಥವಾ ಬ್ಯಾಂಕ್ ಖಾತೆಗೆ ನೇರವಾಗಿ ಬರುತ್ತೆ ಯಾವುದೇ ಸಮಸ್ಯೆ ಉಂಟಾದರೆ ನಿಮ್ಮ ಸ್ಥಳೀಯ ಅಂಗನವಾಡಿ ಕೇಂದ್ರ ಅಥವಾ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳನ್ನು ಸಂಪರ್ಕಿಸಬೇಕು.


ಅಂತಿಮ ವಿವರಣೆ

ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಈ ಎಲ್ಲಾ ದಾಖಲಾತಿ ನಿಮ್ಮಲ್ಲಿದ್ದರೆ ಮಾತ್ರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಹಾಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಯೋಜನೆಯ ನಿಯಮಗಳು ಮತ್ತು ಪ್ರಕ್ರಿಯೆಗಳು ಸ್ವಲ್ಪ ಬದಲಾಗುತ್ತಿರುತ್ತದೆ ಅತ್ಯಂತ ನವೀನ ಮತ್ತು ಅಧಿಕೃತ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಇದನ್ನು ಓದಿ :- ಆಸ್ತಿ ನೋಂದಣಿ ಶುಲ್ಕ ಎರಡು ಪಟ್ಟು ಹೆಚ್ಚಳ

Leave a Reply

Your email address will not be published. Required fields are marked *