PMSBY: 20 ರೂಪಾಯಿಗಳಲ್ಲಿ ಎರಡು ಲಕ್ಷ ರೂಪಾಯಿ ವಿಮೆ!ಈ ಯೋಜನೆಯ ಲಾಭವನ್ನು ತಿಳಿಯಿರಿ.

ಹಲೋ ಸ್ನೇಹಿತರೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY) ಇದು ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯ  ಸಂಭವಿಸಿದರೆ ಆರ್ಥಿಕ ಸಹಾಯ ನೀಡುತ್ತದೆ.

ಈ ಯೋಜನೆ ಅಡಿಯಲ್ಲಿ 18 ರಿಂದ 70 ವರ್ಷ ವಯಸ್ಸಿನವರು ವಾರ್ಷಿಕ 20 ರೂಪಾಯಿ ಕಟ್ಟುವ ಮೂಲಕ 2ಲಕ್ಷ ರೂಪಾಯಿವರೆಗೆ ವಿಮೆಯನ್ನು ಪಡೆಯಬಹುದಾಗಿದೆ.

PMSBY: ₹2 Lakh Insurance at Just ₹20! Discover the Benefits of This Scheme

ಯೋಜನೆಯ ಉದ್ದೇಶ

ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆಯು ಹಲವಾರು ಉದ್ದೇಶವನ್ನ ಹೊಂದಿದ್ದು ಅಪಘಾತ ಸಮಯದಲ್ಲಿ ಮರಣ ಹೊಂದಿದರೆ  ಅಥವಾ ಅಂಗವೈಕಲ್ಯ  ಹೊಂದಿದ  ವ್ಯಕ್ತಿಗೆ ಆರ್ಥಿಕ ನೆರವನ್ನು ನೀಡುವಂತ ಪ್ರಮುಖ ಉದ್ದೇಶವನ್ನ ಇದು ಹೊಂದಿರುವಂಥದ್ದು.

ಅಪಘಾತ ಸಮಯದಲ್ಲಿ ಮೃತರಾದ ವ್ಯಕ್ತಿಯ ಕುಟುಂಬಕ್ಕೆ ಅಥವಾ ಅಪಘಾತ ಸಮಯದಲ್ಲಿ ಅಂಗವೈಕಲ್ಯ ವಾದ ವ್ಯಕ್ತಿಗೆ ಇದು ಆರ್ಥಿಕ ನೆರವನ್ನು ನೀಡುತ್ತದೆ.

PMSBY ಯೋಜನೆಯ ಪ್ರಯೋಜನಗಳು

  • ಸುಲಭ ನೋಂದಣಿ :
    • ಬ್ಯಾಂಕ್ ಖಾತೆ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು.
  • ಕಡಿಮೆ ಪ್ರೀಮಿಯಂ :
    • ವಾರ್ಷಿಕ ಕೇವಲ 20 ರೂಪಾಯಿ ಪಾವತಿಸಿ 2 ಲಕ್ಷ ರೂಪಾಯಿವರೆಗೆ ವಿಮೆಯನ್ನು ಪಡೆಯುವಂತ ಯೋಜನೆ ಇದಾಗಿದೆ
  • ವಿವಿಧ ರೀತಿಯ ರಕ್ಷಣೆ :
    • ಅಪಘಾತ ಸಮಯದಲ್ಲಿ ಸಾವು ಅಥವಾ ಅಂಗವಿಕಲ್ಯಾಣ ಸಂಭವಿಸಿದರೆ ಆರ್ಥಿಕ ಸಹಾಯ ನೀಡುವ ಒಂದು ಉತ್ತಮ ಯೋಜನೆ ಇದಾಗಿದ್ದು ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಈ ಯೋಜನೆ ಅನ್ವಯಿಸುತ್ತದೆ.

ಯೋಜನೆಯ ಅರ್ಹತೆ

    • ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18ರಿಂದ ಗರಿಷ್ಠ 70 ವರ್ಷದ ಒಳಗಿರಬೇಕು
    • ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
    • ಭಾರತೀಯ ನಾಗರಿಕನಾಗಿರಬೇಕು

ಪಿ ಎಂ ಎಸ್ ಬಿ ವೈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಬ್ಯಾಂಕ್ ಖಾತೆ ಹೊಂದಿರುವ ಶಾಖೆಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವಂತಹ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯವಿರುವ ದಾಖಲೆಗಳನ್ನು ಸೇರಿಸಿ ಅರ್ಜಿಯನ್ನು ಸಲ್ಲಿಸಿ ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕನ್ನು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

    • ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿನ ಭರ್ತಿ ಮಾಡಿ ಸಂಬಂಧ ಪಟ್ಟ ಕಾಲಮ್ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿ

ಅಂತಿಮ ತೀರ್ಮಾನ

ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲ್ಲಿ ಕೊಟ್ಟಿರುವಂತ ಎಲ್ಲ ಮಾಹಿತಿಯನ್ನು ಓದಿಕೊಂಡು ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಈ ಒಂದು ಯೋಜನೆ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ಈ ಯೋಜನೆಗೆ ಲಾಗಿನ್ ಆಗಬಹುದು.

ಈ ಮಾಹಿತಿಯನ್ನು ಓದಿರಿ..

ವಿಶೇಷ ಸೂಚನೆ

ಕನ್ನಡ ಹೆಲ್ಪ್  ತನ್ನ ಓದುಗರಿಗೆ ಅಧಿಕೃತ ಮಾಹಿತಿ ಹಾಗೂ ಸ್ಪಷ್ಟವಾದ ವಿವರಣೆ ಜೊತೆಗೆ ನಿಖರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತೆ ಇಲ್ಲಿ ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

Leave a Reply

Your email address will not be published. Required fields are marked *