PMAY 2.0 Scheme : ಆಧಾರ್ ಇದ್ದರೆ ಸಾಕು, ಸ್ವಂತ ಮನೆಗೆ ಸರ್ಕಾರ ಕೊಡುತ್ತೆ ₹2.7 ಲಕ್ಷ ಸಹಾಯಧನ!

PMAY 2.0

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಸ್ವಂತ ಮನೆಯ ಕನಸ್ಸನ್ನು ಕಾಣುತ್ತಿದ್ದೀರಾ? ಹಣಕಾಸಿನ ಸಮಸ್ಯೆಯಿಂದ ಮನೆ ಕಟ್ಟುವ ಕನಸ್ಸು ಕನಸ್ಸಾಗಿಯೇ ಉಳಿದಿದೆಯಾ? ಹಾಗಿದ್ದರೆ ಕೇಂದ್ರ ಸರ್ಕಾರವು ನಿಮ್ಮ ಈ ಕನಸ್ಸನ್ನು ನನಸ್ಸು ಮಾಡಿಕೊಳ್ಳಲು ಸುಲಭ ದಾರಿಯನ್ನು ನಿರ್ಮಿಸಿದೆ.


PMAY Online Application In Kannada

ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಆವಾಸ್ ಯೋಜನೆ’ಯಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಮನೆಯನ್ನು ನಿರ್ಮಾಣ ಮಾಡಲು ಅಥವಾ ಖರೀದಿ ಮಾಡಲು ಸಹಾಯಧನವನ್ನು ನೀಡುವ ಮೂಲಕ ಅವರ ಸ್ವಂತ ಮನೆಯ ಕನಸ್ಸಿಗೆ ನೀರನ್ನು ಎರಚುವ ಪ್ರಯತ್ನ ಮಾಡಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಸಾಕಷ್ಟು ಫಲಾನುಭವಿಗಳು ಈಗಾಗಲೇ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಆನ್ಲೈನ್ ಮೂಲಕ (PMAY) ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದು, ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಈ ಯೋಜನೆಯ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾದರೆ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

ಯೋಜನೆಯ ಮುನ್ನೋಟ:

ಯೋಜನೆಯ ಹೆಸರು ಪ್ರಧಾನಮಂತ್ರಿ ಆವಾಸ್ ಯೋಜನೆ (PMAY)
ಅರ್ಹ ಫಲಾನುಭವಿಗಳು ಸ್ವಂತ ಮನೆ ಹೊಂದಿಲ್ಲದವರು
ಒಟ್ಟು ಸಹಾಯಧನ ₹1.2 ಲಕ್ಷದಿಂದ ₹2.7 ಲಕ್ಷ ಸಹಾಯಧನ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಯೋಜನೆಯ ಬಗ್ಗೆ ಕಿರು ವಿವರ:

ಪ್ರಧಾನಮಂತ್ರಿ ಆವಾಸ್ ಯೋಜನೆಯು ಭಾರತ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಸ್ವಂತ ಮನೆ ಇಲ್ಲದ ಹಾಗೂ ಕಚ್ಚಾ ಮನೆಯಲ್ಲಿ ವಾಸಿಸುತ್ತಿರುವವರಿಗೆ ಸ್ವಂತ ಸೂರನ್ನು ಕಟ್ಟಿಕೊಡಲು 2015 ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಈ ಯೋಜನೆಯು ಗ್ರಾಮೀಣ ಹಾಗೂ ನಗರ ಪ್ರದೇಶದ ಅರ್ಹ ಫಲಾನುಭವಿಗಳಿಗೆ ಅನ್ವಹಿಸಲಿದ್ದು, ಈ ಯೋಜನೆಯಡಿಯಲ್ಲಿ ಭಾರೀ ಮೊತ್ತದ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಯಾರು ಎಷ್ಟೆಷ್ಟು ಸಹಾಯಧನವನ್ನು ಪಡೆಯಲು ಅರ್ಹರು? ಎನ್ನುವ ಬಗ್ಗೆ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ನೀಡಲಾಗಿದೆ. ಈ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಿ.

ಪ್ರಧಾನಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶ:

1. ಹಣಕಾಸಿನ ನೆರವನ್ನು ನೀಡುವುದು:

ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಸ್ವಂತ ಮನೆಯನ್ನು ನಿರ್ಮಿಸಲು ಕೇಂದ್ರ ಸರ್ಕಾರವು ಸಹಾಯಧನವನ್ನು ನೀಡುವ ಮೂಲಕ ಅವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು.

2. ಪಕ್ಕಾ ಮನೆ ನಿರ್ಮಾಣಕ್ಕೆ ಅವಕಾಶ:

ಗುಡಿಸಲಿನಲ್ಲಿ ಹಾಗೂ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಆರ್ಥಿಕ ನೆರವನ್ನು ನೀಡಿ ಎಲ್ಲಾ ಮೂಲಭೂತ ಸೌಕರ್ಯಗಳಿರುವ ಪಕ್ಕಾ ಮನೆಯನ್ನು ನಿರ್ಮಿಸಲು ಅವಕಾಶ ಕಲ್ಪಿಸುವುದು.

3. ಮಹಿಳಾಸಬಲೀಕರಣಕ್ಕೆ ಒತ್ತು:

ಕೇಂದ್ರ ಸರ್ಕಾರದ ಈ ಒಂದು ಯೋಜನೆಯಡಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿದರೆ, ಆ ಮನೆಯ ಮಾಲೀಕತ್ವವು ಮಹಿಳೆಯರ ಹೆಸರಿನಲ್ಲಿ ಅಥವಾ ಜಂಟಿ ಹೆಸರಿನಲ್ಲಿ ಇರುವುದು ಕಡ್ಡಾಯವಾಗಿರುತ್ತದೆ. ಕೇಂದ್ರ ಸರ್ಕಾರವು ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒಟ್ಟು ನೀಡಿದೆ.

ಫಲಾನುಭವಿಗಳಿಗೆ ಈ ಯೋಜನೆಯಿಂದಾಗುವ ಪ್ರಯೋಜನ:

1. ನೇರ ಆರ್ಥಿಕ ಧನಸಹಾಯ:

ಕೇಂದ್ರ ಸರ್ಕಾರವು ಮನೆ ಇಲ್ಲದ ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕುಟುಂಬಗಳಿಗೆ ಮನೆ ನಿರ್ಮಾಣ ಅಥವಾ ಖರೀದಿ ಮಾಡಲು ₹1.2 ಲಕ್ಷದಿಂದ ₹2.7 ಲಕ್ಷದ ವೆರೆಗೆ ಸಹಾಯಧನವನ್ನು ನೀಡುತ್ತಿದ್ದು, ಈ ಹಣವನ್ನು ಮರುಪಾವತಿಸುವ ಅಗತ್ಯವಿಲ್ಲ.

2. ಮಹಿಳೆಯರಿಗೆ ಹೆಚ್ಚಿನ ಆದ್ಯತೆ:

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಮನೆಯು ಕುಟುಂಬದ ಮಹಿಳೆಯ ಹೆಸರಿನಲ್ಲಿ ಅಥವಾ ಜಂಟಿ ಹೆಸರಿನಲ್ಲಿ ಇರುವುದರಿಂದ ಮಹಿಳೆಯರಿಗೆ ಹೆಚ್ಚಿನ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯನ್ನು ಸಿಗುತ್ತದೆ ಇದರಿಂದಾಗಿ ಅವರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗಬಹುದು.

3. ಸಮಗ್ರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು:

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ (PMAY) ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ಮನೆಯ ಗೋಡೆ ನಿರ್ಮಾಣಕ್ಕೆ ಮಾತ್ರ ಹಣಕಾಸಿನ ನೆರವನ್ನು ಪಡೆದುಕೊಳ್ಳದೆ, ಶೌಚಾಲಯಗಳ ನಿರ್ಮಾಣಕ್ಕೆ ಪ್ರತ್ಯೇಕವಾಗಿ ₹12,000 ಹಣವನ್ನು ಪಡೆದುಕೊಳ್ಳಬಹುದು. ಜೊತೆಗೆ ನಿರ್ಮಿಸುವ ಮನೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರಿನ ಸಾರಾಂಪರ್ಕವನ್ನು ಕಲ್ಪಿಸಲಾಗುವುದು.

4. ಸುರಕ್ಷತೆ ಮತ್ತು ಆರೋಗ್ಯ ಭದ್ರತೆ:

ಗುಡಿಸಲು ಹಾಗೂ ಕಚ್ಚಾ ಮನೆಯಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ಹೊಸ ಪಕ್ಕಾ ಮನೆಯನ್ನು ನಿರ್ಮಾಣ ಅಥವಾ ಖರೀದಿಗೆ ಸಹಾಯಧನವನ್ನು ನೀಡುವ ಮೂಲಕ ಮಳೆ-ಗಾಳಿ ಗಳಿಂದ ಸುರಕ್ಷತೆಯನ್ನು ಪಡೆದುಕೊಳ್ಳಬಹುದು ಹಾಗೂ ಆರೋಗ್ಯ ಮಟ್ಟವನ್ನು ಸುಧಾರಿಸಿಕೊಳ್ಳಬಹುದು.

5. ಸುಧಾರಿತ ಜೀವನಮಟ್ಟ:

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆಯಡಿಯಲ್ಲಿ ಸ್ವಂತ ಸೂರನ್ನು ಕಟ್ಟಿಕೊಡುವುದರಿಂದ ಸಮಾಜದಲ್ಲಿ ಕುಟುಂಬದ ಗೌರವವನ್ನು ಹೆಚ್ಚುತ್ತದೆ ಹಾಗೂ ಮಕ್ಕಳಿಗೆ ಓದಲು ಉತ್ತಮ ವಾತಾವರಣವನ್ನು ಸೃಷ್ಟಿಯಾಗುತ್ತದೆ.

ಫಲಾನುಭವಿಗಳು ಪಡೆದುಕೊಳ್ಳುವ ಒಟ್ಟು ಸಹಾಯಧನ:

ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳಿಗೆ:

  • ಬಯಲು ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡುವ ಫಲಾನುಭವಿಗಳಿಗೆ ₹1.2 ಲಕ್ಷದ ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
  • ಗುಡ್ಡಗಾಡು ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡುವ ಫಲಾನುಭವಿಗಳಿಗೆ ₹1.3 ಲಕ್ಷದ ವರೆಗೆ ಆರ್ಥಿಕ ನೆರವನ್ನು ನೀಡಲಾಗುವುದು.
  • ಇವುಗಳ ಜೊತೆಗೆ ಶೌಚಾಲಯ ನಿರ್ಮಾಣಕ್ಕೆ ಪ್ರತ್ಯೇಕವಾಗಿ ₹12,000 ದ ವರೆಗೆ ಸಹಾಯಧನವನ್ನು ನೀಡಲಾಗುವುದು.

ನಗರ ಪ್ರದೇಶದ ಫಲಾನುಭವಿಗಳಿಗೆ:

  • ಪ್ರಧಾನಮಂತ್ರಿ ಆವಾಸ್ (PMAY) ಯೋಜನೆಯಡಿಯಲ್ಲಿ ನಗರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಾಣಕ್ಕೆ ₹2.7 ಲಕ್ಷದ ವರೆಗೆ ಸಹಾಯಧನವನ್ನು ನೀಡಲಾಗುವುದು.

ಹಣವನ್ನು ಯಾವ ರೀತಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ?

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ (PMAY) ಯೋಜನೆಯಡಿಯಲ್ಲಿ ಬಿಡುಗಡೆ ಆಗುವ ಹಣ ಒಂದೇ ಬಾರಿಗೆ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ. ಬದಲಿಗೆ ವಿವಿಧ ಕಂತುಗಳ ಮೂಲಕ ಹಣವನ್ನು ಬಿಡುಗಡೆ ಮಾಡಲಾಗುವುದು. ಯಾವ ಯಾವ ಕಂತುಗಳಲ್ಲಿ ಹಣ ಬಿಡುಗಡೆ ಆಗುತ್ತದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ನೀಡಲಾಗಿದೆ.

ಒಂದನೇ ಕಂತು: ಫೌಂಡೇಷನ್ ಹಾಕಿದಾಗ

ಎರಡನೇ ಕಂತು: ಕಿಟಕಿಯ ಮಟ್ಟಕ್ಕೆ ಬಂದಾಗ

ಮೂರನೇ ಕಂತು: ಛಾವಣಿ ಹಾಕಿದಾಗ

ನಾಲ್ಕನೇ ಕಂತು: ಮನೆ ಪೂರ್ಣಗೊಂಡ ನಂತರ

ಇಲ್ಲಿ ಗಮನಿಸಿ:(PMAY) ಈ ಯೋಜನೆಯಡಿಯಲ್ಲಿ ಬರುವ ಸಹಾಯಧನ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಹಣವನ್ನು ಪಡೆಯಲು ಯಾವುದೇ ಮಧ್ಯವರ್ತಿಗಳ ನೆರವು ಅಗತ್ಯವಿಲ್ಲ.”

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾದ ಫಲಾನುಭವಿಗಳು ಯಾರು?

  • PMAY ಸ್ವಂತಮನೆಯನ್ನು ಹೊಂದಿರದವರು.
  • ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷವಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು.
  • ಕುಟುಂಬದ ವಾರ್ಷಿಕ ಆದಾಯವು ₹3 ಲಕ್ಷದಿಂದ ₹6 ಲಕ್ಷದ ವರೆಗೆ ಇರುವ ಕಡಿಮೆ ಆದಾಯದ ಗುಂಪುಗಳು.
  • ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು.
  • ಮಹಿಳೆಯರು, SC/ST ವರ್ಗದವರು, ಹಿಂದುಳಿದ ವರ್ಗದವರು, ಅಂಗವಿಕಲರು, ಅಲ್ಪಸಂಖ್ಯಾತರು (ಇವರುಗಳಿಗೆ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಮೊದಲ ಆದ್ಯತೆ ನೀಡಲಾಗುವುದು)
ವಿಶೇಷ ಸೂಚನೆ: “ಅರ್ಹ ಫಲಾನುಭವಿಗಳು ಈ ಯೋಜನೆಯಡಿಯಲ್ಲಿ ಪಡೆದ ಮನೆಯನ್ನು 10 ವರ್ಷಗಳ ವರೆಗೆ ಬೇರೆಯವರಿಗೆ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ.”

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಸ್ವಯಂ ಘೋಷಣಾ ಪತ್ರ
  • ಪಾಸ್ಪೋರ್ಟ್ ಅಳತೆಯ ಫೋಟೋ
  • ಆಸ್ತಿ ಹಾಗೂ ನಿವೇಶನ ಪುರಾವೆ

ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಫಲಾನುಭವಿಗಳು PMAY ಅಧಿಕೃತ ವೆಬ್ಸೈಟ್ https://pmaymis.gov.in/ ಗೆ ಭೇಟಿ ನೀಡಿ.
  • ಹೊಸ ಬಳಕೆದಾರರಾಗಿದ್ದರೆ, ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ನೋಂದಣಿ ಪೂರ್ಣಗೊಳಿಸಿ.
  • ನಂತರ ನಿಮ್ಮ ಆಧಾರ್ ಸಂಖ್ಯೆ ಹಾಗೂ ಹೆಸರನ್ನು ನಮೂದಿಸಿ ಆಧಾರ್ ದೃಢೀಕರಣ ಮಾಡಿಕೊಳ್ಳಿ.
  • ಆಧಾರ್ ದೃಢೀಕರಣ ಪೂರ್ಣಗೊಂಡ ನಂತರ ಅರ್ಜಿ ನಮೂನೆಯಯ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿರುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
  • ಅಗತ್ಯವಿದ್ದರೆ ಅಪ್ಲಿಕೇಶನ್ ಐಡಿ ಯನ್ನು ಪ್ರಿಂಟ್ ತಗೆದುಕೊಳ್ಳಿ.

ಕೊನೆಯ ಮಾತು:

ಕೇಂದ್ರ ಸರ್ಕಾರವು ಎಲ್ಲರಿಗೂ ವಸತಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ, ಪ್ರಧಾನಮಂತ್ರಿ ಆವಾಸ್ (PMAY) ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಮಧ್ಯಮ ವರ್ಗಗಳ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಾಣ ಅಥವಾ ಖರೀದಿಗೆ ಸಹಾಯಧನವನ್ನು ನೀಡುತ್ತಿದ್ದು, ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.

ನೀವೇನಾದರೂ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸಿದರೆ, ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರೆ ಯೋಜನೆಯ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *