ನಮಸ್ಕಾರ ಸ್ನೇಹಿತರೆ, ನೀವೇನಾದರೂ ಸ್ವಂತವಾಗಿ ಉದ್ಯೋಗವನ್ನು ಪ್ರಾರಂಭಿಸಬೇಕೆಂದಿದ್ದೀರಾ? ಉದ್ಯೋಗ ಪ್ರಾರಂಭಿಸಲು ಬಂಡವಾಳದ ಕೊರತೆ ಎದುರಾಗುತ್ತಿದೆಯಾ? ಹಾಗಿದ್ದರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್! ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ನಿರುದ್ಯೋಗಿ ಯುವಕರಿಗೆ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು ಭಾರೀ ಮೊತ್ತದ ಸಹಾಯಧನವನ್ನು ನೀಡುತ್ತಿದೆ.
Mobile Canteen Scheme in Kannada
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಮೊಬೈಲ್ ಕ್ಯಾಂಟೀನ್ (Mobile Canteen) ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು ಅಗತ್ಯವಾದ ಎಲೆಕ್ಟ್ರಿಕ್ ಗೂಡ್ಸ್ ವಾಹನಗಳನ್ನು ಖರೀದಿಸಲು ಒಟ್ಟು ₹5,00,000 ದ ವರೆಗೆ ಸಬ್ಸಿಡಿ ಸಹಾಯಧನ ನೀಡಲು ಮುಂದಾಗಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ನಿರೀದ್ಯೋಗಿ ಯುವಕರು ಸ್ವಂತವಾಗಿ ಉದ್ಯೋಗವನ್ನು ಪ್ರಾರಂಭಿಸುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಮೊಬೈಲ್ ಕ್ಯಾಂಟೀನ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗಳಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು 20-03-2026 ಕೊನೆಯ ದಿನಾಂಕವಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುದು ಈ ಎಲ್ಲಾ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಇನ್ನಷ್ಟು ಹೊಸ ಹೊಸ ಯೋಜನೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

ಯೋಜನೆಯ ಕಿರು ವಿಮರ್ಶೆ:
| ಅನುಷ್ಠಾನ ಸಂಸ್ಥೆ | ಕರ್ನಾಟಕ ಪ್ರವಾಸೋದ್ಯಮ ಇಲಾಖೆ |
| ಯೋಜನೆಯ ಹೆಸರು | ಮೊಬೈಲ್ ಕ್ಯಾಂಟೀನ್ ಯೋಜನೆ (Mobile Canteen Scheme) |
| ಅರ್ಹ ಫಲಾನುಭವಿಗಳು | ನಿರುದ್ಯೋಗಿ ಯುವಕ – ಯುವತಿಯರು |
| ಯೋಜನೆಯಡಿಯಲ್ಲಿ ಸಿಗುವ ಒಟ್ಟು ಸಬ್ಸಿಡಿ ಸಹಾಯಧನ | ₹5,00,000 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 20-03-2026 |
ಯೋಜನೆಯ ಸಂಕ್ಷಿಪ್ತ ವಿವರ:
ಮೊಬೈಲ್ ಕ್ಯಾಂಟೀನ್ (Mobile Canteen) ಯೋಜನೆಯನ್ನು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಅನುಷ್ಠಾನ ಗೊಳಿಸಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗವನ್ನು ಕಲ್ಪಿಸುವುದು ಹಾಗೂ ಪ್ರವಾಸೋದ್ಯಮಗಳಲ್ಲಿ ತಾಣಗಳಲ್ಲಿ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವುದು ಮೊಬೈಲ್ ಕ್ಯಾಂಟೀನ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಎಲೆಕ್ಟೀವ್ ವಾಹನವನ್ನು ಖರೀದಿ ಮಾಡಲು ₹5,00,000 ವರೆಗೆ ಸಬ್ಸಿಡಿ ಸಹಾಯಧನ ಸಿಗುತ್ತದೆ ಅಷ್ಟೇ ಅಲ್ಲದೆ ಕೌಶಲ್ಯಾಭಿವೃದ್ಧಿ ಹಾಗೂ ವೃತ್ತಿಪರ ತರಬೇತಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಮೊಬೈಲ್ ಕ್ಯಾಂಟೀನ್ ಯೋಜನೆಯ ಉದ್ದೇಶ:
1. ಪ್ರವಾಸಿಗರಿಗೆ ಗುಣಮಟ್ಟದ ಆಹಾರವನ್ನು ಒದಗಿಸುವುದು:
ಕರ್ನಾಟಕದಲ್ಲಿ ಇರುವ ಸಾಕಷ್ಟು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ, ರುಚಿಯಾದ ಹಾಗೂ ಸ್ಥಳೀಯ ಶೈಲಿಯ ಆಹಾರಗಳು ಸುಲಭವಾಗಿ ಸಿಗುವಂತೆ ಮಾಡುವುದು.
2. ಸ್ವಂತ ಉದ್ಯೋಗ ಸೃಷ್ಟಿಗೆ ಅವಕಾಶ:
ಉದ್ಯೋಗವಿಲ್ಲದೆ ಖಾಲಿ ಕುಳಿತಿರುವ ನಿರುದ್ಯೋಗಿ ಯುವಕರಿಗೆ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ಯೋಜನೆಯಡಿಯಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸುವ ಮೂಲಕ ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
3. ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಒತ್ತು:
ವಿಶೇಷವಾಗಿ, ಮೊಬೈಲ್ ಕ್ಯಾಂಟೀನ್ ಯೋಜನೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಮೂಲಕ ಅವರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಅಗತ್ಯವಾದ ಹಣಕಾಸಿನ ನೆರವನ್ನು ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು.
4. ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ:
ಮೊಬೈಲ್ ಕ್ಯಾಂಟೀನ್ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ₹5,00,000 ವರೆಗೆ ಸಬ್ಸಿಡಿ ಸಹಾಯಧನ ನೀಡುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡುವುದು. ಹಾಗೂ ಪರಿಸರ ಮಾಲಿನ್ಯಗಳ ತಡೆಗೆ ಉತ್ತೇಜನ ನೀಡುವುದು.
ಅರ್ಹ ಫಲಾನುಭವಿಗಳಿಗೆ ಈ ಯೋಜನೆಯಡಿಯಲ್ಲಿ ಸಿಗುವ ಒಟ್ಟು ಸಹಾಯಧನ:
ಮೊಬೈಲ್ ಕ್ಯಾಂಟೀನ್ (Mobile Canteen) ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಾಲ್ಕು ಚಕ್ರದ ಎಲೆಕ್ಟ್ರಿಕ್ ಗೂಡ್ಸ್ ವಾಹನಗಳ ಖರೀದಿಗೆ ಭಾರೀ ಮೊತ್ತದ ಸಬ್ಸಿಡಿ ಸಹಾಯಧನವನ್ನು ನೀಡಲಾಗುತ್ತಿದ್ದು, ಶೇಕಡಾ ಎಷ್ಟು ಸಬ್ಸಿಡಿ ಸಹಾಯಧನ ಸಿಗಲಿದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
- ಅಭ್ಯರ್ಥಿಗಳಿಗೆ ಎಲೆಕ್ಟ್ರಿಕ್ ಗೂಡ್ಸ್ ವಾಹನಗಳ ಖರೀದಿಗೆ ಸಿಗುವ ಒಟ್ಟು ಸಬ್ಸಿಡಿ ದರ ವಾಹನದ ಒಟ್ಟು ಮೊತ್ತದ ಮೇಲೆ 70% ಸಹಾಯಧನ ಸಿಗಲಿದೆ.
- ಉಳಿದ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ.
- ಈ ಯೋಜನೆಯಡಿಯಲ್ಲಿ ಸಿಗುವ ಗರಿಷ್ಟ ಸಹಾಯಧನ ₹5,00,000
ಅರ್ಹ ಫಲಾನುಭವಿಗಳಿಗೆ ಸಿಗುವ ತರಬೇತಿ ಅವಧಿ:
ಮೊಬೈಲ್ ಕ್ಯಾಂಟೀನ್ (Mobile Canteen) ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಕೇವಲ ಸಹಾಯಧನವನ್ನು ಮಾತ್ರ ನೀಡುವುದಲ್ಲದೆ, ಅವರು ಕೂಡ ಉಚಿತವಾಗಿ ತರಬೇತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಅರ್ಹಫನುಭವಿಗಳಿಗೆ ಸಿಗುವ ಈ ತರಬೇತಿಯ ಅವಧಿ ಎಷ್ಟು? ಇದರಲ್ಲಿ ಯಾವೆಲ್ಲ ವಿಷಯದ ಕುರಿತು ತರಬೇತಿ ನೀಡಲಾಗುತ್ತದೆ. ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
ಮೊಬೈಲ್ ಕ್ಯಾಂಟೀನ್ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಿಗುವ ಉದ್ಯಮಶೀಲ ತರಬೇತಿಯು ಒಂದು ತಿಂಗಳ ಕಾಲ ಇರುತ್ತದೆ. ಹಾಗೂ ಈ ತರಬೇತಿಯಲ್ಲಿ ಆಹಾರದ ಸುರಕ್ಷತೆ , ಆಹಾರ ತಯಾರಿಕೆ, ಹೋಟೆಲ್ ನಿರ್ವಹಣೆ, ವ್ಯವಹಾರ ಕೌಶಲ್ಯ, ಗ್ರಾಹಕ ಸೇವೆ, ವಾಹನ ನಿರ್ವಹಣೆ ಹಾಗೂ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಅರ್ಜಿದಾರರರು ಹೊಂದಿರಬೇಕಾದ ಅರ್ಹತಾ ಮಾನದಂಡಗಳು:
- ಅರ್ಜಿಸದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಾಗಿರಬೇಕು ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಾಗಿರಬೇಕು.
- ಅರ್ಜಿದಾರರು ಕನಿಷ್ಠ 20 ವರ್ಷದಿಂದ ಗರಿಷ್ಟ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಅರ್ಜಿದಾರರು ಕುಟುಂಬದವರಲ್ಲಿ ಯಾರು ಕೂಡ ಸರ್ಕಾರಿ ಉದ್ಯೋಗದಲ್ಲಿರಬಾರದು.
- ಅರ್ಜಿದಾರರು ಕನಿಷ್ಠ SSLC ಅಲ್ಲಿ ಉತ್ತೀರ್ಣರಾಗಿರಬೇಕು.
- ಅರ್ಜಿದಾರರು ಕಡ್ಡಾಯವಾಗಿ ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
- ಗ್ರಾಮೀಣ ಪ್ರದೇಶದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹1.5 ಲಕ್ಷ ಮೀರಿರಬಾರದು.
- ನಗರ ಪ್ರದೇಶದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹2 ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಪಾಸ್ಪೋರ್ಟ್ ಅಳತೆಯ ಫೋಟೋ
- ಲಘು ವಾಹನ ಚಾಲನಾ ಪರವಾನಗಿ
- ಪ್ರವಾಸೋದ್ಯಮ ಇಲಾಖೆಯಿಂದ ಪಡೆದುಕೊಂಡ ಅರ್ಜಿ ನಮೂನೆ
- ಸ್ವಯಂ ಘೋಷಣಾ ಪತ್ರ
- SSLC ಅಂಕಪಟ್ಟಿ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಫಲಾನುಭವಿಗಳು ಮೊಬೈಲ್ ಕ್ಯಾಂಟೀನ್ (Mobile Canteen) ಯೋಜನೆಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ.
- ಅಲ್ಲಿ ಮೊಬೈಲ್ ಕ್ಯಾಂಟೀನ್ ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಕೇಳಿ ಪಡೆದುಕೊಳ್ಳಿ.
- ನಂತರ, ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಭರ್ತಿಮಾಡಿ.
- ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ ಕಚೇರಿಗೆ ಸಲ್ಲಿಸಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿದಾರರು ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್ಸೈಟ್ https://tourism.karnataka.gov.in/kn ಗೆ ಭೇಟಿ ನೀಡಿ ಮೊಬೈಲ್ ಕ್ಯಾಂಟೀನ್ ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಪಡೆದುಕೊಂಡು ನಂತರ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-03-2026
ಅಂತಿಮ ತೀರ್ಮಾನ:
ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಂತ ಉದ್ಯೋಗವನ್ನು ಕಲ್ಪಿಸುವ ಉದ್ದೇಶದಿಂದ ಮೊಬೈಲ್ ಕ್ಯಾಂಟೀನ್ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಭಾರೀ ಮೊತ್ತದ ಸಬ್ಸಿಡಿ ಸಹಾಯಧನದ ಜೊತೆಗೆ ಉಚಿತವಾಗಿ ಉದ್ಯಮಶೀಲ ತರಬೇತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ, ಇಂದೇ ನಿಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಮೊಬೈಲ್ ಕ್ಯಾಂಟೀನ್ (Mobile Canteen) ಯೋಜನೆಯು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಎಲೆಕ್ಟ್ರಿಕ್ ಗೂಡ್ಸ್ ವಾಹನಗಳ ಖರೀದಿಗೆ ₹5 ಲಕ್ಷ ಸಹಾಯಧನವನ್ನು ಒದಗಿಸುವುದಾಗಿದೆ.
ಅರ್ಹ ಫಲಾನುಭವಿಗಳಿಗೆ ಮೊಬೈಲ್ ಕ್ಯಾಂಟೀನ್ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಗೂಡ್ಸ್ ವಾಹನದ ಒಟ್ಟು ಮೊತ್ತದ ಮೇಲೆ 70% ಸಬ್ಸಿಡಿ ಅನ್ನು ಪಡೆದುಕೊಳ್ಳಬಹುದಾಗಿದೆ.
ಫಲಾನುಭವಿಗಳು ಮೊಬೈಲ್ ಕ್ಯಾಂಟೀನ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ 20 ವರ್ಷದಿಂದ ಗರಿಷ್ಟ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಹೌದು, ಮೊಬೈಲ್ ಕ್ಯಾಂಟೀನ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಲಘು ವಾಹನ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ.
ಇತರೆ ಪ್ರಮುಖ ಲಿಂಕುಗಳು :
- Raita Shakti Yojane: ಕರ್ನಾಟಕದ ರೈತರಿಗೆ ಭರ್ಜರಿ ಗುಡ್ ನ್ಯೂಸ್! ಕೇವಲ FRUITS ID ಇದ್ದರೆ ₹1250 ಸಹಾಯಧನವನ್ನು ಪಡೆದುಕೊಳ್ಳಬಹುದು
- Raitha Vidya Nidhi Scholarship: ₹11,000/-ವಿದ್ಯಾರ್ಥಿ ವೇತನ! ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- Breaking News daari: ರೈತರಿಗೆ ಗುಡ್ ನ್ಯೂಸ್! ಜಮೀನು ದಾರಿ ಬಂದ್ ಮಾಡಿದ್ರೆ ಜೈಲು ಶಿಕ್ಷೆ – 2026ರ ಹೊಸ ಆದೇಶ
- PMVY: ಕುಶಲಕರ್ಮಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ₹3 ಲಕ್ಷ ಸಾಲ + ಉಚಿತ ಟೂಲ್ ಕಿಟ್!
- SBM: ₹20,000/- ಸಹಾಯಧನ ಪಡೆಯಲು ಸುಲಭ ವಿಧಾನ! ನಿಮ್ಮ ಮನೆಯಲ್ಲಿ ಶೌಚಾಲಯ ಇಲ್ಲವೇ? ಹಾಗಿದ್ದರೆ ಇಲ್ಲಿ ಅರ್ಜಿ ಸಲ್ಲಿಸಿ!

