ನಿರುದ್ಯೋಗಿಗಳಿಗೆ ಬಂಪರ್ ಅವಕಾಶ! ಉದ್ಯೋಗವಿಲ್ಲದೆ ಹಾಗೆ ಕುಳಿತಿರುವವರಿಗೆ ಉದ್ಯೋಗಾವಕಾಶವನ್ನು ಸೃಷಿಸುವ ಉದ್ದೇಶದಿಂದ ‘ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ’ (MESCOM) ವು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಒಟ್ಟು 200 ಅಪ್ರೆಂಟೀಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
MESCOM Recruitment 2026 in Kannada
ಮೆಸ್ಕಾಂನ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಯಾವುದೇ ರೀತಿಯ ಲಿಖಿತ ಪರೀಕ್ಷೆಗಳಿರುವುದಿಲ್ಲ. ಮಂಗಳೂರಿನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ವೃತ್ತಿಪರರಿಗೆ ಇದೊಂದು ಸುವರ್ಣಾವಕಾಶ.
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು,02-03-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಮೆಸ್ಕಾಂ (MESCOM) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಇದೇ ರೀತಿಯ ವಿವಿಧ ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ.
ಹುದ್ದೆಯ ಅವಲೋಕನ:
| ನೇಮಕಾತಿ ಸಂಸ್ಥೆಯ ಹೆಸರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಹುದ್ದೆಯ ಹೆಸರು: ಅಪ್ರೆಂಟಿಸ್ ಹುದ್ದೆಯ ಸಂಖ್ಯೆ: 200 ಹುದ್ದೆಗಳು ಉದ್ಯೋಗ ಸ್ಥಳ: ಮಂಗಳೂರು ಶೈಕ್ಷಣಿಕ ಅರ್ಹತೆ: ಡಿಪ್ಲೊಮಾ, ಇಂಜಿನಿಯರಿಂಗ್, ಸಾಮಾನ್ಯ ಪದವಿ ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2026 |
ಹುದ್ದೆಯ ಸಂಕ್ಷಿಪ್ತ ಮಾಹಿತಿ:
ಮೆಸ್ಕಾಂ ಸಂಸ್ಥೆಯು (MESCOM) ಒಟ್ಟು 200 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ತಾಂತ್ರಿಕ ಪದವಿ, ಡಿಪ್ಲೋಮಾ ಹಾಗೂ ಸಾಮಾನ್ಯ ಪದವಿ ಪಡೆದ ಇದುವರೆಗೂ ಅಪ್ರೆಂಟಿಸ್ ತರಬೇತಿ ಪಡೆಯದ ಹಾಗೂ ಯಾವುದೇ ವೃತ್ತಿ ಅನುಭವ ಹೊಂದಿರದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹುದ್ದೆಗಳ ವಿವರ:
ಮಂಗಳೂರು (MESCOM)ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧಿಕೃತ ಅಧಿಸೂಚನೆಯ ಪ್ರಕಾರ, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಕಂಡಂತಿವೆ,
- ಸಾಮಾನ್ಯ ಪದವೀಧರ ಅಪ್ರೆಂಟಿಸ್: ಈ ವಿಭಾಗದಲ್ಲಿ ಒಟ್ಟು 65 ಹುದ್ದೆಗಳು ಖಾಲಿ ಇದೆ.
- ತಾಂತ್ರಿಕ ಡಿಪ್ಲೋಮಾಧರ ಅಪ್ರೆಂಟಿಸ್: ಈ ವಿಭಾಗದಲ್ಲಿ ಒಟ್ಟು 65 ಹುದ್ದೆಗಳು ಖಾಲಿ ಇದೆ.
- ಪದವೀಧರ ಅಪ್ರೆಂಟಿಸ್: ಈ ವಿಭಾಗದಲ್ಲಿ ಒಟ್ಟು 70 ಹುದ್ದೆಗಳು ಖಾಲಿ ಇದೆ.
ಅರ್ಹತಾ ಮಾನದಂಡ:
ಶೈಕ್ಷಣಿಕ ಅರ್ಹತೆ:
ಪದವೀಧರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಇಂಜಿನೀರಿಂಗ್ ಅಥವಾ ತಂತಜ್ಞಾನದಲ್ಲಿ ಬಿಇ ಬಿ.ಟೆಕ್ ಪದವಿಯನ್ನು ಪಡೆದಿರಬೇಕು.
ಸಾಮಾನ್ಯ ಪದವೀಧರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್ಸಿ ಯಲ್ಲಿ ಪದವಿಯನ್ನು ಹೊಂದಿರಬೇಕು.
ತಾಂತ್ರಿಕ ಡಿಪ್ಲೋಮಾಧರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಸಂಬಂಧಿತ ವಿಷಯದಲ್ಲಿ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ಇತರೆ ಅರ್ಹತೆಗಳು:
- ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅಭ್ಯರ್ಥಿಗಳು ತಮ್ಮ ಡಿಪ್ಲೋಮಾ ಹಾಗೂ ಪದವಿಯನ್ನು ಶೈಕ್ಷಣಿಕ ವರ್ಷ 2021, 2022, 2023, 2024 ಅಥವಾ 2025 ನೇ ಸಾಲಿನಲ್ಲಿ ಉತ್ತೀರ್ಣರಾಗಿರಬೇಕು.
| ವಿಶೇಷ ಸೂಚನೆ: “ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಹಿಂದೆ ಎಲ್ಲಿಯೂ ಕೂಡ ಅಪ್ರೆಂಟಿಸ್ ತರಬೇತಿಯನ್ನು ಪಡೆದಿರಬಾರದು ಹಾಗೂ ಯಾವುದೇ ವೃತ್ತಿಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ವೃತ್ತಿ ಅನುಭವ ಹೊಂದಿರಬಾರದು” |
ವಯೋಮಿತಿ:
- ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಅಪ್ರೆಂಟಿಸ್ ಶಿಪ್ ಕಾಯ್ದೆ 1973 ಅನ್ವಯ, ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ವಯಸ್ಸಿನ ಸಡಿಲಿಕೆ:
ಅಪ್ರೆಂಟಿಸ್ ಶಿಪ್ ಕಾಯ್ದೆಯನ್ವಯ, ಕೆಲವು ವರ್ಗಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ:
| ಹುದ್ದೆಯ ಹೆಸರು | ಮಾಸಿಕ ವೇತನ |
| ತಾಂತ್ರಿಕ ಡಿಪ್ಲೋಮಾಧರ ಅಪ್ರೆಂಟಿಸ್ | ₹8,000 |
| ಪದವೀಧರ ಅಪ್ರೆಂಟಿಸ್ | ₹9,000 |
| ಸಾಮಾನ್ಯ ಪದವೀಧರ ಅಪ್ರೆಂಟಿಸ್ | ₹9,000 |
ಅರ್ಜಿ ಶುಲ್ಕ:
ಮೆಸ್ಕಾಂ (MESCOM) ಸಂಸ್ಥೆಯ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಯಾವುದೇ ವರ್ಗದ ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. NATS ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ:
- ಅಭ್ಯರ್ಥಿಗಳು ತಮ್ಮ ಪದವಿ ಹಾಗೂ ಡಿಪ್ಲೋಮಾದಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುವುದು.
- ಆಯ್ಕೆಯಾದ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಮಾಹಿತಿಯನ್ನು ನೀಡಲಾಗುವುದು.
- ನಂತರ ಈ ಅಭ್ಯರ್ಥಿಗಳು ಮಂಗಳೂರಿನ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವ ಹಂತಗಳು:
ಹಂತ 1: NATS ಪೋರ್ಟಲ್ ನಲ್ಲಿ ನೋಂದಣಿ:
- ಅರ್ಹ ಅಭ್ಯರ್ಥಿಗಳು ಮೊದಲು NATS ಪೋರ್ಟಲ್ https://nats.education.gov.in/ ಗೆ ಭೇಟಿ ನೀಡಿ.
- ಸ್ಟೂಡೆಂಟ್ ರಿಜಿಸ್ಟರ್ ವಿಭಾಗವನ್ನು ಕ್ಲಿಕ್ ಮಾಡಿ.
- ನಿಮ್ಮ ಇಮೇಲ್ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಹಂತ 2: ಲಾಗಿನ್ ಆಗಿ ವಿವರಗಳನ್ನು ಭರ್ತಿ:
- ಅಭ್ಯರ್ಥಿಗಳಿಗೆ ನೋಂದಣಿ ಸಂಖ್ಯೆ ಬಂದ ನಂತರ, ಆ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ ನಿಮ್ಮ ಅಗತ್ಯ ಶೈಕ್ಷಣಿಕ ವಿವರಗಳನ್ನು ಹಾಗೂ ಸ್ವ-ವಿವರಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ.
ಹಂತ 3: ಮೆಸ್ಕಾಂ ಸಂಸ್ಥೆಗೆ ಅರ್ಜಿ ಸಲ್ಲಿಕೆ:
- ಅಭ್ಯರ್ಥಿಗಳು ಲಾಗಿನ್ ಆದ ನಂತರ ‘ಅಪ್ಲೈ ಎಗೈನ್ಸ್ಟ್ ಅಡ್ವರ್ಟೈಸ್ಡ್ ವಾಕ್ಯಾನ್ಸಿಸ್’ ಎಂಬ ವಿಭಾಗವನ್ನು ಆರಿಸಿ.
- ನಂತರ ಸೆರ್ಚ್ ಬಾಕ್ಸ್ ನಲ್ಲಿ “ಮಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್” ಎಂದು ಟೈಪ್ ಮಾಡಿ
- ನಂತರ ಮೆಸ್ಕಾಂ ಹೆಸರು ಕಾಣಿಸುವಲ್ಲಿ ಇರುವ ಅಪ್ಲೈ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಅರ್ಜಿ ಸಲ್ಲಿಸುವ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಈಗಾಗಲೇ ಆರಂಭ ಗೊಂಡಿದೆ.
- ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಕೊನೆಯ ದಿನಾಂಕ: 24-02-2026
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2026
ಹುದ್ದೆಗೆ ಸಂಬಂಧಿಸಿದ ಲಿಂಕುಗಳು:
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ತೀರ್ಮಾನ:
ಮಂಗಳೂರು ವಿದ್ಯುತ್ (MESCOM) ಸರಬರಾಜು ಕಂಪನಿ ನಿಯಮಿತ ಒಟ್ಟು 200 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ತಾಂತ್ರಿಕ ಡಿಪ್ಲೋಮಾಧರರಿಗೆ ಒಟ್ಟು 65, ಸಾಮಾನ್ಯ ಪದವೀಧರರಿಗೆ ಒಟ್ಟು 65 ಹಾಗೂ ತಾಂತ್ರಿಕ ಪದವೀಧರರಿಗೆ ಒಟ್ಟು 70 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ವಿದ್ಯುತ್ ಸಂಸ್ಥೆಯಲ್ಲಿ ಉದ್ಯೋಗವನ್ನು ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಗೋಲ್ಡನ್ ಚಾನ್ಸ್.
ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :
- ಬ್ಯಾಂಕ್ ಆಫ್ ಬರೋಡಾ ಭರ್ಜರಿ ನೇಮಕಾತಿ!
- RBI Recruitment 2026 : 10th ಪಾಸ್ ಅಭ್ಯರ್ಥಿಗಳಿಗೆ RBI ಯಿಂದ ಭರ್ಜರಿ ಸಿಹಿ ಸುದ್ದಿ!
- ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ! 2273 CBO ಹುದ್ದೆಗಳು
- 10ನೇ ತರಗತಿ (SSLC) ಪಾಸಾದ ಅಭ್ಯರ್ಥಿಗಳಿಂದ ಭರ್ಜರಿ ಉದ್ಯೋಗಾವಕಾಶ!

