Labour Pension Yojana | ₹3,000/- ವೃದ್ದಾಪ್ಯ ಪಿಂಚಣಿ! ಕಾರ್ಮಿಕರಿಗೆ ಸರ್ಕಾರದಿಂದ ಭರ್ಜರಿ ಸುದ್ದಿ!

Labour Pension Yojana

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಲೇಬರ್ ಕಾರ್ಡ್ ಹೊಂದಿದ್ದೀರಾ? ಹಾಗಿದ್ದರೆ ನಿಮಗೊಂದು ಬಂಪರ್ ಗುಡ್ ನ್ಯೂಸ್! ಏನಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.


Labour Pension Yojana In kannada

ನಿಮಗಾಗಿ ಕರ್ನಾಟಕ ಸರ್ಕಾರವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ಕಾರ್ಮಿಕ ಪಿಂಚಣಿ ಯೋಜನೆ (Labour Pension Yojana) ಯನ್ನು ಜಾರಿಗೊಳಿಸಿದೆ.

ಜೀವನ ಪೂರ್ತಿ ಬೃಹತ್ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕಾರ್ಮಿಕರ ಶ್ರಮಕ್ಕೆ ಸರ್ಕಾರವು ಗೌರವಧನವನ್ನು ನೀಡಲು ಮುಂದಾಗಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ₹3,000 ಪಿಂಚಣಿ ಖಚಿತ!

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾದ ಕಾರ್ಮಿಕರು ತಮ್ಮ ಹತ್ತಿರದ ಕಾರ್ಮಿಕ ಇಲಾಖಾ ಕಚೇರಿಗೆ ಭೇಟಿ ನೀಡಿ ಅಥವಾ ಸೇವಾ ಸಿಂಧೂ ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾದರೆ ಇಂದೇ ಆನ್ಲೈನ್ ಅಥವಾ ಅಫ್ಲಿನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ. ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಈ ವೆಬ್ಸೈಟ್ ನಿಮ್ಮ ಬೆಸ್ಟ್ ಚಾಯ್ಸ್.

ಯೋಜನೆಯ ಕಿರು ಚಿತ್ರಣ:

ಯೋಜನೆಯ ಹೆಸರು ಕಾರ್ಮಿಕ ಪಿಂಚಣಿ ಯೋಜನೆ (Labour Pension Yojana)
ಅರ್ಹ ಫಲಾನುಭವಿಗಳು ಕಾರ್ಮಿಕರು
ಫಲಾನುಭವಿಗಳಿಗೆ ಸಿಗುವ ಲಾಭ ಮಾಸಿಕ ₹3,000 ಪಿಂಚಣಿ ಮೊತ್ತ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಅಥವಾ ಆಫ್ಲೈನ್

ಯೋಜನೆಯ ಕುರಿತು:

ಕಾರ್ಮಿಕ ಪಿಂಚಣಿ ಯೋಜನೆಯು (Labour Pension Yojana) ಕರ್ನಾಟಕ ಸರ್ಕಾರವು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ಜಾರಿಗೊಳಿಸಿದ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಕಾರ್ಮಿಕರು ಜೀವನಪೂರ್ತಿ ಪಟ್ಟ ಶ್ರಮಕ್ಕೆ ಪ್ರತಿಯಾಗಿ ಸರ್ಕಾರವು ನೀಡುವ ಗೌರವದ ಆಸರೆಯಾಗಿದೆ.

ಕಾರ್ಮಿಕರು ತಮ್ಮ 60 ನೇ ವಯಸ್ಸಿನಲ್ಲಿ ಕಾರ್ಮಿಕ ಪಿಂಚಣಿ ಯೋಜನೆಯಡಿಯಲ್ಲಿ ಮಾಸಿಕ ₹3,000 ಪಿಂಚಣಿ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ತಮ್ಮ ವೃದ್ದಾಪ್ಯ ಸಮಯದಲ್ಲಿ ತಮ್ಮ ಔಷಧಿ ಖರ್ಚಿಗೆ ಹಾಗೂ ಇನ್ನಿತರ ವೈಯಕ್ತಿಕ ಖರ್ಚಿಗೆ ತಮ್ಮ ಮಕ್ಕಳಿಗೆ ಅಥವಾ ಕುಟುಂಬದವರಿಗೆ ಅವಲಂಬಿತರಾಗುವುದನ್ನು ತಪ್ಪಿಸಿ, ವೃದ್ದಾಪ್ಯ ಸಮಯದಲ್ಲೂ ಸ್ವತಂತ್ರವಾಗಿ ಬದುಕಲು ಸರ್ಕಾರವು ಅನುವು ಮಾಡಿಕೊಟ್ಟಿದೆ.

ಕಾರ್ಮಿಕರಿಗೆ ಪಿಂಚಣಿ ಹಣವನ್ನು ನೀಡುವುದರ ಹಿಂದಿನ ಮೂಲ ಉದ್ದೇಶ:

1. ಗೌರವಯುತ ಜೀವನಕ್ಕೆ ನೆರವು:

ಸರ್ಕಾರವು ನಿವೃತ್ತ ಕಾರ್ಮಿಕರಿಗೆ ಪಿಂಚಣಿ ಹಣವನ್ನು (Labour Pension Yojana) ನೀಡುವುದರ ಮೂಲಕ, ಕಾರ್ಮಿಕರು ತಮ್ಮ ವೃದ್ದಾಪ್ಯದ ನಂತರ ಕುಟುಂಬದ ಸದಸ್ಯರ ಮೇಲೆ ಅವಲಂಬಿತರಾಗದೆ, ತಮ್ಮ ವೈಯಕ್ತಿಕ ಖರ್ಚನ್ನು ತಾವೇ ನಿಭಾಯಿಸಿಕೊಳ್ಳುವ ಮೂಲಕ ಸ್ವಾವಲಂಬಿಯಾಗಿ ಹಾಗೂ ಗೌರವಯುತವಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಿದೆ.

2. ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಒದಗಿಸುವುದು:

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಕಾರ್ಮಿಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ.

3. ವೃದ್ಧಾಪ್ಯಾದಲ್ಲಿ ಹಣಕಾಸಿನ ಭದ್ರತೆ:

ಕಾರ್ಮಿಕರು ವಯಸ್ಕರಾಗಿರುವಾಗ ಕೆಲಸ ಮಾಡುವ ರೀತಿಯಲ್ಲಿ ವೃದ್ದಾಪ್ಯದಲ್ಲಿರುವಾಗ ಮಾಡಲು ಸಾಧ್ಯವಿಲ್ಲ ಅಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ ಮಾಸಿಕ ₹3,000 ಪಿಂಚಣಿ (Labour Pension Yojana) ಮೊತ್ತ ನೀಡುವ ಮೂಲಕ ಅವರಿಗೆ ಹಣಕಾಸಿನ ಭದ್ರತೆ ಒದಗಿಸುವುದು.

4. ಕುಟುಂಬಕ್ಕೆ ಆಧಾರ:

ಪಿಂಚಣಿ ಪಡೆಯುತ್ತಿರುವ ಕಾರ್ಮಿಕರು ಮರಣ ಹೊಂದಿದರೆ, ಅವರ ಸಂಗಾತಿಗೆ ಪಿಂಚಣಿ ನೀಡುವ ಮೂಲಕ ಕಾರ್ಮಿಕರ ಕುಟುಂಬಕ್ಕೆ ಹಣಕಾಸಿನ ಸಹಾಯ ಒದಗಿಸುವುದು.

5. ಅಂಗವಿಕಲರಿಗೆ ಆರ್ಥಿಕ ನೆರವು:

ಕಾರ್ಮಿಕರು ತಾವು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವಾಗ ಅಪಘಾತ ಉಂಟಾಗಿ ಶಾಶ್ವತವಾಗಿ ಅನಾಗವಿಕಲರಾದರೆ ಅವರಿಗೆ ಸರ್ಕಾರವು ಹಣಕಾಸಿನ ಭದ್ರತೆಯನ್ನು ಒದಗಿಸುವುದು.

ಕಾರ್ಮಿಕ ಪಿಂಚಣಿ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು:

  • 60 ಮೇಲ್ಪಟ್ಟ ನೋಂದಾಯಿತ ಕಾರ್ಮಿಕರಿಗೆ ಕಾರ್ಮಿಕ ಪಿಂಚಣಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳಿಗೆ ₹3,000 ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು.
  • ನೋಂದಾಯಿಕ ಕಾರ್ಮಿಕರು ಮರಣ ಹೊಂದಿದ ನಂತರ ತನ್ನ ಸಂಗಾತಿಗೆ ಪಿಂಚಣಿ ಪಡೆಯುವ ಅವಕಾಶವಿದ್ದು, ಸಂಗತಿ ಪಡೆದುಕೊಳ್ಳುವ ಪಿಂಚಣಿ ಹಣ ₹1,500.
  • ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ದುರಂತಗಳಾಗಿ ಶಾಶ್ವತ ಅಂಗವಿಕಲರಾದರೆ, ಸರ್ಕಾರವು ಅವರಿಗೆ ಪಿಂಚಣಿ ಜೊತೆಗೆ ₹2,00,000 ದ ವರೆಗೆ ಆರ್ಥಿಕ ನೆರವನ್ನು ನೀಡಿ ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.

ಕಾರ್ಮಿಕರಿಗೆ ಸಿಗುವ ಪ್ರಯೋಜನಗಳು:

  • ಕಾರ್ಮಿಕ ಪಿಂಚಣಿಯೋಜನೆಯಡಿಯಲ್ಲಿ (Labour Pension Yojana) ಕಾರ್ಮಿಕರಿಗೆ ಮಾಸಿಕ ಖಚಿತ ಆದಾಯ ಸಿಗುತ್ತದೆ.
    • ಕಾರ್ಮಿಕರಿಗೆ ತನ್ನ ನಂತರ ತನ್ನ ಕುಟುಂಬದವರಿಗೆ ಪಿಂಚಣಿ ಹಣ ವರ್ಗಾವಣೆಯಾಗುವುದರಿಂದ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ.
    • ಕಾರ್ಮಿಕರು ತಮ್ಮ ವೃದ್ದಾಪ್ಯದ ಸಮಯದಲ್ಲೂ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತದೆ.
    • ನೋಂದಾಯಿತ ಕಾರ್ಮಿಕರಿಗೆ ಸರ್ಕಾರದಿಂದ ಈ ಯೋಜನೆಯ ಜೊತೆಗೆ ಆರೋಗ್ಯ ಸಂಬಂಧಿತ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕರಿಗೆ ವೈದ್ಯಕೀಯ ನೆರವನ್ನು ಪಡೆದುಕೊಳ್ಳಲು ಅವಕಾಶವಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾದ ಕಾರ್ಮಿಕರು ಯಾರು?

  • ಕಾರ್ಮಿಕರು ಕನಿಷ್ಠ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.
    • ಕಾರ್ಮಿಕರಿಗೆ 60 ವರ್ಷ ತುಂಬುವ ಮೊದಲು ಕನಿಷ್ಠ 3 ವರ್ಷಗಳ ಕಾಲ ಕಾರ್ಮಿಕ ಮಂಡಳಿಯಲ್ಲಿ ಸದಸ್ಯತ್ವವನ್ನು ಹೊಂದಿರಬೇಕು.
    • ಕಾರ್ಮಿಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಣಿಯಾಗಿರಬೇಕು.
    • ಕಾರ್ಮಿಕರು ಚಾಲ್ತಿಯಲ್ಲಿರುವ ಲೇಬರ್ ಕಾರ್ಡ್ ಅನ್ನು ಹೊಂದಿರಬೇಕು.
    • ನಿರ್ಮಾಣ ಕೆಲಸದಲ್ಲಿ ತೊಡಗಿಸಿ ಕೊಂಡಿರುವ ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು.
  • ಯಾವುದೇ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿರಬಾರದು.
ಕಾರ್ಮಿಕರ ಗಮನಕ್ಕೆ: “ಕಾರ್ಮಿಕರು ತಮ್ಮ ಲೇಬರ್ ಕಾರ್ಡ್ ಅನ್ನು ಪ್ರತಿ ಮೂರು ವರ್ಷಗಳಿಗೆ ಒಮ್ಮೆ ರಿನೀವಲ್ ಮಾಡಿಸುವುದು ಕಡ್ಡಾಯ. ಕಾರ್ಡ್ ರಿನೀವಲ್ ಮಾಡದಿದ್ದರೆ ಕಾರ್ಡ್ ಕ್ಯಾನ್ಸಲ್ ಆಗಿ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.”

ಕಾರ್ಮಿಕರು ಹೊಂದಿರಬೇಕಾದ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಲೇಬರ್ ಕಾರ್ಡ್
  • ವಯಸ್ಸಿನ ಪುರಾವೆ
  • ಪಾಸ್ಪೋರ್ಟ್ ಅಳತೆಯ ಫೋಟೋ
  • ಉದ್ಯೋಗ ಪ್ರಮಾಣಪತ್ರ
  • ಪಡಿತರ ಚೀಟಿ
  • ಜೀವಂತ ಪ್ರಮಾಣ ಪತ್ರ

ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಕಾರ್ಮಿಕರು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಕಾರ್ಮಿಕ ಪಿಂಚಣಿ ಯೋಜನೆಗೆ (Labour Pension Yojana)ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೇಗೆ ಅರ್ಜಿ ಸಲ್ಲಿಸುವುದು ಎನ್ನುವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಫಲಾನುಭವಿಗಳು ಸೇವಾ ಸಿಂಧೂ ಅಧಿಕೃತ ವೆಬ್ಸೈಟ್ https://sevasindhuservices.karnataka.gov.in/ ಗೆ ಭೇಟಿ ನೀಡಿ.

  • ಹೊಸ ಬಳಕೆದಾರರಾಗಿದ್ದರೆ, ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ನೋಂದಣಿ ಪೂರ್ಣಗೊಳಿಸಿ.
  • ನಂತರ, ಸರ್ಚ್ ಬಾಕ್ಸ್ ನಲ್ಲಿ ಸ್ಕೀಮ್ ಅಂತ ಟೈಪ್ ಮಾಡಿ ಪೆನ್ಷನ್ ಸ್ಕೀಮ್ ವಿಭಾಗವನ್ನು ಆಯ್ಕೆಮಾಡಿ.
    • ನಂತರ ಅರ್ಜಿ ನಮೂನೆಯಯ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿರುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
    • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
  • ಭವಿಷ್ಯದ ಉಲ್ಲೇಖಕ್ಕಾಗಿ acknowledgement number ಅನ್ನು ಪ್ರಿಂಟ್ ತಗೆದುಕೊಳ್ಳಿ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸಲು ಅರ್ಹರಾದ ಕಾರ್ಮಿಕರು ತಮ್ಮ ಹತ್ತಿರದ ಕಾರ್ಮಿಕ ಇಲಾಖಾ ಕಚೇರಿಗೆ ಭೇಟಿ ನೀಡಿ.
    • ಲೇಬರ್ ಪೆನ್ಷನ್ ಸ್ಕೀಮ್ ಗೆ ಸಂಬಂಧಿಸಿದ ಅರ್ಜಿ ಪ್ರತಿಯನ್ನು ಪಡೆದುಕೊಳ್ಳಿ.
    • ನಂತರ ಅರ್ಜಿಯಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ.
      • ಅರ್ಜಿ ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಇಲಾಖೆಗೆ ಸಲ್ಲಿಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಿ.
ವಿಶೇಷ ಸೂಚನೆ: ” ಕಾರ್ಮಿಕರಿಗೆ 60 ಪೂರ್ಣಗೊಂಡ ನಂತರ ಮೂರು ತಿಂಗಳ ಒಳಗೆ ಅರ್ಜಿ ಸಲ್ಲಿಸಿದರೆ ಮಾತ್ರ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಸಾಧ್ಯ.”

ಅಂತಿಮ ಮಾತು:

ಕರ್ನಾಟಕ ಸರ್ಕಾರವು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿಸಿಕೊಂಡು ಕಾರ್ಮಿಕರಿಗೆ ತಮ್ಮ ವೃದ್ದಾಪ್ಯ ಸಮಯದಲ್ಲಿ ಪಿಂಚಣಿ ಹಣವನ್ನು (Labour Pension Yojana) ಪಡೆಯಲು ಅವಕಾಶವನ್ನು ಕಲ್ಪಿಸಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ನೀವು ಕೂಡ ಅರ್ಜಿ ಸಲ್ಲಿಸಲು ಅರ್ಹರಾದರೆ ಇಂದೇ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರೆ ಯೋಜನೆಯ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *