ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ 2025-26 Labour Scholarship


Labour Card Scholarship

ವಿವರಣೆ

ಕರ್ನಾಟಕದಲ್ಲಿ ಲೇಬರ್ ಕಾರ್ಡ್ ಹೊಂದಿದ ಲೇಬರ್ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಯೋಜನೆಯ ಲಾಭವನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಕಟ್ಟಡ ಕಾರ್ಮಿಕರಿಗೆ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ನೋಂದಾಯಿಸಲಾದ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಅರ್ಜಿ ಪ್ರಕ್ರಿಯೆಗೆ ಇದಾಗಿದ್ದು  ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಉದ್ದೇಶ

ಲೇಬರ್ ಕಾರ್ಡು ಹೊಂದಿರುವಂತ ಲೇಬರ್ ಮಕ್ಕಳಿಗೆ ಈ ಒಂದು ಯೋಜನೆಯ ಲಾಭವನ್ನು ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಈ ಒಂದು ಯೋಜನೆಯ ಮುಖ್ಯ ಉದ್ದೇಶ ಏನು ಅಂದರೆ ಲೇಬರ್ ಮಕ್ಕಳು ಉನ್ನತ ಶಿಕ್ಷಣವನ್ನ ಪಡೆಯಲು ಸಹಾಯವಾಗಲೆಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯಿಂದ ಉನ್ನತ ಶಿಕ್ಷಣದಲ್ಲಿ ಬಡ ಮಕ್ಕಳು ಹಾಗೆ ಮಧ್ಯಮ ವರ್ಗದವರು ಹಿಂದುಳಿದ ವರ್ಗದವರು ಆರ್ಥಿಕವಾಗಿ ಹಿಂದುಳಿದಿರುವ ಕಾರಣದಿಂದ ಅವರಿಗೆ ಧನ ಸಹಾಯದ ಮೂಲಕ ಅವರ ಮಕ್ಕಳನ್ನ ಇನ್ನಷ್ಟು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಂತ ಗುರಿ ಇದಾಗಿದೆ.

PM E-DRIVE ಯೋಜನೆಯ ಅರ್ಹತೆ

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಲೇಬರ್ ಮಕ್ಕಳ  ಅರ್ಹತಾ ಮಾನದಂಡ ಈ ಕೆಳಗಿನಂತೆ ಇದೆ

    • ಪೋಷಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಫಲಾನುಭವಿ ಆಗಿರಬೇಕು
    • ವಿದ್ಯಾರ್ಥಿಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು ಹಿಂದಿನ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು
    • ಎಸ್ ಸಿ  ಎಸ್ ಟಿ ಹಿಂದಿನ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ 45% ಅಂಕಗಳನ್ನು ಪಡೆದಿರಬೇಕು
    • ಕುಟುಂಬದ ವಾರ್ಷಿಕ ಆದಾಯ 35,000 ಮೀರಬಾರದು
    • ಆಧಾರ್ ಮತ್ತು ಬ್ಯಾಂಕ್ ಲಿಂಕ್ ನೇರ ಪ್ರಯೋಜನ ವರ್ಗಾವಣೆಗಾಗಿ ಫಲಾನುಭವಿಗಳು ಬ್ಯಾಂಕ್ ಖಾತೆಯನ್ನು ಅವರ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿರಬೇಕು

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

    • ಪೋಷಕರ ಪೋಷಕರ ಕಾರ್ಮಿಕರ ಕಾರ್ಡ್
    • ವಿದ್ಯಾರ್ಥಿಯ ಆಧಾರ್ ಕಾರ್ಡ್
    • ಪಾಸ್ ಬುಕ್
    • ಪರೀಕ್ಷೆಯ ಶೈಕ್ಷಣಿಕ ಅಂಕಪಟ್ಟಿ ಪ್ರಮಾಣ ಪತ್ರಗಳು
    • ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ
    • ಕುಟುಂಬದ ಆದಾಯ ಪ್ರಮಾಣ ಪತ್ರ
    • ಶಿಕ್ಷಣ ಸಂಸ್ಥೆಯಿಂದ ಪ್ರವೇಶ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಹಂತ ಹಂತದ ಅರ್ಜಿ ಪ್ರಕ್ರಿಯೆ

  • ಕಾರ್ಮಿಕರ ಮಕ್ಕಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಳ್ಳಿ 
  • ಮುಖಪುಟದಲ್ಲಿ ವಿದ್ಯಾರ್ಥಿ ಲಾಗಿನ್ ಅಂತ ಒಂದು ಆಯ್ಕೆ ಇರುತ್ತೆ ಅದನ್ನ ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ನೀವು ಹೊಸ ಅರ್ಜಿದಾರರಾಗಿರುವುದರಿಂದ ಹೊಸ ಖಾತೆಯನ್ನು ರಚಿಸಲು ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಸಕ್ರಿಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಿ ನೀವು ಹೊಸ ಪಾಸ್ವರ್ಡ್ ಅನ್ನು ರಚಿಸಬೇಕು ಮತ್ತು ಕ್ಯಾಪ್ಚ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು
  • ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತೆ  ಅದನ್ನ ನಮೂದಿಸಬೇಕು ಹೀಗೆ ನಮೂದಿಸಿದ ನಂತರ ನೀವು ನಿಮ್ಮ ಒಂದು ಖಾತೆ ರಚನೆ ಆಗುತ್ತೆ

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ

    • ವಿದ್ಯಾರ್ಥಿ ಲಾಗಿನ್ ಪುಟಕ್ಕೆ ಹಿಂತುರುಗಿ ಮತ್ತು ಲಾಗಿನ್ ಮಾಡಲು ನಿಮ್ಮ ಹೊಸ ಇಮೇಲ್ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಬಳಸಿ ಲಾಗಿನ್ ಆಗಿ
    •  ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಶೈಕ್ಷಣಿಕ ವಿವರವನ್ನು ಭರ್ತಿ ಮಾಡಿ
    • ನಂತರ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ
    • ಕುಟುಂಬದ ವಾರ್ಷಿಕ ಆದಾಯವನ್ನು ನಮೂದಿಸಿ
    • ನಂತರ ಅಂತಿಮ ಸಲ್ಲಿಕೆಯನ್ನು ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಅಂತಿಮವಾಗಿ ಬಂದಿರುವಂತಹ ಅಪ್ಲಿಕೇಶನ್ ಅನ್ನ ಪ್ರಿಂಟ್ ಔಟ್ ಮಾಡಿಟ್ಟುಕೊಳ್ಳಬೇಕು
ಇನ್ನಿತರ ಯೋಜನೆಗಳು ಇಲ್ಲಿ ಕ್ಲಿಕ್ ಮಾಡಿ

ತೀರ್ಮಾನ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸಿಗುವಂತ ಒಂದು ಅದ್ಭುತ ಯೋಜನೆ ಇದಾಗಿದ್ದು ಈ ಯೋಜನೆಯ ಲಾಭವನ್ನು ಕಟ್ಟಡ ಕಾರ್ಮಿಕರ ಮಕ್ಕಳು ಪಡೆಯಬಹುದು ಇದಕ್ಕೆ  ಅರ್ಜಿಯನ್ನು ಸಲ್ಲಿಸಿ ಈ ಒಂದು ಯೋಜನೆಯ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಿ - ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *