Labour Card Free Kit : ಲೇಬರ್ ಕಾರ್ಡ್ ಇದ್ದರೆ, ಫ್ರೀ ಟೂಲ್ ಕಿಟ್ ಪಡೆಯಲು ಇಂದೇ ಅರ್ಜಿ ಸಲ್ಲಿಸಿ!

Labour Card Free Kit : ಲೇಬರ್ ಕಾರ್ಡ್ ಇದ್ದರೆ, ಫ್ರೀ ಟೂಲ್ ಕಿಟ್ ಪಡೆಯಲು ಇಂದೇ ಅರ್ಜಿ ಸಲ್ಲಿಸಿ!

ನಮಸ್ಕಾರ ಸ್ನೇಹಿತರೆ, ನಿಮ್ಮ ಕೆಲಸಕ್ಕೆ ಅಗತ್ಯವಾದ ಪರಿಕರಗಳನ್ನು ಕೊಳ್ಳುವುದು ಅನಿವಾರ್ಯವಾಗಿದೆಯಾ? ಹಣಕಾಸಿನ ಸಮಸ್ಯೆಯಿಂದ ಅಗತ್ಯ ಪರಿಕರಗಳನ್ನು ಕೊಳ್ಳಲು ಸಾದ್ಯವಾಗುತ್ತಿಲ್ಲವಾ?

Labour Card Free Kit In Kannada

ನೀವೇನಾದರೂ ಲೇಬರ್ ಕಾರ್ಡ್ ಹೊಂದಿದ್ದರೆ ಸಾಕು, ಕರ್ನಾಟಕ ಸರ್ಕಾರದಿಂದ ಯಾವುದೇ ಖರ್ಚಿಲ್ಲದೆ ಉಚಿತವಾಗಿ ನಿಮ್ಮ ಕೆಲಸಕ್ಕೆ ಅಗತ್ಯವಾದ ಎಲ್ಲಾ ಪರಿಕರಗಳನ್ನೊಳಗೊಂಡ ಕಿಟ್ ಅನ್ನು ಪಡೆದುಕೊಳ್ಳಬಹುದು.

Labour Card Free Kit In Kannada

ಹೇಗಂತ ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಈ ಲೇಖನದಲ್ಲಿ ಉಚಿತ ಟೂಲ್ ಕಿಟ್ ಪಡೆಯಲು ಹೇಗೆ ಅರ್ಜಿ ಸಲ್ಲಿಸುವುದು? ಅರ್ಜಿ ಸಲ್ಲಿಸಲು ಯಾರು ಅರ್ಹರು? ಸರ್ಕಾರ ನೀಡುವ ಟೂಲ್ ಕಿಟ್ (Labour Card Free Kit) ನಲ್ಲಿ ಏನೆಲ್ಲಾ ಇದೆ? ಎನ್ನುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ನೀವೇನಾದರೂ ಉಚಿತ ಟೂಲ್ ಕಿಟ್ ಅನ್ನು ಪಡೆದುಕೊಳ್ಳಬೇಕಾ? ಹಾಗಿದ್ದರೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಏಕೆಂದರೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಶೀಘ್ರದಲ್ಲಿ ಕೊನೆಗೊಳ್ಳಲಿದೆ.

ಇನ್ನಷ್ಟು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ, ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

ಯೋಜನೆಯ ಪೂರ್ವಾವಲೋಕನ:

ಸಂಸ್ಥೆಯ ಹೆಸರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ಯೋಜನೆಯ ಹೆಸರು ಉಚಿತ ಟೂಲ್ ಕಿಟ್ ವಿತರಣಾ ಯೋಜನೆ (Labour Card Free Kit)
ಅರ್ಹ ಫಲಾನುಭವಿಗಳು ನೋಂದಾಯಿತ ಕಾರ್ಮಿಕರು
ಟೂಲ್ ಕಿಟ್ ನ ಮೌಲ್ಯ ₹20,000
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಉಚಿತ ಟೂಲ್ ಕಿಟ್ ವಿತರಣಾ ಯೋಜನೆ ಎಂದರೇನು?

ಕರ್ನಾಟಕ ಸರ್ಕಾರವು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿತ ಕಾರ್ಮಿಕರಿಗೆಉಚಿತ ಟೂಲ್ ಕಿಟ್ ವಿತರಣೆ (Labour Card Free Kit) ಮಾಡಲು ನಿರ್ಧರಿಸಿದ್ದು, ಈ ಟೂಲ್ ಕಿಟ್ ₹20,000 ಮೌಲ್ಯದ ಪರಿಕರಗಳನ್ನು ಒಳಗೊಂಡಿದೆ.

ಅಸಂಘಟಿತ ವಲಯದಲ್ಲಿ ಕೆಲಸಮಾಡುವ ನಿರ್ಮಾಣ ಕಾರ್ಮಿಕರ ಕೆಲಸಕ್ಕೆ ಅಗತ್ಯವಾದ ಪರಿಕರಗಳನ್ನು ಉಚಿತವಾಗಿ ನೀಡಿ ಅವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.

ಟೂಲ್ ಕಿಟ್ ನೀಡುವುದರ ಹಿಂದಿನ ಉದ್ದೇಶ:

  • ಕಾರ್ಮಿಕರಿಗೆ ಉಚಿತವಾಗಿ ಟೂಲ್ ಕಿಟ್ (Labour Card Free Kit) ಅನ್ನು ನೀಡುವ ಮೂಲಕ ಕಾರ್ಮಿಕರು ಸ್ವ-ಉದ್ಯೋಗ ಪ್ರಾರಂಭಿಸಲು ಅವಕಾಶ ಕಲ್ಪಿಸಿದೆ.
  • ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಯಾವುದೇ ಖರ್ಚಿಲ್ಲದೆ ಕೆಲಸಕ್ಕೆ ಅಗತ್ಯವಾದ ಉಪಕರಣಗಳನ್ನು ಹೊಂದಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
  • ಈ ಒಂದು ಕಿಟ್ ನಲ್ಲಿ ಕೆಲಸಕ್ಕೆ ಅಗತ್ಯವಾದ ಪರಿಕರಗಳನ್ನು ಮಾತ್ರ ಉಚಿತವಾಗಿ ನೀಡದೆ, ಕೆಲಸ ಮಾಡುವ ಸಂದರ್ಭದಲ್ಲಿ ಆಗುವ ಅಪಘಾತವನ್ನು ತಡೆಯಲು ಗ್ಲೋವ್ಸ್, ಶೂಸ್ ಹಾಗೂ ಸುರಕ್ಷತೆ ಹೆಲ್ಮೆಟ್ ನೀಡುವ ಮೂಲಕ ಕಾರ್ಮಿಕರ ಸುರಕ್ಷತೆಗೆ ಒತ್ತು ನೀಡುವುದು.
  • ಕಾರ್ಮಿಕರು ಆರ್ಥಿಕವಾಗಿ ಸದೃಢರಾಗುವಂತೆ ಮಾಡುವುದು ಹಾಗೂ ಸ್ವಾವಲಂಬಿಯಾಗಿ ಜೀವನ ನಡೆಸಲು ನೆರವಾಗುವುದು.

₹20,000 ಮೌಲ್ಯದ ಟೂಲ್ ಕಿಟ್ ಯಾವೆಲ್ಲಾ ಪರಿಕರಗಳನ್ನು ಒಳಗೊಂಡಿದೆ?

ಕರ್ನಾಟಕ ಸರ್ಕಾರವು ನೀಡುತ್ತಿರುವ ಉಚಿತ ಟೂಲ್ ಕಿಟ್ (Labour Card Free Kit0 ₹20,000 ದಷ್ಟು ಬೆಲೆಬಾಳುವ ಒಟ್ಟು 15 ಕ್ಕೂ ಹೆಚ್ಚು ಉಪಕರಣಗಳನ್ನು ಒಳಗೊಡಿದೆ. ಅವುಗಳೆಂದರೆ,

1. ಕಟಿಂಗ್ ಉಪಕರಣಗಳು:

  • ಕೈ ಗರಗಸ
  • ವೈರ್ ಸ್ಟಿಪ್ಪರ್
  • ಹ್ಯಾಕ್ಸಾ ಫ್ರೇಮ್

2. ಹ್ಯಾಂಡ್ ಟೂಲ್ಸ್:

  • ಸುತ್ತಿಗೆ
  • ಪ್ಲಯರ್ಸ್
  • ಸ್ಕ್ರೂ ಡ್ರೈವರ್
  • ಉಳಿಗಳು

3. ಅಳತೆ ಉಪಕರಣಗಳು:

  • ಸ್ಟೀಲ್ ಟೇಪ್
  • ಪ್ಲಮ್ಬ್ ಬಾಬ್
  • ಮಟ್ಟಗೋಲು

4. ಎಲೆಕ್ಟ್ರಿಕಲ್ ಟೂಲ್ಸ್:

  • ಮಲ್ಟಿ ಮೀಟರ್
  • ಟೆಸ್ಟರ್
  • ಪೈಪ್ ರೆಂಚ್

5. ಸಣ್ಣ ತಾಂತ್ರಿಕ ಸಾಧನಗಳು:

  • ಕಟಿಂಗ್ ಮಷೀನ್
  • ಹ್ಯಾಂಡ್ ಡ್ರಿಲ್ಲಿಂಗ್ ಮಷೀನ್

ಕಾರ್ಮಿಕರು ಟೂಲ್ ಕಿಟ್ ಪಡೆಯುದರಿಂದ ಆಗುವ ಪ್ರಯೋಜನ :

  • ಸರ್ಕಾರವು ನೀಡುವ ಉಚಿತ ಟೂಲ್ ಕಿಟ್ (Labour Card Free Kit) ನಲ್ಲಿರುವ ಉಪಕರಣಗಳು ಆಧುನೀಕೃತ ಹಾಗೂ ಗುಣಮಟ್ಟದ್ದಾಗಿರುವುದರಿಂದ ತಮ್ಮ ಕೆಲಸದಲ್ಲಿ ದಕ್ಷತೆಯನ್ನು ಹೆಚ್ಚಿಸಬಹುದು.
  • ಕಾರ್ಮಿಕರು ದುಬಾರಿ ಮೊತ್ತದ ಉಪಕರಣಗಳನ್ನು ಈ ಒಂದು ಟೂಲ್ ಕಿಟ್ ಮೂಲಕ ಉಚಿತವಾಗಿ ಪಡೆದುಕೊಳ್ಳಬಹುದು.
  • ಕೆಲಸಕ್ಕೆ ಅಗತ್ಯವಾದ ಉಪಕರಣ ಇಲ್ಲದಾಗ ಕಾರ್ಮಿಕರು ಇತರರ ಕೈ ಕೆಳಗೆ ಕೆಲಸ ಮಾಡುವ ಬದಲು ಟೂಲ್ ಕಿಟ್ ನಿಂದ ಸ್ವಂತ ಉಪಕರಣಗಳನ್ನು ಪಡೆದುಕೊಳ್ಳುವ ಮೂಲಕ ಸ್ವಂತವಾಗಿ ಉದ್ಯೋಗ ಮಾಡಬಹುದು.

ಟೂಲ್ ಕಿಟ್ ಪಡೆಯಲು ಅರ್ಹರಾದ ಫಲಾನುಭವಿಗಳು ಯಾರು?

  • ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಲೇಬರ್ ಕಾರ್ಡ್ ಹೊಂದಿರಬೇಕು.
  • ಲೇಬರ್ ಕಾರ್ಡ್ ಅನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ರಿನಿವಲ್ ಮಾಡಿಸಿರಬೇಕು ಅಂದರೆ ಲೇಬರ್ ಕಾರ್ಡ್ ಸಕ್ರಿಯವಾಗಿರಬೇಕು.
  • ಅರ್ಜಿದಾರರು ಕನಿಷ್ಠ 18 ರಿಂದ ಗರಿಷ್ಟ 55 ವರ್ಷ ವಯೋಮಿತಿ ಹೊಂದಿರಬೇಕು.
ಮುಖ್ಯ ಸೂಚನೆ: “ಲೇಬರ್ ಕಾರ್ಡ್ ಹೊಂದಿರುವವರು ಕೇವಲ ಒಂದು ಬಾರಿ ಮಾತ್ರ ಟೂಲ್ ಕಿಟ್ ಪಡೆಯಲು ಅರ್ಹರಾಗಿರುತ್ತಾರೆ.”

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಲೇಬರ್ ಕಾರ್ಡ್
  • ವಯಸ್ಸಿನ ಪುರಾವೆ
  • ಪಾಸ್ಪೋರ್ಟ್ ಅಳತೆಯ ಫೋಟೋ
  • ಪಡಿತರ ಚೀಟಿ
  • ವಾಸಸ್ಥಳ ಪ್ರಮಾಣ ಪತ್ರ
  • ಉದ್ಯೋಗ ಪ್ರಮಾಣಪತ್ರ
  • ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:

ಟೂಲ್ ಕಿಟ್ ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತವನ್ನು ಫಾಲೋ ಮಾಡಿ.

  • ಹೊಸ ಬಳಕೆದಾರರಾಗಿದ್ದರೆ, ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ನೋಂದಣಿ ಪೂರ್ಣಗೊಳಿಸಿ.
  • ನಂತರ, ಸರ್ಚ್ ಬಾಕ್ಸ್ ನಲ್ಲಿ ಕಾರ್ಮಿಕ ಕಲ್ಯಾಣ ವಿಭಾಗವನ್ನು ಆಯ್ಕೆಮಾಡಿ.
  • ಟೂಲ್ ಕಿಟ್ ವಿತರಣಾ ಯೋಜನೆಯನ್ನು ಆಯ್ಕೆ ಮಾಡಿ.
  • ನಂತರ ಅರ್ಜಿ ನಮೂನೆಯ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿರುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ: “ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧಿಕೃತ ವೆಬ್ಸೈಟ್ https://kbocwwb.karnataka.gov.in/ ಗೆ ಭೇಟಿ ನೀಡಿ.”

ಕೊನೆಯದಾಗಿ:

ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರು ಕರ್ನಾಟಕ ಸರ್ಕಾರವು ನೀಡುತ್ತಿರುವ ಉಚಿತ ಟೂಲ್ ಕಿಟ್ ಅನ್ನು ಪಡೆಯಲು ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಟೂಲ್ ಕಿಟ್ ಅನ್ನು ಪಡೆದುಕೊಂಡು ಸ್ವಂತವಾಗಿ ಉದ್ಯೋಗವನ್ನು ಪ್ರಾರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಿರಿ. ನೀವು ಉತ್ತಮ ಗುಣಮಟ್ಟದ ಜೀವನ ನಡೆಸಲು ಯೋಜನೆ ನೆರವಾಗಬಹುದು.

ಉಚಿತವಾಗಿ ಟೂಲ್ ಕಿಟ್ ಪಡೆದು ಉಪಕರಣಗಳನ್ನು ಕೊಳ್ಳಲು ವ್ಯಯಿಸುವ ಹಣವನ್ನು ಉಳಿತಾಯ ಮಾಡಿ ಹಾಗೂ ನಿಮ್ಮ ಕೆಲಸವನ್ನು ಸುಲಭವಾಗಿಸಿಕೊಳ್ಳಿ.


ಇತರೆ ಯೋಜನೆಯ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *