ಸರ್ಕಾರದ ಈ ನಿರ್ಧಾರದಿಂದ ನಿರುದ್ಯೋಗಿಗಳಿಗೆ 2026ನೇ ಸಾಲಿನಲ್ಲಿ ಸಿಗುತ್ತೆ ಹೊಸ ಹೊಸ ಉದ್ಯೋಗಾವಕಾಶ. ಹೌದು ನೀವು ಕೇಳುತ್ತಿರುವುದು ನೋಡುತ್ತಿರುವುದು ನಿಜ!. ಕರ್ನಾಟಕ ರಾಜ್ಯದಲ್ಲಿ ಅನೇಕ ಬ್ರಾಂಡ್ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಮುಚ್ಚಿ ಹೋಗುತ್ತಿರುವುದನ್ನ ಪ್ರತಿಯೊಬ್ಬರ ಗಮನಕ್ಕೆ ಬಂದಿದೆ.
KSDL (KARNATAKA SOAPS AND DETERGENTS LIMITED)
ಅದರಲ್ಲಿ ಅನೇಕ ಕಾರ್ಮಿಕರು ಕೆಲಸವನ್ನು ಮಾಡುತ್ತಿದ್ದರು ಸಹ ಸರ್ಕಾರ ಅನೇಕ ದೊಡ್ಡ ದೊಡ್ಡ ಸಂಸ್ಥೆಗಳನ್ನ ಮುಚ್ಚಿ ಕಾರ್ಮಿಕರನ್ನ ಕೆಲಸದಿಂದ ತೆಗೆದು ಹಾಕಿದೆ. ಇಂಥ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಮತ್ತು ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಾ ಅಲೆದಾಡುತ್ತಿರುವ ಯುವಕರ ಕಷ್ಟವನ್ನು ಸರ್ಕಾರ ತಮ್ಮ ಗಮನಕ್ಕೆ ತೆಗೆದುಕೊಂಡು.
“ಇದೀಗ ರಾಜ್ಯದ ಎರಡು ಜಿಲ್ಲೆಯಲ್ಲಿ ಮೈಸೂರು ಸ್ಯಾಂಡಲ್ ಸೋಪ್ (KSDL) ಹೊಸ ಫ್ಯಾಕ್ಟರಿ ಆರಂಭಿಸಲು ಸಜ್ಜಾಗಿದೆ”. ಅತಿ ಮುಖ್ಯವಾಗಿ ಕರ್ನಾಟಕದ ಎರಡು ಜಿಲ್ಲೆಯಲ್ಲಿ ಈ ಬ್ರಾಂಡ್ ಗಳು ಓಪನ್ ಆಗುತ್ತಿರುವುದು ಹಾಗೆ ಫೆಬ್ರವರಿ 10 ಅಂದ್ರೆ ಇಂದಿನಿಂದ ಅಂದರೆ ಇಂದಿನಿಂದ ನಟಿ ತಮನ್ನಾ ಮೈಸೂರು ಸ್ಯಾಂಡಲ್ ಸೋಪ್ ನ ಹೊಸ ರಾಯಭಾರಿ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಭರ್ಜರಿ ಗುಡ್ ನ್ಯೂಸ್!
KSDL : ಕೆಲವೇ ದಿನಗಳಲ್ಲಿ ಆರಂಭವಾಗುವ ಈ ಫ್ಯಾಕ್ಟರಿಯಲ್ಲಿ ಸಾವಿರಾರು ಯುವಕ-ಯುವತಿಯರಿಗೆ ಇಲ್ಲಿ ಕೆಲಸ ಸಿಗುವುದು ಗ್ಯಾರಂಟಿ. ಇಷ್ಟೆಲ್ಲಾ ಎಜುಕೇಶನ್ ಪಡೆದರು ಯಾವುದೇ ಉದ್ಯೋಗ ಸಿಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಸದಾ ಕಾಡುತ್ತಿದೆಯಾ?. ಸರ್ಕಾರ ಯಾವುದೋ ಯೋಜನೆಗೆ ಎಷ್ಟೆಷ್ಟು ಹಣವನ್ನ ಖರ್ಚು ಮಾಡುತ್ತೆ, ನಮ್ಮಂತ ಯುವಕರಿಗೆ ಹೊಸ ಉದ್ಯೋಗವನ್ನು ಏಕೆ ಸೃಷ್ಟಿಸುತ್ತಿಲ್ಲ?. ನಮ್ಮ ಕಷ್ಟಗಳು ಯಾವ ಸರ್ಕಾರಕ್ಕೂ ಕಾಣುಸುತ್ತಿಲ್ಲವೇ? ಎನ್ನುವ ನಿಮ್ಮ ಪ್ರಶ್ನೆಗಳಿಗೂ ಸರ್ಕಾರ ಇದೀಗ ಉತ್ತರ ಕೊಟ್ಟಿದೆ.
ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನಾ ಘಟಕಗಳನ್ನು ಕರ್ನಾಟಕದಲ್ಲಿ ಹೆಚ್ಚಿಸಿ ನಿರುದ್ಯೋಗಿಗಳ ಬದುಕಿಗೆ ಒಂದು ಆಶಾಕಿರಣ ಮೂಡಿಸಿದೆ. ಮುಖ್ಯವಾಗಿ ಮೈಸೂರು ಸ್ಯಾಂಡಲ್ ಸೋಪ್ (KSDL) ಉತ್ಪಾದನಾ ಫ್ಯಾಕ್ಟರಿಯನ್ನ ಹೆಚ್ಚಿಸಬೇಕೆನ್ನುವ ಪ್ರಮುಖ ಉದ್ದೇಶದೊಂದಿಗೆ ಹಾಗೆಯೇ ಕರ್ನಾಟಕದಲ್ಲಿನ ನಿರುದ್ಯೋಗಿಗಳಿಗೆ ಹೊಚ್ಚಹೊಸ ಉದ್ಯೋಗಗಳನ್ನ ಕಲ್ಪಿಸಿ ಕೊಡಬೇಕೆನ್ನುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ಸಾಬೂನು, ಮರ್ಜುಕುಗಳ ನಿಯಮಿತಿ (KSDL) ಮುಂದಾಗಿದೆ.
ಕರ್ನಾಟಕದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನಾ ಘಟಕ ಆರಂಭವಾಗಿದ್ದು ಯಾವಾಗ ಗೊತ್ತಾ ?
2026ರಲ್ಲಿ ಯುವ ಪೀಳಿಗೆಗೆ ಉದ್ಯೋಗಗಳು ಕರ್ನಾಟಕದಲ್ಲಿ ಸಿಗುವ ಗ್ಯಾರಂಟಿ ಯೊಂದಿಗೆ ಮೈಸೂರು ಸ್ಯಾಂಡಲ್ ಸೋಪ್ ಬ್ರಾಂಡ್ ಯಾವಾಗ ಆರಂಭವಾಯಿತು ತಿಳಿಯೋಣ.
ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರು ದೂರದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಮೈಸೂರು ಸ್ಯಾಂಡಲ್ ಸೋಪ್ (KSDL) ಘಟಕವು ನಿರಂತರವಾಗಿ ತನ್ನ ಬೆಳವಣಿಗೆಯನ್ನು ಇದುವರೆಗೂ ಸಾಧಿಸುತ್ತಾ ಬಂದಿದೆ. ಇನ್ನು ಸ್ಪಷ್ಟವಾಗಿ ಹೇಳುವುದಾದರೆ ಸುಮಾರು 1916ರಲ್ಲಿ ಈ ಸಾಬೂನು ಉತ್ಪಾದನಾ ಘಟಕವು ಅಧಿಕೃತವಾಗಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು
“ಆತ್ಮೀಯರೇ ಇನ್ನಷ್ಟು ಮುಖ್ಯ ಮಾಹಿತಿಯೊಂದಿಗೆ ಈ ಕೆಳಗೆ ನೋಡ್ತಾ ಹೋಗೋಣ ಬನ್ನಿ”
ಮೈಸೂರು ಸ್ಯಾಂಡಲ್ ಸೋಪ್ ಹೊಸ ಫ್ಯಾಕ್ಟರಿ ಆರಂಭದಿಂದ ಆಗುವ ಲಾಭ ಏನು ಗೊತ್ತ ?
ಪ್ರಮುಖವಾಗಿ ಸರ್ಕಾರ ರಾಜ್ಯದಲ್ಲಿ ಸೂಪ್ ಉತ್ಪಾದನಾ ಘಟಕವನ್ನು ಆರಂಭಿಸುವ ನಿರ್ಧಾರದಿಂದ ನಿರುದ್ಯೋಗಿಗಳಿಗೆ ಮತ್ತು ಕರ್ನಾಟಕದಂತ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಯಾವ ರೀತಿ ಎಂಬುದನ್ನ ನೋಡ್ತಾ ಹೋಗೋಣ.
ಯುವಕ-ಯುವತಿಯರಿಗೆ ಉದ್ಯೋಗ : ರಾಜ್ಯದ ನಿರುದ್ಯೋಗದ ದೊಡ್ಡ ಸಮಸ್ಯೆಗೆ ಪರಿಹಾರ ಸಿಗುತ್ತದೆ ಏಕೆಂದರೆ ಸಾವಿರಾರು ಯುವಕ ಯುವತಿಯರು ಯುವತಿಯರಿಗೆ ಮೇರಾ ಉದ್ಯೋಗ ಸಿಗುವುದರ ಜೊತೆಗೆ ಎಸ್ ಎಲ್ ಸಿ, ಪಿಯುಸಿ, ಡಿಪ್ಲೋಮೋ, ಐಟಿಐ, ಡಿಗ್ರಿ ಹೊಂದಿರುವವರಿಗು ಅವಕಾಶ ಹಾಗೆ ಇಷ್ಟೆಲ್ಲ ಓದಿದರೂ ಕೆಲಸ ಸಿಗಲಿಲ್ಲ ಅನ್ನುವ ಚಿಂತೆ ಬಹಳ ಮಟ್ಟಿಗೆ ಕಡಿಮೆಯಾಗುತ್ತಾ ಬರುತ್ತದೆ.
ಕರ್ನಾಟಕದ ಆರ್ಥಿಕ ಪರಿಸ್ಥಿತಿಗೂ ದೊಡ್ಡಬಲ : ಇಂತಹ ಕರ್ನಾಟಕ ಸರ್ಕಾರದ ಬ್ರಾಂಡ್ ಗಳನ್ನ ಆರಂಭಿಸುವುದರಿಂದ(start) ರಾಜ್ಯಕ್ಕೆ ಆದಾಯದ ಮೂಲ ಹೆಚ್ಚಾಗುತ್ತದೆ. ಹಾಗೆ ಸ್ಥಳೀಯ ವ್ಯಾಪಾರ, ಸಾರಿಗೆ, ಕಚ್ಚಾ ವಸ್ತು ಸರಬರಾಜು ಹೀಗೆ ಇನ್ನಿತರ ಕ್ಷೇತ್ರಗಳು ಬೆಳವಣಿಗೆ ಆಗುವುದರಿಂದ ಕರ್ನಾಟಕ ಆರ್ಥಿಕ ಪರಿಸ್ಥಿತಿಗೂ ದೊಡ್ಡ ಲಾಭ ಸಿಕ್ಕಂತಾಗುತ್ತದೆ. ಅಷ್ಟೇ ಅಲ್ಲದೆ ಎಲ್ಲಿ ಸಾಬೂನು ಘಟಕಗಳು ಆರಂಭವಾಗುತ್ತದೆಯೋ ಆ ಜಿಲ್ಲೆಗಳು ಕೂಡ ಅಭಿವೃದ್ಧಿ ಕಡೆ ಮುಖ ಮಾಡುತ್ತವೆ.
ಮುಚ್ಚಿದ ಕಂಪನಿಗಳ ಕಾರ್ಮಿಕರಿಗೆ ಮರುಜೀವನ : ಕರ್ನಾಟದ ರಾಜ್ಯದಲ್ಲಿ ಅನೇಕ ಕಾರಣಗಳಿಂದ ಸರ್ಕಾರ ಸ್ಟೇಟ್ ಆಗ್ರೋ-ಕಾರ್ನ್ ಪ್ರೊಡಕ್ಟ್ಸ್ ಲಿಮಿಟೆಡ್, ಮೈಸೂರು ಪೇಪರ್ ಮಿಲ್ಸ್ (MPML), ಮೈಸೂರು ಲ್ಯಾಂಪ್ಸ್ ಲಿಮಿಟೆಡ್ ಹೀಗೆ ಇನ್ನು ಅನೇಕ ಘಟಕಗಳನ್ನ ಮುಚ್ಚಿದೆ ಇದರಿಂದ ಅನೇಕ ಕಾರ್ಮಿಕರು ನಿರುದ್ಯೋಗಿಗಳಾಗಿದ್ದರೆ ಈ ಸಾಬೂನು ಘಟಕ ಆರಂಭದಿಂದ ಮತ್ತೆ ಇವರಿಗೆ ಉದ್ಯೋಗ ಸಿಕ್ಕಂತಾಗುತ್ತದೆ.
ಕರ್ನಾಟಕ ಸರ್ಕಾರದ ಬ್ರಾಂಡ್ ಗಳಿಗೆ ಹೊಸ ಶಕ್ತಿ : ಸರ್ಕಾರವು ಇಂತಹ ಘಟಕಗಳನ್ನು ಓಪನ್ ಮಾಡಿ ಹೊಸಹೊಸ ವಸ್ತುಗಳನ್ನ, ಸೋಪ್ ಗಳನ್ನ ಅಥವಾ ಇನ್ನಿತರ ಗೃಹ ಬಳಕೆಯ ಐಟಂ ಗಳನ್ನ ಕರ್ನಾಟಕ ರಾಜ್ಯದಲ್ಲಿಯೇ ಉತ್ಪಾದನೆ ಮಾಡುವುದರಿಂದ ದೇಶ-ವಿದೇಶದಲ್ಲಿ ಬೇಡಿಕೆ ಹೆಚ್ಚಾಗುವುದರ ಜೊತೆಗೆ ಕರ್ನಾಟಕ ರಾಜ್ಯಕ್ಕೆ ತನ್ನದೇ ಆದ ಒಂದು ಗೌರವ ಸಿಗುತ್ತದೆ.
ಯುವತಿಯರಿಗೆ ಮತ್ತು ಮಹಿಳೆಯರಿಗೆ ವಿಶೇಷ ಅವಕಾಶ : ಈ ಮೈಸೂರ್ ಸ್ಯಾಂಡಲ್ ಸೋಪ್ (KSDL)ಉತ್ಪಾದನಾ ಘಟಕದಲ್ಲಿ ಮಹಿಳೆಯರಿಗೆ ಹಾಗೆ ಯುವತಿಯರಿಗೆ ಪ್ಯಾಕಿಂಗ್ ಗುಣಮಟ್ಟ ಪರೀಕ್ಷೆ ಮತ್ತು ಆಡಳಿತ ವಿಭಾಗದಲ್ಲಿ ಮಹಿಳಾ ಉದ್ಯೋಗವಕಾಶಗಳು ಹೆಚ್ಚು ಆಗುವ ಸಾಧ್ಯತೆ ಇರುವುದರಿಂದ ಇದೊಂದು ಉತ್ತಮ ಅವಕಾಶ ಅಂದರೆ ತಪ್ಪಾಗುವುದಿಲ್ಲ.
ಯುವಕರಿಗೆ ಸರ್ಕಾರ ವಿಶ್ವಾಸ ಮತ್ತು ಆಶಾಕಿರಣವನ್ನು ಮೂಡಿಸುತ್ತದೆ : ಈ ಘಟಕಗಳನ್ನು 2026ರಲ್ಲಿ ಆರಂಭಿಸಿಯಲು ನಿರ್ಧರಿಸಿದ ಸರ್ಕಾರ ಯುವಕರಲ್ಲಿ ಸರ್ಕಾರ ನಮ್ಮನ್ನ ಮರೆತಿಲ್ಲ ಎನ್ನುವ ಭರವಸೆಯನ್ನ ಮೂಡಿಸುತ್ತದೆ. ಅಷ್ಟೇ ಅಲ್ಲದೆ ಯುವಕರು ಉದ್ಯೋಗವನ್ನು ಹುಡುಕಿ ತಮ್ಮ ರಾಜ್ಯ ಬಿಟ್ಟು ಹೊರಗೆ ಹೋಗುವ ಪರಿಸ್ಥಿತಿ ಅನಿವಾರ್ಯತೆಗಳು ಕರ್ನಾಟಕದಲ್ಲಿ ಕಡಿಮೆಯಾಗುತ್ತಾ ಬರುತ್ತವೆ ಹಾಗೆ ತಮ್ಮ ಜೀವನವನ್ನು ಸ್ವಾಭಿಮಾನವಾಗಿ ಕಟ್ಟಿಕೊಳ್ಳುವ ಅವಕಾಶ ದೊರೆತಂತಾಗುತ್ತದೆ.
ಫೆಬ್ರವರಿ10, 2026ರ ಮುಖ್ಯ ಹೈಲೈಟ್ಸ್ :
| ಮಾಹಿತಿ ವಿಭಾಗ | ವಿವರ |
|---|---|
| ಯೋಜನೆಯ ಹೆಸರು | ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನಾ ಘಟಕ ವಿಸ್ತರಣೆ (KSDL) |
| ಜಾರಿಗೆ ಬರಲಿರುವ ವರ್ಷ | 2026 |
| ಘಟಕ ಆರಂಭವಾಗುವ ಸ್ಥಳ | ಕರ್ನಾಟಕದ ಎರಡು ಜಿಲ್ಲೆಗಳು |
| ನಿರ್ಧಾರ ಕೈಗೊಂಡವರು | ಕರ್ನಾಟಕ ಸರ್ಕಾರ |
| ಅನುಷ್ಠಾನ ಸಂಸ್ಥೆ | ಕರ್ನಾಟಕ ಸಾಬೂನು ಮತ್ತು ಮರ್ಜುಕುಗಳ ನಿಯಮಿತಿ (KSDL) |
| ಪ್ರಮುಖ ಉದ್ದೇಶ | ಉತ್ಪಾದನೆ ಹೆಚ್ಚಳ & ನಿರುದ್ಯೋಗ ನಿವಾರಣೆ |
| ನಿರೀಕ್ಷಿತ ಉದ್ಯೋಗಾವಕಾಶ | ಸಾವಿರಾರು ಯುವಕ–ಯುವತಿಯರಿಗೆ ನೇರ ಉದ್ಯೋಗ |
| ಅರ್ಹತೆ ಹೊಂದಿರುವವರು | SSLC, PUC, ITI, ಡಿಪ್ಲೊಮಾ, ಡಿಗ್ರಿ |
| ಲಾಭ ಪಡೆಯುವ ಪ್ರಮುಖ ವರ್ಗ | ನಿರುದ್ಯೋಗಿಗಳು & ಮುಚ್ಚಿದ ಕಂಪನಿಗಳ ಕಾರ್ಮಿಕರು |
| ಮಹಿಳೆಯರಿಗೆ ಅವಕಾಶ | ಪ್ಯಾಕಿಂಗ್, ಗುಣಮಟ್ಟ ಪರೀಕ್ಷೆ, ಆಡಳಿತ ವಿಭಾಗ |
| ರಾಜ್ಯದ ಆರ್ಥಿಕ ಲಾಭ | ಆದಾಯ ವೃದ್ಧಿ, ಕೈಗಾರಿಕಾ ಬೆಳವಣಿಗೆ |
| ಸ್ಥಳೀಯ ಅಭಿವೃದ್ಧಿ | ವ್ಯಾಪಾರ, ಸಾರಿಗೆ, ಕಚ್ಚಾ ವಸ್ತು ಪೂರೈಕೆ ಕ್ಷೇತ್ರಗಳು |
| ಸರ್ಕಾರಿ ಬ್ರಾಂಡ್ ಲಾಭ | ದೇಶ–ವಿದೇಶಗಳಲ್ಲಿ ಮೈಸೂರು ಸ್ಯಾಂಡಲ್ ಬೇಡಿಕೆ ಹೆಚ್ಚಳ |
| ಯುವಕರ ಮೇಲೆ ಪರಿಣಾಮ | ಸರ್ಕಾರದ ಮೇಲೆ ವಿಶ್ವಾಸ, ಉದ್ಯೋಗದ ಆಶಾಕಿರಣ |
| ವಲಸೆ ಮೇಲೆ ಪರಿಣಾಮ | ಉದ್ಯೋಗಕ್ಕಾಗಿ ರಾಜ್ಯ ಬಿಟ್ಟು ಹೋಗುವಿಕೆ ಕಡಿಮೆ |
| ಬ್ರಾಂಡ್ ರಾಯಭಾರಿ | ನಟಿ ತಮನ್ನಾಇಂದಿನಿಂದ (ಫೆಬ್ರವರಿ 10ರಿಂದ) |
ಘಟಕ ಆರಂಭವಾಗುವ ಸ್ಥಳಗಳು ಯಾವುವು ?
ರಾಜ್ಯದ ಎರಡು ಜಿಲ್ಲೆಯಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಹೊಸ ಉತ್ಪಾದನಾ ಘಟಕ ಆರಂಭಿಸಲು ಕರ್ನಾಟಕ ಸರ್ಕಾರ ತಮ್ಮ ನಿರ್ಧಾರವನ್ನು ಕೈಗೊಂಡಿದೆ. “ವಿಜಯಪುರ ಮತ್ತು ಬೆಂಗಳೂರು ಗ್ರಾಮಂತರ ಜಿಲ್ಲೆಯ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ” ಸದ್ಯದಲ್ಲೇ ಸಾಬೂನು ಫ್ಯಾಕ್ಟರಿಗಳು ಆರಂಭವಾಗಲಿದೆ ಎಂದು ಸಚಿವ ಎಂ ಬಿ ಪಾಟೀಲ್ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಹಾಗೆ ಹಾಗೆ ಈ ಸಂದರ್ಭದಲ್ಲಿ ಅಗತ್ಯ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜೊತೆಗೆ ಸದ್ಯದಲ್ಲೇ 25 ರಿಂದ 30 ಕೋಟಿ ರೂ ಅನುಪಾತದಲ್ಲಿ ಉತ್ಪಾದನೆ ಯಾಗುವ ಸಾಬೂನುಗಳ ವಾಹಿವಾಟನ್ನ ಮುಂದಿನ ದಿನಗಳಲ್ಲಿ ಹೆಚ್ಚು ಮಾಡಬೇಕೆನ್ನುವ ಪ್ರಮುಖ ಉದ್ದೇಶ ಸರ್ಕಾರದಾಗಿದೆ ಎಂದು ಸಚಿವರು ಪ್ರೆಸ್ ಮೀಟ್ ನಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಅನೇಕ ಯುವ ಪೀಳಿಗೆ ಉದ್ಯೋಗ ಹುಡುಕುತ್ತಾ ಅಲೆದಾಡುತ್ತಿದ್ದಾರೆ, ಇದನ್ನ ನಾವು ಗಮನ ಹರಿಸಿ ಇದೀಗ ಮೈಸೂರು ಸ್ಯಾಂಡಲ್ ಸೋಪ್ (KSDL) ಘಟಕವನ್ನ ಆರಂಭಿಸಿ ಉದ್ಯೋಗ ಕೊಡುವ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಸರ್ಕಾರದ ಸಚಿವರು ಚರ್ಚೆ ನಡೆಸಿದ್ದೇವೆ ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕದ ಎರಡು ಜಿಲ್ಲೆಯಲ್ಲಿ ಸಾಬೂನು ಘಟಕಗಳು ಸ್ಥಾಪನೆ ಆಗುತ್ತವೆ ಹಾಗೆ ಉದ್ಯೋಗಗಳು ಸಿಗುತ್ತವೆ ಎಂದು ಹೇಳಿಕೆ ನೀಡಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ವರ್ಷದ ಆದಾಯ 2030ರ ವೇಳೆಗೆ ಎಷ್ಟು ಗುರಿ ಹೊಂದಿದೆ ಗೊತ್ತಾ ? ತಿಳಿದರೆ ಶಾಕ್ ಆಗೋದು ಗ್ಯಾರೆಂಟಿ!
ಕರ್ನಾಟಕದ ಹಿಂದಿನ ಕಾಲದಿಂದಲೂ ಹೆಮ್ಮೆಯ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸಾಬೂನ್ (KSDL) ಅನ್ನ ವಿಶಿಷ್ಟ ರೂಪದೊಂದಿಗೆ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಉತ್ಪದನಾ ಘಟಕದ ವರ್ಷದ ಆದಾಯವನ್ನ ಸುಮಾರು 5000 ಕೋಟಿ ಅಷ್ಟು ಹೆಚ್ಚಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು ಇದಕ್ಕೆ ಪೂರಕವಾಗಿ ಯುವಜನರನ್ನ ತಲುಪಲು ವ್ಯಾಪಾರ ಪ್ರಚಾರ ಆಂದೋಲನ ನಡೆಸಲಾಗುತ್ತಿದೆ.
ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ತಮನ್ನಾ ಅವರನ್ನು ಸ್ಯಾಂಡಲ್ ಸೂಪ್ (KSDL) ಗಳ ಹೊಸ ರಾಯಭಾರಿ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ನಮ್ಮ ಹೆಮ್ಮೆಯ ದೇಶದಲ್ಲಿ ಮೈಸೂರು ಸ್ಯಾಂಡಲ್ ಸೋಪ್ (KSDL) ಒಳಗೊಂಡು ಸಂಸ್ಥೆಯ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ವಿಜಯನಗರ ಮತ್ತು ಡಾಬಸ್ ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಉತ್ಪಾದನೆ ಯಾಗುವ ವಸ್ತುಗಳು :-
ಮೈಸೂರು ಸ್ಯಾಂಡಲ್ ಸೋಪ್ (KSDL) ಗಳಿಗೆ ಸಂಬಂಧಪಟ್ಟಂತೆ ಸೌಂದರ್ಯವರ್ಧಕ, ಸಾಬೂನು ಮತ್ತುಮಾರ್ಜಕ ಈ ಮೂರು ವಿಭಾಗಗಳಲ್ಲಿ ಸರ್ವಕಾಲಿಕ ಉತ್ಪಾದನೆ ಮಾಡುತ್ತದೆ. ಇಂದಿನ ದಿನಗಳಲ್ಲಿ ಸುಮಾರು 57 ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಹಾಗೆ ಪ್ರಚಾರ ರಾಯಭಾರಿಯಾಗಿರುವ ತಮನ್ನಾ ಸಂತೆಯ ಉತ್ಪನ್ನಗಳ ಜಾಹೀರಾತು ಹಾಗೂ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಸಚಿವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಪ್ರಮುಖ ಸೋಪುಗಳು (Toilet Soaps)
- ಮೈಸೂರು ಸ್ಯಾಂಡಲ್ ಮಿಲೆನಿಯಮ್ (Mysore Sandal Millennium – ಐಷಾರಾಮಿ)
- ಮೈಸೂರು ಸ್ಯಾಂಡಲ್ ಹರ್ಬಲ್ (Mysore Sandal Herbal)
- ಮೈಸೂರು ಸ್ಯಾಂಡಲ್ ಗೋಲ್ಡ್ (Mysore Sandal Gold)
- ವೇವ್ ಸೋಪ್ – ಹಳದಿ (Wave Soap – Yellow)
- ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap)
- ಮೈಸೂರು ಸ್ಯಾಂಡಲ್ ಕ್ಲಾಸಿಕ್ (Mysore Sandal Classic)
- ವೇವ್ ಸೋಪ್ – ಹಸಿರು (Wave Soap – Green)
- ಮೈಸೂರು ರೋಸ್ ಸೋಪ್ (Mysore Rose Soap)
- ಮೈಸೂರು ಜಾಸ್ಮಿನ್ ಸೋಪ್ (Mysore Jasmine Soap)
- ಮೈಸೂರು ಲ್ಯಾವೆಂಡರ್ ಸೋಪ್ (Mysore Lavender Soap)
- ಸೌಭಾಗ್ಯ ಸೋಪ್ (Saubhagya Soap)
- ವೇವ್ ಸೋಪ್ – ನೀಲಿ (Wave Soap – Blue)
- ಸ್ಯಾಂಡಲ್ ಕೇಸರಿ ಸೋಪ್ (Sandal Saffron Soap)
2. ಮಕ್ಕಳ ಉತ್ಪನ್ನಗಳು (Baby Care)
- ಮೈಸೂರು ಸ್ಯಾಂಡಲ್ ಬೇಬಿ ಆಯಿಲ್ (Baby Oil)
- ಮೈಸೂರು ಸ್ಯಾಂಡಲ್ ಬೇಬಿ ಸೋಪ್ (Baby Soap)
- ಮೈಸೂರು ಸ್ಯಾಂಡಲ್ ಬೇಬಿ ಪೌಡರ್ (Baby Powder)
3. ಸೌಂದರ್ಯವರ್ಧಕಗಳು (Personal Care)
- ಶುಚಿಗೊಳಿಸುವಿಕೆ: ಸ್ಯಾಂಡಲ್ ಬಾಡಿ ವಾಶ್, ಲಿಕ್ವಿಡ್ ಹ್ಯಾಂಡ್ ವಾಶ್ (ಬಾಟಲ್ ಮತ್ತು ಪೌಚ್).
- ಲೋಶನ್‌ಗಳು: ಮಾಯಿಶ್ಚರೈಸಿಂಗ್ ಲೋಶನ್, ಸ್ಯಾಂಡಲ್ ಫೇಸ್ ವಾಶ್, ಸ್ಯಾಂಡಲ್ ಶಾಂಪೂ.
- ಟಾಲ್ಕಂ ಪೌಡರ್: ಸ್ಯಾಂಡಲ್ ಟಾಲ್ಕ್, ರೋಸ್ ಟಾಲ್ಕ್, ಮಿಲೆನಿಯಮ್ ಟಾಲ್ಕ್.
4. ಡಿಟರ್ಜೆಂಟ್ಸ್ (Home Care)
- ಲಿಕ್ವಿಡ್ ಡಿಟರ್ಜೆಂಟ್ (Liquid Detergent)
- ಪಾಯಿಂಟ್ ಬಾರ್ (Point Detergent Bar)
- ಪಾಯಿಂಟ್ ಪೌಡರ್ (Point Detergent Powder)
- ಸೂಪರ್ ಪಾಯಿಂಟ್ ಸೋಪ್ (Super Point Soap)
5. ಪೂಜೆ ಮತ್ತು ಸುಗಂಧ ದ್ರವ್ಯಗಳು (Incense & Oils)
- ಧೂಪ: ಸ್ಯಾಂಡಲ್ ಧೂಪದ ಶಂಕುಗಳು (Cones) ಮತ್ತು ಧೂಪದ ಕಡ್ಡಿಗಳು.
- ಅಗರಬತ್ತಿಗಳು: ಸ್ಯಾಂಡಲ್, ಪಾರಿಜಾತ, ಮಲ್ಲಿಗೆ, ಕಸ್ತೂರಿ, ಮತ್ತು ಹೆರಿಟೇಜ್ ಅಗರಬತ್ತಿ.
- ಶುದ್ಧ ಶ್ರೀಗಂಧದ ಎಣ್ಣೆ (Pure Sandalwood Oil – 5ml, 10ml, 25ml)
6. ವಿಶೇಷ ವಸ್ತುಗಳು (Specialty Items)
- ಉಡುಗೊರೆ ಪ್ಯಾಕ್‌ಗಳು: ಸೋಪುಗಳ ಮಿಶ್ರಣವಿರುವ ಗಿಫ್ಟ್ ಬಾಕ್ಸ್‌ಗಳು.
- ಶ್ರೀಗಂಧದ ಕೆತ್ತನೆಗಳು: ಸಣ್ಣ ವಿಗ್ರಹಗಳು ಮತ್ತು ಕಲಾಕೃತಿಗಳು.
ಇದೇ ರೀತಿ ಇನ್ನೂ ಹೆಚ್ಚಿನ ಬಗೆಯ ಉತ್ಪನ್ನಗಳನ್ನ ತಯಾರಿಸುವ ನಿತಿನಲ್ಲಿ ಕರ್ನಾಟಕದಲ್ಲಿ ಮತ್ತೆ 2026 ನೇ ಸಾಲಿನಲ್ಲಿ ಮೈಸೂರ್ ಸ್ಯಾಂಡಲ್ ಸೋಪ್ (KSDL) ಘಟಕ ಆರಂಭಿಸಲು ಹಾಗೆಯೇ ಉದ್ಯೋಗಗಳನ್ನ ಯುವಕರಿಗೆ ಕೊಡುವ ದೃಷ್ಟಿಯಿಂದ ಹೊಸ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿಕೊಂಡಿದೆ.
ಯಾವ ವಿದ್ಯಾರ್ಹತೆಗೆ ಯಾವ ಉದ್ಯೋಗ :-
ಯಾವುದೇ ಡಿಗ್ರಿ, ಡಿಪ್ಲೋಮಾ, ಅಥವಾ ಇಂಜಿನಿಯರಿಂಗ್ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಈ ಕೆಳಗಿನ ಉದ್ಯೋಗಗಳು ಸಿಗುತ್ತವೆ
- ಗುಣಮಟ್ಟ ಪರೀಕ್ಷಕರು (Quality Control): ತಯಾರಾದ ಸೋಪು ಶುದ್ಧವಾಗಿದೆಯೇ?ಅಥವಾ ಚರ್ಮಕ್ಕೆ ಸೋಪಿನಿಂದ ತೊಂದರೆ ಆಗುತ್ತದೆಯೇ ಎಂದು ಲ್ಯಾಬ್ ನಲ್ಲಿ ಪರೀಕ್ಷಿಸಲು.
- ಸೋಪು ತಯಾರಕರು: ಸೋಪಿಗೆ ಎಷ್ಟು ಎಣ್ಣೆ, ಎಷ್ಟು ಸುಗಂಧ ಮಿಶ್ರಣ ಮಾಡಬೇಕೆಂದು ಸರಿಯಾದ ನಿರ್ಧಾರ ತೆಗೆದುಕೊಳ್ಳಲು Chemical Engineers ವಿದ್ಯಾರ್ಹತೆ ಹೊಂದಿರಬೇಕು.
- Accountants: ಕಂಪನಿಯ ಖರ್ಚು-ವೆಚ್ಚ ಮತ್ತು ಲಾಭದ ಲೆಕ್ಕ ಲಾಭವನ್ನ ಹಾಗೆ ವರ್ಷದಿಂದ ವರ್ಷಕ್ಕೆ ಎಷ್ಟು ಆದಾಯ ಬರುತ್ತಿದೆ ಹೀಗೆ ಇನ್ನಿತರ ಎಲ್ಲಾ ಲೆಕ್ಕದ ವ್ಯವಹಾರವನ್ನ ಮಾಡಲು ಅಭ್ಯರ್ಥಿಗಳು ಬಿಕಾಂ ಪದವಿಯನ್ನು ಮುಗಿಸಿರಬೇಕಾಗುತ್ತದೆ
- ಕಚೇರಿ ಸಹಾಯಕರು (Clerks/Admin): ಫೈಲ್ ಕೆಲಸಗಳು, ಕಂಪ್ಯೂಟರ್ ಎಂಟ್ರಿ ಮತ್ತು ಪತ್ರವ್ಯವಹಾರ ನಡೆಸುವವರು.
ಕೈಗಾರಿಕಾ ತರಬೇತಿ ಪಡೆದವರಿಗೆ (ITI & Diploma Jobs)
- ಐಟಿಐ ಅಥವಾ ಡಿಪ್ಲೋಮೋ ಕೋರ್ಸ್ ಗಳನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೆಲಸಗಳಿರುತ್ತವೆ.
ಯಂತ್ರ ನಿರ್ವಾಹಕರು (Machine Operators): ಸೋಪು ಕತ್ತರಿಸುವ, ಅಚ್ಚು ಹಾಕುವ ಮತ್ತು ಪ್ಯಾಕ್ ಮಾಡುವ ದೊಡ್ಡ ಮಶೀನರಿಗಳನ್ನು ನಡೆಸುವವರು.- ಎಲೆಕ್ಟ್ರಿಷಿಯನ್ ಮತ್ತು ಮೆಕ್ಯಾನಿಕ್: ಸಾಬೂನು ಉತ್ಪಾದನಾ ಘಟಕದಲ್ಲಿ ಕರೆಂಟ್ ಮತ್ತು ಇತರೆ ಯಂತ್ರಗಳು ಹಾಳಾದರೆ ಅದನ್ನು ರಿಪೇರಿ ಮಾಡುವ ಕೆಲಸ ಇವರದ್ದಾಗಿರುತ್ತದೆ
ಸಾಮಾನ್ಯ ಜನರಿಗೆ (Field & Production Jobs)
ಹೆಚ್ಚಿನ ಓದಿಲ್ಲದವರು ಕಷ್ಟಪಟ್ಟು ಕೆಲಸ ಮಾಡುವವರಿಗೆ ಇಲ್ಲಿ ಅವಕಾಶ ಕೂಡ ಇರುತ್ತದೆ
- ಪ್ಯಾಕಿಂಗ್ ಕೆಲಸ ಪ್ಯಾಕಿಂಗ್ ಕೆಲಸ (Packaging Staff) ತಯಾರಾದ ಸೋಪುಗಳನ್ನು ಪೆಟ್ಟಿಗೆಗಳಿಗೆ ತುಂಬುವುದು ಮತ್ತು ಸ್ಟಿಕ್ಕರ್ ಹಚ್ಚುವುದು.
- ಮಾರಾಟಗಾರರು (ಸೇಲ್ಸ್ ಮ್ಯಾನ್) ಮೈಸೂರು ಸ್ಯಾಂಡಲ್ ಸೋಪ್ ಗಳನ್ನ ಅಂಗಡಿಗೆ ತಲುಪಿಸುವುದು ಮತ್ತು ಆರ್ಡರ್ ತರುವ ಕೆಲಸ.
- ಸಾಗಾಣಿಕೆ (ಲೋಡಿಂಗ್ ಅಂಡ್ ಲೋಡಿಂಗ್) ಕಚ್ಚಾ ವಸ್ತುಗಳನ್ನ ಲಾರಿ ಇಂದ ಲಾರಿಗೆ ಲೋಡ್ ಮಾಡುವುದು.
- ಕಾವಲುಗಾರರು (ಸೆಕ್ಯೂರಿಟಿ) ಕಾರ್ಖಾನೆ ಮತ್ತು ಕಚೇರಿಯ ಭದ್ರತೆ ತುಂಬಾ ಮುಖ್ಯವಾಗಿರುತ್ತದೆ ಆದ್ದರಿಂದ ಮೈಸೂರ್ ಸ್ಯಾಂಡಲ್ ಸೋಪ್ ಉತ್ಪಾದನೆ ಮಾಡುವ ಘಟಕಕ್ಕೆ ಕಾವಲುಗಾರರ ಅವಶ್ಯಕತೆ ಕೂಡ ಇರುತ್ತದೆ
ವಿಶೇಷ ಕೆಲಸಗಳು (Special Jobs)
- ಶ್ರೀಗಂಧದ ಮರದಲ್ಲಿ ಗೊಂಬೆಯನ್ನ ಕೆಟ್ಟುವವರು ಹಾಗೆ ಕಾರ್ಖಾನೆಯ ಆವರಣದಲ್ಲಿರುವ ಗಿಡಮರಗಳನ್ನು ಪಾಲನೆ ಪೋಷಣೆ ಮಾಡುವವರು ಕೂಡ ಈ ಒಂದು ಘಟಕದಲ್ಲಿ ಬೇಕಾಗಿರುತ್ತಾರೆ ಅಂದರೆ ಇವರಿಗೂ ಸಹ ಇಲ್ಲಿ ಕೆಲಸಗಳು ಖಾಲಿ ಇರುತ್ತವೆ
ಮುಖ್ಯ ಸೂಚನೆ :-
| ಮುಖ್ಯವಾಗಿ ಈ ವಿಚಾರವನ್ನು ನೀವು ಗಮನಿಸಲೇಬೇಕು ಈ ಕೆಲಸಗಳು ಸರ್ಕಾರಿ ಉದ್ಯೋಗಗಳಾಗಿರುವುದರಿಂದ ನೀವು ಇವುಗಳನ್ನು ಪಡೆಯಲು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತು ಓದಿ ಪರೀಕ್ಷೆಯನ್ನ ಬರೆಯಬೇಕೆಂತೇನಿಲ್ಲ. ಸರ್ಕಾರವು ಪತ್ರಿಕೆಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದಾಗ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿರುತ್ತದೆ. ಇದೀಗ ಸರ್ಕಾರ ಹೊಸ ಹೊಸ ಘಟಕಗಳನ್ನು ಸ್ಥಾಪನೆ ಮಾಡಲು ಅನುಮತಿ ನೀಡಿದ್ದು ಕೆಲವೇ ದಿನಗಳಲ್ಲಿ ಕಟ್ಟಡಗಳು ನಿರ್ಮಾಣಗೊಳ್ಳುತ್ತವೆ. ಇನ್ನು ಕೆಲವೇ ದಿನಗಳಲ್ಲಿ ಉದ್ಯೋಗಗಳ ಬಗ್ಗೆ ನಿಟಿಫಿಕೇಷನ್ ಹೊರಬೀಳಲಿದ್ದು ನಂತರದ ದಿನಗಳಲ್ಲಿ ಈ ಮಾಹಿತಿಯನ್ನ ನಮ್ಮ ಕನ್ನಡ ಹೆಲ್ಪ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತೇವೆ ಹಾಗಾಗಿ ಆಗಾಗ ನಮ್ಮ ವೆಬ್ಸೈಟ್ ಗೆ ವಿಸಿಟ್ ಮಾಡುತ್ತಿರಿ. |
ಇತರೆ ಯೋಜನೆಯ ಪ್ರಮುಖ ಲಿಂಕುಗಳು:
RailOne App : ರೈಲು ಪ್ರಯಾಣಿಕರಿಗೆ ದೊಡ್ಡ ಬದಲಾವಣೆ
₹3,000/- ವೃದ್ದಾಪ್ಯ ಪಿಂಚಣಿ! ಕಾರ್ಮಿಕರಿಗೆ ಸರ್ಕಾರದಿಂದ ಭರ್ಜರಿ ಸುದ್ದಿ!
ಬೋರ್ವೆಲ್ ಇದ್ದರೆ ಸಾಕು, ಸರ್ಕಾರದಿಂದ ಬೋರ್ ಮೋಟಾರ್‌ಗೆ 90% ಸಬ್ಸಿಡಿ!


Job vacancy
Rakkiramanahalli, hanabe post, doddaballapur taluk, bangalore rural distic