KMF SHIMUL : ರೂ ₹1,55,200/- : 194 ಹುದ್ದೆಗಳು – ಅರ್ಜಿ ದಿನಾಂಕ ವಿಸ್ತರಣೆ!

KMF SHIMUL

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸಿಹಿಸುದ್ದಿ! ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ನವೆಂಬರ್ 2025 ರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಮಹತ್ವದ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಸಲು 14 ಡಿಸೆಂಬರ್ 2025 ಕೊನೆಯ ದಿನಾಂಕವಾಗಿತ್ತು. ಆದರೆ ಈ ದಿನಾಂಕವನ್ನು ವಿಸ್ತರಣೆ ಮಾಡಿದ್ದು, ಅರ್ಜಿ ಸಲ್ಲಿಸಲು 21 ಫೆಬ್ರುವರಿ, 2026 ರ ವರೆಗೂ ಅವಕಾಶವನ್ನು ಕಲ್ಪಿಸಲಾಗಿದೆ.


KMF SHIMUL Recruitment 2026 in Kannada

ಒಟ್ಟು 194 ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ. ಇದೇ ರೀತಿಯ ವಿವಿಧ ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (SHIMUL) 2026ರ ನೇಮಕಾತಿ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಪಾವತಿಸಬೇಕಾದ ಅರ್ಜಿ ಶುಲ್ಕಗಳು, ವೇತನ ಶ್ರೇಣಿಗಳ ಬಗೆಗಿನ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದು.

ಹುದ್ದೆಯ ಕಿರನೋಟ:

ಸಂಸ್ಥೆಯ ಹೆಸರು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL)
ಹುದ್ದೆಯ ಹೆಸರು ಅಸಿಸ್ಟೆಂಟ್ ಮ್ಯಾನೇಜರ್,ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳು
ಹುದ್ದೆಗಳ ಸಂಖ್ಯೆ 194 ಹುದ್ದೆಗಳು
ವೇತನ ಶ್ರೇಣಿ ₹34,100 – ₹1,55,200
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಹುದ್ದೆಯ ಬಗ್ಗೆ:

ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟ ಲಿಮಿಟೆಡ್ ಒಟ್ಟು 194 ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಹಾಗೂ ಇತೆರೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಪದವಿ ಪೂರ್ಣಗೊಳಿಸಿದ ಕನಿಷ್ಠ 18 ರಿಂದ ಗರಿಷ್ಟ 35 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಹಾಗೂ ಇತೆರೆ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಳ್ಳೆಯ ವೇತನವನ್ನು ನಿಗದಿಪಡಿಸಿದ್ದು, ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನ ನಡೆಸಬೇಕೆಂದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಈ ಹುದ್ದೆ ಅತ್ಯುತ್ತಮ ಆಯ್ಕೆ.

ಹುದ್ದೆಗಳ ಸಂಕ್ಷಿಪ್ತ ವಿವರ:

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕ (ಆಡಳಿತ)1 ಹುದ್ದೆಗಳು
ಸಹಾಯಕ ವ್ಯವಸ್ಥಾಪಕ (ಎಫ್ ಆಂಡ್ ಎಫ್)3 ಹುದ್ದೆಗಳು
ಸಹಾಯಕ ವ್ಯವಸ್ಥಾಪಕ (ಎಹೆಚ್/ ಎಐ)17 ಹುದ್ದೆಗಳು
MIS/ ಸಿಸ್ಟಮ್ ಅಧಿಕಾರಿ 1 ಹುದ್ದೆಗಳು
ಮಾರ್ಕೆಟಿಂಗ್ ಅಧಿಕಾರಿ 2 ಹುದ್ದೆಗಳು
ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ)2 ಹುದ್ದೆಗಳು
ತಾಂತ್ರಿಕ ಅಧಿಕಾರಿ (ಇಂಜಿನಿಯರ್)2 ಹುದ್ದೆಗಳು
ತಾಂತ್ರಿಕ ಅಧಿಕಾರಿ (DT)14 ಹುದ್ದೆಗಳು
ಜೂನಿಯರ್ ಸಿಸ್ಟಮ್ ಆಪರೇಟರ್ 13 ಹುದ್ದೆಗಳು
ಜೂನಿಯರ್ ಟೆಕ್ನಿಷಿಯನ್ 50 ಹುದ್ದೆಗಳು
ರಾಸಾಯನಶಾಸ್ತ್ರಜ್ಞ ಗ್ರೇಡ್-I 1 ಹುದ್ದೆಗಳು
ಸ್ಟೈನೋಗ್ರಾಫರ್ ಗ್ರೇಡ್-II 1 ಹುದ್ದೆಗಳು
ಮಾರ್ಕೆಟಿಂಗ್ ಸಹಾಯಕ ಗ್ರೇಡ್-II 10 ಹುದ್ದೆಗಳು
ಲೆಕ್ಕಪತ್ರ ಸಹಾಯಕ ಗ್ರೇಡ್-II 12 ಹುದ್ದೆಗಳು
ಆಡಳಿತ ಸಹಾಯಕ ಗ್ರೇಡ್-II 17 ಹುದ್ದೆಗಳು
ರಸಾಯನಶಾಸ್ತ್ರಜ್ಞ ಗ್ರೇಡ್-II 28 ಹುದ್ದೆಗಳು
ವಿಸ್ತರಣಾ ಅಧಿಕಾರಿ ಗ್ರೇಡ್-III17 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಹತ್ತನೇ ತರಗತಿ, ಬಿಕಾಂ, B.B.A, B.Sc, B.B.M, BE/B.Tech, MBA, MSc, BVSc ಹಾಗೂ AH ಪದವಿಯನ್ನು ಹೊಂದಿರಬೇಕು.

ವಯೋಮಿತಿ:

KMF SHIMUL ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ18 ವರ್ಷ ಹಾಗೂ ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯಸ್ಸಿನ ಸಡಿಲಿಕೆ:

  • ಸಾಮಾನ್ಯ ವರ್ಗಗಳ (2A, 2B, 3A, 3B) ಅಭ್ಯರ್ಥಿಗಳಿಗೆ: 03 ವರ್ಷಗಳು
  • ಪರಿಶಿಷ್ಟ ಜಾತಿ (SC)ಮತ್ತು ಪರಿಶಿಷ್ಟ ಪಂಗಡಗಳ (ST) ಅಭ್ಯರ್ಥಿಗಳಿಗೆ: 05 ವರ್ಷ

ಅರ್ಜಿ ಶುಲ್ಕ:

  • ಅಂಗವಿಕಲ ಅಭ್ಯರ್ಥಿಗಳು, ಪ್ರವರ್ಗ-I, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: ₹500/-
  • ಇತರೆ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ: ₹1,000/-

ವೇತನ ಶ್ರೇಣಿ:

ಹುದ್ದೆಯ ಹೆಸರು ಮಾಸಿಕ ವೇತನ
ಜೂನಿಯರ್ ಟೆಕ್ನಿಷಿಯನ್ ₹34,100 – ₹67,600
MIS/ ಸಿಸ್ಟಮ್ ಅಧಿಕಾರಿ
ಮಾರ್ಕೆಟಿಂಗ್ ಅಧಿಕಾರಿ
ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ)
ತಾಂತ್ರಿಕ ಅಧಿಕಾರಿ (ಇಂಜಿನಿಯರ್)
ತಾಂತ್ರಿಕ ಅಧಿಕಾರಿ (DT)
₹69,250 – ₹1,34,200
ಜೂನಿಯರ್ ಸಿಸ್ಟಮ್ ಆಪರೇಟರ್
ಸ್ಟೈನೋಗ್ರಾಫರ್ ಗ್ರೇಡ್-II
ಮಾರ್ಕೆಟಿಂಗ್ ಸಹಾಯಕ ಗ್ರೇಡ್-II
ಲೆಕ್ಕಪತ್ರ ಸಹಾಯಕ ಗ್ರೇಡ್-II
ಆಡಳಿತ ಸಹಾಯಕ ಗ್ರೇಡ್-II
ರಸಾಯನಶಾಸ್ತ್ರಜ್ಞ ಗ್ರೇಡ್-II
₹44,425 – ₹83,700
ರಾಸಾಯನಶಾಸ್ತ್ರಜ್ಞ ಗ್ರೇಡ್-I
ವಿಸ್ತರಣಾ ಅಧಿಕಾರಿ ಗ್ರೇಡ್-III
₹54,175 – ₹99,400
ಸಹಾಯಕ ವ್ಯವಸ್ಥಾಪಕ (ಆಡಳಿತ)
ಸಹಾಯಕ ವ್ಯವಸ್ಥಾಪಕ (ಎಫ್ ಆಂಡ್ ಎಫ್)
ಸಹಾಯಕ ವ್ಯವಸ್ಥಾಪಕ (ಎಹೆಚ್/ ಎಐ)
₹83,700 – ₹1,55,200
ವಿಶೇಷ ಸೂಚನೆ: “SHIMUL ಸಂಸ್ಥೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನು ಕೇವಲ 14 ದಿನಗಳಷ್ಟೇ ಉಳಿದಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.”

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಮೌಖಿಕ ಪರೀಕ್ಷೆ
  • ಅರ್ಹತೆ ಪಟ್ಟಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • KMF SHIMUL ಅಧಿಕೃತ ವೆಬ್ಸೈಟ್ https://www.shimul.coop/ ಗೆ ಭೇಟಿ ನೀಡಿ.
  • ಹೊಸ ಬಳಕೆದಾರರಾಗಿದ್ದರೆ, ಹೆಸರು, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಯನ್ನು ನಮೂದಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.
  • ನಂತರ KMF SHIMUL ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಲು ಅಪ್ಲೈ ಬಟನ್ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಶೈಕ್ಷಣಿಕ ಹಾಗೂ ವೈಯಕ್ತಿಕ ಮಾಹಿತಿಗಳನ್ನು ಭರ್ತಿಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಶುಲ್ಕವನ್ನು ಪಾವತಿಸಿ.
  • ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತಗೆದುಕೊಳ್ಳಿ.

ಅರ್ಜಿ ಸಲ್ಲಿಸುವ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 06-02-2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-02-2026

ಹುದ್ದೆಗೆ ಸಂಬಂಧಿಸಿದ ಲಿಂಕುಗಳು:

ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ಸಹಾಯಕ ವ್ಯವಸ್ಥಾಪಕ, ಜೂನಿಯರ್ ಟೆಕ್ನಿಷಿಯನ್ ಹಾಗೂ ಇತರೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇದೊಂದು ಸುವರ್ಣಾವಕಾಶ.


ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :

One thought on “KMF SHIMUL : ರೂ ₹1,55,200/- : 194 ಹುದ್ದೆಗಳು – ಅರ್ಜಿ ದಿನಾಂಕ ವಿಸ್ತರಣೆ!

Leave a Reply

Your email address will not be published. Required fields are marked *