ಹಲೋ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ, ಇಲ್ಲಿ ಇಂದು ಬೆಳಗ್ಗೆ ಆಗಿರುವ ಘಟನೆ ಇದು ಸೆಪ್ಟೆಂಬರ್ 11 / 2025 ರಂದು ಬೆಳಗ್ಗೆ 8:17ಕ್ಕೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಚುಂಚನ ಸೂರು ಗ್ರಾಮದಲ್ಲಿ ಭೂಕಂಪನ ಸಂಭವಿಸಿದೆ ಈ ಭೂಕಂಪನ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.3ರಷ್ಟು ದಾಖಲಾಗಿದೆ.

ಗ್ರಾಮಸ್ಥರಿಗೆ ಅಭಯ ನೀಡಿದ ಅಧಿಕಾರಿಗಳು
ಭೂಕಂಪನ ಸುದ್ದಿ ತಿಳಿದ ನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು ಈ ಪರಿಶೀಲನೆಯಲ್ಲಿ ಭೂಕಂಪದಕ್ಕೆ ಕಾರಣವಾಗಿರುವ ಹಲವು ಅಂಶಗಳನ್ನು ವಿಶ್ಲೇಷಣೆ ಮಾಡಲಾಗಿದೆ ಹಾಗೆ ಅಕ್ಕಪಕ್ಕದ ಗ್ರಾಮಸ್ಥರನ್ನ ಅಧಿಕಾರಿಗಳು ಮಾತನಾಡಿಸಿ ಗ್ರಾಮಸ್ಥರಿಗೆ ಅಭಯವನ್ನು ನೀಡಿದ್ದಾರೆ.
ಇದು ಸಣ್ಣ ಪ್ರಮಾಣದ ಭೂಕಂಪನ ವಾಗಿದ್ದು ಇದರಿಂದ ಆತಂಕಗೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ ಗ್ರಾಮಸ್ಥರು ಭೂಕಂಪದಿಂದ ಬೆಚ್ಚಿ ಬಿದ್ದಿದ್ದರಿಂದ ಅಧಿಕಾರಿಗಳು ಅವರಿಗೆ ಧೈರ್ಯ ಹೇಳಿ ಭವಿಷ್ಯದಲ್ಲಿ ಇಂತಹ ಸನ್ನಿವೇಶಗಳ್ನ ಹೇಗೆ ನಿಭಾಯಿಸಬೇಕೆಂದು ಮಾರ್ಗದರ್ಶನ ನೀಡಿದ್ದಾರೆ.
ಕಲ್ಬುರ್ಗಿ ಪರಿಚಯ
ಕಲ್ಬುರ್ಗಿ ಕರ್ನಾಟಕ ರಾಜ್ಯದ ಒಂದು ಪ್ರಮುಖ ಜಿಲ್ಲೆ ಇದು ರಾಜ್ಯದ ಈಶಾನ್ಯ ಭಾಗದಲ್ಲಿ ಸ್ಥಿತವಾಗಿರುವಂತ ಒಂದು ಐತಿಹಾಸಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿರುವಂತಹ ಸ್ಥಳ ಇಲ್ಲಿ ಇಲ್ಲಿ ಚುಂಚನಸೂರು ಎಂಬ ಒಂದು ಗ್ರಾಮವಿದೆ ಇದು ಆಳಂದ ತಾಲೂಕಿನಲ್ಲಿದೆ.