GBA Order: ಈ ದಿನ ಗ್ರೇಟರ್ ಬೆಂಗಳೂರಿನಲ್ಲಿ ಪ್ರಾಣಿಹತ್ಯೆ, ಮಾಂಸ ಮಾರಾಟ ಬಂದ್! ಯಾಕೆ?

GBA Order

GBA Order ಬೆಂಗಳೂರು : ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ 2026 ಫೆಬ್ರವರಿ 15ರಂದು ಅಂದರೆ ಭಾನುವಾರ ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟಕ್ಕೆ ಸಂಪೂರ್ಣವಾಗಿ ನಿಷೇಧವನ್ನು ಹೇರಲಾಗಿದೆ ಈ ಕುರಿತು ಇಲಾಖೆಯ ಪ್ರಾಣಿ ಪಾಲನೆ ಇಲಾಖೆಯ ಉಪ ನಿರ್ದೇಶಕರು ಅಧಿಕೃತ ಆದೇಶವನ್ನು ಹೊರಡಿಸಿದ್ದು ಈ ಆದೇಶವನ್ನು ಸಾರ್ವಜನಿಕರು ಪಾಲಿಸಲು ಕೋರಲಾಗಿದೆ.


ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ನಿಷೇದ:

ಬೆಂಗಳೂರು ನಗರದಲ್ಲಿ ಎಲ್ಲಾ ಕಸಾಯಿ ಕಾರ್ಯಗಳು ಸೇರಿದಂತೆ ಕೋಳಿ, ಮಟನ್ ಅಂಗಡಿಗಳು ಹಾಗೂ ಮೀನು ಮಾರಾಟ ಮಳಿಗೆಗಳು ಆ ದಿನ ಕಾರ್ಯನಿರ್ವಹಿಸಲು ಅವಕಾಶ ಇರುವುದಿಲ್ಲ. ಹಿಂದಿನ ಬಿಪಿಎಂಪಿ ವ್ಯಾಪ್ತಿಯಲ್ಲಿದ್ದ ಎಲ್ಲಾ ಪ್ರದೇಶಗಳು ಈಗ ಗ್ರೇಟರ್ ಬೆಂಗಳೂರು ಅಥಾರಿಟಿ (GBA Order) ಆಡಳಿತಕ್ಕೆ ಒಳಪಟ್ಟಿರುವುದರಿಂದ ಸಂಪೂರ್ಣವಾಗಿ ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಈ ನಿಯಮ ಜಾರಿ ಆಗಲಿದೆ ಈ ಆದೇಶದ ಪ್ರಕಾರ ನಗರದಲ್ಲಿನ ಎಲ್ಲಾ ಅಂಗಡಿಗಳು ಆ ದಿನ ಮುಚ್ಚಲಿವೆ.

GBA Order Greater Bengaluru Authority

ಹಬ್ಬದ ಸಂದರ್ಭದಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ಅವರಿಗೆ ಗೌರವವನ್ನು ಸೂಚಿಸುವಂತಹ ಉದ್ದೇಶದಿಂದ ಈ ನಿರ್ದಾರವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಇದೀಗ ಪ್ರಕಟಣೆಯನ್ನು ಹೊರಡಿಸಿದ್ದಾರೆ.

GBA Order

ಈ ವರ್ಷದಳ್ಳಿ ಎರಡನೇ ನಿಷೇಧ:

ಈ ವರ್ಷದಲ್ಲಿ ಎರಡನೇ ನಿಷೇಧ ಹೌದು 2026ರಲ್ಲಿ ನಗರದಲ್ಲಿ ಜಾರಿಗೊಳ್ಳುತ್ತಿರುವ ಎರಡನೇ ಮಾಂಸ ನಿಷೇಧವಾಗಿದೆ ಜನವರಿ 30ರಂದು ಸರ್ವೋದಯ ದಿನದ ಅಂಗವಾಗಿ ಇದೇ ರೀತಿಯ ನಿರ್ಬಂಧವನ್ನು ಹೇರಲಾಗಿತ್ತು.

ಸಾರ್ವಜನಿಕರಿಗೆ ಮನವಿ:

ಸಾರ್ವಜನಿಕರು ಹಾಗೂ ನಾಗರಿಕರು ವ್ಯಾಪಾರಿಗಳು ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಮನವಿಯನ್ನ ಮಾಡಿದ್ದಾರೆ ಈ ನಿಯಮವನ್ನ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕಟ್ಟುನಿಟ್ಟಿನ ಜಾರಿ:

ಕಟ್ಟುನಿಟ್ಟಿನ ಜಾರಿ ಹೌದು ನಗರದ ವಿವಿಧ ವಲಯಗಳಲ್ಲಿ ಮೇಲ್ವಿಚಾರಣೆ ತಂಡಗಳನ್ನ ನಿಯೋಜಿಸಲಾಗಿರುತ್ತದೆ ನಿಯಮ ಉಲ್ಲಂಘನೆ ಕಂಡುಬಂದರೆ ತಂಡ ವಿಧಿಸುವುದು ಹಾಗೂ ಪರವಾನಿಗೆಯನ್ನು ರದ್ದು ಮಾಡುವಂತ ಕ್ರಮಗಳನ್ನ ಇಲ್ಲಿ ಕೈಗೊಳ್ಳಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ (GBA Order) ಎಚ್ಚರಿಕೆಯನ್ನು ನೀಡಿದೆ ಹಾಗಾಗಿ ಈ ದಿನದಂದು ಯಾರು ಸಹ ಈ ಮಾಂಸದ ಅಂಗಡಿಗಳನ್ನ ತೆರೆಯುವುದು ನಿಷೇಧಿಸಲಾಗಿದೆ.

ಒಟ್ಟಾರೆಯಾಗಿ ನಗರದ ವಿವಿಧ ವಲಯಗಳಲ್ಲಿ ಮೇಲ್ವಿಚಾರಣೆ ತಂಡಗಳನ್ನ ನಿಯೋಜಿಸಲಾಗಿರುತ್ತದೆ ನಿಯಮ ಉಲ್ಲಂಘನೆ ಕಂಡುಬಂದರೆ ದಂಡ ವಿಧಿಸುವುದು ಹಾಗೂ ಪರವಾನಿಗೆಯನ್ನು ರದ್ದು ಮಾಡುವಂತ ಕ್ರಮಗಳನ್ನ ಇಲ್ಲಿ ಕೈಗೊಳ್ಳಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಆದರಿಟಿ ಎಚ್ಚರಿಕೆಯನ್ನು ನೀಡಿದೆ.

ಇತರೆ ಸರ್ಕಾರೀ ಹುದ್ದೆಗಳ ಪ್ರಮುಖ ಲಿಂಕುಗಳು :-

Leave a Reply

Your email address will not be published. Required fields are marked *