Free Training Skill : ಮಹಿಳೆಯರಿಗೆ 31 ದಿನ ಉಚಿತ ಎಂಬ್ರಾಯ್ಡರಿ ತರಬೇತಿ+ಊಟ+ವಸತಿ

Free Training Skill

ಹಾಯ್ ಹಲೋ ನಮಸ್ಕಾರ ಕರ್ನಾಟಕ. ಆತ್ಮೀಯರೇ,,, ಮಹಿಳೆಯರಿಗಾಗಿ ಕೆನರಾ ಬ್ಯಾಂಕ್ (Canara Bank) ನೀಡುತ್ತಿದೆ ಬಹುದೊಡ್ಡ ಕೊಡುಗೆ. ಇದುವರೆಗೂ ಯಾವ ಬ್ಯಾಂಕ್ ಗಳು ನೀಡದೆ ಇರುವ ತರಬೇತಿಯನ್ನ(Free Training Skill) ಗ್ರಾಹಕರ ನಂಬಿಕಸ್ತ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ನೀಡುತ್ತಿದೆ.

Free Training Skill in Kannada


ಮಹಿಳೆಯರೇ ನೀವು ಸ್ವಯಂ ಉದ್ಯೋಗದ ಮೂಲಕ ಆರ್ಥಿಕ  ಸ್ವಾವಲಂಬನೆ ಸಾಧಿಸಲು ಬಯಸುತ್ತಿದ್ದೀರಾ ? ಅಥವಾ ಸ್ವಂತ ಉದ್ಯೋಗ ಮಾಡಲು ಯಾವುದೇ ತರಬೇತಿ (Free Training Skill) ಇಲ್ಲದೆ ಅಥವಾ ಉದ್ಯೋಗ ಮಾಡುವ ಕೌಶಲ್ಯ ಗೊತ್ತಿಲ್ಲದೆ ಜೀವನಕ್ಕೆ ಮುಂದೇನು ಮಾಡುವುದು ಎಂದು ದಿಕ್ಕು ತೋಚುತ್ತಿಲ್ಲವೇ ? ಇದೀಗ ಮಹಿಳೆಯರ ನೆರವಿಗಾಗಿ ಕೆನರಾ ಬ್ಯಾಂಕ್ ನಿಮ್ಮತ್ತ ದಾವಿಸಿದೆ.

ಮಹಿಳೆಯರಿಗೆ 31 ದಿನ ಉಚಿತ ಎಂಬ್ರಾಯ್ಡರಿ ತರಬೇತಿ:

ಹೌದು ನೀವು ಕೇಳುತ್ತಿರುವ ವಿಚಾರ ಸರಿಯಾಗಿಯೇ ಇದೆ. ಮಹಿಳೆಯರು ಆರ್ಥಿಕವಾಗಿ ಮತ್ತು ಸಮಾಜದಲ್ಲಿ ಸ್ವತಂತ್ರವಾಗಿ ತಮ್ಮ ಜೀವನವನ್ನು ನಡೆಸಲು“ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು” (Free Training Skill)ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ಮಹಿಳೆಯರಿಗಾಗಿ ತರಬೇತಿ ಶಿಬಿರವನ್ನ ಆಯೋಜಿಸಲು ಚಿಂತನೆ ಮಾಡಿದೆ. ಮಹಿಳಾ ಮಣಿಗಳು ತಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳಿಗೆ ತಲೆ ಬಾಗದೆ ಧೈರ್ಯದಿಂದ ಎಲ್ಲವನ್ನೂ ಪರಿಹರಿಸಿಕೊಳ್ಳಬೇಕು ಅಂದರೆ ತಮ್ಮ ಕಾಲ ಮೇಲೆ ತಾವು ನೀಡುವಂತೆ ಮಾಡಲು ಕೆನರಾ ಬ್ಯಾಂಕ್ RSETI ಈ ಒಂದು ಸಂಸ್ತೆಮೂಲಕ ಉಚಿತ ವೃತ್ತಿಪರ ತರಬೇತಿಯನ್ನ ನೀಡುವ ಮೂಲಕ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಈ ಮೇಲಿನ ಅಂಶಗಳನ್ನು ನೀವು ಓದುತ್ತಾ ಬಂದಂತೆ ನಿಮ್ಮ ಮನಸ್ಸಲ್ಲಿ ಬರುವ ಪ್ರಶ್ನೆಗಳು (question) “ಇದು ಯಾವ ತರಬೇತಿ?”, “ಮಹಿಳೆಯರಾದ ನಾವು ಅರ್ಜಿ ಸಲ್ಲಿಸುವುದಾದರೂ ಹೇಗೆ?”, “ಪ್ರತಿಯೊಬ್ಬ ಮಹಿಳೆಯರು ಅರ್ಜಿ ಸಲ್ಲಿಸಬಹುದೇ?” ಈ ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇವೆಲ್ಲ ಪ್ರಶ್ನೆಗಳಿಗೂ ಈ ಕೆಳಗೆ ನೀವು ಓದಿದಲ್ಲಿ ಮಾತ್ರ ಉತ್ತರ (answer) ಪಡೆಯಲು ಸಾಧ್ಯವಾಗುವುದು.

ಮುಖ್ಯ ಹೈಲೆಟ್ಸ್ (Main highlights) :-

ವಿಷಯಮುಖ್ಯ ಮಾಹಿತಿ
ಆಯೋಜಕರುCanara Bank – RSETI
ತರಬೇತಿಉಚಿತ ಎಂಬ್ರಾಯ್ಡರಿ & ಫ್ಯಾಬ್ರಿಕ್ ಪೇಂಟಿಂಗ್ (Free Training Skill)
ಅವಧಿ31 ದಿನಗಳು
ಸ್ಥಳಹೊಸಕೋಟೆ, ಬೆಂಗಳೂರು ಗ್ರಾಮಾಂತರ
ಸೌಲಭ್ಯಉಚಿತ ಊಟ + ವಸತಿ
ಅರ್ಹತೆ18–45 ವರ್ಷ ನಿರುದ್ಯೋಗಿ ಮಹಿಳೆಯರು
ಆದ್ಯತೆBPL ಕಾರ್ಡ್ ಹೊಂದಿರುವವರಿಗೆ
ಪ್ರಮಾಣಪತ್ರಕೇಂದ್ರ ಸರ್ಕಾರ ಮಾನ್ಯತೆ

ಕೆನರಾ ಬ್ಯಾಂಕ್ ಗುರಿ(Canara Bank’s Goal) :-

  • ಯಾವುದೇ ಸರ್ಕಾರಿ ಸಂಸ್ಥೆಗಳಾಗಿರಲಿ, ಖಾಸಗಿ ಸಂಸ್ಥೆಗಳಾಗಿರಲಿ ಜನಪರ ಯೋಜನೆಗಳನ್ನ ಜಾರಿಗೆ ತಂದಾಗ ಅವುಗಳಲ್ಲಿ ತನ್ನದೇ ಆದ ಒಂದಿಷ್ಟು ಉದ್ದೇಶಗಳು ಒಳಗೊಂಡಿರುತ್ತವೆ, ಅದೇ ರೀತಿ ಈ ಉಚಿತ ಎಂಬ್ರಾಯಿಡರಿ ತರಬೇತಿಯಲ್ಲಿಯೂ (Free Training Skill) ಸಹ ಒಂದಿಷ್ಟು ಪ್ರಮುಖವಾದಂತಹ ಉದ್ದೇಶಗಳು ಒಳಗೊಂಡಿದೆ. ಏನೆಂಬುದನ್ನುಈ ಕೆಳಗೆ ನೋಡ್ತಾ ಹೋಗೋಣ
  • ಪ್ರಮುಖವಾಗಿ ಹಳ್ಳಿ ಭಾಗದಲ್ಲಿ ಹಾಗೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉದ್ಯೋಗದ ಅವಕಾಶಗಳು ಕಡಿಮೆ ಇರುವುದರಿಂದ, ಅವರಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಹೊಚ್ಚಹೊಸ(Free Training Skill) ಉದ್ಯೋಗವನ್ನು ಸೃಷ್ಟಿ ಮಾಡುವುದು “ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಪ್ರಮುಖ ಗುರಿಯಾಗಿದೆ”.
  • ಮಹಿಳೆಯರು ಸರ್ಕಾರಿ ಅಥವಾ ಕಾಯಂ ಉದ್ಯೋಗದ ಅಪೇಕ್ಷೆಗಳನ್ನ ಹೊರತುಪಡಿಸಿ, ತಮ್ಮ ಮನೆಯಲ್ಲಿಯೇ ಸಣ್ಣ ಮಟ್ಟದಲ್ಲಿ ಉದ್ಯೋಗ ಆರಂಭಿಸಿ ಆದಾಯ ಗಳಿಸಲು ಪ್ರೇರೇಪಿಸುವುದು.
  • ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸಿ ಸಮಾಜದಲ್ಲಿ ಎಲ್ಲರೊಂದಿಗೆ ಸಮಾನತೆಯಿಂದ ಗೌರವಯುಕ್ತ ಜೀವನವನ್ನು ನಡೆಸಲು ಅವಕಾಶ ಮಾಡಿಕೊಡುವ ಉದ್ದೇಶವನ್ನು ಒಳಗೊಂಡಿದೆ.
  • ಮಹಿಳೆಯರು ಬ್ಯಾಂಕ್ ಸಾಲ, ಉಳಿತಾಯ ಮತ್ತು ವ್ಯವಹಾರ ನಿರ್ವಹಣೆ ಬಗ್ಗೆ ಸರಿಯಾಗಿ ತಿಳುವಳಿಕೆಯನ್ನ ನೀಡಿ ಮಹಿಳೆಯರನ್ನ ಉದ್ಯಮಿಗಳಾಗಿ ರೂಪಿಸುವುದು. ಇಷ್ಟೇ ಅಲ್ಲದೆ ಇದರಿಂದ ಮಹಿಳೆಯರ ಜೀವನದಲ್ಲಿ ಒಂದಿಷ್ಟು ಬೆಳವಣಿಗೆಗಳು ಕೂಡ ನಡೆಯಲು ಆಗುತ್ತವೆ.
  • ಇಂದಿನ ದಿನಗಳಲ್ಲಂತೂ ಸಾಮಾನ್ಯ ಕುಟುಂಬದಲ್ಲಿ ಮನೆಯ ಯಜಮಾನ ದುಡಿದರೆ ಆ ಹಣ ಯಾವ ಖರ್ಚಾ ವೆಚ್ಚವನ್ನು ನಿಭಾಯಿಸಲು ಆಗುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಇರುವಂತಹ ಯಜಮಾನಗೆ ಕೆನರಾ ಬ್ಯಾಂಕ್ ಇಂತ ಒಂದು (Free Training Skill) ತರಬೇತಿಯನ್ನ ನೀಡಿ ಆದಾಯವನ್ನು ಗಳಿಸಿದರೆ ಕುಟುಂಬದ ಆರ್ಥಿಕ ಸ್ಥಿತಿ ಕೂಡ ಸುಧಾರಿಸುತ್ತದೆ ಮತ್ತು ಮಕ್ಕಳ ಶಿಕ್ಷಣ ಆರೋಗ್ಯ ಮೊದಲಾದ ಅಗತ್ಯತೆಗಳನ್ನು ಪೂರೈಸಲು ಸಹಕಾರಿಯಾಗುತ್ತದೆ.
  • ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹಾಗೆ ಸಮಾಜದಲ್ಲಿ ಗೌರವ ಪೂರ್ಣ ಸ್ಥಾನ ಪಡೆಯಲು ಪ್ರೋತ್ಸಾಹ ನೀಡುವುದು. ಅಷ್ಟೇ ಅಲ್ಲದೆ ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಸ್ವತಂತ್ರವಾಗಿ ಬದುಕಲು ನೆರವು ನೀಡುತ್ತದೆ
  • ಪ್ರಾಯೋಗಿಕ ಕೌಶಲ್ಯವನ್ನು ಕಲಸಿ ತಮ್ಮದೇ ಆದ ಸ್ವಂತ ಉದ್ಯಮ ಅಥವಾ ಕೆಲಸ ಆರಂಭಿಸಲು ಸಿದ್ಧಪಡಿಸುವುದು. ಹಾಗೇನೆ ತಮ್ಮ ಕೈಗಾರಿಕೆಯ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗಲು ಬಹಳಷ್ಟು ಸಹಾಯ ಮಾಡುವುದು.

ಯಾರಿಗೆ ಸಿಗುತ್ತೆ ತರಬೇತಿ ? ನಾವು ಅರ್ಜಿ ಸಲ್ಲಿಸಬಹುದಾ ?

  • ಮಹಿಳೆಯರು ಗ್ರಾಮೀಣ ಭಾಗದ ಮಹಿಳೆಯರು ಮಾತ್ರ ಅರ್ಜಿ ಹಾಕಬಹುದು
  • ಕರ್ನಾಟಕದ ಯಾವುದೇ ಜಿಲ್ಲೆಯಿಂದ ನಿರುದ್ಯೋಗಿ ಮಹಿಳೆಯರಿಗೆ ಅವಕಾಶ ನೀಡಿದೆ ಅಂದರೆ ಕರ್ನಾಟಕ ರಾಜ್ಯದ ಎಲ್ಲ ಗ್ರಾಮೀಣ ಮಹಿಳೆಯರು ಅರ್ಜಿ ಹಾಕಬಹುದು.
  • ಅರ್ಜಿ ಸಲ್ಲಿಸಲು ಬಯಸುವ ಮಹಿಳಾ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೆ ಗರಿಷ್ಟ 45 ವರ್ಷದೊಳಗೆನವರಾಗಿರಬೇಕು.
  • ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು
  • ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮೊದಲ ಆದ್ಯತೆಯನ್ನ ನೀಡಲಾಗುತ್ತದೆ

ನಾವು ಅರ್ಜಿ ಸಲ್ಲಿಸಬಹುದಾ ?

  • ನೀವು ಮಹಿಳೆಯರಾಗಿದ್ದು ನಿರುದ್ಯೋಗಿ ಮತ್ತು 18 ವರ್ಷದಿಂದ 45 ವರ್ಷದೊಳಗಿನವರಾಗಿದ್ದರೆ ಖಂಡಿತವಾಗಿಯೂ ಅರ್ಜಿಯನ್ನು ಸಲ್ಲಿಸಬಹುದು.
  • ನಿಮ್ಮಲ್ಲಿ ಬಿಪಿಎಲ್ ಕಾರ್ಡ್ ಇದ್ದು ಉಚಿತ ಎಂಬ್ರಾಯ್ಡರಿ (Free Training Skill) ತರಬೇತಿಗೆ ಅರ್ಜಿಯನ್ನ ಸಲ್ಲಿಸಲು ಬಯಸಿದರೆ ನಿಮಗೆ ಮೊದಲ ಆದ್ಯತೆ ಸಿಗುತ್ತದೆ.
  • ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಲು ಇಲ್ಲಿ ಕೊಡಲಾದ ಸಂಖ್ಯೆಗೆ ಕರೆ ಮಾಡಬೇಕು.“9505894247 / 8970476050 / 9591514154 / 6363139123 / 9686248369”

“ನೀವು ಶಕ್ತಿ ಹೊಂದಿದ್ದೀರಾ, ನಿಮ್ಮ ಕೈಗಳಲ್ಲಿ ಜೀವನವನ್ನು ರೂಪಿಸುವ ಸಾಮರ್ಥ್ಯವಿದೆ. ಈ ತರಬೇತಿಯನ್ನು ಬಳಸಿಕೊಂಡು ಸ್ವತಂತ್ರವಾಗಿ ಕೆಲಸ ಮಾಡಿ, ನಿಮ್ಮ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಪ್ರಭಾವ ಬೀರಲು ಆರಂಭಿಸಿ!”

ಮಹಿಳೆಯರಿಗೆ ತರಬೇತಿ ನಡೆಯುವ ಸ್ಥಳ :-

ಉಚಿತ ಎಂಬ್ರಾಯಿಡರಿ (Free Training Skill) ಮತ್ತು ಫ್ಯಾಬ್ರಿಕ್ ಪೇಂಟಿಂಗ್ ತರಬೇತಿಯನ್ನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಆಯೋಜಿಸಿದ್ದು ಯಾವ ಸ್ಥಳದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ತನ್ನ ಅಧಿಕೃತ ನೋಟಿಸ್ ಅನ್ನ ಹೊರಡಿಸಿದೆ“. ಇಂಥ ಒಂದು ಗೋಲ್ಡನ್ ಅವಕಾಶವನ್ನ ಗ್ರಾಮೀಣ ಮಹಿಳೆಯರು ಕೈಜಾರದೆ ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಕೆನರಾ ಬ್ಯಾಂಕ್ ನೀಡಲಾದ ಕ್ರಮಗಳನ್ನ ಸರಿಯಾಗಿ ಅನುಸರಿಸಿ ಅರ್ಜಿಯನ್ನು ಸಲ್ಲಿಸಿ.

ಮುಖ್ಯವಾದ ವಿಷಯ: “ಈ ಉಚಿತ ತರಬೇತಿ ಸೋನ್ನಹಳ್ಳಿಪುರ ಎಂಬಲ್ಲಿ ನಡೆಯುತ್ತಿದೆ, ಇದು ಹೊಸಕೋಟೆ ತಾಲ್ಲೂಕಿನಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಕರ್ನಾಟಕದ ಎಲ್ಲ ಗ್ರಾಮ ಮತ್ತು ಪಟ್ಟಣದ ನಿರುದ್ಯೋಗಿ ಮಹಿಳೆಯರು ಈ ತರಬೇತಿಗೆ ಬಂದು ಪಾಲ್ಗೊಳ್ಳಬಹುದು.”

1. ತರಬೇತಿ ನಡೆಯುವ ಮುಖ್ಯಸ್ಥಳ (location): ಸೋನ್ನಹಳ್ಳಿಪುರ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ

2. ಮಹಿಳೆಯರಿಗೆ ಸಿಗುವ ಸೌಲಭ್ಯ (facilities): ಮಹಿಳೆಯರಿಗೆ ತರಬೇತಿ ಅವಧಿಯಲ್ಲಿ ಉಚಿತವಾಗಿ ವಸತಿ ಹಾಗೆ ಊಟ, ತರಬೇತಿ ಎಂಬ್ರಾಯ್ಡರಿ ತರಬೇತಿ ಸಿಗುತ್ತದೆ.

3. ತರಬೇತಿ ನಡೆಯುವ ಅವಧಿ (How many days) : ಮಹಿಳೆಯರಿಗೆ ಈ ತರಬೇತಿಯು ಸುಮಾರು ಒಂದು ತಿಂಗಳ ಅವಧಿ ಅಂದರೆ 31 ದಿನ ನಡೆಯುತ್ತದೆ.

ಪ್ರಮುಖ ಸೂಚನೆ :-

ಗ್ರಾಮೀಣ ಭಾಗದ ಮಹಿಳೆಯರು ಒಂದು ತಿಂಗಳ ಎಂಬ್ರಾಯ್ಡರಿ ಉಚಿತ ತರಬೇತಿಗೆ ಭಾಗವಹಿಸಲು “ಯಾವುದೇ ರೀತಿಯ ಶುಲ್ಕವನ್ನ ಪಾವತಿ ಮಾಡಬೇಕಿಲ್ಲ (No need to pay the fee)” ಉಚಿತವಾಗಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಅವಕಾಶ ನಮ್ಮ ಹೆಮ್ಮೆಯ ಕೆನರಾ ಬ್ಯಾಂಕ್ (Canara Bank)  ಮಾಡಿಕೊಟ್ಟಿದೆ.

ಉಚಿತ ಎಂಬ್ರಾಯ್ಡರಿ ತರಬೇತಿಯಲ್ಲಿ ಮಹಿಳೆಯರು (31 days) ಏನನ್ನು ಕಲಿಯುತ್ತಾರೆ?

ಗ್ರಾಮೀಣ ಭಾಗದ ಮಹಿಳೆಯರಿಗೆ ಸಂಸ್ಥೆಯು ಯಾವ ರೀತಿ ತರಬೇತಿಯನ್ನ ಒದಗಿಸುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ವಿವರವನ್ನು ಈ ಕೆಳಗೆ ಅರ್ಥೈಸಲೆಂದು ಚಾರ್ಟ್ ಮೂಲಕ ತಿಳಿಸಲಾಗಿದೆ.

ಕಲಿಯುವ ವಿಷಯ (What they learn)ಸ್ಪಷ್ಟ ವಿವರ (Description)ಲಾಭ / ಪ್ರಯೋಜನ (Benefit / Business Use)
ಬಟ್ಟೆ ಹಬ್ಬಿಸುವ ಕಲಾ (Aari Work)ಬ್ಲೌಸ್, ಶರ್ಟ್ ಮೊದಲಾದ ಬಟ್ಟೆಗಳಲ್ಲಿ ಕೈಯಿಂದ ಬಟ್ಟೆ ವಿನ್ಯಾಸ ಮಾಡುವ ಕೆಲಸ (stitching) ಕಲಿಯುವುದುಕೈಯಿಂದ ಬಟ್ಟೆ ವಿನ್ಯಾಸ ಮಾಡುವ ಕೆಲಸದಿಂದ small business ಅಥವಾ job ಆರಂಭಿಸಲು ಮಹಿಳೆಯರಿಗೆ ಒಳ್ಳೆಯ ಅವಕಾಶ
ಸೀರೆ ಕುಚ್ಚು (Saree Kuchu)ಸೀರೆ/ಬಟ್ಟೆ ಮೇಲೆ ಸುಂದರ ಕುಚ್ಚು ಹಾಕುವುದು ಹೇಗೆ ಎನ್ನುವುದರ ಬಗ್ಗೆ ಕುಚ್ಚು ಮಾಡಿದ ಸೀರೆ ಮಾರಾಟ ಅಥವಾ service ನೀಡುವ ಅವಕಾಶ ಕೂಡ ಸಿಗುತ್ತದೆ
ಫ್ಯಾಬ್ರಿಕ್ ಪೇಂಟಿಂಗ್ (Fabric Painting)ಬಟ್ಟೆ ಮೇಲೆ ಬಣ್ಣ ಬಳಸಿ designs ಮಾಡುವುದು ಹೇಗೆ ಎಂದು ಕಲಿಸಲಾಗುತ್ತದೆ Custom design ಬಟ್ಟೆ ಮಾರಾಟ, self business ಆರಂಭಿಸಲು ನೆರವು
ಬ್ಯಾಂಕ್ ಸಾಲ ಮಾರ್ಗದರ್ಶನ (Bank Loan Guidance)ಸ್ವಂತ ಉದ್ಯಮಕ್ಕೆ loan, savings, planning ಬಗ್ಗೆ ಮಾಹಿತಿ ಸಹ ನೀಡಲಾಗುತ್ತದೆ.Self business ಆರಂಭಿಸಿ stable income ಗಳಿಸಲು ಸಹಾಯ

ಅರ್ಜಿ ಸಲ್ಲಿಸಲು ನಿಮ್ಮಲ್ಲಿ ಇರಬೇಕಾದ ದಾಖಲೆಗಳು :-

ಮಹಿಳೆಯರು ಉಚಿತ ಎಂಬ್ರಾಯ್ಡರಿ (Free Training Skill) ತರಬೇತಿಯಲ್ಲಿ ಭಾಗಿಯಾಗಲು ಈ ಕೆಳಗೆ ಕೊಡಲಾದ ದಾಖಲೆಗಳು ನಿಮ್ಮಲ್ಲಿ ಇದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತದೆ.

  • ಆಧಾರ್ ಕಾರ್ಡ್ (Aadhaar Card) – Identification proof
  • ಪಾನ್ ಕಾರ್ಡ್ (PAN Card) – Tax/Identity proof
  • ಬ್ಯಾಂಕ್ ಪಾಸ್ ಬುಕ್ (Bank Passbook) – For receiving financial support / loans
  • ರೇಶನ್ ಕಾರ್ಡ್ (Ration Card) – Proof of BPL / household
  • ಪಾಸ್ಪೋರ್ಟ್ ಸೈಜ್ ಫೋಟೋ 4 (4 Passport Size Photos) – For registration and certificate

ತರಬೇತಿ ಮಾಡೆಯಲು ನೀವು ಕಡ್ಡಾಯವಾಗಿ ಮಾಡಬೇಕಾದ ನೋಂದಣಿ ಪ್ರಕ್ರಿಯೆ ವಿವರ :-

ಮಹಿಳೆಯರು ಉಚಿತ ಎಂಬ್ರಾಡರಿ ತರಬೇತಿಯನ್ನ (Free Embroidery Training) ಪಡೆಯಲು ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

ಕರೆ ಮಾಡಲಾದ ಸಂಖ್ಯೆ :

  • 9505894247
  • 8970476050
  • 9591514154
  • 6363139123
  • 9686248369

ಮೇಲೆ ತಿಳಿಸಲಾದ ಫೋನ್ ನಂಬರ್ ಗೆ ಮಹಿಳೆಯರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು


Free Embroidery Training

ಪ್ರಮುಖ ದಿನಾಂಕದ ಸಂಪೂರ್ಣ ವಿವರ :-

ನೇರ ಸಂದರ್ಶನ / Interview Date: 21 ಫೆಬ್ರವರಿ 2026, ಶನಿವಾರ ನಡೆಯುತ್ತದೆ.

ಸಮಯ / Time: ಬೆಳಿಗ್ಗೆ 9:00 ಗಂಟೆಗೆ ಸರಿಯಾಗಿ ಹಾಜರಿರಬೇಕು

ತರಬೇತಿ ಕೇಂದ್ರ / Training Center:

  • ಕೆನರಾ ಬ್ಯಾಂಕ್ RSETI
  • ಸೋನ್ನಹಳ್ಳಿಪುರ, ಹಸಿಗಾಲ (ಅಂಚೆ)
  • ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ

ಸಂಪರ್ಕ / Helpline: 9591514154, 6363139123, 9686248369 ಕರೆ ಮಾಡಿ ನಿಮ್ಮನ್ನ ನೀವು ನೊಂದಾಯಿಸಿಕೊಳ್ಳಿ.

ನನ್ನ ಟಿಪ್ಸ್ :

“ಗ್ರಾಮೀಣ ಭಾಗದ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಹೆಚ್ಚಿನ ಮಾಹಿತಿ ಬೇಕಾದರೆ ಮೇಲಿನ ಸಂಖ್ಯೆಗೆ ಕರೆ ಮಾಡಿ.”

ಪದೇ ಪದೇ ಕೇಳಲಾದ ಪ್ರಶ್ನೋತ್ತರಗಳು(question and answer) :-

ಉತ್ತರ : ಕರ್ನಾಟಕದ 18–45 ವರ್ಷದ ನಿರುದ್ಯೋಗಿ ಮಹಿಳೆಯರಿಗೆ, ವಿಶೇಷವಾಗಿ ಗ್ರಾಮೀಣ ಭಾಗದ BPL ಕಾರ್ಡ್ ಹೊಂದಿರುವವರಿಗೆ ಪ್ರಥಮ ಆದ್ಯತೆ

ಉತ್ತರ : ತರಬೇತಿ ಸಂಪೂರ್ಣ ಉಚಿತ, ಊಟ ಮತ್ತು ವಸತಿ ಸಹ ಲಭ್ಯ.

ಉತ್ತರ : ಪ್ರಮಾಣಪತ್ರ ಸಿಗುತ್ತದೆ, ಸ್ವಂತ ಉದ್ಯಮ ಆರಂಭಿಸಲು ಬ್ಯಾಂಕ್ ಸಾಲ ಪಡೆಯಲು ಸಹಾಯ ಮಾಡುತ್ತದೆ.

ಉತ್ತರ : 31 ದಿನಗಳ ತರಬೇತಿ, ಪ್ರತಿದಿನ ಪ್ರಾಯೋಗಿಕ ಕಲಿಕೆ.

ಕೆಳಗಿನ ಹೆಲ್ಪ್‌ಲೈನ್ ಸಂಖ್ಯೆಗಳಿಗೆ ಕರೆ ಮಾಡಿ ನೋಂದಣಿ ಮಾಡಬಹುದು:

  • 9591514154
  • 6363139123
  • 9686248369

ಇತರೆ ಪ್ರಮುಖ ಲಿಂಕುಗಳು :

Leave a Reply

Your email address will not be published. Required fields are marked *