ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ , ಸರ್ಕಾರದಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಆಗುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುವ ಯೋಜನೆಯನ್ನು ಜಾರಿಗೆ ತಂದಿದೆ ಅದರ ಜೊತೆಗೆ 15 ದಿನಗಳ ಫ್ರೀ ಟ್ರೈನಿಂಗ್ ಕೂಡ ಅವರಿಗೆ ಇರುವಂತದ್ದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗುತ್ತದೆ.

ಈ ಲೇಖನವನ್ನು ಕೊನೆತನಕ ಓದಿ ಹಾಗೂ ಈ ಒಂದು ಯೋಜನೆಗೆ ನೀವು ಅರ್ಹರಿದರೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದು ಹಂತಂತವಾಗಿ ಕೆಳಗೆ ಎಲ್ಲ ಮಾಹಿತಿಯನ್ನು ನೀಡಲಾಗಿರುವಂಥದ್ದು ಹಾಗೆ ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ಗೆ ಜಾಯಿನ್ ಆಗಿ.
ಈ ಯೋಜನೆಯ ಮುಖ್ಯ ಉದ್ದೇಶಗಳು
- ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಕೌಶಲ್ಯ ವೃದ್ಧಿಯನ್ನು ಹೆಚ್ಚಿಸುವಂತಹ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ
- ಸ್ವ ರೋಜಗಾರ್ ಮತ್ತು ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದಲೂ ಈ ಒಂದು ಯೋಜನೆ ತುಂಬಾನೆ ಉಪಯುಕ್ತವಾಗಿದೆ
- ದಾರಿದ್ಯ ಮತ್ತು ಸ್ಥಳೀಯ ಅರ್ಥ ವ್ಯವಸ್ಥೆಯ ಸಬಲೀಕರಣವನ್ನು ಇನ್ನಷ್ಟು ಉತ್ತೇಜಿಸುವ ಒಂದು ಉದ್ದೇಶ
- ಎಸ್ಸಿ ಎಸ್ಟಿ ಒಬಿಸಿ ಇಂತಹ ವರ್ಗಕ್ಕೆ ಸೇರಿದಂತಹ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆ ಆಗುವುದಕ್ಕೆ ಈ ಒಂದು ಯೋಜನೆ ತುಂಬಾನೆ ಸಹಾಯವಾಗುತ್ತೆ
ಯಾರಿಗೆ ಅರ್ಜಿ ಸಲ್ಲಿಸುವ ಅರ್ಹತೆ ಇದೆ
ಈ ಯೋಜನೆಗೆ ಭಾರತೀಯ ನಾಗರಿಕರಾಗಿದ್ದು ಮಹಿಳಾ ಅಭ್ಯರ್ಥಿ ಆಗಿರಬೇಕು
20 ವರ್ಷದಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ಬಿಪಿಎಲ್ ಕಾರ್ಡು ಹೊಂದಿರುವಂತಹ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಆರ್ಯರಾಗಿರುತ್ತಾರೆ
ವಿಧವೆಯರು ದಿವ್ಯಂಗ ಮಹಿಳೆಯರು ಏಕ ಪೋಷಕರು ಎಸ್ಸಿ ಎಸ್ಟಿ ಒಬಿಸಿ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ
ಅರ್ಜಿದಾರರು ಈಗಾಗಲೇ ಹೊಲಿಗೆ ಯಂತ್ರವನ್ನು ಹೊಂದಿರಬಾರದು ಅಥವಾ ಇದೇ ರೀತಿಯಾದ ಯೋಜನೆಯಿಂದ ಲಾಭವನ್ನು ಪಡೆದಿರಬಾರದು ಇಂಥವರು ಈ ಯೋಜನೆಗೆ ಅರ್ಹತೆಯನ್ನು ಹೊಂದಿರುತ್ತಾರೆ
ಬೇಕಾಗುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್
- ಜನನ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ಪಾಸ್ಪೋರ್ಟ್ ಸೈಜ್ ಫೋಟೋ
- ವಿಶೇಷ ದಾಖಲೆಗಳು ಅಂದರೆ ವಿಧವಾ ಪ್ರಮಾಣ ಪತ್ರ ದಿವ್ಯಂಗತ್ವ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
ಈ ಯೋಜನೆಯ ಪ್ರಯೋಜನಗಳು
ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು ಅಥವಾ 15 ಸಾವಿರದವರೆಗೆ ಆರ್ಥಿಕ ಸಹಾಯವನ್ನು ಕೂಡ ಇಲ್ಲಿ ಪಡೆಯಬಹುದಾಗಿದೆ
15 ದಿನಗಳ ಉಚಿತ ತರಬೇತಿ ಜೊತೆಗೆ ಹೊಲಿಗೆ ಮತ್ತು ಟೈಲರಿಂಗ್ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು
ಸ್ವಾರೋಜಗಾರಿ ಪ್ರಾರಂಭಿಸಲು ಮಾರ್ಗದರ್ಶನವನ್ನು ಇಲ್ಲಿ ನೀಡಲಾಗುತ್ತೆ.
ಮಾಸಿಕ ಎರಡು ಸಾವಿರದಿಂದ ಹದಿನೈದು ಸಾವಿರದವರೆಗೆ ಹೆಚ್ಚುವರಿ ಆದಾಯವನ್ನು ಈ ಒಂದು ಮಾಡಬಹುದು ಮಾಸಿಕ ಸಾಲ ಮತ್ತು ಸಬ್ಸಿಡಿ ಅವಕಾಶಗಳು ಈ ಒಂದು ಬಿಸಿನೆಸ್ ಗೆ ಸಿಗುವಂತದ್ದು
15 ದಿನಗಳ ತರಬೇತಿ ಹೇಗಿರುತ್ತೆ?
- 15 ದಿನಗಳ ತರಬೇತಿಯನ್ನ ಮಹಿಳೆಯರಿಗೆ ಅವರು ಆಯ್ಕೆ ಮಾಡಿಕೊಂಡ ಸೆಂಟರ್ನಲ್ಲಿ ಹೋಗಿ ತರಬೇತಿಯನ್ನ ಪಡೆಯಬೇಕಾಗುತ್ತದೆ ಯೋಜನೆಯ ಅಂಗವಾಗಿ ನೀಡಲಾಗಿರುವ ಅಂತಹ 15 ದಿನಗಳ ಉಚಿತ ತರಬೇತಿ ಹೊಲಿಗೆ ಮತ್ತು ಟೈಲರಿಂಗ್ ಕ್ಷೇತ್ರದಲ್ಲಿ ಮಹಿಳೆಯರನ್ನ ಕೌಶಲ್ಯ ಪೂರ್ಣವಾಗಿ ಮಾರ್ಪಡಿಸುವಂತಹ ಉದ್ದೇಶದಿಂದ 15 ದಿನಗಳ ಉಚಿತ ತರಬೇತಿ ನೀಡಲಾಗುತ್ತಿದೆ
- 15 ದಿನಗಳ ವಿವಿಧ ಹಂತಗಳಲ್ಲಿ ಈ ಒಂದು ಯೋಜನೆಗೆ ಟ್ರೈನಿಂಗ್ ಅನ್ನು ಕೊಡಲಾಗುತ್ತೆ.
- ಪ್ರಾರಂಭಿಕ ಹಂತದಲ್ಲಿ ಒಂದರಿಂದ ಎರಡು ದಿನಗಳ ಕಾಲ ಮಷೀನ್ ಬಿಡಿ ಭಾಗಗಳ ಬಗ್ಗೆ ಪರಿಚಯವನ್ನು ಮಾಡಿಕೊಡಲಾಗುತ್ತೆ ಅದಾದ ನಂತರ ಮಷೀನ್ ಯಾವ ರೀತಿ ಬಳಸಬೇಕು ಹಾಗೆ ಯಾವ ರೀತಿ ದಾರವನ್ನ ಸೂಜಿಗೆ ಹಾಕಬೇಕು ಹೀಗೆ ಎಲ್ಲವನ್ನ ತಿಳಿಸಿಕೊಡಲಾಗುತ್ತೆ.
- ಎರಡನೇ ಹಂತದಲ್ಲಿ ಸರಳ ಹೊಲಿಗೆ ಮತ್ತು ಕಣ್ಣು ಹೊಲಿಗೆ ಪ್ಯಾಶನ್ ಹೊಲಿಗೆ ಮತ್ತು ಡಿಸೈನ್ ಬಟ್ಟೆ ಕತ್ತರಿಸುವಂತಹ ವಿಧಾನದ ಬಗ್ಗೆ ಟ್ರೈನಿಂಗ್ ಕೊಡಲಾಗುತ್ತೆ.
- 9 ರಿಂದ 13 ದಿನಗಳ ಅವಧಿಯಲ್ಲಿ ಸೀರೆ ಬ್ಲೌಸ್ ಚಡ್ಡಿ, ವಿನಿ ಫಾರಂ ತಯಾರಿಕೆ ಪರದೆ ಕವರ್ ಹಾಗೆ ದೋಷಗಳನ್ನು ಸರಿಪಡಿಸಿಕೊಳ್ಳಲು ಇಷ್ಟು ಅವಕಾಶವನ್ನು ನೀಡಲಾಗುತ್ತೆ.
- 14 ರಿಂದ 15 ದಿನಗಳ ಅವಧಿಯಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಲು ತಂತ್ರಗಳು ಗ್ರಾಹಕರನ್ನು ಆಕರ್ಷಿಸುವ ವಿಧಾನ ವೆಬ್ಸೈಟ್ ಮತ್ತು ಸೋಶಿಯಲ್ ಮೀಡಿಯಾದ ಮೂಲಕ ಮಾರುಕಟ್ಟೆಯನ್ನು ಯಾವ ರೀತಿ ಡೆವೆಲಪ್ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಇಲ್ಲಿ ನೀಡಲಾಗುತ್ತದೆ
ತರಬೇತಿ 15 ದಿನಗಳ ತರಬೇತಿ ಮುಗಿದ ನಂತರ ಮುಂದೇನು?
15 ದಿನಗಳ ತರಬೇತಿ ಮುಗಿದ ನಂತರ ಪ್ರಮಾಣ ಪತ್ರವನ್ನು ನೀಡಲಾಗುತ್ತೆ ಹಾಗೂ ಯಂತ್ರ ಮತ್ತು ತರಬೇತಿ ಪೂರ್ಣಗೊಂಡ ಮಹಿಳೆಯರು ಸ್ವಾತಂತ್ರವಾಗಿ ಉದ್ಯೋಗವನ್ನು ಪ್ರಾರಂಭಿಸಲು ಅವಕಾಶವನ್ನು ಮಾಡಿಕೊಡಲಾಗುತ್ತೆ.
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಗೆ ಆನ್ಲೈನ್ ಮತ್ತೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಅಲ್ಲಿ ಲಾಗಿನ್ ಆಗಬೇಕು ಲಾಗಿನ್ ಆಗಿ ಅರ್ಜಿ ಫಾರ್ಮನ್ನ ಭರ್ತಿ ಮಾಡಬೇಕು ಅದನ್ನ ದೃಡಿಕರಿಸಿದ ನಂತರ ಸಬ್ಮಿಟ್ ಹಚ್ಚಿದರೆ ನಿಮ್ಮ ಅರ್ಜಿ ಆನ್ಲೈನ್ ಮುಖಾಂತರ ಸಲ್ಲಿಕೆ ಆಗುತ್ತೆ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಗ್ರಾಮ ಪಂಚಾಯಿತಿ ಮಹಿಳಾ ಮತ್ತು ಬಾಲ ವಿಕಾಸ ಕಾರ್ಯಾಲಯಕ್ಕೆ ಭೇಟಿ ನೀಡಬೇಕು ಅರ್ಜಿ ಫಾರಂ ಅನ್ನ ಅಲ್ಲಿ ಪಡಿಬೇಕು ದಾಖಲೆಗಳ ಪ್ರತಿಗಳನ್ನು ಜೋಡಿಸಿ ಸಲ್ಲಿಕೆ ಪೂರ್ಣಗೊಂಡ ಫಾರ್ಮ್ ಅನ್ನು ಅದೇ ಕಾರ್ಯದಲ್ಲಿ ಮತ್ತೆ ಕೊಡಬೇಕು.
ವಿತರಣೆ ಯಾವ ರೀತಿ ಇರುತ್ತೆ
ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿ ನಿಮ್ಮ ಒಂದು ದಾಖಲೆಗಳು ಎಲ್ಲವೂ ಸರಿಯಾಗಿದ್ದರೆ ನೀವು ಅರ್ಹರಾಗಿದ್ದರೆ ನಿಮ್ಮ ಒಂದು ಅರ್ಜಿಯನ್ನ ಇಲ್ಲಿ ಮುಂದಿನ ಹಂತಕ್ಕೆ ತಲುಪಿಸಲಾಗುತ್ತದೆ
ಅಂತಿಮ ತೀರ್ಮಾನ
ಭಾರತದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸುವಂತಹ ಒಂದು ಯೋಜನೆಯನ್ನ ಸರ್ಕಾರ ರೂಪಿಸಿರುವಂಥದ್ದು ಉಚಿತ ಹೊಲಿಗೆ ಯಂತ್ರ 15 ದಿನಗಳ ಉಚಿತ ತರಬೇತಿಯ ಜೊತೆಗೆ ಮಹಿಳೆಯರನ್ನ ತಮ್ಮ ಮನೆಯಿಂದಲೇ ಒಂದು ಬಿಸಿನೆಸ್ ಮಾಡುವಂತ ಉದ್ದೇಶವನ್ನ ಇಟ್ಟುಕೊಂಡು ಇಲ್ಲಿ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತಂದಿರುವಂಥದ್ದು.
ಇದನ್ನು ಓದಿರಿ :- ಟ್ಯಾಕ್ಸಿ / ಸರಕು ವಾಹನ / ಪ್ರಯಾಣಿಕ ಆಟೋರಿಕ್ಷಾ ಖರೀದಿಗೆ ಗರಿಷ್ಠ ರೂ. 2,50,000/- ವರೆಗೆ ಸಹಾಯಧನ!