BPL ಕಾರ್ಡ್ ಹೊಂದಿರುವ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು(Free Sewing Machine) ನೀಡಲು ಮುಂದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆರಂಭಗೊಂಡಿದ್ದು, ಸಾಕಷ್ಟು ಮಹಿಳೆಯರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿದ್ದಾರೆ.
Free Sewing Machine for BPL Women
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸರ್ಕಾರವು ಜಾರಿಗೊಳಿಸಿರುವ ಸಾಕಷ್ಟು ಯೋಜನೆಗಳಲ್ಲಿ ಈ ಯೋಜನೆಯು ಒಂದಾಗಿದ್ದು, ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗ ಮಾಡುವ ಕನಸ್ಸನ್ನು ಕಾಣುತ್ತಿರುವ ಗ್ರಾಮೀಣ ಭಾಗದ ಮಹಿಳೆಯರಿಗೆ ಇದೊಂದು ಸುವರ್ಣಾವಕಾಶ.
ಸರ್ಕಾರವು ಮಹಿಳೆಯರಲ್ಲಿನ ಬಟ್ಟೆ ಹೊಲಿಯುವ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ಮೂಲಕ ಅವರು ಸ್ವಂತ ಉದ್ಯೋಗವನ್ನು ಕಂಡುಕೊಂಡು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ.
ಸರ್ಕಾರದಿಂದ ಉಚಿತ ಟೈಲರಿಂಗ್ ಮಷಿನ್ ವಿತರಣೆಗೆ
ಉಚಿತ ಹೊಲಿಗೆ ಯಂತ್ರಕ್ಕೆ (Free Sewing Machine) ಅರ್ಜಿ ಸಲ್ಲಿಸುವ ಮಹಿಳೆಯರು ಸೇವಾ ಸಿಂಧೂ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಇದೇ ರೀತಿ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿ ಪಡೆಯಬೇಕಾದರೆ ನಮ್ಮ ವೆಬ್ಸೈಟ್ ಕನ್ನಡಹೆಲ್ಪ್ ಗೆ ಭೇಟಿ ನೀಡಿ.
ಯೋಜನೆಯ ಕಿರು ನೋಟ:
| ಯೋಜನೆಯ ಹೆಸರು | ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆ (Free Sewing Machine) |
| ಅರ್ಹ ಫಲಾನುಭವಿಗಳು | ಮಹಿಳೆಯರು |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
| ಪ್ರಯೋಜನ | ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು |
ಯೋಜನೆಯ ಕಿರು ಪರಿಚಯ:
ಸರ್ಕಾರವು ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಿ, ಮಹಿಳೆಯರು ಸ್ವಂತವಾಗಿ ತಮ್ಮ ಮನೆಯಲ್ಲೇ ಉದ್ಯೋಗವನ್ನು ಪ್ರಾರಂಭಿಸಿ ಕುಟುಂಬದಲ್ಲಿ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ.
ಎಲ್ಲಾ ಜಿಲ್ಲೆಗಳಿಗೂ ನಿರ್ದಿಷ್ಟ ಸಂಖ್ಯೆಯಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಮೊದಲು ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಸಾಕಷ್ಟು ಮಹಿಳೆಯರು ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಂಡಿದ್ದು, ನೀವು ಕೂಡ ಇಂದೇ ಅರ್ಜಿ ಸಲ್ಲಿಸಿ ಉಚಿತವಾಗಿ ಹೊಲಿಗೆಯಂತ್ರವನ್ನು ಪಡೆದುಕೊಂಡು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ.
ಹೊಲಿಗೆಯಂತ್ರ ನೀಡುವ ಉದ್ದೇಶ:
- ಸ್ವಾವಲಂಬಿಯಾಗಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು:
ನಗರ ಪ್ರದೇಶದ ಮಹಿಳೆಯರು ಕಂಪ್ಯೂಟರ್ ಜ್ಞಾನವನ್ನು ಪಡೆದುಕೊಂಡು ಡಿಜಿಟಲ್ ಸೇವಾ ಕೇಂದ್ರಗಳನ್ನು ತೆರೆಯುವ ಮೂಲಕ ಸ್ವಂತ ಉದ್ಯೋಗವನ್ನು ಪಡೆದುಕೊಳ್ಳುತ್ತಾರೆ.
ಅದೇ ರೀತಿ ಗ್ರಾಮೀಣ ಭಾಗದ ಮಹಿಳೆಯರಿಗೂ ಉಚಿತ ಹೊಲಿಗೆಯಂತ್ರವನ್ನು ನೀಡುವ ಮೂಲಕ ಸ್ವಂತ ಉದ್ಯೋಗವನ್ನು ಸೃಷ್ಟಿಸಿ, ಇತರಿಗೆ ಅವಲಂಬಿತರಾಗದಂತೆ, ಸ್ವಂತ ಕಾಲಮೇಲೆ ತಾವು ನಿಂತುಕೊಳ್ಳಲು ಸಹಕಾರ ನೀಡುವುದು.
- ಕುಟುಂಬಗಳಲ್ಲಿ ಆರ್ಥಿಕ ಸುಧಾರಣೆ:
ಮಹಿಳೆಯರು ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗವನ್ನು ಮಾಡುವ ಅವಕಾಶವನ್ನು ಕಲ್ಪಿಸುವ ಮೂಲಕ , ಹೆಚ್ಚಿನ ಆದಾಯವನ್ನು ಗಳಿಸಿ ತಮ್ಮ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಂತೆ ಉತ್ತೇಜನ ನೀಡುವುದು.
- ಗ್ರಾಮೀಣ ಮಹಿಳಾ ಸಬಲೀಕರಣ :
ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರನ್ನು ಉದ್ಯಮಿಗಳನ್ನಾಗಿ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಮಹಿಳೆಯರಿಗೆ ಇದರಿಂದಾಗುವ ಪ್ರಯೋಜನಗಳೇನು?
- ಕುಟುಂಬಕ್ಕೆ ನೆರವು:
ಗ್ರಾಮೀಣ ಭಾಗದ ಬಡಕುಟುಂಬದ ಸದಸ್ಯರ ದಿನಗೂಲಿ ಸಂಬಳವು ಒಂದು ಹೊತ್ತಿನ ಊಟಕ್ಕೂ ಸರಿ ಹೊಂದದೆ ಇರುವಾಗ, ಕುಟುಂಬದ ಮಹಿಳೆಯರು ತಮ್ಮ ಅಕ್ಕ-ಪಕ್ಕದ ಮನೆಯವರ ಬಟ್ಟೆಯನ್ನು ಹೊಲಿದು ಕೊಡುವ ಮೂಲಕ ಸ್ಥಿರ ಆದಾಯವನ್ನು ಗಳಿಸಿ ತನ್ನ ಕುಟುಂಬಕ್ಕೆ ಒಂದಿಷ್ಟು ಹಣಕಾಸಿನ ನೆರವನ್ನು ನೀಡಿ ಸಮಾಜದಲ್ಲಿ ತನ್ನ ಕುಟುಂಬದ ಗೌರವವನ್ನು ಹೆಚ್ಚಿಸುವುದು.
- ಉಚಿತ ತರಬೇತಿ:
ಉಚಿತ ಹೊಲಿಗೆಯಂತ್ರ (Free Sewing Machine0ಪಡೆದುಕೊಳ್ಳುವ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಉಚಿತ ತರಬೇತಿಯನ್ನು ಪಡೆದುಕೊಳ್ಳಬಹುದು. ಇತರಿಂದಾಗಿ ಮಹಿಳೆಯರು ಹೊಸ ಆಧುನಿಕ ವಿನ್ಯಾಸದಲ್ಲಿ ಬಟ್ಟೆ ಹೊಲಿಯುವುದನ್ನು ಕಲಿಯಬಹುದಾಗಿದೆ.
ಇಷ್ಟೇ ಅಲ್ಲದೆ ತರಬೇತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ದಿನಕ್ಕೆ ₹500 ರಂತೆ ತರಬೇತಿ ಮುಗಿಯುವ ವರೆಗೂ ಸ್ಟೈಪಂಡ್ ನೀಡಲಾಗುವುದು.
- ದೊಟ್ಟ ಮಟ್ಟದ ಉದ್ಯಮ ಪ್ರಾರಂಭಿಸಲು ಅವಕಾಶ:
ಮಹಿಳೆಯರಿಗೆ ಸರ್ಕಾರವು ಉಚಿತ ಹೊಲಿಗೆಯಂತ್ರ ನೀಡುವುದರ ಜೊತೆಗೆ ತರಬೇತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ತರಬೇತಿ ಪಡೆದ ಎಲ್ಲಾ ಮಹಿಳೆಯರಿಗೂ ಸರ್ಕಾರವು ಪ್ರಮಾಣಪತ್ರ ನೀಡುವುದರಿಂದ ಈ ಪ್ರಮಾಣಪತ್ರವನ್ನು ತೋರಿಸಿ ಬ್ಯಾಂಕ್ ನಿಂದ ಸಾಲವನ್ನು ಪಡೆದು ದೊಡ್ಡ ಮಟ್ಟದಲ್ಲಿ ಉದ್ಯಮವನ್ನು ಪ್ರಾರಂಭಿಸಬಹುದಾಗಿದೆ.

ಮಹಿಳೆಯರು ಹೊಂದಿರಬೇಕಾದ ಅರ್ಹತೆಗಳು:
ಈ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸುವುದಾದರೆ ಈ ಕೆಳಗೆ ಕೊಡಲಾಗಿರುವ ಅರ್ಹತೆಗಳನ್ನು ನೀವು ಹೊಂದಿರಬೇಕಾಗುತ್ತದೆ
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು BPL ಕಾರ್ಡ್ ಹೊಂದಿರಬೇಕು.
- ಅರ್ಜಿ ಸಲ್ಲಿಸುವವರು ಮಹಿಳೆಯರಾಗಿದ್ದು, ಬಟ್ಟೆ ಹೊಲಿಯುವವರಾಗಿರಬೇಕು.
- ಮಹಿಳೆಯರು ಕನಿಷ್ಠ 18 ವರ್ಷ ಹಾಗೂ ಗರಿಷ್ಟ 55 ವರ್ಷ ವಯೋಮಿತಿ ಹೊಂದಿರಬೇಕು.
- ಈ ಹಿಂದೆ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆದುಕೊಂಡಿರಬಾರದು.
- ವಿಧವೆಯರಿಗೆ, ನಿರ್ಗತಿಕ ಮಹಿಳೆಯರಿಗೆ ಹಾಗೂ ಅಂಗವಿಕಲ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಮೊದಲ ಆದ್ಯತೆ ನೀಡಲಾಗುವುದು.
- ಒಂದು ಕುಟುಂಬದ ಇಬ್ಬರು ಮಹಿಳಾ ಸದಸ್ಯರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶವಿಲ್ಲ.
- ಅರ್ಜಿಸಲ್ಲಿಸುವ ಮಹಿಳೆಯರ ಕುಟುಂಬದಲ್ಲಿ ಯಾವ ಸದಸ್ಯರು ಗವರ್ನಮೆಂಟ್ ನೌಕರರಾಗಿರಬಾರದು.
| ಮುಖ್ಯ ಸೂಚನೆ: “ಮಹಿಳೆಯರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ಸರ್ಕಾರದ ಕಡೆಯಿಂದ ನೀಡಲಾದ ಉಚಿತ ತರಬೇತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.” |
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು :-
- ಅರ್ಜಿದಾರರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ
- ಬ್ಯಾಂಕ್ ಪಾಸ್ ಪುಸ್ತಕ
- 2 ಪಾಸ್ ಪೋರ್ಟ್ ಅಳತೆಯ ಫೋಟೋ
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
- ಜನ್ಮ ದಿನಾಂಕ ನಮೂದಿಸಿರುವ ದಾಖಲೆ
- ಕೌಶಲ್ಯ ತರಬೇತಿ ಪ್ರಮಾಣಪತ್ರ
- ವಿಧವಾ/ ಅಂಗವಿಕಲತೆ ಪ್ರಮಾಣಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮಹಿಳೆಯರು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :
- ಅಭ್ಯರ್ಥಿಗಳು ಸೇವಾ ಸಿಂಧೂ ಅಧಿಕೃತ ವೆಬ್ಸೈಟ್ https://sevasindhuservices.karnataka.gov.in/ ಗೆ ಭೇಟಿ ನೀಡಿ
- ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಅನ್ನು ನಮೂದಿಸಿ ನೋಂದಣಿ ಪೂರ್ಣಗೊಳಿಸಿ.
- ನಂತರ ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ವೈಯಕ್ತಿಕ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ ಅರ್ಜಿ ಪ್ರತಿಯನ್ನು ಪ್ರಿಂಟ್ ತಗೆದುಕೊಳ್ಳಿ.
ಕೊನೆಯ ನುಡಿ:
| ಉಚಿತ ಹೊಲಿಗೆಯಂತ್ರ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ನಮ್ಮ ಊರಿನ ಸಾಕಷ್ಟು ಮಹಿಳೆಯರು ಸರ್ಕಾರದಿಂದ ನೀಡಿರುವ ಉಚಿತ ಹೊಲಿಗೆ ತರಬೇತಿಯನ್ನು ಪಡೆದುಕೊಂಡು ಈಗಾಗಲೇ ಉಚಿತ ಹೊಲಿಗೆಯಂತ್ರ ಪಡೆಯಲು ಅರ್ಜಿಯನ್ನು ಹಾಕಿ ಹೊಲಿಗೆ ಯಂತ್ರವನ್ನು ಪಡೆದುಕೊಂಡಿದ್ದಾರೆ. ನೀವು ಕೂಡ ತರಬೇತಿಯನ್ನು ಪಡೆದುಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಹೊಲಿಗೆಯಂತ್ರವನ್ನು ತಮ್ಮದಾಗಿಸಿಕೊಳ್ಳಿ. |
ಇತರೆ ಪ್ರಮೂಖ ಲಿಂಕುಗಳು:
- ಹೊಸ ಅಡಿಕೆ ತೋಟಕ್ಕೆ ಬಾರಿ ಮೊತ್ತದ ಸಬ್ಸಿಡಿ!
- ಎಲ್ಲಾ ಗ್ರಾಮ ಪಂಚಾಯಿತಿಯಿಂದ ವಿದ್ಯಾರ್ಥಿಗಳಿಗೆ ಸಿಗುತ್ತೆಈ ವಿದ್ಯಾರ್ಥಿ ವೇತನ!
- ರೂ1.62-1.63 ಲಕ್ಷ ಕೋಟಿ ಬಜೆಟ್ ಮೀಸಲು! – ರೈತರಿಗೆ ಬಂಪರ್ ಗಿಫ್ಟ್!
- ಉಚಿತ ಮೇವಿನ ಬೀಜದ ಕಿಟ್ ವಿತರಣೆ – ಆನ್ಲೈನ್ ಅರ್ಜಿ.!


Super
Yes