Free Laptop : ಸರ್ಕಾರದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆ 2026!

Free Laptop

ಆತ್ಮೀಯ ವಿದ್ಯಾರ್ಥಿಗಳೇ, ನಿಮಗೆ ಗೊತ್ತಿಲ್ಲದೇ ಇದೀಗ ಆನ್ಲೈನ್ ನಲ್ಲಿ ಉಚಿತ ಲ್ಯಾಪ್ ಟಾಪ್ (Free Laptop)ಗೆ ಅರ್ಜಿ ಸಲ್ಲಿಸುತ್ತಿದ್ದಾರೆ …ಹಲವು ವಿದ್ಯಾರ್ಥಿಗಳು .. ನಿಮಗೇನಾದರೂ ತಾಂತ್ರಿಕ ಶಿಕ್ಷಣ ಪಡೆದುಕೊಳ್ಳಲು ವಂಚಿತರಾಗುತ್ತಿದ್ದೀರಾ? ಅಥವಾ ತಾಂತ್ರಿಕ ಶಿಕ್ಷಣ ಪಡೆಯಲು ಬೇಕಾದ ಮೂಲ ಸೌಲಭ್ಯಗಳ ಕೊರತೆ ಇದೆಯೇ? ಹಾಗಿದ್ದರೆ ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ, ಸರ್ಕಾರವು ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ (Free Laptop)ನೀಡಲು ಮುಂದಾಗಿದೆ.

Free Laptop In Kannada

ಕರ್ನಾಟಕ ಸರ್ಕಾರವು ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ‘ಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲು ಮುಂದಾಗಿದ್ದು, ತಂದೆ ಅಥವಾ ತಾಯಿಯಲ್ಲಿ ಒಬ್ಬರು ಲೇಬರ್ ಕಾರ್ಡ್ ಹೊಂದಿದ್ಧರೆ, ಅಂತವರ ಮಕ್ಕಳು ಉಚಿತ ಲ್ಯಾಪ್ಟಾಪ್ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ನಿಮ್ಮ ತಂದೆ ಅಥವಾ ತಾಯಿ ಇವರಲ್ಲಿ ಯಾರಾದರೊಬ್ಬರ ಬಳಿ ಲೇಬರ್ ಕಾರ್ಡ್ ಇದೆಯಾ? ಹಾಗಿದ್ದರೆ, ನೀವು ಇಂದೇ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. ವಿದ್ಯಾರ್ಥಿಗಳ ನೆರವಿಗೆಂದೇ ಇರುವ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿ ಬೇಕಿದ್ದರೆ, ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ.

ಯೋಜನೆಯ ಕಿರು ನೋಟ:

ಇಲಾಖೆ ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ
ಯೋಜನೆಯ ಹೆಸರು ಉಚಿತ ಲ್ಯಾಪ್ಟಾಪ್ ವಿತರಣಾ ಯೋಜನೆ (Free Laptop)
ಫಲಾನುಭವಿಗಳುಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮತ್ತು ಆಫ್ಲೈನ್

ಉಚಿತ ಲ್ಯಾಪ್ಟಾಪ್ ವಿತರಣಾ ಯೋಜನೆಯ ಕುರಿತು:

ಉಚಿತ ಲ್ಯಾಪ್ಟಾಪ್ ಯೋಜನೆ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆಂದೇ ಜಾರಿಗೆ ತಂದಿರುವ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕಾರ್ಮಿಕ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು, ಮುಖ್ಯವಾಗಿ ಅವರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ವಿದ್ಯಾರ್ಥಿಗಳು ಕಾರ್ಮಿಕರ ಮಕ್ಕಳಾಗಿದ್ದು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ITI, ವೈದ್ಯಕೀಯ, ಎಂಜಿನೀರಿಂಗ್ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದರ ಜೊತೆಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು.

ಯೋಜನೆಯ ಮುಖ್ಯ ಗುರಿ:

1. ಉನ್ನತ ಶಿಕ್ಷಣಕ್ಕೆ ನೆರವು:

ಆರ್ಥಿಕವಾಗಿ ಹಿಂದುಳಿದ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅಗತ್ಯವಾಗುವ ಲ್ಯಾಪ್ಟಾಪ್ ಗಳನ್ನು ಉಚಿತವಾಗಿ ನೀಡುವ ಮೂಲಕ ಅವರು ಉನ್ನತ ಶಿಕ್ಷಣವನ್ನು ಪಡೆಯಲು ವಂಚಿತರಾಗದಂತೆ ತಡೆಯುವುದು ಮತ್ತು ಶೈಕ್ಷಣಿಕ ಮಟ್ಟವನ್ನು ಸುಧಾರಿಸುವುದು.

2. ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವುದು:

ಇಂದಿನ ಯುಗದಲ್ಲಿ ಡಿಜಿಟಲ್ ಕೌಶಲ್ಯವೇ ಮುಖ್ಯವಾಗಿದ್ದು, ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ (Free Laptop) ನೀಡುವ ಮೂಲಕ ಅವರು ಇಂಟರ್ನೆಟ್ ಬಳಕೆ, ಕಂಪ್ಯೂಟರ್ ಕಾರ್ಯಾಚರಣೆ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆಯುವಂತೆ ಮಾಡುವುದು.

3. ಆರ್ಥಿಕ ಸ್ವಾವಲಂಬನೆ:

ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಣ ನೀಡಿ ಕೋಚಿಂಗ್ ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ (Free Laptop)ನೀಡುವ ಮೂಲಕ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದರಾಗುವಂತೆ ಮಾಡಿ, ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗವನ್ನು ಪಡೆದು, ಅವರು ತಮ್ಮ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡಿ ಬಡತನ ಮುಕ್ತಗೊಳಿಸಲು ಪ್ರೇರೇಪಿಸುವುದು.

4. ಸಮಾನ ಅವಕಾಶ:

ಶ್ರೀಮಂತ ವಿದ್ಯಾರ್ಥಿಗಳಿಗೆ ಸಿಗುವ ತಾಂತ್ರಿಕ ಶಿಕ್ಷಣವು ಬಡ ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ಉಚಿತ ಲ್ಯಾಪ್ಟಾಪ್ ನೀಡುವ ಮೂಲಕ ಬಡ ವಿದ್ಯಾರ್ಥಿಗಳೂ ಕೂಡ ತಾಂತ್ರಿಕ ಶಿಕ್ಷಣವನ್ನು ಪಡೆಯುವಂತೆ ಅವಕಾಶವನ್ನು ಕಲ್ಪಿಸುವುದು.

ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳು:

ITI, ಪದವಿ, ಸ್ನಾತಕೋತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ವೈದ್ಯಕೀಯ ಇತರೆ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಪಡೆಯಲು ಉಚಿತ ಲ್ಯಾಪ್ಟಾಪ್ ನೀಡಿ, ಅವರ ತಾಂತ್ರಿಕ ಶಿಕ್ಷಣಕ್ಕೆ ನೆರವಾಗುವುದು.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಇ-ಪುಸ್ತಕಗಳು, ವಿಡಿಯೋ ಪಾಠಗಳನ್ನು ವೀಕ್ಷಣೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಇಷ್ಟೇ ಅಲ್ಲದೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಇಂಟರ್ನೆಟ್ ಮೂಲಕ ಉದ್ಯೋಗ ಮಾಹಿತಿಯನ್ನು ಪಡೆದುಕೊಳ್ಳಲು ಸಹ ಈ ಲ್ಯಾಪ್ಟಾಪ್ ನೆರವಾಗುತ್ತದೆ.

ಯಾವ ವಿದ್ಯಾರ್ಥಿಗಳು ಅರ್ಹರು?

  • ವಿದ್ಯಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ವಿದ್ಯಾರ್ಥಿಗಳು ಮಾನ್ಯತೆ ಪಡೆದ ಸರ್ಕಾರಿ ಸಂಸ್ಥೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ITI, ಇಂಜಿನಿಯರಿಂಗ್, ವೈದ್ಯಕೀಯ ಇತರೆ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  • ಕರ್ನಾಟಕದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಕ್ರಿಯ ಸದಸ್ಯರಾಗಿರುವ ಹಾಗೂ ಲೇಬರ್ ಕಾರ್ಡ್ ಹೊಂದಿರುವ ಪೋಷಕರ ಮಕ್ಕಳು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ವಿದ್ಯಾರ್ಥಿಯು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 50% ಅಥವಾ 60% ಅಂಕವನ್ನು ಗಳಿಸಿರಬೇಕು.
  • ಯಾವುದೇ ವರ್ಗದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ವಿದ್ಯಾರ್ಥಿಯು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 75% ಹಾಜರಾತಿ ಹೊಂದಿರುವುದು ಕಡ್ಡಾಯ.
ಇಲ್ಲಿ ಗಮನಿಸಿ: “ಒಬ್ಬ ವಿದ್ಯಾರ್ಥಿ ತಮ್ಮ ಶೈಕ್ಷಣಿಕ ಜೀವನದಲ್ಲಿ ‘ಉಚಿತ ಲ್ಯಾಪ್ಟಾಪ್ ಯೋಜನೆಗೆ’ (Free Laptop) ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ”

ಅಗತ್ಯ ದಾಖಲೆಗಳು:

  • ಕರ್ನಾಟಕ ನಿವಾಸ ಪ್ರಮಾಣ ಪತ್ರ
  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪೋಷಕರ ಲೇಬರ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ

ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ:

ಉಚಿತ ಲ್ಯಾಪ್ಟಾಪ್ ಯೋಜನೆಗೆ ಇದೀಗ ಕರ್ನಾಟಕ ಸರ್ಕಾರದಿಂದ ಯಾವುದೇ ಅರ್ಜಿಯನ್ನು ಬಿಡುಗಡೆ ಮಾಡಿಲ್ಲ ಮುಂದಿನ ದಿನಗಳಲ್ಲಿ ಈ ಯೋಜನೆಗೆ ಸರ್ಕಾರ ಒತ್ತನ್ನು ಕೊಟ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಣಾ ಯೋಜನೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ ಭಾರತದ ಇತರ ರಾಜ್ಯಗಳಲ್ಲಿ ಸಾಕಷ್ಟು ಕಡೆ ಉಚಿತ ಲ್ಯಾಪ್ಟಾಪ್ ಯೋಜನೆ ಜಾರಿಯಲ್ಲಿದ್ದು ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿಗಳು ಈ ಯೋಜನೆಗೆ ಆಫ್ಲೈನ್ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ವಿದ್ಯಾರ್ಥಿಗಳು ತಮ್ಮ ಹತ್ತಿರದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಗೆ ಭೇಟಿ ನೀಡಿ.
  • ಅಲ್ಲಿ ಉಚಿತ ಲ್ಯಾಪ್ಟಾಪ್ ಗೆ ಅರ್ಜಿ ಸಲ್ಲಿಸುವ ಪ್ರತಿಯನ್ನು ತಗೆದುಕೊಳ್ಳಿ.
  • ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ.
  • ನಂತರ ಅಗತ್ಯ ದಾಖಲೆಗಳನ್ನು ಅರ್ಜಿ ಪ್ರತಿಯೊಂದಿಗೆ ಲಗತ್ತಿಸಿ, ಅರ್ಜಿ ಪ್ರತಿಯನ್ನು ಇಲಾಖೆಗೆ ಸಲ್ಲಿಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಿ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧೂ ಅಧಿಕೃತ ಪೋರ್ಟಲ್ http://sevasindhuservices.karnataka.gov.in/ ಗೆ ಭೇಟಿ ನೀಡಿ.
  • ಹೊಸ ಬಳಕೆದಾರರಾಗಿದ್ದರೆ, ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ
  • ಅಲ್ಲಿ ಕೇಳಲಾದ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಅಪ್ಲೈ ಬಟನ್ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
  • ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತಗೆದುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ: “ಕಾರ್ಮಿಕ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ಇಲ್ಲವೇ ಕಾರ್ಮಿಕರ ಇಲಾಖಾ ಸಹಾಯವಾಣಿ 080-22273241 ಅಥವಾ ಸೇವಾ ಸಿಂಧೂ ಸಹಾಯವಾಣಿ 080-22230282 ಗೆ ಕರೆಮಾಡಿ.”

ಅಂತಿಮ ಮಾತು:

ಕರ್ನಾಟಕ ಸರ್ಕಾರವು ಕಾರ್ಮಿಕರ ಮಕ್ಕಳಿಗಾಗಿ ಉಚಿತ ಲ್ಯಾಪ್ಟಾಪ್ (Free Laptop)ವಿತರಣಾ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಸೇವಾ ಸಿಂಧೂ ಪೋರ್ಟಲ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಗೆ ಭೇಟಿ ನೀಡಿ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಉನ್ನತ ಶಿಕ್ಷಣ ಪಡೆಯುತ್ತಿರುವ ಕಾರ್ಮಿಕರ ಮಕ್ಕಳಿಗೆ ಇದೊಂದು ಅತ್ಯುತ್ತಮ ಅವಕಾಶ. ತಪ್ಪದೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.


ಇತರೆ ಪ್ರಮುಖ ಲಿಂಕುಗಳು:

One thought on “Free Laptop : ಸರ್ಕಾರದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆ 2026!

Leave a Reply

Your email address will not be published. Required fields are marked *