ಕರ್ನಾಟಕದ ಪ್ರತಿಯೊಬ್ಬ ರೈತರಿಗೂ ಸರ್ಕಾರದ ವತಿಯಿಂದ ಉಚಿತವಾಗಿ ತೂಕ ಮಾಡುವ ಮಷೀನ್ ನೀಡಲಾಗುತ್ತಿದೆ ಈ ಒಂದು ಯೋಜನೆಗೆ ನೀವು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಪ್ರತಿಯೊಂದು ಮನೆಗೂ ಇದರ ಲಾಭ ದೊರೆಯಬೇಕು ಎಂದು ಸರ್ಕಾರ ಇಂತಹ ಒಂದು ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದು ಉಚಿತವಾಗಿ ನಿಮಗೆ ತೂಕದ ಮಷಿನ್ ಬೇಕಾ ಹಾಗಿದ್ದರೆ ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ.
ಯೋಜನೆಯ ಉದ್ದೇಶ
ಪ್ರತಿಯೊಬ್ಬ ರೈತರು ತಾವು ಬೆಳೆದಿರುವಂತಹ ಬೆಳೆಗಳನ್ನ ತೂಕ ಮಾಡಲು ಅಕ್ಕಪಕ್ಕದ ಮನೆಯ ತೂಕದ ಮಷೀನ್ ತರುವುದು ಅಥವಾ ದಲ್ಲಾಳಿಗಳು ತಂದಿರುವ ಮಷೀನ್ ನಲ್ಲಿ ರೈತರು ಬೆಳೆದಿರುವಂತಹ ಬೆಳೆಗಳನ್ನ ತೂಕ ಮಾಡುವುದು ಅಥವಾ ಅಂಗಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ರೈತರ ಬೆಳೆಗಳನ್ನ ತೂಕ ಮಾಡುವುದು ಅಷ್ಟು ಸೂಕ್ತವಲ್ಲ ಯಾಕೆಂದರೆ ಅಲ್ಲಿ ಮಷೀನ್ ಯಾವ ಕಂಡೀಶನಲ್ಲಿ ಇರುತ್ತೆ ಅನ್ನುವಂತಹ ಮಾಹಿತಿ ರೈತರಿಗೆ ಗೊತ್ತಿರುವುದಿಲ್ಲ ಹಾಗಾಗಿ ರೈತರಿಗೆ ತಾವು ಬೆಳೆದಿರುವಂತಹ ಬೆಳೆ ಎಷ್ಟು ತೂಕ ಬರುತ್ತೆ ಎಂದು ಸ್ಪಷ್ಟವಾದ ಅರಿವು ಬೇಕು ಸ್ಪಷ್ಟವಾಗಿ ತಿಳಿಯಬೇಕು ಎಂದರೆ ಅವರದೇ ಆಗಿರುವಂತ ಸ್ವಂತವಾದ ಎಲೆಕ್ಟ್ರಿಕ್ ವೇಯಿಂಗ್ ಮಷೀನ್ ಇದ್ದರೆ ರೈತರಿಗೆ ತಾವು ಬೆಳೆದಿರುವಂತಹ ಬೆಳೆಗಳ ತೂಕ ಸ್ಪಷ್ಟವಾಗಿ ಅವರಿಗೆ ತಿಳಿಯುತ್ತದೆ ಹಾಗಾಗಿ ಇದರಿಂದ ರೈತರಿಗೆ ಮೋಸ ಆಗೋದನ್ನ ತಪ್ಪಿಸಲು ಸಹಾಯ ಮಾಡುವ ಉದ್ದೇಶವನ್ನು ಈ ಒಂದು ಯೋಜನೆ ಹೊಂದಿದೆ.
ಈ ಯೋಜನೆಯ ಪ್ರಯೋಜನಗಳು
-
ಮೋಸದ ತಡೆ: ತಮ್ಮ ಬೆಳೆಯ ನಿಖರ ತೂಕ ತಿಳಿದಿರುವ ರೈತರನ್ನು ದಲ್ಲಾಳಿಗಳು ಸುಲಭವಾಗಿ ಮೋಸ ಮಾಡಲಾಗುವುದಿಲ್ಲ.
-
ಆರ್ಥಿಕ ನ್ಯಾಯ : ರೈತರಿಗೆ ಅವರ ಬೆಳೆಯ ನಿಜವಾದ ಮೌಲ್ಯ ಸಿಗಲು ಸಹಾಯ ಮಾಡುತ್ತದೆ.
-
ಸಮಯ ಮತ್ತು ಶ್ರಮ ಉಳಿತಾಯ: ಬೆಳೆಯನ್ನು ಇನ್ನೊಂದು ಸ್ಥಳಕ್ಕೆ ಸಾಗಿಸುವ ಅಗತ್ಯವಿಲ್ಲ. ತಮ್ಮ Farm ನಲ್ಲೇ ತೂಕ ಮಾಡಬಹುದು.
-
ರೆಕಾರ್ಡ್ ಇಡಲು ಸಹಾಯ: ವಿವಿಧ ಬೆಳೆಗಳು, ಭೂಮಧ್ಯೆಗಳ ತೂಕದ ರೆಕಾರ್ಡ್ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದು ಭವಿಷ್ಯದ ಯೋಜನೆಗೆ ಉಪಯುಕ್ತ.
-
ಅನುಕೂಲಕರತೆ: ಯಾವುದೇ ಸಮಯ, ಯಾವುದೇ ದಿನ ತೂಕ ಮಾಡಲು ಸಾಧ್ಯವಾಗುತ್ತದೆ.
ಸಮಸ್ಯೆಯ ಅರಿವು ಮೂಡಿಸಿಕೊಳ್ಳುವುದು
ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡುವಾಗ, ತೂಕವನ್ನು ಅವಲಂಬಿಸಿ ಬೆಳೆಯ ಮೌಲ್ಯ ನಿರ್ಧಾರವಾಗುತ್ತದೆ. ಆದರೆ, ತೂಕ ಮಾಪನದ ಪ್ರಕ್ರಿಯೆಯಲ್ಲಿ ಹಲವಾರು ಅನಿಶ್ಚಿತತೆಗಳಿವೆ:
ಪರದೆಯ ತೂಕ ಯಂತ್ರಗಳು:
ಅಕ್ಕಪಕ್ಕದ ರೈತ ಅಥವಾ ದಲ್ಲಾಳಿ ತರುವ ತೂಕ ಯಂತ್ರವು ಸರಿಯಾಗಿ ಕ್ಯಾಲಿಬ್ರೇಟ್ ಆಗಿದೆಯೋ, ಸರಿಯಾಗಿ ಕೆಲಸ ಮಾಡುತ್ತಿದೆಯೋ ಎಂಬುದರ ಬಗ್ಗೆ ರೈತರಿಗೆ ಖಚಿತತೆ ಇರುವುದಿಲ್ಲ.
ಸ್ಥಳಾಂತರದ ತೊಂದರೆ:
ಬೆಳೆಯನ್ನು ಮಾರುಕಟ್ಟೆ ಅಥವಾ ಅಂಗಡಿಗೆ ತೆಗೆದುಕೊಂಡು ಹೋಗಿ ತೂಕ ಮಾಡುವುದು ಸಮಯವನ್ನು ವ್ಯಯಿಸುವ ಮತ್ತು ಶ್ರಮದಾಯಕ ಪ್ರಕ್ರಿಯೆ.
ಮೋಸದ ಅವಕಾಶ:
ಈ ಅನಿಶ್ಚಿತತೆಯ ಸಂದರ್ಭದಲ್ಲಿ, ದಲ್ಲಾಳಿಗಳು ಅಥವಾ ಕೊಳ್ಳುವವರು ತಪ್ಪು ತೂಕ ಯಂತ್ರವನ್ನು ಬಳಸಿ ಅಥವಾ ತೂಕದಲ್ಲಿ ತಪ್ಪು ತೋರಿಸಿ ರೈತರನ್ನು ಸುಲಭವಾಗಿ ಮೋಸ ಮಾಡಬಹುದು. ಇದರಿಂದ ರೈತರಿಗೆ ಸರಿಯಾದ ಬೆಲೆ ಸಿಗುವುದಿಲ್ಲ.
ಪರಿಹಾರವನ್ನು ಗುರುತಿಸುವುದು
ನಿಖರತೆ:
ಎಲೆಕ್ಟ್ರಿಕ್ ಯಂತ್ರಗಳು ಡಿಜಿಟಲ್ ರೀತಿಯಲ್ಲಿ ತೂಕ ತೋರಿಸುತ್ತವೆ, ಇದರಿಂದ ತೂಕದಲ್ಲಿ ಯಾವುದೇ ಸಂದೇಹ ಅವಕಾಶ ಇರುವುದಿಲ್ಲ.
ಪಾರದರ್ಶಕತೆ:
ರೈತರಿಗೆ ತಮ್ಮ ಬೆಳೆಯ ನಿಖರ ತೂಕ ಮೊದಲೇ ತಿಳಿಯುತ್ತದೆ. ಮಾರಾಟದ ಸಮಯದಲ್ಲಿ ಅವರು ಆತ್ಮವಿಶ್ವಾಸದಿಂದ ಸಂಭಾಷಣೆ ನಡೆಸಬಹುದು.
ಆತ್ಮವಿಶ್ವಾಸ:
ಸ್ಪಷ್ಟ ಮಾಹಿತಿ ಇರುವ ರೈತರು ಮಾರುಕಟ್ಟೆಯಲ್ಲಿ ಚೌಕಾಸಿ ಮಾಡಲು ಸಿದ್ಧರಾಗಿರುತ್ತಾರೆ.
ಯಂತ್ರದ ಆಯ್ಕೆ
ರೈತರ ಅವಶ್ಯಕತೆಗೆ ಅನುಗುಣವಾದ (ಸಾಮಾನ್ಯವಾಗಿ 50 ಕೆ.ಜಿ. ರಿಂದ 100 ಕೆ.ಜಿ. ವರೆಗಿನ) ಎಲೆಕ್ಟ್ರಿಕ್ ಡಿಜಿಟಲ್ ತೂಕ ಯಂತ್ರಗಳನ್ನು ಗುರುತಿಸಬೇಕು.
ಯಂತ್ರವು ಬ್ಯಾಟರಿ ಮತ್ತು ಮೇಯಿನ್ಸ್ (ವಿದ್ಯುತ್) ಎರಡರಲ್ಲೂ ಕೆಲಸ ಮಾಡುವಂತಹುದಾಗಿರಬೇಕು, ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಇರಬಹುದು.
ಅರ್ಹತೆ
- ಅರ್ಧ ಎಕರೆ ಜಮೀನು ಹೊಂದಿರಬೇಕು
- ಗ್ರಾಮೀಣ ಪ್ರದೇಶದ ರೈತರಿಗೆ ಮೊದಲ ಆದ್ಯತೆ
- ಪಹಣಿ ಹೊಂದಿರಬೇಕು
- ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕು
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವೋಟರ್ ಐಡಿ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಪಹಣಿ
- ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಿಅಂತಿಮ ತೀರ್ಮಾನ
ರೈತರು ತಾವು ಬೆಳೆದಿರುವಂತಹ ಬೆಳೆಗಳಿಗೆ ಒಂದು ಕಡೆ ಸೂಕ್ತವಾದ ಬೆಲೆ ಇಲ್ಲ ಅದರ ಜೊತೆಗೆ ಮಧ್ಯವರ್ತಿಗಳ ಹಾವಳಿ ಈ ರೀತಿ ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರಿಗೆ ಎಲ್ಲಾ ಕಡೆಯಿಂದಲೂ ಮೋಸ ಆಗುತ್ತಿದೆ ಈ ಮೋಸ ತಪ್ಪಿಸಲು ಇದೀಗ ಹೊಸ ಯೋಜನೆ ಸರ್ಕಾರ ಜಾರಿಗೆ ತಂದಿದ್ದು ಪ್ರತಿಯೊಬ್ಬ ರೈತರಿಗೂ ಉಚಿತವಾಗಿ ಡಿಜಿಟಲ್ ತೂಕದ ಮಷೀನ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವಿಷಯ ಇದಾಗಿದೆ ಪ್ರಸ್ತುತ ಇದು ಬೇರೆ ಬೇರೆ ರಾಜ್ಯಗಳಲ್ಲಿ ಲಭ್ಯವಿದ್ದು ಕರ್ನಾಟಕದಲ್ಲಿ ಇದುವರೆಗೆ ಇಂತಹ ಯೋಜನೆ ಜಾರಿಗೆ ಬಂದಿಲ್ಲ ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿಗೆ ಬಂದರೆ ರೈತರಿಗೆ ತುಂಬಾನೇ ಸಹಕಾರಿಯಾಗಲಿದೆ ಹಾಗೂ ರೈತರು ಮೋಸ ಹೋಗುವುದನ್ನ ತಪ್ಪಿಸಬಹುದು.
