Fodder Seed Kit : ಉಚಿತ ಮೇವಿನ ಬೀಜದ ಕಿಟ್ ವಿತರಣೆ – ಆನ್ಲೈನ್ ಅರ್ಜಿ.!

Fodder Seed Kit

ಹೈನುಗಾರಿಕೆಯನ್ನು ಬದುಕನ್ನಾಗಿಸಿಕೊಂಡಿರುವ ನಮ್ಮ ರೈತ ಮಿತ್ರರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ, ಬಡ ಹಾಗು ಪಶುಸಂಗೋಪನೆ ಮಾಡುತ್ತಿರುವ ರೈತರಿಗೆ ಸರ್ಕಾರದಿಂದ ಉಚಿತ ಮೇವಿನ ಬೀಜದ ಕಿಟ್ (Fodder Seed Kit) ವಿತರಣಾ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿವೆ.

Fodder Seed Kit In Kannada

ಹೈನುಗಾರಿಕೆಯು (Fodder Seed Kit) ಇಂದು ಗ್ರಾಮೀಣ ಭಾಗದ ರೈತರ ಹೃದಯ ಅಂತಾನೆ ಹೇಳಬಹುದು ಹಸು ಎಮ್ಮೆಯಿಂದ ದೊರೆಯುವ ಹಾಲು ಸಾವಿರಾರು ಕುಟುಂಬಗಳ ಜೀವನ ಸಾಗುತ್ತಿದೆ. ನಾವು ನೀಡುವಂತಹ ಪೌಷ್ಟಿಕ ಆಹಾರ ಮತ್ತು ಬೇವಿನ ಮೇಲೆ ಜಾನುವಾರುಗಳು ಹಾಗೂ ಕುರಿಗಳ ಆರೋಗ್ಯ ಸೀಮಿತವಾಗಿರುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹಿಂಡಿ ಜೋಳದ ಕಡ್ಡಿ ಇವುಗಳ ಬೆಲೆ ಕೇಳಿದರೆ ಸಾಕು ತಲೆ ಸುತ್ತುತ್ತದೆ.

ಹೆಚ್ಚಿನ ಹಣ ವೆಚ್ಚಮಾಡಿ ಅವುಗಳಿಗೆ ಉತ್ತಮ ಆಹಾರವನ್ನು ಒದಗಿಸುವದು ರೈತರ ಜೇಬಿಗೆ ಕತ್ತರಿಯಾಗಿದೆ. ಹಾಲಿನಿಂದ ಬರುವ ಆದಾಯವು ಅವುಗಳಿಗೆ ಸರಿ ಆದರೆ ಜೀವನ ನೆಡಿಸುವುದು ಕಷ್ಟವಾಗುತ್ತದೆ ಇದನ್ನು ಅರಿತುಕೊಂಡು ಸರ್ಕಾರ ರೈತರು ತಮ್ಮದೇ ಆದ ಜಮೀನಿನಲ್ಲಿ ಬೀಜಗಳನ್ನು ನಾಟಿ ಮಾಡಿ ಪಶುಗಳಿಗೆ ಉತ್ತಮ ಆಹಾರವನ್ನು ನೀಡುವ ದೃಷ್ಟಿಕೋನದಿಂದ ಈ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಿದೆ.

ಯೋಜನೆಯ ಕಿರು ನೋಟ:-

ಯೋಜನೆ ಹೆಸರುಮೇವಿನ ಕಿರು ಪುಟ್ಟಣಗಳ ವಿತರಣೆ ಯೋಜನೆ (Fodder Seed Kit)
ಫಲಾನುಭವಿಗಳುಸಣ್ಣ ಹಾಗೂ ಅತಿ ಸಣ್ಣ ರೈತರು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರುಗಳು
ಅರ್ಜಿ ಸಲ್ಲಿಸುವ ವಿಧಾನಆಫ್ ಲೈನ್
ಅರ್ಜಿ ಸಲ್ಲಿಸುವ ರಾಜ್ಯಕರ್ನಾಟಕ

ಏನಿದು ಮೇವಿನ ಕಿರು ಪೊಟ್ಟಣಗಳ ವಿಶೇಷ ಯೋಜನೆ?

ಕರ್ನಾಟಕ ಸರ್ಕಾರವು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಜಾರಿಗೆ ತಂದಿರುವ “ಪಟ್ಟಣಗಳ ವಿತರಣಾ ಯೋಜನೆಯು” (Fodder Seed Kit) ಹೈನುಗಾರಿಕೆ ಮಾಡುವ ರೈತರಿಗೆ ಉಚಿತವಾಗಿ ಉತ್ತಮ ತಳಿಯ ಮೇವಿನ ಬೀಜವನ್ನು ವಿತರಿಸುವ ಮಹತ್ವದ ಯೋಜನೆ ಯಾಗಿದ್ದು ಇದರ ಮುಖ್ಯ ಉದ್ದೇಶ ಬೇಸಿಗೆಯಲ್ಲಿ ಹಸುಗಳಿಗೆ ಯಾವುದೇ ರೀತಿಯ ಮೇವು ಸಿಗದೇ ಇರುವ ಕಾರಣ ಅವುಗಳ ಹಾಲಿನ ಉತ್ಪಾದನೆ ಪ್ರಮಾಣವು ಕಡಿಮೆಯಾಗುತ್ತದೆ ಬಡ ರೈತರಿಗೆ ಸಂಕಷ್ಟ ಉಂಟಾಗಿ ಅವರು ಹೈನುಗಾರಿಕೆಯ ಕಡೆಗಿನ ಒಲವು ತೊರೆಯುತ್ತಾರೆ.

ಸುಧಾರಿತ ತಳಿಯ ಮೇವಿನ ಬೀಜಗಳನ್ನು ಕೊಡುವುದರಿಂದ ಸದಾ ಕಾಲ ಪೌಷ್ಟಿಕಯುಕ್ತ ಹಸಿರು ನೀವು ಸಿಗುವುದರಿಂದ ಧನ, ಕುರಿ, ಎಮ್ಮೆಗಳು ದಷ್ಟಪುಷ್ಟವಾಗಿ ಬೆರೆಯುತ್ತವೆ ಹಾಗೂ ಹಾಲಿನ ಉತ್ಪಾದನೆಯು ಸಹ ಹೆಚ್ಚುತ್ತದೆ ರೈತರಿಗೆ ತುಂಬಾ ಸಹಕಾರವಾಗಲಿದೆ.

ರೈತ ಮಿತ್ರರೇ ಗಮನಿಸಿ:- 2026 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ನೀಡುತ್ತಿರುವ ಉಚಿತ ಬೀಜದ ಕಿಟ್ ವಿತರಣೆಯ ಜೊತೆಗೆ ನೀವು ಕತ್ತರಿಸುವ ಯಂತ್ರವನ್ನು ಸಹ ನೀಡುತ್ತಿದೆ ಈ ಯೋಜನೆಯ ಲಾಭ ನಿಮಗೂ ಬೇಕಾದರೆ ಕೇವಲ 15 ಬಾಕಿ ಇದೆ ಈಗಲೇ ನಿಮ್ಮ ಊರಿನ ಪಶು ಸಂಗೋಪನೆ ಇಲಾಖೆಗೆ ಹೋಗಿ ಕಿಟ್ ಖಾಲಿಯಾಗುವ ಮೊದಲೇ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿರಿ

ಈ ಕಿಟ್ ನಲ್ಲಿ ಏನೆಲ್ಲಾ ಇರಬಹುದು?

ಕರ್ನಾಟಕ ಸರ್ಕಾರದ ಪಶು ಸಂಗೋಪನೆ ಇಲಾಖೆಯು ವಿತರಿಸುವ ಮೇವಿನ ಬೀಜದ ಕಿಟ್ ನಲ್ಲಿ ಒಂದು ಎಕರೆ ಅಥವಾ ಅರ್ಧ ಎಕರೆಗೆ ಸೀಮಿತವಾಗುವಷ್ಟು ವಿವಿಧ ರೀತಿಯ ಮೇಲಿನ ಬೀಜಗಳಿರುತ್ತವೆ. ರೈತರಿಗೆ ಸುಲಭವಾಗಿ ಮತ್ತು ಅತಿ ಕಡಿಮೆ ಸಮಯದಲ್ಲಿ ಸಂವೃದ್ದವಾದ ಹಸಿರುಮೇವನ್ನು ಒದಗಿಸುವ ಉದ್ದೇಶದಿಂದ ಈ ಬೀಜಗಳನ್ನು ಸೆಲೆಕ್ಟ್ ಮಾಡಲಾಗುತ್ತದೆ. ಈ ಕೆಳಗಿನ ಬೀಜಗಳು

  • ಆಫ್ರಿಕನ್ ಟಾಲ್ :- ಇದು ಹಸಿರುಮೇವಿನ ತಳಿಗಳಲ್ಲಿ ಅತ್ಯಂತ ಜನಪ್ರಿಯವಾದ ಅತಿ ಎತ್ತರಕ್ಕೆ ಬೆಳೆಯುವ ಹುಲ್ಲು. ಬಿತ್ತನೆಯಾದ 60 ರಿಂದ 70 ದಿನಗಳಲ್ಲಿ ಕಟಾವಿಗೆ ಬರುತ್ತದೆ ಒಂದು ಎಕರೆಗೆ ಸುಮಾರು 15 ರಿಂದ 20 ಟನ್ ಹಸಿರು ಮೇವು ಸಿಗುತ್ತದೆ. ಇದರಲ್ಲಿ ಪೋಷಕಾಂಶ ಹೆಚ್ಚಾಗಿದ್ದು ಹಾಲಿನ ಇಳುವರಿ ಹೆಚ್ಚಿಸಲು ಸಹಕಾರಿ
  • ಜೋಳದ ಮೇವು ತಳಿಗಳು:– (Fodder Seed Kit)ಜೋಳದ ತಳಿಗಳು ಬರನಿರೋಧಕ ಶಕ್ತಿ ಹೊಂದಿದ್ದು. ಕಡಿಮೆ ನೀರಿನಲ್ಲಿ ಬೆಳೆಯಬಲ್ಲದು ಇವುಗಳಲ್ಲಿ ಬಹು ಜಾತಿಯ ತಳಿಗಳಿವೆ ಹಾಗೂ ಒಮ್ಮೆ ಕಟಾವು ಮಾಡಿದರೆ ಮತ್ತೆ ಚಿಗುರುತ್ತವೆ.
  • ಸಜ್ಜೆ:-ಇದು ಅತ್ಯಂತ ವೇಗವಾಗಿ ಬೆಳೆಯುವ ತಳಿ, ಮರಳು ಮಿಶ್ರಿತ ಭೂಮಿಯಲ್ಲಿ ಸೊಗಸಾಗಿ ಬೆಳೆಯುತ್ತದೆ ಇದರಲ್ಲಿ ಪ್ರೊಟೀನ್ ಮತ್ತು ಖನಿಜಾಂಶಗಳು ಹೆಚ್ಚಾಗಿದೆ
  • ಚೈನೀಸ್ ಕ್ಯಾಬೇಜ್:- (Fodder Seed Kit) ಇದು ತುಂಬಾ ಮೃದುವಾಗಿದ್ದು ಹಸುಗಳು ಮತ್ತು ಕುರಿ ಮೇಕೆಗಳು ತುಂಬಾ ಇಷ್ಟಪಟ್ಟು ತಿನ್ನುತ್ತವೆ ಇದರಲ್ಲಿ ವಿಟಮಿನ್ ಎ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿತ್ತು ಇದು ಹಾಲಿನ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ
  • ಕುದುರೆ ಮೆಂತ್ಯ:– ಇದನ್ನು ಬೇವಿನ ರಾಣಿಯನ್ನು ಕರೆಯಲಾಗುತ್ತದೆ ಇದು ವಿಧಳ ಧಾನ್ಯದ ಮೇವು ಆಗಿರುವುದರಿಂದ ಅತಿ ಹೆಚ್ಚು ಪ್ರೋಟೀನ್ ಇರುತ್ತದೆ ಇದು ಬಹುವಾರ್ಷಿಕ ಬೆಳೆಯಾಗಿದ್ದು ಒಮ್ಮೆ ನಾಟಿ ಮಾಡಿದ್ದರೆ ಮೂರು ನಾಲ್ಕು ವರ್ಷಗಳ ಕಾಲ ಇಳುವರಿ ನೀಡುತ್ತದೆ ಉರಿ ಮೇಕೆ ಮತ್ತು ಹಸುಗಳ ಸಾಕಾಣಿಕೆಗೆ ಇದು ಉತ್ತಮ ಬೆಳೆಯಾಗಿದೆ
  • ಕಾಂಗೋ ಸಿಗ್ನಲ್ ಹುಲ್ಲು:– ಇದು ಹರಡಿಕೊಂಡು ಬೆಳೆಯುವ ಗುಡ್ಡಗಳು ಪ್ರದೇಶಗಳಲ್ಲಿ ಮತ್ತು ತೆಂಗಿನ ತೋಟಗಳಲ್ಲಿ ಬೆಳೆಯಬಹುದು ಮಣ್ಣಿನ ಸವಕಳಿಯನ್ನು ತಡೆಯುತ್ತದೆ ಮತ್ತು ಮೇವು ಇಲ್ಲದ ಸಮಯದಲ್ಲಿ ಹಸಿರು ಮೇವಿನ ಮೂಲವಾಗಿ ಬಳಕೆಯಾಗುತ್ತದೆ.

ಇದರಿಂದ ರೈತರಿಗಾಗುವ ಉಪಯೋಗವೇನು?

  1. ಹಾಲಿನ ಇಳುವರಿ ಮತ್ತು ಗುಣಮಟ್ಟ ಹೆಚ್ಚಳ:- ಉತ್ಸವ ರೀತಿಯ ಪೌಷ್ಟಿಕತೆ ಹೊಂದಿರುವ ನೀವು ತಿಳಿಸುವುದರಿಂದ ಹಾಲಿನ ಪ್ರಮಾಣ ಅಧಿಕಲಭ್ಯವಾಗುತ್ತದೆ
  2. ಹಣದ ಉಳಿತಾಯ:-ರೈತರು ಮಾರುಕಟ್ಟೆಯಲ್ಲಿ ಖರೀದಿಸುವ ಹಿಂದಿ ಅಥವಾFeed ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ ಆದರೆ ಮನೆಯಲ್ಲೇ ಪೌಷ್ಟಿಕ ಹಸಿರು ಜಾನುವಾರಿಗಳಿಗೆ ನೀಡುವುದರಿಂದ ಆಹಾರದ ಮೇಲಿನ ಖರ್ಚು ಕಡಿಮೆಯಾಗುತ್ತದೆ. ಹಣದ ಉಳಿತಾಯವಾಗುತ್ತದೆ.
  3. ಆರ್ಥಿಕ ಸ್ವಾವಲಂಬನೆ:-ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಹಾಲು ಉತ್ಪಾದನೆಯಾದಾಗ ರೈತರ ಆದಾಯವು ಹೆಚ್ಚುತ್ತದೆ ಉಚಿತವಾಗಿ ಕಿಟ್ ಸಿಗುವುದರಿಂದ ಬಿತ್ತನೆ ಬೀಜದ ಆರಂಭಿಕ ಹೂಡಿಕೆಯು ರೈತರಿಗೆ ಉಳಿಯುತ್ತದೆ
  4. ವರ್ಷವಿಡೀ ಮೇವಿನ ಲಭ್ಯತೆ:- ತಮ್ಮದೇ ಆದ ಜಮೀನಿನಲ್ಲಿ ವಿವಿಧ ಜಾತಿಯ ನೀರಿನ ಬೀಜಗಳನ್ನು ನಾಟಿ ಮಾಡುವುದರಿಂದ ಕುದುರೆ ಮೆಂತ್ಯ ಕಾಂಗೋ ಸಿಗ್ನಲ್ ಹುಲ್ಲು ಇವುಗಳು ಬಹುವಾರ್ಷಿಕ ಬೆಳೆಯಾಗಿದ್ದು ವರ್ಷವಿಡಿ ನೀವೇನು ನೀಡುತ್ತವೆ
  5. ಪಶು ಆರೋಗ್ಯದಲ್ಲಿ ಸುಧಾರಣೆ:- (Fodder Seed Kit) ಉತ್ತರವಾದ ಹಸಿರು ಪೌಷ್ಟಿಕ ಆಹಾರಗಳನ್ನು ಹಸುಗಳಿಗೆ ನೀಡುವುದರಿಂದ ಸದಾ ಕಾಲಕ್ಕೆ ಗರ್ಭದರಿಸುತ್ತವೆ ಹಸಿರು ಮೇವಿನಲ್ಲಿ ವಿಟಮಿನ್ ಮತ್ತು ಖನಿಜಗಳು ಜಾನುವಾರಿಗಳಿಗೆ ರೋಗ ಬರದಂತೆ ತಡೆಯುತ್ತವೆ. ಇದರಿಂದ ಪಶು ಆಸ್ಪತ್ರೆಗೆ ಖರ್ಚು ಮಾಡುವ ಅಗತ್ಯಬರುವುದಿಲ್ಲ.

ಯೋಜನೆಯ ಉದ್ದೇಶ:-

  • ಗುಣಮಟ್ಟದ ಪೌಷ್ಟಿಕ ಯುಕ್ತ ಆಹಾರವನ್ನು ಒದಗಿಸುವುದು
  • ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ, ಉತ್ತೇಜಿಸುವುದು
  • ಜಾನುವಾರುಗಳ ಆರೋಗ್ಯವನ್ನು ಉತ್ತಮಗೊಳಿಸುವುದು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿ ಬಡ ರೈತರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ
  • ಯಾವುದೇ ಹಣದ ಖರ್ಚಿಲ್ಲದೆ ತಮ್ಮ ಜಮೀನಿನಲ್ಲಿ ಕೃಷಿ ಮಾಡಿ ಹೆಚ್ಚಿನ ಆದಾಯಗಳಿಕೆ
  • ಮಣ್ಣಿನ ಸವಕಳಿಯನ್ನು ತಪ್ಪಿಸುತ್ತದೆ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ
  • ಬೇಸಿಗೆಕಾಲದಮೇವಿನ ಅಭಾವ ತಡೆಗಟ್ಟುವುದು
  • ಪಶು ಸಂಗೋಪನೆಯನ್ನು ಲಾಭದಾಯಕ ಕೃಷಿ ಉಪಕಸಬನ್ನಾಗಿ ಮಾಡುವುದು
  • ಸುಧಾರಿತ ಮೇವಿನ ತಳಿಗಳನ್ನು ಹಳ್ಳಿಹಳ್ಳಿಗೂ ತಲುಪಿಸುವುದು

ಯಾವ ವರ್ಗದವರಿಗೆ ಎಷ್ಟು ಮೀಸಲಾತಿ:-

ಯೋಜನೆಯ ಲಾಭವನ್ನು ಪಡೆಯಲು ಮೀಸಲಾತಿಯನ್ನು ಜಾತಿ ಮತ್ತು ಆರ್ಥಿಕ ಸ್ಥಿತಿಗತಿ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ

  • ಪರಿಶಿಷ್ಟ ಜಾತಿ:-15% ರಿಂದ 18% ಇವರಿಗೆ 100% ಸಹಾಯಧನ ಸಿಗುವ ಸಾಧ್ಯತೆ ಹೆಚ್ಚು
  • ಪರಿಶಿಷ್ಟ ಪಂಗಡ:-3% ರಿಂದ 7% ಇವರಿಗೆ ಸಂಪೂರ್ಣ ಉಚಿತ ನೀಡಲಾಗುತ್ತದೆ
  • ಹಿಂದುಳಿದ ವರ್ಗಗಳು:- 25% ರಿಂದ 30% ಇಲಾಖೆಯ ಆದ್ಯತೆಯ ಮೇರೆಗೆ
  • ಮಹಿಳಾ ರೈತರು:- 30%
  • ಸಣ್ಣ ಮತ್ತು ಅತಿ ಸಣ್ಣ ರೈತರು:- 70% ರಿಂದ 80%
  • ಅಂಗವಿಕಲ ರೈತರು:-3% ರಿಂದ 5%

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತೆಗಳು:-

  • ಕರ್ನಾಟಕದ ಕಾಯಂ ನಿವಾಸಿ ರೈತರಾಗಿರಬೇಕು
  • ಅರ್ಜಿದಾರರು ವೃತ್ತಿಯಲ್ಲಿ ರೈತರ ಆಗಿರಬೇಕು ಮತ್ತು ತನ್ನದೇ ಆದ ಸ್ವಂತ ಜಮೀನು ಇರಬೇಕು
  • ಕನಿಷ್ಠ ಒಂದು ಅಥವಾ ಒಂದಕ್ಕಿಂತ ಹೆಚ್ಚು ಜಾನುವಾರುಗಳನ್ನು ಹೊಂದಿರಬೇಕು
  • ಜಾನುವಾರುಗಳ ಆರೋಗ್ಯದ ಬಗ್ಗೆ ಹಾಗೂ ತಪಾಸಣೆ ಮತ್ತು ಲಸಿಕೆ ಹಾಕಿಸಿದ ಬಗ್ಗೆ ಆಸ್ಪತ್ರೆಯ ದಾಖಲೆ ಇರುವುದು ಉತ್ತಮ
  • ಬೆಳೆ ತೆಗೆಯಲು ಜಮೀನಿನಲ್ಲಿ ನೀರಾವರಿ ವ್ಯವಸ್ಥೆ ಇರಬೇಕು
  • ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು, ಇಲಾಖೆಯ ಪ್ರಕರಣದಲ್ಲಿ ತಿಳಿಸಲಾಗಿದೆ

ಹೈನುಗಾರಿಕೆ ಉತ್ತೇಜಿಸಲು ಜಾರಿಗೆ ತಂದಿರುವ ಪ್ರಮುಖ ಯೋಜನೆಗಳು:-

ಹಾಲು ಪ್ರೋತ್ಸಾಹ ಧನ ಯೋಜನೆ ಪಶು ಭಾಗ್ಯ ಯೋಜನೆ, ಶಿರ ಸಮೃದ್ಧಿ ಸಹಕಾರ ಬ್ಯಾಂಕ್ ಪಶು ವಿಮೆ ಯೋಜನೆ ಉಚಿತ ಲಸಿಕ ಅಭಿಯಾನ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಅಗತ್ಯ ದಾಖಲೆಗಳು :-

  • ಆಧಾರ್ ಕಾರ್ಡ್
  • ಜಮೀನಿನ ದಾಖಲೆ
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಇತ್ತೀಚಿನ ಪಾಸ್ಪೋರ್ಟ್ ಅಳತೆಯ
  • ಫೋಟೋ
  • ಜಾತಿ ಪ್ರಮಾಣ ಪತ್ರ
ಗಮನಿಸಬೇಕಾದ ಮುಖ್ಯ ಅಂಶ : ಉಚಿತ ಮೇವಿನ ಬೀಜದ ಕಿಟ್ (Fodder Seed Kit) ವಿತರಣಾ ಯೋಜನೆಯ ಲಾಭಪಡೆಯಲು ಮೊದಲು ಅರ್ಜಿ ಸಲ್ಲಿಸಿ. ಹಣವು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಆಧಾರದ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ :-

ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನ :-

ಆನ್ಲೈನ್ ಪ್ರಕ್ರಿಯೆಗಿಂತ ಆಫ್ಲೈನ್ ಅರ್ಜಿ ಸಲ್ಲಿಸುವ ವಿಧಾನ ತುಂಬಾ ಸರಳವಾಗಿದೆ ಮತ್ತು ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಇದನ್ನ ಅನುಸರಿಸುತ್ತಾರೆ.

  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಮ್ಮ ಹತ್ತಿರದಲ್ಲಿರುವ ಪಶು ಚಿಕಿತ್ಸಾಲಯ ಅಥವಾ ಪಶು ಸಂಗೋಪನೆ ಇಲಾಖೆಗೆ ಭೇಟಿ ನೀಡಿ
  • ನಂತರ ಅಲ್ಲಿ ಮೇವಿನ ಕಿರು ಪಟ್ಟಣ ವಿತರಣೆ ಯೋಜನೆಯ ಅರ್ಜಿ ಫಾರಂ ಹೇಳಿ ಪಡೆಯಿರಿ
  • ಅರ್ಜಿಯಲ್ಲಿ ಕೇಳಿರುವ ನಿಮ್ಮ ಮೊಬೈಲ್ ನಂಬರ್ ಇಮೇಲ್ ಅಡ್ರೆಸ್ ಆಧಾರ್ ನಂಬರ್ ಪಾಸ್ ಬುಕ್ ನಂಬರ್ ಸರಿಯಾಗಿ ದಾಖಲಿಸಿ
  • ಅಧಿಕಾರಿಗಳಿಗೆ ಅಥವಾ ಪಶು ವೈದ್ಯಾಧಿಕಾರಿಗಳಿಗೆ ಸಲ್ಲಿಸಿ
  • ಅಧಿಕಾರಿಗಳು ನಿಮ್ಮ ಜಮೀನು ಮತ್ತು ಜಾರಿವಾರಿಗಳನ್ನು ಪರಿಶೀಲನೆ ಮಾಡುತ್ತಾರೆ ನೀವು ಅರ್ಹರಾಗಿದ್ದರೆ ನಿಮಗೆ ಉಚಿತವಾಗಿ ಬೀಜದ ಕಿಟ್ ಜೊತೆಗೆ ಮೇವು ಕತ್ತರಿಸುವ ಯಂತ್ರವನ್ನು ನೀಡುತ್ತದೆ

ಕೊನೆಯ ಕಿವಿ ಮಾತು :

ಮೇವಿನ ಕಿರು ಪಟ್ಟಣಗಳ ವಿತರಣೆ ಯೋಜನೆ, (Fodder Seed Kit೦ ಹೈನುಗಾರ ರೈತರಿಗೆ ಆರ್ಥಿಕವಾಗಿ ಬಲ ನೀಡುವ ಉದ್ದೇಶದಿಂದ ಅನುಷ್ಠಾನಕ್ಕೆ ತಂದಿರುವ ಯೋಜನೆಯಾಗಿದ್ದು ಜಾನುವಾರುಗಳ ಆರೋಗ್ಯ ಹಾಗೂ ಹಾಲಿನ ಉತ್ಪಾದನೆ ಹೆಚ್ಚಿಸಿಕೊಳ್ಳಲು ಈ ಅವಕಾಶವನ್ನು ಯಾರು ಕೂಡ ಮಿಸ್ ಮಾಡ್ಕೊಳ್ಬೇಡಿ ಈ ಸ್ಕೀಮ್ ಗೆ ಅರ್ಜಿ ಆಲ್ರೆಡಿ ಪ್ರಾರಂಭವಾಗಿದೆ.

ನೀವು ಮಳೆಗಾಲ ಬರುವುದು ತುಂಬಾ ಲೇಟ್ ಇದೆ ಅಂದುಕೊಂಡು ಹಾಗೆ ಕುಳಿತುಕೊಂಡರೆ ಆಗುವುದಿಲ್ಲ ಏಕೆಂದರೆ ಕರ್ನಾಟಕದಲ್ಲಿ ಹಲವು ವರ್ಗದ ಕುಟುಂಬದವರು ಹೈನುಗಾರಿಕೆಯನ್ನು ಬದುಕಿನ ಹಸನ್ಮಾ ಮಾಡುವ ಯೋಜನೆ ಎಂದು ನಂಬಿದ್ದಾರೆ ಎಲ್ಲ ವರ್ಗದ ರೈತರು ಅರ್ಜಿ ಸಲ್ಲಿಸುವುದರಿಂದ ಕಿಟ್ (Fodder Seed Kit)ಖಾಲಿಯಾಗಬಹುದು ನಿಮಗೆ ಸರಿಯಾದ ಸಮಯಕ್ಕೆ ಸಿಗದೇ ಇರಬಹುದು ಹಾಗಾಗಿ ಈಗಲೇ ಹೋಗಿ ಪಶು ಇಲಾಖೆಯಲ್ಲಿ ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.

ಹೆಚ್ಚಿನ ಮಾಹಿತಿಗಾಗಿ : ಸಹಾಯವಾಣಿ (Helpline) ಪಶುಪಾಲನಾ ಇಲಾಖೆಯ ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ 8277100200 ಕ್ಕೆ ಕರೆ ಮಾಡಿ.

ಇತರೆ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *