Earthworm Manure Tank : ₹20,000 ದಿಂದ ₹28,000 – ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಆನ್ಲೈನ್ ಅರ್ಜಿ!

Earthworm Manure Tank

ಆತ್ಮೀಯ ರೈತ ಬಾಂಧವರೇ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ವತಿಯಿಂದ ನರೇಗಾ ರಾಷ್ಟೀಯ ಉದ್ಯೋಗ ಖಾತರಿಯೋಜನೆ ಅಡಿಯಲ್ಲಿ ಎರೆಹುಳು ಗೊಬ್ಬರ ತೊಟ್ಟಿಯನ್ನು (Earthworm Manure Tank)ನಿರ್ಮಾಣ ಮಾಡಿಕೊಳ್ಳಲು ಎಲ್ಲ ರೈತರಿಗೂ ಸರ್ಕಾರದಿಂದ ಈಗ 20,000 ದವರೆಗೆ ಸಹಾಯವನ್ನು ನೀಡುತ್ತಿದೆ. ಗ್ರಾಮೀಣ ಭಾಗದ ರೈತರ ಹೊರೆಯನ್ನು ಕಡಿಮೆ ಮಾಡಲು ಮತ್ತು ಕೃಷಿಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

Earthworm Manure Tank Subsidy In Kannada

ಇಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಜೈವಿಕ ಗೊಬ್ಬರದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮಣ್ಣಿನ ಪಲವತ್ತತೆ ಕಡಿಮೆಯಾಯಾಗುತ್ತಿದೆ. ಅದರಿಂದ ಸರ್ಕಾರ ಮಣ್ಣಿನ ಆರೋಗ್ಯ ಕಾಪಾಡಲು ರಾಸಾಯನಿಕ ಗೊಬ್ಬರಗಳ ವೆಚ್ಚ ಕಡಿಮೆ ಮಾಡಲು ಮತ್ತು ಬೆಳೆಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಅನೇಕ ರೈತರು ಎರೆಹುಳು ಗೊಬ್ಬರ ತಯಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ

ಪ್ರತಿಯೊಬ್ಬ ರೈತರಿಗೆ ನಾವು ನಮ್ಮ ಭೂಮಿಯಲ್ಲಿ ಉತ್ತಮ ಬೆಳೆ ಬೆಳೆಯಬೇಕು ಹೆಚ್ಚಿನ ಲಾಭ ಗಳಿಸಬೇಕು ಎಂಬ ಅಸೆ ಇರುತ್ತದೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಒಂದು ಭುಟ್ಟಿ ಎರೆಹುಳು ಕೊಬ್ಬರಕ್ಕೆ 70 ರಿಂದ 80 ರೂಪಾಯಿ ಕೊಟ್ಟು ಖರೀದಿ ಮಾಡಬೇಕಾಗುತ್ತದೆ. ಇದು ರೈತರಿಗೆ ತುಂಬಾ ಕಷ್ಟವಾಗುತ್ತದೆ. ಅಷ್ಟೇ ಅಲ್ಲದೆ ತುಂಬ ಲಾಭಗಳಿಕೆಯ ಉದ್ದೇಶದಿಂದ ರಾಯನಿಕ ಗೊಬ್ಬರಗಳ ಮೇಲೆ ಅತಿಯಾದ ವೆಚ್ಚ ಅನ್ನದಾತನಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ.

ರೈತರಿಗೆ ಸಹಾಯ ಹೇಗೆ ಸಹಾಯಕ:-

ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ತುಂಬಾ ಹೆಚ್ಚಾಗಿದೆ. ಮಣ್ಣಿನ ಆರೋಗ್ಯ ನಾಶವಾಗುತ್ತಿದೆ. ಅತಿಯಾಗಿ ರಾಸಾಯನಿಕ ಗೊಬ್ಬರಹಾಕಿ ಬೆಳೆದ ಬೆಳೆಗಳ ಸೇವನೆಯಿಂದಾಗಿ ರೋಗಗಳ ಸಂಖ್ಯೆಯು ಹೆಚ್ಚುತ್ತಿದೆ. ಅಷ್ಟೇ ಅಲ್ಲದೆ ಬೆಲೆ ದುಬಾರಿಯಾಗಿದೆ ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಲಸೂಲ ಮಾಡಿ ಖರೀದಿಸಿ ನಮ್ಮ ರೈತ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದಾನೆ.

ಕೆಲವು ರೈತರು ತಮ್ಮ ಮನೆಯಲ್ಲಿ ಹಸು ಎಮ್ಮೆ ಇದ್ದರು ಸಹ ಹಣದ ಕೊರತೆಯಿಂದಾಗಿ ಗೊಬ್ಬರದ ಗುಂಡಿಯನ್ನು ತೆಗಿಸಿಕೊಂಡಿರುವುದಿಲ್ಲ. ಆದರೆ ನಮ್ಮ ಸರ್ಕಾರದ ಈಗತಾನೇ ಅರ್ಜಿ ಬಿಟ್ಟಿರುವ ಎರೆಹುಳು ಗೊಬ್ಬರ ತೊಟ್ಟಿಯನ್ನು (Earthworm Manure Tank) ನಿರ್ಮಾಣ ಯೋಜನೆಗೆ ಅರ್ಜಿಸಲ್ಲಿಸಿ ಲಾಭವನ್ನು ಪಡೆದುಕೊಳ್ಳಿ. ಒಂದು ಗೊಬ್ಬರದಗುಂಡಿ ಒಬ್ಬ ರೈತನ ಪಾಲಿಗೆ ಗೊಬ್ಬರದ ಕಾರ್ಖಾನೆ ಇದ್ದಂತೆ.

ನಮ್ಮ ದೇಶದ ಬೆನ್ನೆಲುಬಾದ ರೈತ ತಮ್ಮ ಜಮೀನಿಗೆ ಗೊಬ್ಬರವನ್ನು ಪೂರೈಸಿಕೊಳ್ಳುವುದರ ಜೊತೆಗೆ ಬೇರೆ ರೈತರಿಗೆ ಅಥವಾ ನರ್ಸರಿಗೆ ಮಾರಾಟಮಾಡುವುದರಿಂದ ಹೆಚ್ಚಿನ ಆದಾಯವನ್ನು ಸಹಗಳಿಸಬಹುದು. ಹಾಗೆಯೆ ಮತ್ತೊಂದು ಅನುಕೂಲ ಎಂದರೇ ಗುಂಡಿಯಲ್ಲಿ ಎರೆಹುಳುಗಳು ವೇಗವಾಗಿ ಸಂತಾನೋತ್ಪತಿ ಮಾಡುತ್ತವೆ ಅದರಿಂದ ಮಣ್ಣಿನ ಪಲವತ್ತತೆ ಹೆಚ್ಚುತ್ತದೆ ಎರೆಹುಳುಗಳನ್ನು ಮಾರಾಟ ಮಾಡಿ ಹಣವನ್ನು ಪಡೆಯಬಹುದು

ಯೋಜನೆಯ ಅವಲೋಕನ:

ಯೋಜನೆಯ ಹೆಸರುಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಅರ್ಹ ಫಲಾನುಭವಿಗಳುರೈತರು
ಒಟ್ಟು ಪ್ರೋತ್ಸಾಹಧನ₹20,000 ದಿಂದ ₹28,000 ವರೆಗೆ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮತ್ತು ಆಫ್ಲೈನ್

ಯೋಜನೆಯ ಗುರಿ:

  • ತ್ಯಾಜ್ಯ ನಿರ್ವಹಣೆ:

ಮನೆ ಹೊಲೆಗದ್ದೆಗಳಲ್ಲಿ ವೇಸ್ಟ್ ಅಂತ ಬಿಸಾಕುವ ಕಸ ಕಡ್ಡಿ ಎಲೆಗಳು ಮತ್ತು ಕೊಟ್ಟಿಗೆಯ ಗೊಬ್ಬರವನ್ನು ಶೇಖರಣೆ ಮಾಡಿ ಕಪ್ಪು ಚಿನ್ನ ಎಂದು ಕರೆಯಲ್ಪಡುವ ಪೌಷ್ಟಿಕವಾದ ಗೊಬ್ಬರವನ್ನುಸುವುದು ಪರಿವರ್ತಿಸುವುದು

  • ವಿಷ ಮುಕ್ತ ಆಹಾರ ಉತ್ಪಾದನೆ:

ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸುವ ಮೂಲಕ ಗ್ರಾಹಕರಿಗೆ ಆರೋಗ್ಯಕರ ಮತ್ತು ವಿಷಮುಕ್ತ ತರಕಾರಿ ಹಣ್ಣು ಸೊಪ್ಪು ಹಾಗೂ ಧಾನ್ಯಗಳನ್ನು ತಲುಪಿಸುವ ಮೂಲಕ ಅವರಿಗೆ ಉತ್ತಮ ಆರೋಗ್ಯವನ್ನು ಒದಗಿಸುವುದು

  • ರೈತರಿಗೆ ಹೆಚ್ಚಿನ ಆದಾಯ:

ಜೈವಿಕ ಗೊಬ್ಬರಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ತಮ್ಮ ಜಮೀನಿಗೆ ಎಷ್ಟು ಗೊಬ್ಬರಬೇಕೋ ಬಳಸಿಕೊಂಡ ನಂತರ ಉಳಿದ ಗೊಬ್ಬರವನ್ನು ಮಾರಾಟ ಮಾಡಿ ಹಣವನ್ನು ಗಳಿಸಬಹುದು ಮತ್ತು ಎರೆಹುಳುಗಳನ್ನು ಮಾರಿ ಆದಾಯವನ್ನು ಪಡೆಯಬಹುದು

ಈ ಸಹಾಯಧನವನ್ನು ಸದ್ಬಳಕೆ ಮಾಡುವುದು ಹೇಗೆ:-

ಸರ್ಕಾರದ ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ರೈತರ ಜೀವನೋಪಾಯವನ್ನು ಸುಧಾರಿಸುವುದು ನರೇಗಾ ಯೋಜನೆ ಅಡಿ ಕೃಷಿಗೆ ಪೂರಕವಾದ ಎರೆಹುಳು ಗೊಬ್ಬರ ತೊಟ್ಟಿಯನ್ನು ನಿರ್ಮಾಣ ಮಾಡಲು ಇಲಾಖೆಯ ವತಿಯಿಂದ ಇಪ್ಪತ್ತು ಸಾವಿರ ಸಹಾಯಧನವನ್ನು ನೀಡಲಾಗುತ್ತದೆ.

ಈ ಹಣವನ್ನು ಬಳಸಿಕೊಂಡು ರೈತರು ಉತ್ತಮ ಗುಣಮಟ್ಟದ ತೊಟ್ಟಿ ನಿರ್ಮಿಸಿಕೊಂಡು ತಮ್ಮ ದನಕರುಗಳ ತ್ಯಾಜ್ಯ ಮತ್ತು ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಉತ್ತಮ ಪೌಷ್ಟಿಕ ಗೊಬ್ಬರ ತಯಾರಿಸಬಹುದು ಹಾಗೇನೇ ಹೆಚ್ಚುವರಿ ಯಾಗಿ ಉತ್ಪತ್ತಿಯಾದ ಗೊಬ್ಬರವನ್ನು ಮಾರಾಟ ಮಾಡುವ ಮೂಲಕ ರೈತರು ಅಧಿಕ ಆದಾಯವನ್ನು ಗಳಿಸಬಹುದು.

ಫಲಾನುಭವಿಗಳು ಪಡೆಯಬಹುದಾದ ಒಟ್ಟು ಸಹಾಯಧನ:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ನರೇಗಾ ಯೋಜನೆ ಅಡಿಯಲ್ಲಿ ಎರೆಹುಳು ಗೊಬ್ಬರ ತೊಟ್ಟಿಯ ನಿರ್ಮಾಣಕ್ಕೆ ಎಲ್ಲಾ ವರ್ಗದ ರೈತರಿಗೂ ₹20,000 ದಿಂದ ₹28,000 ವರೆಗೆ ಸಹಾಯಧನ ಸಿಗುತ್ತದೆ

ಸಹಾಯಧನವನ್ನು ಪಡೆಯಲು ಅರ್ಹರಾದ ರೈತರು:

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರುಬೇಕು.
  • ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
  • ಅರ್ಜಿ ಸಲ್ಲಿಸುವ ರೈತರ ಹೆಸರಿನಲ್ಲಿ ಅಥವಾ ಅವರ ಕುಟುಂಬದ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು ಮತ್ತು ಅದರ RTC ಚಾಲ್ತಿಯಲ್ಲಿರಬೇಕು
  • ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಬೆಳಗಾವಿ ಜಿಲ್ಲೆಗಳಲ್ಲಿ ಕನಿಷ್ಠ 1 ಎಕ್ಕರೆ ಒಣ ಭೂಮಿಯಿದ್ದರೆ ಸಾಕಾಗುತ್ತದೆ ಹಾಗೂ ಇತರೆ ಜಿಲ್ಲೆಗಳಲ್ಲಿ 2 ಎಕ್ಕರೆ ಒಣ ಭೂಮಿ ಇರಬೇಕು.
  • ಅರ್ಜಿದಾರರ ಕನಿಷ್ಠ ಆದಾಯವು ₹6 ಲಕ್ಷ ಮೀರಿರಬಾರದು.
  • ಅರ್ಜಿದಾರರು 18 ರಿಂದ 60 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಅರ್ಜಿದಾರರು ಹಾಗೂ ಅವರ ಕುಟುಂಬದವರು ಈ ಹಿಂದೆ ಸರ್ಕಾರದ ಯಾವುದೇ ಎರೆಹುಳು ಗೊಬ್ಬರದ ಗುಂಡಿ ಸೌಲಭ್ಯವನ್ನು ಪಡೆದುಕೊಂಡಿರಬಾರದು
ಇಲ್ಲಿ ಗಮನಿಸಿ: ಈ ಯೋಜನೆಯ ಬಗ್ಗೆ ಯಾವ ರೈತರಿಗೆ ತಿಳಿಸಿದವು ನಮ್ಮ ವೆಬ್ಸೈಟ್ ಮೂಲಕ ತಿಳಿದುಕೊಂಡು 10 ದಿನಗಳ ಒಳಗೆ ಅರ್ಜಿಯನ್ನು ಸಲ್ಲಿಸಿ ಇದರ ಸಹಾಯಧನವನ್ನು ಪಡೆದುಕೊಳ್ಳಿ

ಅರ್ಜಿದಾರರು ಹೊಂದಿರಬೇಕಾದ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣಪತ್ರ
  • ಪಡಿತರ ಚೀಟಿ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಜಮೀನು ದಾಖಲೆ
  • ಜಮೀನಿನ ಇತ್ತೀಚಿನ ಪಹಣಿ ಪ್ರತಿ
  • ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ
  • ನರೇಗಾ ಜಾಬ್ ಕಾರ್ಡ್
  • ನಿವಾಸ ಪ್ರಮಾಣಪತ್ರ

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಫಲಾನುಭವಿಗಳು ಎರೆಹುಳು ಗೊಬ್ಬರ ತೊಟ್ಟಿಯ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ಹಂತವನ್ನು ಸರಿಯಾಗಿ ಗಮನಿಸಿ ನಂತರ ಅರ್ಜಿ ಸಲ್ಲಿಸಿ ಸಹಾಯಧನ ಪಡೆದುಕೊಳ್ಳಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
  • ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಆಗಿ.
  • ನರೇಗಾ ಕೃಷಿ ಸಹಾಯ ಧನ ವಿಭಾಗವನ್ನು ಆಯ್ಕೆ ಮಾಡಿ
  • ನಂತರ ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ ಸಹಾಯ ಧನ ಯೋಜನೆಯನ್ನು ಸೆಲೆಕ್ಟ್ ಮಾಡಿ
  • ಆನ್ಲೈನ್ ಅರ್ಜಿ ಫಾರಂ ಅನ್ನು ತೆರೆಯಿರಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
  • ಅರ್ಜಿ ಸ್ವೀಕೃತಿಯನ್ನು ಪ್ರಿಂಟ್ ತಗೆದುಕೊಳ್ಳಿ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ನಿಮ್ಮ ಊರಿನ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ
  • ಗೊಬ್ಬರ ತೊಟ್ಟಿ ನಿರ್ಮಾಣದ ಸಹಾಯಧನಕ್ಕೆ ಅರ್ಜಿ ಫಾರಂ ಪಡೆದುಕೊಳ್ಳಿ
  • ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಜೋಡಿಸಿ
  • ಪೂರ್ಣಗೊಂಡ ಅರ್ಜಿಯನ್ನು ಅಧಿಕಾರಿಗಳ ಬಳಿ ಸಲ್ಲಿಸಿ
  • ಅರ್ಜಿ ಪರಿಶೀಲನೆ ನಂತರ ಅನುಮೋದನೆ ನೀಡಲಾಗುತ್ತದೆ ಮತ್ತು ಸಹಾಯದಲ್ಲಿ ಬಿಡುಗಡೆ ಮಾಡಲಾಗುತ್ತದೆ

ವಿಶೇಷ ಸೂಚನೆ:

  • ಒಂದು ಕುಟುಂಬಕ್ಕೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುತ್ತದೆ.
  • ಅರ್ಹ ಫಲಾನುಭವಿಗಳ ಆಧಾರ್ ಕಾರ್ಡ್ ಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯವಾಗಿದೆ.
  • ಈ ಯೋಜನೆಯು ಸಂಪೂರ್ಣ ಪಾರದರ್ಶಕವಾಗಿದೆ. ಯಾವುದೇ ಮಧ್ಯವರ್ತಿಗಳ ಹಾಗೂ ಏಜೆಂಟ್ ಗಳಿಗೆ ಹಣ ನೀಡಬೇಡಿ.
  • ರೈತರ ಸರ್ಕಾರದ ಅಧಿಕೃತ ಇಲಾಖೆ ಅಥವಾ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಕಥೆ ಕೊಡಿ ಪಡಿಸಿಕೊಳ್ಳಿ

ಕೊನೆಯ ಮಾತು:

ನಮ್ಮ ಸರ್ಕಾರ ರೈತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎರೆಹುಳು ಗೊಬ್ಬರ ಗುಂಡಿಯ ನಿರ್ಮಾಣಕ್ಕೆ 20,000 ಸಹಾಯಧನವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ರೈತರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ ಸ್ವತಃ ರೈತರು ಗೊಬ್ಬರ ತಯಾರಿಸುವುದರಿಂದ ಹೊರಗಿನಿಂದ ದುಬಾರಿ ಗೊಬ್ಬರ ಕೊಳ್ಳುವ ಖರ್ಜ ಉಳಿಯುತ್ತದೆ
ಎರೆಹುಳು ಗೊಬ್ಬರವನ್ನು ವಾಣಿಜ್ಯವಾಗಿ ತಯಾರಿಸಿ ಮಾರಾಟ ಮಾಡುವ ಮೂಲಕ ಹೈನುಗಾರಿಕೆಯ ಉಪ ಉದ್ಯೋಗವಾಗಿ ಲಾಭ ಪಡೆಯಬಹುದು ಗೊಬ್ಬರದಲ್ಲಿ ಸಸ್ಯಗಳ ಬೆಳವಣಿಗೆಗೆ ಪೂರಕವಾದ ಹಾರ್ಮೋನ್ ಗಳು ಮತ್ತು ಕಿಣ್ವಗಳಿರುತ್ತವೆ ಇದು ಬೀಜಗಳ ಮೊಳಕೆ ಹೊಡೆಯುವ ಸಾಮರ್ಥ್ಯವನ್ನು ಹೆಚ್ಚಿಸಿ ಸಸ್ಯಗಳಿಗೆ ರೋಗನಿರೋಧಕ ಶಕ್ತಿ ನೀಡುತ್ತದೆ ಹಾಗೆಯೇ ಸಸ್ಯಗಳು ಹಲವು ವರ್ಷಗಳ ಕಾಲ ಬದುಕಲು ಸಹಾಯಕವಾಗುತ್ತದೆ

ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :

Leave a Reply

Your email address will not be published. Required fields are marked *