ಇಂದಿನ ದಿನದಲ್ಲಿ ರೈತರಿಗೆ ಅತೀ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ಏನೆಂದರೆ ತಮ್ಮ ಜಮೀನಿಗೆ ತಾವು ತೆರಳಲು ಅಕ್ಕ-ಪಕ್ಕದ ಜಮೀನಿನವರು ಮಾಡುವ ಜಗಳ, ಹೊಡೆದಾಟ, ವಿವಾದಕ್ಕೆ ಕಡಿವು ಹಾಕಲು ಕಂದಾಯ ಇಲಾಖೆಯು ಮಹತ್ವದ ತೀರ್ಮಾನವನ್ನ ಘೋಷಸಿದೆ.
Breaking News In Kannada
ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ರೈತರ ನಡುವೆ ನಡೆಯುವ ಶೇಕಡಾ 60 ಕ್ಕೂ ಹೆಚ್ಚು ಸಿವಿಲ್ ವಿವಾದಗಳು ದಾರಿಗೆ ಸಂಬಂಧಪಟ್ಟವುಗಳೇ ಆಗಿವೆ. “ನನ್ನ ಜಮೀನಿನ ಮೂಲಕ ನಿನಗೆ ದಾರಿ ಬಿಡುವುದಿಲ್ಲ” ಎಂಬ ಹಠ ಅಥವಾ ಹಳೆಯ ಬಂಡಿದಾರಿಯನ್ನು ಅತಿಕ್ರಮಣ ಮಾಡುವ ಪ್ರವೃತ್ತಿಯಿಂದಾಗಿ ಅನೇಕ ರೈತರು ಕೃಷಿ ಚಟುವಟಿಕೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ರೈತರ ಸಂಕಷ್ಟಕ್ಕೆ ಪುಲಿಸ್ಟಾಪ್ ಇಟ್ಟಿದೆ.
ರೈತರ ಕಷ್ಟಕ್ಕೆ ಸರ್ಕಾರ ಇಗ ಯಾಕೆ ಸ್ಪಂದಿಸಿದೆ ಗೊತ್ತ ?
ಕರ್ನಾಟಕದಂತ ರಾಜ್ಯದಲ್ಲಿ ಮಾತ್ರ ಅಲ್ಲ ಹೀಗೆ ಅನೇಕ ರಾಜ್ಯದ ರೈತರು ಈ ಒಂದು ತೊಂದರೆ ಎದುರಿಸುತ್ತಿದ್ದಾರೆ. ಕರ್ನಾಟಕದ ಸುಮಾರು ಜಿಲ್ಲೆಯ ಹಳ್ಳಿ ಭಾಗದಲ್ಲಿ ಅನ್ನ ದಾತರು ತಮ್ಮ ಹೊಲದಲ್ಲಿ ಸಂಚರಿಸಲು ಮತ್ತು ತಾವು ಬೆಳೆದ ಬೆಳೆಗಳನ್ನ ತಮ್ಮ ಮನೆಗೆ ಸಾಗಿಸಲು ಒಂದು ಹೊಂದಾಣಿಕೆಯ ಮನೋ ಭಾವನೆ ಇಂದ ಪಕ್ಕದ ಜಮೀನಿನ ಖಾಸಗಿ ಜಗವನ್ನೇ ಅವಲಂಬಿಸಿರುತ್ತಾರೆ.
ಇನ್ನು ಸ್ಪಷ್ಟವಾಗಿ ಹೇಳುವುದಾದರೆ “ಗ್ರಾಮ ನಕ್ಷೆಯಲ್ಲಿರುವ ಯಾವುದೇ ಹಳೆಯ ಬಂಡಿದಾರಿ ಅಥವಾ ಪಾಲುದಾರಿಯನ್ನು ಯಾರೂ ಬಂದ್ ಮಾಡುವಂತಿಲ್ಲ. ಒಂದು ವೇಳೆ ಅಡ್ಡಿಪಡಿಸಿದರೆ ತಹಶೀಲ್ದಾರ್ ಅವರು ಕಠಿಣ ಕ್ರಮ ಜರುಗಿಸಿ ದಾರಿ ತೆರವುಗೊಳಿಸಬೇಕು.” ಆದರೆ ಇಂದನ ದಿನಗಳಲ್ಲಿ ಯಾವ ಹೊಂದಾಣಿಕೆಗಳು ಇಲ್ಲದೆ ಅವರವರಿಗೆ ದ್ವೇಷ, ಅಸೂಯೆ, ಇಂತ ಕಾರಣಗಳಿಂದ ಪಕ್ಕದ ಜಾಮೀನು ರೈತರು ಕೆಲವು ರೈತರಿಗೆ ದಾರಿ ಬಿಡದೆ ಓಡಾಡಲು ಅಡ್ಡಿಪಡಿಸುತ್ತಾರೆ.

೧ . ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಗಳನ್ನ ಸುಲಭವಾಗಿ ಸಾಗಿಸಬೇಕು ಹಾಗೆಯೆ ಸರಿಯಾದ ಸಮಯದಲ್ಲಿ, ಸಂದರ್ಭದಲ್ಲಿ ಮಾರಾಟವನ್ನ ಮಾಡಿ ತಾವು ಹಾಕಿದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಾಡುವ ಉದ್ದೇಶದಿಂದ.
೨ . ಇಂದಿನ ದಿನದಲ್ಲಿ ಕೃಷಿ ಎಂಬುದು ಸಾದಾರಣ ಕೆಲಸ ಅಲ್ಲ. ರೈತಾಪಿ ಜೀವನದ ಕಷ್ಟ ರೈತರಿಗೆ ಗೊತ್ತು. ಇಂತ ಪರಿಸ್ಥಿತಿಯನ್ನ ಮನದಟ್ಟು ಮಾಡಿಕೊಂಡ ಸರ್ಕಾರ ರೈತರ ಜಮೀನಿಗೆ ಸಲಕರಣೆಗಳನ್ನ ಸಾಗಿಸಲು ತೊಂದರೆ ಆಗುತ್ತಿದೆ ಹೀಗಾಗಿ ಸಮಸ್ಯೆಗಳಿಗೆ ಸರ್ಕಾರ ಈಗ ಸ್ಪಂದಿಸಿದೆ.
೩ . ಗ್ರಾಮ ನಕಾಶೆಯಲ್ಲಿ ಆಯಾ ರೈತರಿಗೆ ದಾರಿ ಇದ್ದರೂ ಸಹ ಪ್ರಭಾವಿ ವ್ಯಕ್ತಿಗಳು ಅದನ್ನು ಮುಚ್ಚಿರುವುದು ಸರ್ಕಾರದ ಗಮನಕ್ಕೆ ಇದೀಗ ಬಂದಿದೆ. ಇದನ್ನು ತೆರವುಗೊಳಿಸಿ ರೈತರ ಸಮಸ್ಯೆಗೆ ಪರಿಹಾರ ನೀಡಲೇಬೇಕೆಂದು ಸರ್ಕಾರ ಈ ಬಾರಿ ಸಜ್ಜಾಗಿದೆ.
“ರೈತರಿಗೆ ಇನ್ಮುಂದೆ ಇಲ್ಲ ಟೆನ್ಶನ್ ! ಆರಾಮವಾಗಿ ತಮ್ಮ ಜಮೀನಿಗೆ ನೀವು ಹೋಗಲು ಸರ್ಕಾರ ನಿಮ್ಮ ನೆರವಿಗೆ ಬಂದು ನಿಂತಿದೆ”.
ಇವೆಲ್ಲ ರೈತರ ದೂರುಗಳು ಮತ್ತು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ತಾಶೀಲ್ದಾರ್ ಗೆ ಖಡಕ್ಕಾಗಿ ಸೂಚನೆಯನ್ನು ನೀಡಿದ್ದಾರೆ.
2026ರ ಹೊಸ ಕಾನೂನು ಆದೇಶ ಏನು ಹೇಳುತ್ತದೆ :-
ಸರ್ಕಾರವು ನೀಡಿರುವ ಇತ್ತೀಚಿನ ಕಟ್ಟುನಿಟ್ಟಿನ ಆದೇಶದ ಪ್ರಕಾರ ಯಾವುದೇ ಜಮೀನಿನ ರೈತ ತನ್ನ ಜಮೀನಿನ ಮೂಲಕ ಹಾದು ಹೋಗುವ ಪಾರಂಪರಿಕ ದಾರಿಯನ್ನ ತಡೆಯುವಂತಿಲ್ಲ.
“ರೈತರು ಮುಖ್ಯವಾಗಿ ಗಮನಿಸಲೇ ಬೇಕಾದ ಅಂಶಗಳು“
1. ರೈತರಿಂದ ದಾರಿ ಬಂದ್ ಆಗಿರುವ ಬಗ್ಗೆ ದೂರು ಬಂದ ಸುಮಾರು 48 ಗಂಟೆಯ ಒಳಗೆ ತಹಶೀಲ್ದಾರ್ ತಳ ಪರಿಶೀಲನೆ ನಡೆಸಿ ಸಮಸ್ಯೆ ಯಾಗಿರುವ ರೈತರಿಗೆ ದಾರಿಯನ್ನ ಬಿಡಿಸಿ ಕೊಡಬೇಕು.
2. ಈಗ ಎಲ್ಲವೂ ಡಿಜಿಟಲ್ ನಕ್ಷೆಯ ಆಧಾರದ ಮೇಲೆ ಇರುತ್ತದೆ ಲೆವೆಲ್ ಸರ್ವೇ ಮತ್ತು ಡ್ರೋನ್ ಮೂಲಕ ಸಿದ್ಧಪಡಿಸಿದ ಹೊಸ ಡಿಜಿಟಲ್ ಗ್ರಾಮೀಣ ನಕ್ಷೆಗಳನ್ನು ಆಧಾರವಾಗಿಟ್ಟುಕೊಂಡು ಅಧಿಕಾರಿಗಳು ದಾರಿಯನ್ನ ಗುರುತಿಸುತ್ತಾರೆ.
3. ದಾರಿ ತೆರವಿಗೆ ಯಾವ ರೈತರು ಅಡ್ಡಿಪಡಿಸುತ್ತಾರೋ ಅಂತಹ ವ್ಯಕ್ತಿಗಳ ಮೇಲೆ ಐಪಿಸಿ ಬದಲು ಈಗ ಹೊಸ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ.
ನಕ್ಷೆಯಲ್ಲಿ ದಾರಿ ಇಲ್ಲದಿದ್ದರೆ ರೈತರು ಏನು ಮಾಡುವುದು?
ಕೆಲವು ಕಡೆ ಸರ್ಕಾರದ ನಕ್ಷೆಯಲ್ಲಿ ದಾರಿ ಇರುವುದಿಲ್ಲ. ಆದರೆ ನೂರಾರು ವರ್ಷಗಳಿಂದ ರೈತರು ಒಂದೇ ಹಾದಿಯಲ್ಲಿ ತಮ್ಮ ಜಮೀನಿಗೆ ಓಡಾಟವನ್ನು ನಡೆಸಿರುತ್ತಾರೆ. ಅಂತ ರೈತರಿಗೆ ಮುಂದೆ ಆ ಜಾಗದ ರೈತರು ನಮ್ಮ ದಾರಿಯಲ್ಲಿ ನೀವು ಓಡಾಡುವಂತಿಲ್ಲ ಎಂದು ಸಮಸ್ಯೆ ಮಾಡುತ್ತಿದ್ದರೆ ಈ ಕೆಳಗಿನ ಹಂತವನ್ನು ನೀವು ಅನುಸರಿಸಿ ಕಾನೂನು ಬದಲಾಗಿ ನಿಮ್ಮ ಹಕ್ಕನ್ನು ಚಲಾಯಿಸಿ.
- ಕಾನೂನಿನ ಪ್ರಕಾರ 20 ವರ್ಷಗಳಿಗೂ ಹೆಚ್ಚು ಕಾಲ ರೈತರು ಒಂದೇ ದಾರಿಯನ್ನ ಬಳಸಿ ತಮ್ಮ ಜಮೀನಿಗೆ ಓಡಾಡುತ್ತಿದ್ದರೆ ಆ ದಾರಿಯನ್ನ ಯಾವುದೇ ರೈತರು ಕೂಡ ಬಂದ್ ಮಾಡುವಂತಿಲ್ಲ.
- “ನಿಮ್ಮ ಜಮೀನಿನ ಸುತ್ತಲೂ ಇತರ ಇತರರ ಜಮೀನಿದ್ದು, ಬೇರೆ ರಸ್ತೆ ಸಂಪರ್ಕ ಇಲ್ಲದಿದ್ದರೆ ಪಕ್ಕದ ಜಮೀನಿನ ಮಾಲೀಕರು ಮಾನವೀಯ ಮತ್ತು ಕಾನೂನು ಬದ್ಧವಾಗಿ ದಾರಿ ನೀಡಲೇಬೇಕು”,”ಇದಕ್ಕೆ ತಹಶೀಲ್ದಾರ್ ನ್ಯಾಯಾಲಯದಲ್ಲಿ ಅರ್ಜಿಯನ್ನು ಯಾವುದೇ ರೈತರು ಕೂಡ ಸಲ್ಲಿಸಬಹುದು”.
ದಾರಿ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳುವುದು ಹೇಗೆ ?
ಗ್ರಾಮೀಣ ಭಾಗದ ರೈತರು ತಮಗೆ ಬರುವ ಸಮಸ್ಯೆಯನ್ನು ಯಾವ ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬ ಅರಿವು ಸ್ವಲ್ಪವೂ ಕೂಡ ಇಲ್ಲದ ರೈತರು ಅದೆಷ್ಟೋ.
೧ . ಮೊದಲು ರೈತರು ಮಾಡಬೇಕಾದ ಕೆಲಸ :
ಯಾರನ್ನಾದರೂ ಈ ವಿಚಾರವಾಗಿ ಒಂದು ಬಾರಿ ಕೇಳುವ ಮೊದಲು, ನಿಮ್ಮ ಜಮೀನಿನ ನಕ್ಷೆ (Village Map) ನೋಡಿ. “ಅದರಲ್ಲಿ ದಾರಿಯ ಗುರುತಿದ್ದರೆ ಅದು ನಿಮ್ಮ ಜನ್ಮ ಸಿದ್ಧ ಹಕ್ಕಾಗಿರುತ್ತದೆ, ಅದನ್ನು ಬಂದ್ ಮಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಹಾಗೆಯೇ ಅಧಿಕಾರವೂ ಇರುವುದಿಲ್ಲ”. ನಿಮ್ಮ ಜಾಮೀನು RTC ಯಲ್ಲಿ ಕರಾಬು ಅಂತ ಇದ್ದರೆ ಸರ್ಕಾರವೇ ರೈತರಿಗೆ ಓಡಾಡಲು ದಾರಿ ಬಿಟ್ಟು ಜಮೀನು ಆಗಿರುತ್ತದೆ.
೨ . ರೈತರು ತಹಶೀಲ್ದಾರ್ ಗೆ ಅಧಿಕೃತವಾಗಿ ದೂರನ್ನು ನೀಡಿ :
ರೈತರಿಗೆ ಈ ರೀತಿಯ ಒಂದು ಸಮಸ್ಯೆ ಬಹಳಷ್ಟು ಆಗುತ್ತಿದ್ದರೆ ನೀವು ನೇರವಾಗಿ ನಿಮ್ಮ ತಾಲೂಕಿನ ತಹಶೀಲ್ದಾರ್ ಅವರಿಗೆ ಲಿಖಿತ ದೂರನ್ನು (Written complaint) ನೀಡಬೇಕಾಗುತ್ತದೆ.
ದೂರು ನೀಡಿದ ನಂತರ ಯಾವ ರೀತಿ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತದೆ ಗೊತ್ತ ?
- ಊರಿಗೆ ಸಂಬಂಧಪಟ್ಟ ತಹಶೀಲ್ದಾರ್ ಅವರು ಆರ್. ಐ, ಹಾಗೆ ಸರ್ವೆಯರ್ ಅವರಿಗೆ ಯಾವ ಯಾವ ರೈತರ ನಡುವೆ ದಾರಿಗಾಗಿ ಸಮಸ್ಯೆ ಆಗುತ್ತಿದೆಯೋ ಅದನ್ನು ಸ್ಥಳಕ್ಕೆ ಹೋಗಿ ದಾರಿ ಪರಿಶೀಲಿಸಲು ಆದೇಶಿಸುತ್ತಾರೆ.
- ತಹಶೀಲ್ದಾರ್ ಅವರು ಪೊಲೀಸ್ ರಕ್ಷಣೆಯೊಂದಿಗೆ ರೈತರ ಜಮೀನಿಗೆ ಭೇಟಿ ನೀಡಿ, ನಕ್ಷೆಯಲ್ಲಿ ದಾರಿ ಇರುವುದು ನಿಜವಾಗಿದ್ದರೆ ಅತಿಕ್ರಮಣವಾಗಿ ಮಾಡಿದ ಬೇಲಿ ಅಥವಾ ಬೆಳೆಗಳನ್ನ ತೆರವುಗೊಳಿಸಿ ಸಮಸ್ಯೆ ಅದಾರ ರೈತರಿಗೆ ನ್ಯಾಯವನ್ನು ಒದಗಿಸಿಕೊಳ್ಳುತ್ತಾರೆ.
೩ . ಸಮಸ್ಯೆ ಆದ ರೈತರು ಗ್ರಾಮ ಪಂಚಾಯತ್ ಗಮನಕ್ಕೂ ತರುವ ಅವಕಾಶವಿದೆ. ಯಾವ ರೀತಿ :-
ಗ್ರಾಮದ ಒಳಗಿನ ಅಥವಾ ಹೊರಗಿನ ದಾರಿಗಳ ಅಧಿಕಾರವು ಗ್ರಾಮ ಪಂಚಾಯಿತಿ ಮೇಲು ಇರುತ್ತದೆ. ಇಲ್ಲಿನ ಪಿಡಿಓ ಅವರಿಗೆ ರೈತರು ದೂರು ನೀಡಿದರೆ ಅವರು ಅತಿಕ್ರಮಣವಾಗಿ ನೋಟಿಸ್ (Warning) ಒಂದನ್ನ ನಿಮಗೆ ತೊಂದರೆ ಮಾಡುತ್ತಿರುವ ರೈತರಿಗೆ ನೀಡುತ್ತಾರೆ.
ಈ ವಿಷಯವಾಗಿ ರೈತರು ಎಚ್ಚರಿಕೆಯಿಂದ ನೆನಪಿನಲ್ಲಿಡಬೇಕಾದ ಮುಖ್ಯ ವಿಷಯ :-
* ಯಾವುದೇ ರೈತರಾಗಿರಲಿ ಜಮೀನಿಗೆ ತೆರಳುವ ದಾರಿ ವಿಚಾರವಾಗಿ ಎಂದು ದೈಹಿಕ ಜಗಳಕ್ಕೆ ಹೋಗಬೇಡಿ ಇದು ನಿಮ್ಮ ಮೇಲೆ ಕೇಸ್ ಆಗುವಂತೆ ಮಾಡುತ್ತದೆ.
* ದಾರಿಯನ್ನು ಯಾವುದೇ ರೈತ ಆಗಿದಿದ್ದರೆ ಅಥವಾ ಬೇಲಿ ಹಾಕಿದರೆ ಅದರ ಫೋಟೋ ಮತ್ತು ವಿಡಿಯೋ ತೆಗೆದಿಟ್ಟುಕೊಳ್ಳಿ ಇದು ನಿಮಗೆ ಕಾನೂನಿನ ವಿಷಯದಲ್ಲಿ ನ್ಯಾಯ ಸಿಗಲು ಬಹುದೊಡ್ಡ ಸಾಕ್ಷಿಯಾಗಿರುತ್ತದೆ.
* “ಸರ್ಕಾರವು 2026 ನೇ ಆದೇಶದಲ್ಲಿ ಹಳೆಯ ಕಾಲುದಾರಿ ಅಥವಾ ಬಂಡಿ ದಾರಿಗಳನ್ನ ಯಾರೊಬ್ಬ ರೈತರು ಮುಚ್ಚುವಂತಿಲ್ಲ ಮತ್ತು ತಾಸಿಲ್ದಾರ್ ಅವರು ಇಂತಹ ದೂರನ್ನು ಆದ್ಯತೆಯ ಮೇಲೆ ಬಗೆಹರಿಸಬೇಕು ಎಂದು ಸರ್ಕಾರ ಖಡಕ್ಕಾಗಿ ಈ ಬಾರಿ ಸೂಚನೆಯನ್ನು ನೀಡಿದೆ”.
2026ರ ರೈತರ ದಾರಿ ವಿವಾದದ ಬಗ್ಗೆ ಕಾನೂನು ಏನು ಹೇಳುತ್ತದೆ :-
| ಕಾನೂನು ವಿಭಾಗ | ಅನ್ವಯವಾಗುವ ಕಾಯ್ದೆ | ಪ್ರಮುಖ ಅಂಶ (2026ರ ಅಪ್ಡೇಟ್) | ಪರಿಹಾರದ ರೀತಿ |
|---|---|---|---|
| ಕಂದಾಯ ಅಧಿಕಾರ (Revenue Power) | ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 68 & 133 | ನಕ್ಷೆಯಲ್ಲಿರುವ ಬಂಡಿದಾರಿ ಅಥವಾ ಪಾದಚಾರಿ ಮಾರ್ಗವು ‘ಬಿ-ಖರಾಬು’ (ಸರ್ಕಾರಿ ಆಸ್ತಿ) ಎಂದು ಪರಿಗಣನೆ. | ತಹಶೀಲ್ದಾರ್ ಅವರು ಯಾವುದೇ ನೋಟಿಸ್ ನೀಡದೆ ಸ್ಥಳದಲ್ಲೇ ಜೆಸಿಬಿ ಮೂಲಕ ದಾರಿ ತೆರವುಗೊಳಿಸಬಹುದು. |
| ಕ್ರಿಮಿನಲ್ ಕ್ರಮ (Criminal Action) | ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 126 | ಸಾರ್ವಜನಿಕ ಅಥವಾ ಖಾಸಗಿ ದಾರಿಯನ್ನು ಅಕ್ರಮವಾಗಿ ತಡೆಯುವುದು ‘ತಪ್ಪು ಪ್ರತಿಬಂಧ’ (Wrongful Restraint) ಎಂಬ ಅಪರಾಧ. | ದಾರಿ ಅಡ್ಡಗಟ್ಟುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಿ ಜೈಲಿಗೆ ಕಳುಹಿಸಬಹುದು. |
| ಖಾಸಗಿ ಹಕ್ಕು (Civil Right) | ಭಾರತೀಯ ಈಸ್‌ಮೆಂಟ್ ಕಾಯ್ದೆ ಸೆಕ್ಷನ್ 13 & 15 | ಅನಿವಾರ್ಯತೆಯ ದಾರಿ (Easement of Necessity): ಜಮೀನಿಗೆ ಬೇರೆ ದಾರಿಯೇ ಇಲ್ಲದಿದ್ದರೆ ಪಕ್ಕದವರು ದಾರಿ ಕೊಡಲೇಬೇಕು. | ಸಿವಿಲ್ ನ್ಯಾಯಾಲಯದ ಮೂಲಕ ಶಾಶ್ವತ ದಾರಿ ಮತ್ತು ‘ಇಂಜಂಕ್ಷನ್ ಆರ್ಡರ್’ (ತಡೆಯಾಜ್ಞೆ) ಪಡೆಯಬಹುದು. |
| ಸ್ಥಳೀಯ ಆಡಳಿತ (Local Body) | ಗ್ರಾಮ ಪಂಚಾಯತ್ ರಾಜ್ ಕಾಯ್ದೆ ಸೆಕ್ಷನ್ 212 | ಗ್ರಾಮದ ಸೀಮೆಯಲ್ಲಿರುವ ಕೃಷಿ ದಾರಿಗಳ ನಿರ್ವಹಣೆ ಮತ್ತು ಒತ್ತುವರಿ ತೆರವು ಪಂಚಾಯತ್ ಜವಾಬ್ದಾರಿ. | ಪಿಡಿಒ (PDO) ಅವರು ಅತಿಕ್ರಮಣದಾರರಿಗೆ ದಂಡ ವಿಧಿಸಬಹುದು ಮತ್ತು ದಾರಿಯನ್ನು ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಪಡಿಸಬಹುದು. |
| ಡಿಜಿಟಲ್ ಸಾಕ್ಷ್ಯ (Technology) | ಡಿಜಿಟಲ್ ಸರ್ವೇ ನಿಯಮಗಳು 2026 | ಡ್ರೋನ್ ಮತ್ತು ಜಿಪಿಎಸ್ ಸರ್ವೇ ಮೂಲಕ ಗುರುತಿಸಲಾದ **’ಪಾರಂಪರಿಕ ಹಾದಿ’**ಗಳಿಗೆ ಕಾನೂನು ಮಾನ್ಯತೆ. | ಹಳೆಯ ನಕ್ಷೆಯಲ್ಲಿ ದಾರಿ ಇಲ್ಲದಿದ್ದರೂ, ಸ್ಯಾಟಲೈಟ್ ಚಿತ್ರಗಳಲ್ಲಿ ದಾರಿ ಕಂಡುಬಂದರೆ ಅದನ್ನು ಅಧಿಕೃತ ದಾರಿ ಎಂದು ಘೋಷಿಸಬಹುದು. |
ಪ್ರಮುಖ ಅಂಶ : ಗ್ರಾಮೀಣ ನಕ್ಷೆಯಲ್ಲಿ (ವಿಲೇಜ್ ಮ್ಯಾಪ್) ದಾರಿ ಎಂದು ಗುರುತಿಸಲಾದ ಜಾಗವನ್ನ ಯಾವ ಖಾಸಗಿ ಸ್ವತ್ತು ಎಂದು ವಶಪಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ಯಾವುದೇ ರೈತರು ವಶಪಡಿಸಿಕೊಂಡಲ್ಲಿ ಕಾನೂನಿನ ಪ್ರಕಾರ ದಂಡ ಮತ್ತು ಶಿಕ್ಷೆ ಎರಡನ್ನು ಅನುಭವಿಸಬೇಕಾಗುತ್ತದೆ.
ರೈತರಿಗೆ ನನ್ನ ಸಲಹೆ :-
| * ಯಾವುದೇ ರೈತರಾಗಿರಲಿ ಜಮೀನಿನ ದಾರಿ ವಿಷಯದಲ್ಲಿ ಅಕ್ಕ-ಪಕ್ಕದ ರೈತರೊಂದಿಗೆ ದೈಹಿಕ ಜಗಳಕ್ಕೆ ಇಳಿದು ಕೋರ್ಟ್-ಕಚೇರಿ ಅಲೆಯುವ ಬದಲು ಗ್ರಾಮ ನಕ್ಷೆ ಮತ್ತು ಆಕಾರ್ ಬಂದ್ ದಾಖಲೆಯನ್ನ ಆಧರಿಸಿ ಕಾನೂನು ಬದ್ಧವಾಗಿ ಹೋರಾಡುವುದು ಜಾಣತನದ ಲಕ್ಷಣ ನೆನಪಿನಲ್ಲಿಡಿ. * ನಕ್ಷೆಯಲ್ಲಿರುವ ಬಂಡಿದಾರಿಯು ಸಾರ್ವಜನಿಕ ಸ್ವತ್ತಾಗಿದ್ದು, ಅದನ್ನ ಬಂದ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಇದರಿಂದ ತೊಂದರೆ ಅನುಭವಿಸುತ್ತಿದ್ದ ರೈತರು ತಹಶೀಲ್ದಾರ್ ಅವರಿಗೆ ದೂರು ನೀಡಿ. 2026ರ ಹೊಸ ನಿಯಮದಂತೆ ಪೊಲೀಸ್ ರಕ್ಷಣೆಯೊಂದಿಗೆ ದಾರಿ ಮುಕ್ತಗೊಳಿಸಿಕೊಳ್ಳಿ . * ದಾರಿ ಬಿಡುವುದು ಎಂದರೆ ಭೂಮಿ ಕಳೆದುಕೊಳ್ಳುವುದಲ್ಲ ಬದಲಾಗಿ ಅದು ಆಧುನಿಕ ಕೃಷಿ ಯಂತ್ರೋಪಕರಣಗಳ ಸಂಚಾರಕ್ಕೆ ಅನುಕೂಲವಾಗುವಂತೆ ಪರಸ್ಪರ ಸಹಕರಿಸಿ 12 /15 ಅಡಿ ಅಗಲದ ರಸ್ತೆ ನಿರ್ಮಿಸಿಕೊಂಡರೆ ನಿಮ್ಮ ಜಮೀನಿನ ಮೌಲ್ಯವು ಹೆಚ್ಚಾಗುತ್ತದೆ ಮತ್ತು ಕೃಷಿ ಕೆಲಸವೂ ಎಲ್ಲಾ ರೈತರಿಗೂ ಸುಲಭವಾಗಿರುತ್ತದೆ. ಯಾವುದೇ ರೈತರ ಮಧ್ಯೆ ಮನಸ್ತಾಪಗಳು ಇದರಿಂದ ಕಡಿಮೆಯಾಗಿ ಒಬ್ಬರಿಗೊಬ್ಬರು ರೈತರು ನೆರವಾಗಬಹುದು. |
ರೈತರು ಕೇಳಬಹುದಾದ ಪ್ರಶ್ನೆಗಳು :-
ಉತ್ತರ: 2026ರ ಹೊಸ ಕೃಷಿ ಅವಶ್ಯಕತೆಗಳ ಪ್ರಕಾರ, ಟ್ರ್ಯಾಕ್ಟರ್ ಮತ್ತು ಹಾರ್ವೆಸ್ಟರ್‌ಗಳ ಸಂಚಾರಕ್ಕೆ 12-15 ಅಡಿ ದಾರಿ ಅಗತ್ಯ. ನೀವು ಗ್ರಾಮ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಎಲ್ಲ ರೈತರ ಸಹಮತದೊಂದಿಗೆ ದಾರಿಯನ್ನು ವಿಸ್ತರಿಸಲು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಬಹುದು ಅಥವಾ ಉದ್ಯೋಗ ಖಾತರಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಕೋರಬಹುದು.
ಉತ್ತರ: ನಕ್ಷೆಯಲ್ಲಿರುವ ಸಾರ್ವಜನಿಕ ಬಂಡಿದಾರಿ ಅಥವಾ ‘ಬಿ-ಖರಾಬು’ ಜಮೀನಿನಲ್ಲಿ ದಾರಿ ಬಿಡಲು ಹಣ ಕೇಳುವುದು ಸಂಪೂರ್ಣ ಕಾನೂನು ಬಾಹಿರ. ಅದು ಸರ್ಕಾರದ ಆಸ್ತಿ. ಆದರೆ, ನಕ್ಷೆಯಲ್ಲಿ ದಾರಿ ಇಲ್ಲದೆ ಹೊಸದಾಗಿ ಅವರ ಖಾಸಗಿ ಜಮೀನಿನಲ್ಲಿ ದಾರಿ ಕೇಳುತ್ತಿದ್ದರೆ, ಪರಸ್ಪರ ಒಪ್ಪಿಗೆಯ ಮೇರೆಗೆ ಭೂಮಿಯ ಮೌಲ್ಯಕ್ಕೆ ತಕ್ಕಂತೆ ಪರಿಹಾರ ನೀಡಿ ದಾರಿ ಪಡೆಯಬಹುದು.
ಉತ್ತರ: ತಹಶೀಲ್ದಾರ್ ಆದೇಶವನ್ನು ಪಾಲಿಸದಿದ್ದರೆ, ಅವರ ಮೇಲೆ ನ್ಯಾಯಾಂಗ ನಿಂದನೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಪೊಲೀಸ್ ಕ್ರಮ ಜರುಗಿಸಬಹುದು. ಅಂತಿಮವಾಗಿ ಪೊಲೀಸ್ ರಕ್ಷಣೆಯೊಂದಿಗೆ ದಾರಿ ಮುಕ್ತಗೊಳಿಸಲಾಗುತ್ತದೆ.
ಉತ್ತರ: 2026ರ ಹೊಸ ನಿಯಮದಂತೆ, ಅಕ್ರಮವಾಗಿ ದಾರಿ ಬಂದ್ ಮಾಡಿದ ವ್ಯಕ್ತಿಯೇ ತೆರವು ಕಾರ್ಯಾಚರಣೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು. ಸರ್ಕಾರವು ಈ ಮೊತ್ತವನ್ನು ಅವರ ಭೂಕಂದಾಯದ ಬಾಕಿಯಂತೆ ವಸೂಲಿ ಮಾಡುತ್ತದೆ.
ಉತ್ತರ: ಮೊದಲು ನಿಮ್ಮ ತಾಲೂಕಿನ ತಹಶೀಲ್ದಾರ್ ಅವರಿಗೆ ಲಿಖಿತ ದೂರು ನೀಡಿ. ಅವರು ಕಂದಾಯ ಕಾಯ್ದೆ ಸೆಕ್ಷನ್ 68 ಮತ್ತು 133 ರ ಅಡಿಯಲ್ಲಿ ದಾರಿ ತೆರವುಗೊಳಿಸಲು ಆದೇಶಿಸುತ್ತಾರೆ. ಅಡ್ಡಗಟ್ಟುವವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 126 ರ ಅಡಿಯಲ್ಲಿ ದೂರು ನೀಡಬಹುದು.
ಇತರೆ ಸರ್ಕಾರೀ ಯೋಜನೆಗಳ ಮಾಹಿತಿ :-
- PMVY: ಕುಶಲಕರ್ಮಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ₹3 ಲಕ್ಷ ಸಾಲ + ಉಚಿತ ಟೂಲ್ ಕಿಟ್!
- SBM: ₹20,000/- ಸಹಾಯಧನ ಪಡೆಯಲು ಸುಲಭ ವಿಧಾನ! ನಿಮ್ಮ ಮನೆಯಲ್ಲಿ ಶೌಚಾಲಯ ಇಲ್ಲವೇ? ಹಾಗಿದ್ದರೆ ಇಲ್ಲಿ ಅರ್ಜಿ ಸಲ್ಲಿಸಿ
- PM-KISAN: PM ಕಿಸಾನ್ 22ನೇ ಕಂತು ಬಿಡುಗಡೆ ಯಾವಾಗ? ಸರ್ಕಾರದ ಅಧಿಕೃತ ಮಾಹಿತಿ ಇಲ್ಲಿದೆ!
- PMKSY: ನಿಮ್ಮ ಜಮೀನಿಗೆ ಡ್ರಿಪ್ ಮತ್ತು ಸ್ಪ್ರಿಂಕ್ಲರ್ ಅಳವಡಿಸಲು 90% ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ

