Bob Bank : ರೂ1,05,280/- ಬ್ಯಾಂಕ್ ಆಫ್ ಬರೋಡಾ ಭರ್ಜರಿ ನೇಮಕಾತಿ!

Bob Bank

Bob Bank : ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ! ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 (Bob Bank)ರಲ್ಲಿ ಮ್ಯಾನೇಜರ್, ಆಫೀಸರ್ ಹಾಗೂ ಇನ್ನಿತರೇ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ. ನೀವೇನಾದರೂ ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಬೇಕು ಎಂದು ಬಯಸುತ್ತಿದ್ದೀರಾ? ಹಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ.

Bank Of Baroda Recruitment In Kannada

ಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದಲೇ ಆರಂಭಗೊಂಡಿದ್ದು, 19-02-2026 ರ ವರೆಗೆ ಅವಕಾಶವಿದೆ. ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡ (Bob Bank)ಅಧಿಕೃತ ವೆಬ್ಸೈಟ್ http://bankofbaroda.bank.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಹಂತದಲ್ಲಿ ನೀಡಲಾದ ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು, ಅರ್ಜಿ ಶುಲ್ಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಇದೇ ರೀತಿಯ ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ.

ಹುದ್ದೆಯ ಕಿರು ನೋಟ:

ಕಂಪನಿಯ ಹೆಸರುಬ್ಯಾಂಕ್ ಆಫ್ ಬರೋಡಾ (Bob Bank)
ಹುದ್ದೆಯ ಹೆಸರುಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗಳು
ಹುದ್ದೆಯ ಸಂಖ್ಯೆ418 ಹುದ್ದೆಗಳು
ವೇತನ ಶ್ರೇಣಿ ₹48,480 – ₹1,05,280
ಅರ್ಹತೆಎಂಸಿಎ, ಎಂಇ/ ಎಂ.ಟೆಕ್ ಹಾಗೂ ಬಿಇ/ಬಿ.ಟೆಕ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ19-02-2026

ಹುದ್ದೆಯ ಸಂಕ್ಷಿಪ್ತ ಮಾಹಿತಿ:

ಭಾರತದ ಪ್ರಮುಖ ಸಾರ್ವಜನಿಕ ವಲಯಗಳ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bob Bank) ಸುಮಾರು 418 ಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಎಂಸಿಎ, ಎಂಇ/ ಎಂ.ಟೆಕ್ ಹಾಗೂ ಬಿಇ/ಬಿ.ಟೆಕ್ ನಂತಹ ವೃತ್ತಿಪರ ಕೋರ್ಸ್ ಗಳನ್ನು ಪೂರ್ಣಗೊಳಿಸಿದ 22 ರಿಂದ 37 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆಯ ವಿವರ:

ಹುದ್ದೆಯ ಹೆಸರು ವಿವಿಧ ಶ್ರೇಣಿ ಒಟ್ಟು ಹುದ್ದೆಗಳು
ಆಫೀಸರ್– ಡೆವಲಪರ್ ಫುಲ್ ಸ್ಟ್ಯಾಕ್ ಜಾವಾ ಜೆಎಂಜಿ/ ಎಸ್ಐ 03 ಹುದ್ದೆಗಳು
ಆಫೀಸರ್ -ಫುಲ್ ಸ್ಟ್ಯಾಕ್ ಮೆರ್ನ್ ಜೆಎಂಜಿ/ ಎಸ್ಐ 08 ಹುದ್ದೆಗಳು
ಆಫೀಸರ್ – ಕ್ಲೌಡ್ ಇಂಜಿನಿಯರ್ ಜೆಎಂಜಿ/ ಎಸ್ಐ 11 ಹುದ್ದೆಗಳು
ಆಫೀಸರ್ – AI ಇಂಜಿನಿಯರ್ ಜೆಎಂಜಿ/ ಎಸ್ಐ 04 ಹುದ್ದೆಗಳು
ಆಫೀಸರ್ – API ಡೆವಲಪರ್ ಜೆಎಂಜಿ/ ಎಸ್ಐ 04 ಹುದ್ದೆಗಳು
ಆಫೀಸರ್ – ನೆಟ್ವರ್ಕ್ ನಿರ್ವಾಹಕರು ಜೆಎಂಜಿ/ ಎಸ್ಐ 07 ಹುದ್ದೆಗಳು
ಆಫೀಸರ್ – ಸರ್ವರ್ ನಿರ್ವಾಹಕರುಜೆಎಂಜಿ/ ಎಸ್ಐ 06 ಹುದ್ದೆಗಳು
ಆಫೀಸರ್ – ಡೇಟಾಬೇಸ್ ನಿರ್ವಾಹಕರು ಜೆಎಂಜಿ/ ಎಸ್ಐ 05 ಹುದ್ದೆಗಳು
ಆಫೀಸರ್ – ಡೇಟಾ ಇಂಜಿನಿಯರ್ ಜೆಎಂಜಿ/ ಎಸ್ಐ 03 ಹುದ್ದೆಗಳು
ಆಫೀಸರ್ – ಫಿನಾಕಲ್ ಡೆವೆಲಪರ್ ಜೆಎಂಜಿ/ ಎಸ್ಐ 05 ಹುದ್ದೆಗಳು
ಮ್ಯಾನೇಜರ್ – ಡೆವಲಪರ್ ಫುಲ್ ಸ್ಟ್ಯಾಕ್ ಜಾವಾಎಂಎಂಜಿ/ ಎಸ್-II27 ಹುದ್ದೆಗಳು
ಮ್ಯಾನೇಜರ್ – ಫುಲ್ ಸ್ಟ್ಯಾಕ್ ಮೆರ್ನ್ಎಂಎಂಜಿ/ ಎಸ್-II34 ಹುದ್ದೆಗಳು
ಮ್ಯಾನೇಜರ್ – ಕ್ಲೌಡ್ ಇಂಜಿನಿಯರ್ಎಂಎಂಜಿ/ ಎಸ್-II24 ಹುದ್ದೆಗಳು
ಮ್ಯಾನೇಜರ್ – AI ಇಂಜಿನಿಯರ್ಎಂಎಂಜಿ/ ಎಸ್-II23 ಹುದ್ದೆಗಳು
ಮ್ಯಾನೇಜರ್ – ನೆಟ್ವರ್ಕ್ ನಿರ್ವಾಹಕರು ಎಂಎಂಜಿ/ ಎಸ್-II13 ಹುದ್ದೆಗಳು
ಮ್ಯಾನೇಜರ್ – ಸರ್ವರ್ ನಿರ್ವಾಹಕರುಎಂಎಂಜಿ/ ಎಸ್-II23 ಹುದ್ದೆಗಳು
ಮ್ಯಾನೇಜರ್ – ಡೇಟಾಬೇಸ್ ನಿರ್ವಾಹಕರು ಎಂಎಂಜಿ/ ಎಸ್-II16 ಹುದ್ದೆಗಳು
ಮ್ಯಾನೇಜರ್ – ಡೇಟಾ ವಿಜ್ಞಾನಿ ಎಂಎಂಜಿ/ ಎಸ್-II09 ಹುದ್ದೆಗಳು
ಮ್ಯಾನೇಜರ್ – ಡೇಟಾ ಇಂಜಿನಿಯರ್ಎಂಎಂಜಿ/ ಎಸ್-II08 ಹುದ್ದೆಗಳು
ಮ್ಯಾನೇಜರ್ – ಫಿನಾಕಲ್ ಡೆವೆಲಪರ್ ಎಂಎಂಜಿ/ ಎಸ್-II19 ಹುದ್ದೆಗಳು
ಮ್ಯಾನೇಜರ್ – ETL ಡೆವೆಲಪರ್ ಎಂಎಂಜಿ/ ಎಸ್-II02 ಹುದ್ದೆಗಳು
ಮ್ಯಾನೇಜರ್ -ಪೋಸ್ಟ್ ಗ್ರೆಸ್ ನಿರ್ವಾಹಕ ಎಂಎಂಜಿ/ ಎಸ್-II02 ಹುದ್ದೆಗಳು
ಮ್ಯಾನೇಜರ್ – ಶೇಖರಣಾ ನಿರ್ವಾಹಕ ಮತ್ತು ಬ್ಯಾಕಪ್ ಎಂಎಂಜಿ/ ಎಸ್-II06 ಹುದ್ದೆಗಳು
ಮ್ಯಾನೇಜರ್ – ಡೆವೆಲಪರ್ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಎಂಎಂಜಿ/ ಎಸ್-II07 ಹುದ್ದೆಗಳು
ಮ್ಯಾನೇಜರ್ – API ಡೆವಲಪರ್ ಎಂಎಂಜಿ/ ಎಸ್-II16 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಡೆವಲಪರ್ ಫುಲ್ ಸ್ಟ್ಯಾಕ್ ಜಾವಾಎಂಎಂಜಿ/ ಎಸ್-III28 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಫುಲ್ ಸ್ಟ್ಯಾಕ್ ಮೆರ್ನ್ಎಂಎಂಜಿ/ ಎಸ್-III20 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – AI ಇಂಜಿನಿಯರ್ಎಂಎಂಜಿ/ ಎಸ್-III12 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – API ಡೆವಲಪರ್ ಎಂಎಂಜಿ/ ಎಸ್-III18 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಡೇಟಾಬೇಸ್ ನಿರ್ವಾಹಕರು ಎಂಎಂಜಿ/ ಎಸ್-III03 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಡೇಟಾಬೇಸ್ ನಿರ್ವಾಹಕರು ಎಂಎಂಜಿ/ ಎಸ್-III13 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಡೇಟಾ ವಿಜ್ಞಾನಿ ಎಂಎಂಜಿ/ ಎಸ್-III04 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಡೇಟಾ ಇಂಜಿನಿಯರ್ಎಂಎಂಜಿ/ ಎಸ್-III05 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಫಿನಾಕಲ್ ಡೆವೆಲಪರ್ ಎಂಎಂಜಿ/ ಎಸ್-III08 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಎಂಟರ್ ಪ್ರೈಸ್ ವಾಸ್ತುಶಿಲ್ಪ ಎಂಎಂಜಿ/ ಎಸ್-III10 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ETL ಡೆವೆಲಪರ್ ಎಂಎಂಜಿ/ ಎಸ್-III03 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಡೆವೆಲಪರ್ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಎಂಎಂಜಿ/ ಎಸ್-III07 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – ಹಿರಿಯ ಶೇಖರಣಾ ನಿರ್ವಾಹಕ ಮತ್ತು ಬ್ಯಾಕಪ್ ಎಂಎಂಜಿ/ ಎಸ್-III02 ಹುದ್ದೆಗಳು

ಅರ್ಹತಾ ಮಾನದಂಡಗಳು:

1. ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಎಂಇ/ ಎಂ.ಟೆಕ್ ಹಾಗೂ ಬಿಇ/ಬಿ.ಟೆಕ್, ಎಂಸಿಎ ಅನ್ನು ಪೂರ್ಣಗೊಳಿಸಿರಬೇಕು.

2. ಅನುಭವ:

  • ಆಫೀಸರ್ (ಶ್ರೇಣಿ-I) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು IT/ ಬ್ಯಾಂಕಿಂಗ್/ ಫೈನಾನ್ಸ್ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ತಾಂತ್ರಿಕ ಅನುಭವವನ್ನು ಹೊಂದಿರಬೇಕು.
  • ಮ್ಯಾನೇಜರ್ (ಶ್ರೇಣಿ-II) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು IT/ ಬ್ಯಾಂಕಿಂಗ್/ ಫೈನಾನ್ಸ್ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷದ ತಾಂತ್ರಿಕ ಅನುಭವವನ್ನು ಹೊಂದಿರಬೇಕು
  • ಸೀನಿಯರ್ ಮ್ಯಾನೇಜರ್ (ಶ್ರೇಣಿ-III) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 5 ರಿಂದ 8 ವರ್ಷ ವೃತ್ತಿಪರ ಅನುಭವವನ್ನು ಹೊಂದಿರಬೇಕು. ಜೊತೆಗೆ, IT/ ಬ್ಯಾಂಕಿಂಗ್/ ಹಣಕಾಸು ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕಾಲ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿರಬೇಕು.

ವಯೋಮಿತಿ:

ಹುದ್ದೆಯ ಹೆಸರು ಕನಿಷ್ಠ ವಯೋಮಿತಿ ಗರಿಷ್ಟ ವಯೋಮಿತಿ
ಆಫೀಸರ್22 ವರ್ಷಗಳು 32 ವರ್ಷಗಳು
ಮ್ಯಾನೇಜರ್24 ವರ್ಷಗಳು 34 ವರ್ಷಗಳು
ಸೀನಿಯರ್ ಮ್ಯಾನೇಜರ್27 ವರ್ಷಗಳು 37 ವರ್ಷಗಳು

ವಯೋಮಿತಿ ಸಡಿಲಿಕೆ ಬಗ್ಗೆ :

ಕೆಲವು ವರ್ಗಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ, ಅದನ್ನು ಈ ಕೆಳಗೆ ನೋಡಬಹುದಾಗಿದೆ,

  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: 3 ವರ್ಷಗಳು
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: 5 ವರ್ಷಗಳು
  • ಮಾಜಿ ಸೈನಿಕ (ಸಾಮಾನ್ಯ/ EWS) ಅಭ್ಯರ್ಥಿಗಳಿಗೆ: 5 ವರ್ಷಗಳು
  • ಮಾಜಿ ಸೈನಿಕ (ಒಬಿಸಿ) ಅಭ್ಯರ್ಥಿಗಳಿಗೆ: 8 ವರ್ಷಗಳು
  • ಮಾಜಿ ಸೈನಿಕ (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷಗಳು
  • ಪಿಡಬ್ಲ್ಯೂಡಿ (ಸಾಮಾನ್ಯ/ EWS) ಅಭ್ಯರ್ಥಿಗಳಿಗೆ: 10 ವರ್ಷ
  • ಪಿಡಬ್ಲ್ಯೂಡಿ (ಒಬಿಸಿ) ಅಭ್ಯರ್ಥಿಗಳಿಗೆ: 13 ವರ್ಷಗಳು
  • ಪಿಡಬ್ಲ್ಯೂಡಿ (SC/ST) ಅಭ್ಯರ್ಥಿಗಳಿಗೆ: 15 ವರ್ಷಗಳು

ವೇತನ ಶ್ರೇಣಿ ವಿವರ :

ಹುದ್ದೆಯ ಹೆಸರು ವೇತನ ಶ್ರೇಣಿ
ಆಫೀಸರ್₹48,480 – ₹85,920
ಮ್ಯಾನೇಜರ್₹64,820 – ₹93,960
ಸೀನಿಯರ್ ಮ್ಯಾನೇಜರ್₹85,920 – ₹1,20,940
ಇಲ್ಲಿ ಗಮನಿಸಿ: “ಆಯ್ಕೆಗೊಂಡ ಅಭ್ಯರ್ಥಿಗಳಿಗೆ ವೇತನಗಳ ಜೊತೆಗೆ ವೈದ್ಯಕೀಯ ಸೌಲಭ್ಯಗಳು, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ಇತರೆ ಭತ್ಯೆಗಳು ಲಭಿಸುತ್ತದೆ”

ಅರ್ಜಿ ಶುಲ್ಕ:

  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪಿಡಬ್ಲ್ಯೂಡಿ, ಮಹಿಳೆಯರು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ₹175/-
  • ಸಾಮಾನ್ಯ, ಇತರ ಹಿಂದುಳಿದ ವರ್ಗ (ಒಬಿಸಿ), ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹850/-

ಪಾವತಿ ಮೋಡ್: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

i) ಅರ್ಜಿ ಪರಿಶೀಲನೆ

ii) ಆನ್‌ಲೈನ್ ಪರೀಕ್ಷೆ

iii) ವೈಯಕ್ತಿಕ ಸಂದರ್ಶನ

iv) ದಾಖಲಾತಿ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾ (Bob Bank)ಅಧಿಕೃತ ವೆಬ್ಸೈಟ್ http://bankofbaroda.bank.in/ ಗೆ ಭೇಟಿ ನೀಡಿ
  • ವೃತ್ತಿ ವಿಭಾಗವನ್ನು ಕ್ಲಿಕ್ ಮಾಡಿ ಅರ್ಜಿ ಫಾರ್ಮ್ ಓಪನ್ ಆಗುತ್ತದೆ.
  • ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ
  • ನಂತರ ಅರ್ಜಿ ಫಾರ್ಮ್ ನಲ್ಲಿ ಕೇಳಲಾದ ವೈಯಕ್ತಿಕ ಹಾಗೂ ಅಗತ್ಯ ವಿವರವನ್ನು ಭರ್ತಿ ಮಾಡಿ
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತಗೆದುಕೊಳ್ಳಿ.

ಅರ್ಜಿ ಸಲ್ಲಿಸುವ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ30-01-2026
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ19-02-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ19-02-2026

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಕೊನೆಯದಾಗಿ:

ಬ್ಯಾಂಕ್ ಆಫ್ ಬರೋಡಾ (Bob Bank) 2026 ರಲ್ಲಿ ಒಟ್ಟು 418 ಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ₹48,480 – ₹1,05,280 ವರೆಗಿನ ವೇತನವನ್ನು ನಿಗದಿಪಡಿಸಲಾಗಿದೆ. ನೀವೇನಾದರೂ ಮೇಲೆ ನೀಡಿರುವ ಅರ್ಹತಾ ಮಾನದಂಡಗಳನ್ನು ಪೂರೈಸುವುದಾದರೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ಕನಸಿನ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.


ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :

Leave a Reply

Your email address will not be published. Required fields are marked *