KKRTC : 10ನೇ ತರಗತಿ (SSLC) ಪಾಸಾದ ಅಭ್ಯರ್ಥಿಗಳಿಂದ ಭರ್ಜರಿ ಉದ್ಯೋಗಾವಕಾಶ!

KKRTC

ಕರ್ನಾಟಕ ಸಾರಿಗೆ ಇಲಾಖೆಯಲ್ಲಿ (KKRTC) ಖಾಲಿ ಇರುವ ವಿವಿಧ ಹುದ್ದೆಗಳ ಬರ್ತಿಗಾಗಿ ಅರ್ಜಿಯನ್ನು ಕರೆದಿದ್ದಾರೆ. ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಹಾಗೆಯೇ ಕರ್ನಾಟಕ ಸಾರಿಗೆ ಬಸ್ ಡ್ರೈವರ್ ಆಗಿ ಕೆಲಸ ಮಾಡಬೇಕು ಎಂದು ಕನಸು ಕಾಣುತ್ತಿರುವ ಯುವಕರಿಗೆ 2026 ನೇ ಸಾಲಿನಲ್ಲಿ ಸಿಹಿ ಸುದ್ದಿ ಸಿಕ್ಕಿದೆ.

KKRTC Recruitment 2026 In Kannada

ಹೌದು ಆತ್ಮೀಯರೇ ಕೆಕೆಆರ್‌ಟಿಸಿ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಬರ್ತಿಯನ್ನ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳ ಬಗ್ಗೆ ಕೆಳಗೆ ಕೊಡಲಾದ ಸಂಪೂರ್ಣವಾದ ಮಾಹಿತಿಯನ್ನ ಓದಿಕೊಂಡು ಅಂತಿಮ ದಿನದೊಳಗಾಗಿ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇದೀಗ ಲಾಟರಿ ಹೊಡೆದಿದೆ !. “ಯಾಕೆಂದರೆ ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ, ಜೊತೆಗೆ ಎಕ್ಸಾಮ್ ಕೂಡ ಬರೆಯಬೇಕಿಲ್ಲ. ಜಸ್ಟ್ ನೀವು ಹತ್ತನೇ ತರಗತಿ ಪಾಸ್ ಮಾಡಿಕೊಂಡಿದ್ದರೆ ಸಾಕು, ಈ ಸರ್ಕಾರಿ ಉದ್ಯೋಗಕ್ಕೆ ಅರ್ಜಿಯನ್ನ ಸಲ್ಲಿಸಬಹುದು.

ಕರ್ನಾಟಕ ಸಾರಿಗೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವವರು ಮತ್ತು ವಿಶೇಷವಾಗಿ ಬೀದರ್ ಜಿಲ್ಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಶುರು ಮಾಡಲು ಇಚ್ಛಿಸುವವರಿಗೆ ಇದು ಉತ್ತಮ ಅವಕಾಶವಾಗಿರುತ್ತದೆ, “ಆಸಕ್ತರು ಫೆಬ್ರವರಿ ಮೂರು ಮತ್ತು ನಾಲ್ಕು 2026ರಂದು ನಿಗದಿಪಡಿಸಲಾದ ಸ್ಥಳಕ್ಕೆ ನಿಮ್ಮ ಅಗತ್ಯ ದಾಖಲೆಗಳೊಂದಿಗೆ ಸರಿಯಾದ ಸಮಯಕ್ಕೆ ಹಾಜರಾಗುವಂತೆ ನಿಗಮವು ಕೋರಿದೆ“.

ಇನ್ನು ತಡ ಮಾಡುವುದು ಬೇಡ ಈ ಹುದ್ದೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿತಾ ಹೋಗೋಣ ಬನ್ನಿ,,,

ಹುದ್ದೆಯ ಕಿರು ಪರಿಚಯ :-

ಸಂಸ್ಥೆKKRTC
ಹುದ್ದೆಯ ಹೆಸರು ಡ್ರೈವರ್ ಪೋಸ್ಟ್
ಒಟ್ಟು ಹುದ್ದೆಗಳು 78 ಹುದ್ದೆಗಳು
ವಿದ್ಯಾರ್ಹತೆ 10th ಪಾಸ್
ಅರ್ಜಿ ಸಲ್ಲಿಸುವ ವಿಧಾನ ಆಫ್ ಲೈನ್ ಅರ್ಜಿ

ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು ?

ಮಿತ್ರರೇ,,, ಈ ಹುದ್ದೆಯ ಬಗ್ಗೆ ಮೇಲಿರುವುದನ್ನ ತಿಳಿದ ಮೇಲೆ ನಿಮ್ಮ ಮನಸಲ್ಲಿ ನನ್ನದು sslc ಪಾಸ್ ಆಗಿದೆ ಅರ್ಜಿ ಸಲ್ಲಿಸಬಹುದಾ ಎನ್ನುವ ಪ್ರಶ್ನೆ ಮೂಡಿರುತ್ತದೆ. ಕರ್ನಾಟಕ ಸಾರಿಗೆ ಇಲಾಖೆ KKRTC ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಕಡ್ಡಾಯವಾಗಿ ಕೆಳಗೆ ಕೊಡಲಾದ ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರಬೇಕಾಗುತ್ತದೆ.

ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.

ಚಾಲನ ಲೈಸೆನ್ಸ್ : ಅಭ್ಯರ್ಥಿಗಳು HTV License  (Heavy Transport Vehicle) ಚಾಲ್ತಿಯಲ್ಲಿರುವ ವಾಹನಗಳ ಲೈಸೆನ್ಸ್ ಅನ್ನ ಹೊಂದಿರಬೇಕು. ಕನಿಷ್ಠ ಎರಡು ವರ್ಷವಾದರೂ ಪೂರೈಸಿರಬೇಕು ಹಾಗೆ ನಿಮ್ಮ ಲೈಸೆನ್ಸ್ ಇನ್ನೂ ರಿನಿವಲ್ ಆಗಿಲ್ಲ ಅಂದರೆ ಮೊದಲು ರಿನಿವಲ್ ಮಾಡಿಸಿಕೊಳ್ಳಿ.

ದೈಹಿಕ ಮಾನದಂಡ : ಡ್ರೈವರ್ ಹುದ್ದೆಗಳಿಗೆ ಅಭ್ಯರ್ಥಿಗಳು ಅಗತ್ಯವಿರುವ ದೈಹಿಕ ದಕ್ಷತೆಯನ್ನು ಹೊಂದಿರಬೇಕು ಮತ್ತು ಕಣ್ಣಿನ ದೃಷ್ಟಿಯು ಸರಿಯಾಗಿದ್ದು ಯಾವುದೇ ರೀತಿಯ ದೋಷ ಕಣ್ಣಿನಲ್ಲಿ ಇರಬಾರದು.

Karnataka Badge (ಚಾಲನಾ ಬ್ಯಾಡ್ಜ್) : ಅಭ್ಯರ್ಥಿಗಳು ಬಾರಿ ಪ್ರಯಾಣಿಕ ವಾಹನವನ್ನು ಸಾಧನೆ ಮಾಡಲು ಅಗತ್ಯವಿರುವ ಮಾನ್ಯ ಕರ್ನಾಟಕ ಬ್ಯಾಡ್ಜ್ ಹೊಂದಿರುವುದು ಕಡ್ಡಾಯ.

ವಯೋಮಿತಿ ಹಾಗೆ ವಯೋಮಿತಿ ಸಡಿಲಿಕೆ :

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 24 ವರ್ಷಗಳು ಹಾಗೆಯೇ ಗರಿಷ್ಠ ವಯಸ್ಸು 35 ವರ್ಷಗಳು ನಿಗದಿಪಡಿಸಲಾಗಿದೆ. ದಿನಾಂಕ 04/02/2026ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸನ್ನು ಲೆಕ್ಕ ಹಾಕಲಾಗಿದೆ.

ಸರ್ಕಾರಿ ನಿಯಮಗಳ ಪ್ರಕಾರ ಕೆಲವು ವರ್ಗಕ್ಕೆ ಮೀಸಲಾತಿಯಲ್ಲಿ ಸಡಿಲಿಕೆ ನೀಡಿದೆ :

  • ಪ್ರವರ್ಗ 2A, 2B, 3A ಮತ್ತು 3B ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ (ಗರಿಷ್ಠ 38 ವರ್ಷ) ನೀಡಲಾಗಿದೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ ಅಂದರೆ (ಗರಿಷ್ಠ 40 ವರ್ಷಗಳು)

ಆಯ್ಕೆ ಪ್ರಕ್ರಿಯೆ ಮತ್ತು ಸಂದರ್ಶನ :

ಅಭ್ಯರ್ಥಿಗಳನ್ನ ಹುದ್ದೆಗಳಿಗೆ ಆಯ್ಕೆ ಮಾಡುವ ಪ್ರಕ್ರಿಯೆಯು ಸರಳವಾಗಿ ಮತ್ತು ಸ್ಪಷ್ಟವಾಗಿ ಇದ್ದು, ಅರ್ಹತಾ ಆಧಾರದ ಮೇಲೆ ಹಾಗೆಯೇ ವೃತ್ತಿಪರ ಕೌಶಲ್ಯದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ನಿಗದಿಪಡಿಸಲಾದ ದಿನಾಂಕದಂದು ಸಂದರ್ಶನಕ್ಕೆ ಸರಿಯಾದ ಸ್ಥಳಕ್ಕೆ ಹಾಗೆಯೇ ಸಮಯಕ್ಕೆ ಹಾಜರಾಗಿ.

ಅಲ್ಲಿ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ನೀಡಿದ ನಂತರ ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ಡ್ರೈವರ್ ಸಾಮರ್ಥ್ಯ ಪರೀಕ್ಷೆಯನ್ನ ನಡೆಸುವ ಸಾಧ್ಯತೆ ಇರುತ್ತದೆ.

ಸಂದರ್ಶನ ನಡೆಯುವ ಪ್ರಮುಖ ದಿನಾಂಕ ಮತ್ತು ನಡೆಯುವ ಸ್ಥಳ :

ಇಲ್ಲಿ ಗಮನಿಸಿ : “ಫೆಬ್ರವರಿ 3 ಮತ್ತು 4 ರಂದು ವಿಭಾಗೀಯ ಕಚೇರಿ, ಕಲ್ಯಾಣ ರಸ್ತೆ ಸಾರಿಗೆ ನಿಗಮ ಹಳೆಯ ಬಸ್ ನಿಲ್ದಾಣದಲ್ಲಿ ಸಂದರ್ಶನ ನಡೆಯುತ್ತದೆ”.

ಸಂದರ್ಶನಕ್ಕೆ ಹೋಗಲು ನಿಮ್ಮಲ್ಲಿ ಕಡ್ಡಾಯವಾಗಿ ಇರಲೇಬೇಕಾದ ದಾಖಲೆಗಳು :-

ಈ ಹುದ್ದೆಗಳಿಗೆ ನಾನು ಅರ್ಜಿ ಸಲ್ಲಿಸಬೇಕು ಎನ್ನುವ ಆಸಕ್ತಿ ಇರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವ ಮೊದಲು ಈ ಕೆಳಗೆ ಕೊಡಲಾದ ದಾಖಲೆಗಳ ಮೂಲ ಪ್ರತಿಗಳು ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಲೇಬೇಕು.

  • 10ನೇ ತರಗತಿ ಅಂಕಪಟ್ಟಿ
  • ಶಾಂತಿಯಲ್ಲಿರುವ ಬಾರಿಬಾಳ ಚಾಲನಾ ಪರವಾನಿಗೆ (ಹೆಚ್ ಎಂ ವಿ ಲೆಸೆನ್ಸ್)
  • ಕಂಡಕ್ಟರ್ ಅಥವಾ ಡ್ರೈವರ್ ಬ್ಯಾಚ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಆದಾಯ ಅಥವಾ ಇತರೆ ಸರ್ಕಾರಿ ಗುರುತಿನ ಚೀಟಿ
  • ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳು ಅನ್ವಯಿಸಿದರೆ ಮಾತ್ರ
  • ಇತ್ತೀಚಿನ ನಾಲ್ಕರಿಂದ ಐದು ಪಾಸ್ಪೋರ್ಟ್ ಅಲತೆಯ ಭಾವಚಿತ್ರ
  • ನೀವು ಮಾಜಿ ಸೈನಿಕರಾದಲ್ಲಿ ಸಂಬಂಧಿತ ದಾಖಲೆಗಳು

ಕೊನೆಯ ಮಾತು : ಕೆಕೆಆರ್‌ಟಿಸಿ (KKRTC) ಹುದ್ದೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ ಹಾಗೆಯೇ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಸಂದರ್ಶನಕ್ಕೆ ಬರುವ ಪ್ರಯಾಣದ ಖರ್ಚನ್ನ ನೀವು ಹಾಕಿಕೊಳ್ಳಬೇಕಾಗುತ್ತದೆ. ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುವುದರಿಂದ ಪ್ರತಿಯೊಬ್ಬ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯಲ್ಲಿ ಉದ್ಯೋಗ ಪಡೆಯುವ ಅವಕಾಶ ಸಿಕ್ಕಂತಾಗುತ್ತದೆ. ಸರಿಯಾದ ಸಮಯಕ್ಕೆ ಹಾಗೆ ಸರಿಯಾದ ಸ್ಥಳಕ್ಕೆ ಸೇರಿ ಸಂದರ್ಶನಕ್ಕೆ ಭಾಗಿಯಾಗಿ. ಇಂತಹ ಅವಕಾಶ ನಿಮ್ಮ ಜೀವನದಲ್ಲಿ ಮತ್ತೆ ಸಿಗದಿರಬಹುದು.

KKRTC ಹುದ್ದೆಯ ಪ್ರಮುಖ ಲಿಂಕುಗಳು :

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ

ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :

9 thoughts on “KKRTC : 10ನೇ ತರಗತಿ (SSLC) ಪಾಸಾದ ಅಭ್ಯರ್ಥಿಗಳಿಂದ ಭರ್ಜರಿ ಉದ್ಯೋಗಾವಕಾಶ!

Leave a Reply

Your email address will not be published. Required fields are marked *