central government budget 2026 : ಈ ಬಾರಿಯ ಕೇಂದ್ರ ಬಜೆಟ್ ಮಂಡನೆಗೆ ಈಗಾಗಲೇ ಕೌಂಟ್ಡೌನ್ ಶುರುವಾಗಿದೆ. ಇದೇ ಫೆಬ್ರವರಿ 1 ರಂದು ಹಣಕಾಸಿನ ಸಚಿವೆ ‘ನಿರ್ಮಲಾ ಸೀತಾರಾಮನ್’ ರವರು ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2026 ರನ್ನು ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್ ಮಂಡನೆ ಜನಸಾಮಾನ್ಯರ ಜೇಬಿಗೆ ಸಿಗುತ್ತಾ ನೆಮ್ಮದಿ? ಮಧ್ಯಮ ವರ್ಗದವರ ಕನಸಿಗೆ ಸಿಗಲಿದೆಯಾ ಹೊಸ ರೆಕ್ಕೆ? ಎಂಬುದನ್ನು ಕಾದುನೋಡಬೇಕಿದೆ.
ದೇಶದ ಆರ್ಥಿಕ ದಿಕ್ಕನ್ನು ಬದಲಿಸುವ ಕೇಂದ್ರ ಬಜೆಟ್ ಪ್ರತಿ ವರ್ಷ ಜನಸಾಮಾನ್ಯರಿಂದ ಹಿಡಿದು ಉದ್ಯಮ ವಲಯಗಳವರೆಗೆ ಎಲ್ಲರ ಗಮನ ಸೆಳೆಯುತ್ತದೆ. ಈ ಬಾರಿಯ ಬಜೆಟ್ ಮಂಡನೆಯಲ್ಲಿ ರೈತರಿಗೆ, ಮಹಿಳೆಯರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ಹಾಗೂ ಲಾಭವಾಗುವಂತಹ ಕೊಡುಗೆಗಳು ಸಿಗುವ ನಿರೀಕ್ಷೆಯಿದೆ.
ಈ ಬಾರಿ ಕೇಂದ್ರ ಸರ್ಕಾರವು 5 ಪ್ರಮುಖ ನಿರೀಕ್ಷಿತ ಕೊಡುಗೆಗಳನ್ನು ಹಾಗೂ ಬದಲಾವಣೆಗಳನ್ನು ಘೋಷಿಸುವ ಸಾಧ್ಯತೆ ಇದ್ದು, ಈ ಐದು ಪ್ರಮುಖ ಬದಲಾವಣೆಗಳು ಯಾವುದು ಎನ್ನುವುದನ್ನು ಕೆಳಗಿನ ಹಂತದಲ್ಲಿ ನೋಡೋಣ.
1. ಆದಾಯ ತೆರಿಗೆ ಸ್ಲಾಬ್ ನಲ್ಲಿ ಬದಲಾವಣೆ:
ಈ ಬಾರಿಯ ಬಜೆಟ್ ಮಂಡನೆಯಲ್ಲಿ ಹೊಸ ತೆರಿಗೆ ಪದ್ದತಿಯಡಿಯಲ್ಲಿ ಆದಾಯ ತೆರಿಗೆಯ ಸ್ಲಾಬ್ ಗಳಲ್ಲಿ ಮಹತ್ವದ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ.
ಪ್ರಸ್ತುತ ₹3 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆಯಿಲ್ಲ. ಆದರೆ ಈ ಬಜೆಟ್ ಮಂಡನೆಯಲ್ಲಿ ₹5 ಲಕ್ಷದವರೆಗೆ ಹೆಚ್ಚಿಸುವ ಸಾಧ್ಯತೆಯಿದೆ. ಪ್ರಸ್ತುತ ₹15 ಲಕ್ಷಕ್ಕಿಂತ ಹೆಚ್ಚಿನ ಆದಾಯ ಮಿತಿಗೆ ಶೇಕಡಾ 30% ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. ಈ ಬಜೆಟ್ ಮಂಡನೆಯಲ್ಲಿ ಶೇಕಡಾ 30% ರಷ್ಟು ತೆರಿಗೆಯನ್ನು ವಿಧಿಸಬೇಕಾದರೆ ₹20 ಲಕ್ಷದಿಂದ ₹24 ಲಕ್ಷದವರೆಗೆ ಆದಾಯ ಮಿತಿಯನ್ನು ಏರಿಸುವ ಸಾಧ್ಯತೆಗಳಿವೆ.
2. ITR ಫಾರ್ಮ್ ಗಳ ಬದಲಾವಣೆ:
ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರಮುಖವಾಗಿ 7 ಫಾರ್ಮ್ ಗಳಿರುವುದರಿಂದ, ತೆರಿಗೆದಾರರು ತೆರಿಗೆ ಸಲ್ಲಿಸಲು ಗೊಂದಲ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರವು ಸಾಮಾನ್ಯ ITR ಫಾರ್ಮ್ ವಿನ್ಯಾಸವನ್ನು ಸಿದ್ಧಪಡಿಸುವ ಮೂಲಕ ಎಲ್ಲರಿಗೂ ಅನ್ವಯಗಾಗುವಂತೆ ಒಂದೇ ಸಾಮಾನ್ಯ ITR ಫಾರ್ಮ್ ಅನ್ನು ತರಲು ಚಿಂತನೆ ನಡೆಸಿದೆ.
ಇದರಿಂದಾಗಿ, ತೆರಿಗೆದಾರರು ತಮ್ಮ ಆದಾಯ ಮೂಲವನ್ನು ಆಯ್ಕೆ ಮಾಡುವಾಗ, ತೆರಿಗೆದಾರರಿಗೆ ಅನ್ವಯವಾಗುವ ಪ್ರಶ್ನೆಗಳು ಮಾತ್ರ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಸಾಮಾನ್ಯ ಜನರು ತಾವೇ ಸ್ವತಃ ರಿಟರ್ನ್ ಸಲ್ಲಿಸಲು ಈ ಫಾರ್ಮ್ ಅನುವು ಮಾಡಿಕೊಡುತ್ತದೆ.
3. ಎಲೆಕ್ಟ್ರಿಕ್ ವಾಹನಗಳ ತೆರಿಗೆ ವಿನಾಯಿತಿ:
ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸಲು, ಈ ಬಾರಿಯ ಬಜೆಟ್ ಮಂಡನೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ, ತಯಾರಕರಿಗೆ ತೆರಿಗೆ ವಿನಾಯಿತಿಗಳನ್ನು ವಿಸ್ತರಿಸುವ ಹಾಗೂ ಹೆಚ್ಚುಗೊಳಿಸುವ ಸಾಧ್ಯತೆಗಳಿವೆ.
ಅಲ್ಲದೆ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ‘ಪ್ರಡ್ಯೂಕ್ಷನ್ ಲಿಂಕ್ಡ್ ಇನ್ಸೆಂಟಿವ್’ ಯೋಜನೆಯಡಿಯಲ್ಲಿ ಹೆಚ್ಚಿನ ಅನುದಾನ ನೀಡುವ ಸಾಧ್ಯತೆಗಳಿವೆ.
4. TDS ಸರಳೀಕರಣ:
ತೆರಿಗೆ ವಯ್ವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಹಾಗೂ ತೆರಿಗೆದಾರರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು TDS ನಿಯಮಗಳಲ್ಲಿ ಬದಲಾವಣೆ ತರುವ ನಿರೀಕ್ಷೆಯಿದೆ.
ಪ್ರಸ್ತುತ ಇರುವ ಹೆಚ್ಚಿನ ಸಂಖ್ಯೆಯ TDS ದರವನ್ನು ಕಡಿಮೆ ಮಾಡಿ ಕೇವಲ ಎರಡು ಅಥವಾ ಮೂರು ಪ್ರಮಾಣಿತ ದರಗಳಿಗೆ ಇಳಿಸುವ ಸಾಧ್ಯತೆಗಳಿವೆ. ಈ ಒಂದು ಬದಲಾವಣೆಯಿಂದಾಗಿ ಜನಸಾಮಾನ್ಯರಲ್ಲಿ ಗೊಂದಲಗಳು ಕಡಿಮೆಯಾಗುವುದಲ್ಲದೆ, ಸಣ್ಣ ಉದ್ಯಮಿಗಳಿಗೆ, ಕಡಿಮೆ ಹಾಗೂ ಮಧ್ಯಮ ಆದಾಯದ ವರ್ಗಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.
5. GST ದರದಲ್ಲಿ ಕಡಿತ:
ಕೇಂದ್ರ ಸರ್ಕಾರದ 2026 ರ ಬಜೆಟ್ ಮಂಡನೆಯಲ್ಲಿ ದಿನ ಬಳಕೆಯ ವಸ್ತುಗಳಾದ ಸೋಪು, ಶಂಪೂ, ಟೂತ್ ಪೇಸ್ಟ್ ಹಾಗೂ ಇತರೆ ಸೌಂದರ್ಯ ವರ್ಧಕ ವಸ್ತುಗಳಿಗೆ GST ದರ 5% ಕಡಿತ ಗೊಳಿಸಿದರೆ, ಎಲೆಕ್ಟ್ರಿಕ್ ಹಾಗೂ ಗೃಹೋಪಯೋಗಿ ವಸ್ತುಗಳ ಮೇಲೆ 18% ಸ್ಲಾಬ್ ರೇಟ್ ವಿಧಿಸಲಾಗುತ್ತದೆ. ಜೊತೆಗೆ ಆಹಾರ, ಆರೋಗ್ಯ ಮತ್ತು ಜೀವ ವಿಮೆ ಹಾಗೂ ವಾಹನಗಳ ಮೇಲೆ GST ದರ ಕಡಿಮೆಯಾಗುವ ಸಾಧ್ಯತೆಗಳಿವೆ.
ಈ ಎಲ್ಲಾ ಬದಲಾವಣೆಗಳಿಂದ ಬಡ ಮತ್ತು ಮಾಧ್ಯಮ ವರ್ಗದವರ ಮಾಸಿಕ ಖರ್ಚು ಕಡಿಮೆಯಾಗಿ, ಗೃಹ ಬಳಕೆಯ ವಸ್ತುಗಳು ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಲಭ್ಯವಾಗುತ್ತದೆ.
ಕೊನೆಯದಾಗಿ:
ಕೇಂದ್ರ ಸರ್ಕಾರವು ಕಳೆದ ಬಾರಿ ಬಜೆಟ್ ಮಂಡನೆಯಲ್ಲಿ ತೆರಿಗೆ ವಿನಾಯಿತಿ ಮೂಲಕ, GST ಕಡಿತದ ಮೂಲಕ ಜನಸಾಮಾನ್ಯರಿಗೆ ಬಿಗ್ ರಿಲೀಫ್ ನೀಡಿದೆ. ಹಾಗಾಗಿ ಜನರು ಈ ವರ್ಷವೂ ಕೂಡ ಭಾರಿ ರಿಲೀಫ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸರ್ಕಾರದ 2026 ರ ಬಜೆಟ್ ಮಂಡನೆಯಲ್ಲಿ ಹಲವಾರು ಬದಲಾವಣೆಗಳನ್ನು ತರುವ ಮೂಲಕ ಜನಸಾಮಾನ್ಯರಿಗೆ ಬಂಪರ್ ಕೊಡುಗೆ ನೀಡುವ ನಿರೀಕ್ಷೆಯಿದೆ. ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಉಳಿದಿದ್ದು, ಈ ಎಲ್ಲಾ ನಿರೀಕ್ಷೆಗಳು ಸುಳ್ಳಾಗುತ್ತದೆಯೋ? ನಿಜವಾಗುತ್ತದೆಯೋ? ಎಂದು ಕಾದುನೋಡಬೇಕಿದೆ.
ಇತರೆ ಪ್ರಮುಖ ಲಿಂಕುಗಳು:
- ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026
- ಕಡಿಮೆ ಬೆಲೆಯಲ್ಲಿ ಭರ್ಜರಿ ಆಫರ್ ! ನಿಮಗಾಗಿ TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್

