ನೀವೇನಾದರೂ 10th ಪಾಸ್ ಆಗಿ ಉದ್ಯೋಗ ಹುಡುಕುತ್ತಿದ್ದಿರಾ? ನಿಮಗೆ ಎಲ್ಲೂ ಉದ್ಯೋಗ ಸಿಗಲಿಲ್ಲವೇ? ಹಾಗಿದ್ದರೆ ನಿಮಗಾಗಿ ಈ ಮಾಹಿತಿ. ಭಾರತೀಯ ರಿಸರ್ವ್ ಬ್ಯಾಂಕ್ 2026 ರಲ್ಲಿ ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
RBI Recruitment 2026 in Kannada
ಭಾರತೀಯ ರಿಸರ್ವ್ ಬ್ಯಾಂಕ್, ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 04-02-2026 ಎಂದು ನಿಗದಿಪಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://rbi.org.in/ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಹಂತದಲ್ಲಿ ನೀಡಲಾದ ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು, ಅರ್ಜಿ ಶುಲ್ಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡಿದುಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಇದೇ ರೀತಿಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಾಗುವ ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ.
ಹುದ್ದೆಯ ವಿಮರ್ಶೆ:
| ಕಂಪನಿಯ ಹೆಸರು | ಭಾರತೀಯ ರಿಸರ್ವ್ ಬ್ಯಾಂಕ್ |
| ಹುದ್ದೆಯ ಹೆಸರು | ಆಫೀಸ್ ಅಟೆಂಡೆಂಟ್ |
| ಹುದ್ದೆಯ ಸಂಖ್ಯೆ | 572 |
| ಅರ್ಹತೆ | 10th ಪಾಸ್ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 04-02-2026 |
ಹುದ್ದೆಯ ಕುರಿತು ಸಂಕ್ಷಿಪ್ತ ಮಾಹಿತಿ:
ಪ್ರತಿಷ್ಠಿತ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟು 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಾಗೂ ಸರ್ಕಾರಿ ಹುದ್ದೆಯ ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶದಾದ್ಯಂತ ಇರುವ RBI ಕಚೇರಿಗಳಲ್ಲಿ ಈ ಹುದ್ದೆಯು ಹಂಚಿಕೆಯಾಗಿದ್ದು, ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ ಎನ್ನುವ ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಲಾಗಿದೆ.
ಹುದ್ದೆಯ ವಿವರ:
| RBI ಕಚೇರಿಯ ಹೆಸರು | ಒಟ್ಟು ಹುದ್ದೆಗಳು |
| ಬೆಂಗಳೂರು | 16 ಹುದ್ದೆಗಳು |
| ಅಹ್ಮದಾಬಾದ್ | 29 ಹುದ್ದೆಗಳು |
| ಭುವನೇಶ್ವರ | 36 ಹುದ್ದೆಗಳು |
| ಬೋಪಾಲ್ | 04 ಹುದ್ದೆಗಳು |
| ಚನ್ನೈ | 09 ಹುದ್ದೆಗಳು |
| ಚಂಡೀಗಢ | 02 ಹುದ್ದೆಗಳು |
| ಜೈಪುರ | 42 ಹುದ್ದೆಗಳು |
| ಹೈದರಾಬಾದ್ | 36 ಹುದ್ದೆಗಳು |
| ಗುವಾಹಟಿ | 52 ಹುದ್ದೆಗಳು |
| ಕೋಲ್ಕತ್ತಾ | 90 ಹುದ್ದೆಗಳು |
| ಕಾನ್ಪುರ ಮತ್ತು ಲಕ್ನೋ | 125 ಹುದ್ದೆಗಳು |
| ನವ ದೆಹಲಿ | 61 ಹುದ್ದೆಗಳು |
| ಮುಂಬೈ | 33 ಹುದ್ದೆಗಳು |
| ಪಾಟ್ನಾ | 37 ಹುದ್ದೆಗಳು |
ಅರ್ಹತಾ ಮಾನದಂಡಗಳು:
ಆಫೀಸ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಮಾನ್ಯತೆ ಪಡೆದ ಮಂಡಳಿಯಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
| ವಿಶೇಷ ಸೂಚನೆ: “ಪದವೀಧರರು ಹಾಗೂ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ” |
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 01-01-2026 ರಂತೆ,
- ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ: 25 ವರ್ಷಗಳು ಇರಬೇಕು.
ವಯೋಮಿತಿ ಸಡಿಲಿಕೆ:
ಕೆಲವು ವರ್ಗಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ, ಅದನ್ನು ಈ ಕೆಳಗೆ ನೋಡಬಹುದಾಗಿದೆ,
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ: 5 ವರ್ಷ
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: 3 ವರ್ಷ
- ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ (ಪಿಡಬ್ಲ್ಯೂಬಿಡಿ): 10 ವರ್ಷ
ವೇತನ ಶ್ರೇಣಿ:
ಆಫೀಸ್ ಅಟೆಂಡೆಂಟ್ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಯು ಮಾಸಿಕ ₹46,029 ವೇತನ ಪಡೆಯಲು ಅರ್ಹರಾಗಿರುತ್ತಾರೆ ಇದರ ಜೊತೆಗೆ ಇತರ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ:
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪಿಡಬ್ಲ್ಯೂಬಿಡಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ₹50 + 18% ಜಿಎಸ್‌ಟಿ
- ಸಾಮಾನ್ಯ, ಇತರ ಹಿಂದುಳಿದ ವರ್ಗ (ಒಬಿಸಿ), ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹450 + 18% ಜಿಎಸ್‌ಟಿ
ಪಾವತಿ ಮೋಡ್: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
i) ಆನ್‌ಲೈನ್ ಪರೀಕ್ಷೆ
ii) ಭಾಷಾ ಪ್ರಾವೀಣ್ಯತೆ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತೀಯ ರಿಸರ್ವ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ https://rbi.org.in/ ಗೆ ಭೇಟಿ ನೀಡಿ
- ವೃತ್ತಿ ವಿಭಾಗವನ್ನು ಕ್ಲಿಕ್ ಮಾಡಿ ಅರ್ಜಿ ಫಾರ್ಮ್ ಓಪನ್ ಆಗುತ್ತದೆ.
- ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ
- ನಂತರ ಅರ್ಜಿ ಫಾರ್ಮ್ ನಲ್ಲಿ ಕೇಳಲಾದ ವೈಯಕ್ತಿಕ ಹಾಗೂ ಅಗತ್ಯ ವಿವರವನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಸಲ್ಲಿಸುವ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಈಗಾಗಲೇ ಆರಂಭ ಗೊಂಡಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-02-2026
ಅಧಿಕೃತ ಲಿಂಕುಗಳು:
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಕೊನೆಯದಾಗಿ:
ಭಾರತೀಯ ರಿಸರ್ವ್ ಬ್ಯಾಂಕ್ 2026 ರಲ್ಲಿ 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕವನ್ನು ಪಾವತಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ. ನೀವು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ.

