ಸಂಕ್ರಾಂತಿ ಸಂಭ್ರಮಕ್ಕೆ ಮಹಿಳೆಯರಿಗೆ ಡಬಲ್ ಖುಷಿ – ಗೃಹಲಕ್ಷ್ಮಿ 25ನೇ ಕಂತು ಹಾಗೂ ಬಾಕಿ ಕಂತಿನ ಹಣ ಜಮಾ! Amount

Gruha Lakshmi Scheme

ಕರ್ನಾಟಕ ಸರ್ಕಾರವು 2026 ರ ಸಂಕ್ರಾಂತಿ ಹಬ್ಬಕ್ಕೆ ಮಹಿಳೆಯರಿಗೆ ಉಡುಗೊರೆಯನ್ನು ನೀಡಿದೆ. ಹೌದು, ಹಬ್ಬದ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 25 ನೇ ಕಂತಿನ ಹಣದ ಜೊತೆಗೆ ಬಾಕಿ ಇರುವ ಕಂತುಗಳ ಹಣವನ್ನು ಜಮಾ ಮಾಡಲು ನಿರ್ಧರಿಸಿದೆ.

Gruha Lakshmi Scheme

ಕರ್ನಾಟಕ ಸರ್ಕಾರವು ಮಹಿಳೆಯರ ಬ್ಯಾಂಕ್ ಖಾತೆಗೆ 25 ನೇ ಕಂತಿನ ಹಣವನ್ನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಜಮಾ ಮಾಡುವುದಾಗಿ ಹೇಳಿ ಮಹಿಳೆಯರಿಗೆ ಹಬ್ಬದ ದಿನದಂದು ಸಂತಸದ ಸುದ್ದಿಯನ್ನು ನೀಡಿದೆ ಜೊತೆಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ವಿಳಂಬದಿಂದಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಕೂಡ ಜಮಾ ಮಾಡುವುದಾಗಿ ಹೇಳಿ ಅವರ ಸಂತೋಷವನ್ನು ಇಮ್ಮಡಿ ಗೊಳಿಸಿದೆ.

ಯೋಜನೆಯ ಅವಲೋಕನ:

ಯೋಜನೆಯ ಹೆಸರುಗೃಹಲಕ್ಷ್ಮಿ ಯೋಜನೆ
ಕಂತು 25 ನೇ ಕಂತು
ಒಟ್ಟು ಜಮಾ ಆಗುವ ಹಣ₹2000 +ಬಾಕಿ ಇರುವ ಕಂತಿನ ಹಣ ಜಮಾ ಆಗುವ ಸಾಧ್ಯತೆ ಇದೆ
ರಾಜ್ಯ ಕರ್ನಾಟಕ

ಯೋಜನೆಯ ಕುರಿತು:

ಕರ್ನಾಟಕ ಸರ್ಕಾರವು ಅಧಿಕಾರಕ್ಕೆ ಬಂದರೆ ಪಂಚ ಗ್ಯಾರಂಟಿ ಯೋಜನೆಯನ್ನು ನೀಡುವುದಾಗಿ ಹೇಳಿದ್ದು, ಈ ಪಂಚ ಗ್ಯಾರಂಟಿ ಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದಾಗಿದೆ. ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿಯಲ್ಲಿ ಕುಟುಂಬದ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ಕಂತಿನಲ್ಲಿ ₹2000 ಹಣವನ್ನು ಜಮಾ ಮಾಡುವ ಮೂಲಕ ಅವರಿಗೆ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ. ಜೊತೆಗೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕುವಂತೆ ಮಾಡುವುದು ಮತ್ತು ಅವರ ಆತ್ಮ ಗೌರವವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಗೃಹಲಕ್ಷ್ಮಿ ಬಾಕಿ ಇರುವ ಕಂತಿನ ಹಣ ಯಾವಾಗ ಜಮಾ ಆಗುತ್ತದೆ?

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಾಕಿ ಇರುವ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಅದನ್ನು ಓದಿಕೊಳ್ಳಿ.

ಈ ಯೋಜನೆಯಡಿಯಲ್ಲಿ ಸಂಕ್ರಾಂತಿ ಹಬ್ಬದ ಶುಭ ಸಂದರ್ಭಗಳಲ್ಲಿ ಬಾಕಿ ಇರುವ ಕಂತಿನ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರವು ಹೇಳಿದ್ದು, ಅರ್ಹ ಫಲಾನುಭವಿಗಳ ಪಟ್ಟಿಯ ಆಧಾರದ ಮೇಲೆ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವು ಹಂತ-ಹಂತವಾಗಿ ಜಮಾ ಆಗುತ್ತದೆ. ಎಲ್ಲರಿಗೂ ಒಂದೇ ಸಂದರ್ಭದಲ್ಲಿ ಹಣವನ್ನು ಜಮಾ ಮಾಡುವುದಿಲ್ಲ. ಆದರೆ, ಕೆಲವರ ಬ್ಯಾಂಕ್ ಖಾತೆಗೆ ಹಣ ಈಗಾಗಲೇ ಜಮಾ ಆಗಿರುವ ಸಾಧ್ಯತೆ ಇದೆ. ಅದನ್ನು ತಿಳಿದುಕೊಳ್ಳಬೇಕಾದರೆ ನಿಮ್ಮ ಮೊಬೈಲ್ ನಲ್ಲಿ SMS ಬಂದಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಕೆಲವರು ಹಣ ಇನ್ನು ಬಂದಿಲ್ಲ ಎಂದು ಚಿಂತಿಸುವ ಅಗತ್ಯವಿಲ್ಲ ಎರಡು-ಮೂರು ದಿನ ಕಾದುನೋಡಿ.

ಕಂತಿನ ಹಣ ಹೇಗೆ ಜಮಾ ಮಾಡಲಾಗುತ್ತದೆ?

ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಗೃಹಲಕ್ಷ್ಮಿಯ ಹಣವನ್ನು ಜಮಾ ಮಾಡಲಾಗುತ್ತದೆ. ಇದರಿಂದಾಗಿ ಮಧ್ಯವರ್ತಿಯ ಹಾವಳಿ ಇರುವುದಿಲ್ಲ ಹಾಗೂ ಹೆಚ್ಚು ಪಾರದರ್ಶಕವಾಗಿರುತ್ತದೆ.

ಹಣವನ್ನು ಪಾವತಿ ಮಾಡುವಾಗ ಕೆಲವು ಹಂತಗಳನ್ನು ಸರ್ಕಾರವು ಅನುಸರಿಸುತ್ತದೆ ಅದೇನೆಂದರೆ,

  • ಸರ್ಕಾರವು, ಮೊದಲು ಪ್ರತಿ ಕಂತಿನ ಹಣವನ್ನು ಹಣಕಾಸು ಇಲಾಖೆಯಿಂದ ಅನುಮೋದಿಸಿ, ಹಣ ಬಿಡುಗಡೆಗೆ ಆದೇಶ ನೀಡುತ್ತದೆ.
  • ನಂತರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀಡುತ್ತದೆ
  • ನಂತರ, ಈ ಪಟ್ಟಿಯನ್ನು DBT ಕರ್ನಾಟಕ ಪೋರ್ಟಲ್ ಗೆ ಕಳುಹಿಸಲಾಗುತ್ತದೆ.
  • DBT ಕರ್ನಾಟಕ ಪೋರ್ಟಲ್ ಮೂಲಕ, ಫಲಾನುಭವಿಗಳ ಆಧಾರ್ ಸಂಖ್ಯೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು.

ಹಣ ಬಂದಿದೆಯೇ ಎಂದು ಖಚಿತ ಪಡಿಸಿಕೊಳ್ಳುವುದು ಹೇಗೆ?

ಈ ಕೆಳಗಿನ ಯಾವುದಾದರೊಂದು ಕ್ರಮವನ್ನು ಅನುಸರಿಸಿಕೊಂಡು ಗೃಹಲಕ್ಷ್ಮಿ ಹಣ ಬಂದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಿ.

  • DBT ಕರ್ನಾಟಕ ಮೊಬೈಲ್ ಆಪ್ ನಲ್ಲಿ ನಿಮ್ಮ ಖಾತೆಗೆ ಹಣ ಪಾವತಿ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ
  • ಮೊಬೈಲ್ ನಲ್ಲಿ SMS ಬಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಿ.
  • ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
  • ಸೇವಾ ಸಿಂಧೂ ವೆಬ್ಸೈಟ್ ಗೆ ಭೇಟಿ ನೀಡಿ ಪಾವತಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಿ.
ಇಲ್ಲಿ ಗಮನಿಸಿ: “ಹಣ ಜಮಾ ಆಗಿದೆಯೋ? ಇಲ್ಲವೋ? ಎಂದು ಗೊಂದಲಗಳಿದ್ದರೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಪಾಸ್ ಬುಕ್ ಅನ್ನು ಇಟ್ಟುಕೊಂಡು 181 ಗೆ ಕರೆ ಮಾಡಿ ನಿಮ್ಮ ಗೊಂದಲವನ್ನು ನಿವಾರಿಸಿಕೊಳ್ಳಿ.”

ಹಣ ಜಮಾ ಆಗದಿರಲು ಮುಖ್ಯ ಕಾರಣಗಳು:

  • ಪಡಿತರ ಚೀಟಿಯಲ್ಲಿ ಫಲಾನುಭವಿಯ e-KYC ಪೂರ್ಣ ಗೊಳ್ಳದಿರುವುದು.
  • ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಸರಿಯಾಗಿ ಲಿಂಕ್ ಆಗದಿರುವುದು.
  • BPL ರದ್ದಾಗಿರುವ ಸಾಧ್ಯತೆ.
  • ಸರ್ಕಾರದ ಹಣಕಾಸಿನ ಇಲಾಖೆಯಿಂದ ಅನುಮೋದನೆ ವಿಳಂಬವಾಗಿರಬಹುದು ಅಥವಾ ತಾಂತ್ರಿಕ ಸಮಸ್ಯೆ ಆಗಿರಬಹುದು.

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹೊಸ ಅಪ್ಡೇಟ್

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇದೀಗ ಮತ್ತೊಂದು ಸಂತಸದ ಸುದ್ದಿ ಲಭ್ಯವಾಗಿದೆ. ಸರ್ಕಾರವು ಗೃಹಲಕ್ಷ್ಮಿ ಸಹಕಾರ ಸಂಘವನ್ನು ಸ್ಥಾಪಿಸಲು ಮುಂದಾಗಿದ್ದು, ಗೃಹಲಕ್ಷ್ಮಿ ಸಹಕಾರ ಸಂಘದಲ್ಲಿ ಸದಸ್ಯರು ತಿಂಗಳಿಗೆ ₹200 ಉಳಿತಾಯ ಮಾಡಿ 6 ತಿಂಗಳ ನಂತರ ₹30,000 ದಿಂದ ₹3,00,000 ದ ವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಲ ಸೌಲಭ್ಯವನ್ನು ಪಡೆಯುವ ಅವಕಾಶವಿದೆ. ಗೃಹಲಕ್ಷ್ಮಿ ಫಲಾನುಭವಿಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ₹1000 ಹಣವನ್ನು ಪಾವತಿ ಮಾಡಿ ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಮತ್ತು ಪ್ರತಿ ತಿಂಗಳಿಗೆ ₹200 ಉಳಿತಾಯವನ್ನು ಮಾಡಬೇಕು.

“ಈ ಯೋಜನೆಯ ಕುರಿತು ಇನ್ನಷ್ಟು ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ.”

ಅಂತಿಮ ತೀರ್ಮಾನ:

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ 25 ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಜೊತೆಗೆ ಕೆಲವು ಕಾರಣಗಳಿಂದ ವಿಳಂಬವಾಗಿದ್ದ ಬಾಕಿ ಹಣವನ್ನು ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರ್ಕಾರವು ನಿರ್ಧರಿಸಿದ್ದು, ಅರ್ಹ ಫಲಾನುಭವಿಗಳು ಹಣ ಯಾವಾಗ ಜಮಾ ಆಗುತ್ತದೆ ಎಂದು ಎದುರುನೋಡುವ ಅವಶ್ಯಕತೆ ಇಲ್ಲ.

ಇತರೆ ಪ್ರಮೂಖ ಲಿಂಕುಗಳು:

Leave a Reply

Your email address will not be published. Required fields are marked *