ಸೌದೆ ಅಡುಗೆಗೆ ಫುಲ್ ಸ್ಟಾಪ್! ಬಡವರಿಗೆ ಫ್ರೀ LPG +ಗ್ಯಾಸ್ ಕಿಟ್, ಅರ್ಜಿ ಸಲ್ಲಿಸುವುದು ಹೇಗೆ? । Pradhan Mantri Ujjwala Yojana 2.0

Pradhan Mantri Ujjwala Yojana 2.0

Pradhan Mantri Ujjwala Yojana 2.0
Pradhan Mantri Ujjwala Yojana 2.0

Pradhan Mantri Ujjwala Yojana 2.0 : ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸ್ವಚ್ಛ ಇಂಧನವನ್ನು ತಲುಪಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (2.0) ಯನ್ನು ಜಾರಿಗೆ ತರಲಾಗಿದೆ. ಮಹಿಳೆಯರು ಸೌದೆ, ಕಸ-ಕಡ್ಡಿಗಳಂತಹ ಸಾಂಪ್ರದಾಯಿಕ ಅಡುಗೆ ಇಂಧನಗಳನ್ನು ಬಳಸಿ ಅಡುಗೆ ಮಾಡುತ್ತಿರುವುದರಿಂದ ಮಹಿಳೆಯರಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಇದನ್ನು ತಡೆಯುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕವನ್ನು ಒದಗಿಸುವುದು ಮಾತ್ರವಲ್ಲದೆ, ಮೊದಲ ಬಾರಿಗೆ ಗ್ಯಾಸ್ ಸ್ಟೌವ್ ಮತ್ತು ರೀಫಿಲ್ ಗಳನ್ನೂ ಉಚಿತವಾಗಿ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಿ. ಈ ಯೋಜನೆ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ.

ಯೋಜನೆಯ ಅವಲೋಕನ:

ಯೋಜನೆಯ ಹೆಸರು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0
ಅರ್ಹ ಫಲಾನುಭವಿಗಳು ಮಹಿಳೆಯರು
ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಕಿಟ್
ಅಧಿಕೃತ ವೆಬ್ಸೈಟ್ https://www.pmuy.gov.in/

ಯೋಜನೆಯ ಕುರಿತು ಇನ್ನಷ್ಟು ಮಾಹಿತಿ:

ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಮೊದಲು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮೇ, 2016 ರಲ್ಲಿ ಪ್ರಾರಂಭಗೊಂಡಿತ್ತು. ನಂತರ, ಈ ಯೋಜನೆಯ ಎರಡನೇ ಹಂತವಾಗಿ ಆಗಸ್ಟ್, 2021 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅನ್ನು ಜಾರಿಗೆ ತರಲಾಯಿತು. ಉಜ್ವಲ 2.0 ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಜೊತೆಗೆ ಗ್ಯಾಸ್ ಕಿಟ್ ಗಳನ್ನೂ ಹಾಗೂ ಸಬ್ಸಿಡಿ ಸೌಲಭ್ಯವನ್ನು ಒದಗಿಸಲಾಗಿದೆ. ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು ಲಾಭವನ್ನು ಪಡೆದುಕೊಳ್ಳಬಹುದು.

ಯೋಜನೆಯಿಂದಾಗುವ ಪ್ರಯೋಜನ:

  • ಗ್ಯಾಸ್ ಸಿಲಿಂಡರ್ ಮತ್ತು ರೆಗ್ಯುಲೇಟರ್ ಗೆ ನೀಡಬೇಕಾದ ಠೇವಣಿ ಹಣವನ್ನು ಕೇಂದ್ರ ಸರ್ಕಾರವೇ ಭರಿಸುವುದರಿಂದ ಮಹಿಳೆಯರು ಈ ಒಂದು ಯೋಜನೆಯಡಿಯಲ್ಲಿ ಯಾವುದೇ ಠೇವಣಿ ಹಣವನ್ನು ನೀಡುವ ಅಗತ್ಯವಿರುವುದಿಲ್ಲ.
  • ಕುಟುಂಬದ ಗಾತ್ರದ ಆದರದ ಮೇಲೆ 14.2 Kg ಅಥವಾ 5 Kg ಸಾಮರ್ಥ್ಯದ LPG ಸಿಲಿಂಡರ್ ಉಚಿತವಾಗಿ ನೀಡಲಾಗುವುದು.
  • ಫಲಾನುಭವಿಗಳು ಯಾವುದೇ ಶುಲ್ಕವನ್ನು ನೀಡದೆ ಒಟ್ಟು ₹2000 ದಿಂದ ₹3000 ಮೌಲ್ಯದ ಗ್ಯಾಸ್ ಒಲೆ, ರೆಗ್ಯುಲೇಟರ್, ಸುರಕ್ಷಾ ಪೈಪ್ ಗಳನ್ನು ನೀಡಲಾಗುವುದು.
  • ಪ್ರತೀ ಸಿಲಿಂಡರ್ ಗೆ ₹300 ರಂತೆ ಒಟ್ಟು 12 ಸಿಲಿಂಡರ್ ಪಡೆಯುವ ವರೆಗೂ ಸಬ್ಸಿಡಿಯನ್ನು ನೀಡಲಾಗುವುದು

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹೊಂದಿರುವ ಅರ್ಹತೆಗಳು:

ಈ ಯೋಜನೆಯ ಲಾಭವನ್ನು ಕೇವಲ ಮಹಿಳೆಯರು ಮಾತ್ರ ಪಡೆದುಕೊಳ್ಳಬಹುದಾಗಿದ್ದು, ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಮಹಿಳೆಯರು ಹೊಂದಿರುವ ಅರ್ಹತೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.

  • ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ 18 ವರ್ಷ ಮೇಲ್ಪಟ್ಟ ಮಹಿಳೆಯರಾಗಿರಬೇಕು.
  • ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮತ್ತು ಇತರೆ ಆಯ್ದ ವರ್ಗದ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಈ ಹಿಂದೆ ಮನೆಯಲ್ಲಿ ಯಾವುದೇ ಗ್ಯಾಸ್ ಸಂಪರ್ಕ ಇರಬಾರದು.
  • ಕುಟುಂಬದ ವಾರ್ಷಿಕ ಆದಾಯವು ನಿರ್ದಿಷ್ಟ ಮಿತಿಯಲ್ಲಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:-

  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಬ್ಯಾಂಕ್ ಪಾಸ್ ಬುಕ್ ವಿವರ ಮತ್ತು IFSC ಕೋಡ್
  • ಮತದಾರರ ಗುರುತಿನ ಚೀಟಿ

ಅರ್ಜಿ ಸಲ್ಲಿಸುವ ವಿಧಾನ :-

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಧಿಕೃತ ವೆಬ್ಸೈಟ್ https://www.pmuy.gov.in/ ಗೆ ಭೇಟಿ ನೀಡಿ
  • “ಅಪ್ಲೈ ಫಾರ್ ನ್ಯೂ ಉಜ್ವಲ 2.0 ಕನೆಕ್ಷನ್” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ನೀಡಲಾಗುವ ಪ್ರಮೂಖ ಮೂರು ಗ್ಯಾಸ್ ಕಂಪನಿಯ ಲೋಗೋದಲ್ಲಿ ನಿಮ್ಮ ಇಚ್ಛೆಯ ಒಂದು ಕಂಪನಿಯನ್ನು ಆಯ್ಕೆ ಮಾಡಿ.
  • ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ನಂತರ ಅಗತ್ಯ ದಾಖಲೆಗಳನ್ನು ನಮೂದಿಸಿ
  • ಈ ಎಲ್ಲ ಮಾಹಿತಿಗಳು ಸರಿ ಇದೆಯೇ ಎಂದು ಖಚಿತಪಡಿಸಿಕೊಂದು ನಂತರ ಸಬ್ ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಗೆ ಭೇಟಿ ನೀಡಿ, ಉಜ್ವಲ ಯೋಜನೆಯ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
  • ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಮೇಲೆ ನೀಡಲಾಗಿರುವ ಅಗತ್ಯ ದಾಖಲೆಗಳನ್ನು ಲಗತ್ತಿಸಿ
  • ಎಲ್ಲ ಅಗತ್ಯ ದಾಖಲೆಗಳೊಂದಿಗಿನ ಅರ್ಜಿ ನಮೂನೆಯನ್ನು ಗ್ಯಾಸ್ ಡೀಲರ್ ಗೆ ಸಲ್ಲಿಸಿ.

ಅಂತಿಮವಾಗಿ:

ಕೇಂದ್ರ ಸರ್ಕಾರವು ಹೊಗೆ ಮೂಕ್ತವಾಗಿ ಅಡುಗೆ ಮಾಡಲು ಮಹಿಳೆಯರಿಗೆ ಶುದ್ಧ ಇಂಧನಗಳನ್ನು ನೀಡಿ ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ಅರ್ಜಿ ಸಲ್ಲಿಸಿ. ಇಲ್ಲವಾದಲ್ಲಿ ನಿಮ್ಮ ಖಾತೆಗೆ ಸಬ್ಸಿಡಿ ಹಣ ಜಮಾ ಆಗುವುದಿಲ್ಲ. ಮುಖ್ಯವಾಗಿ, ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಒಂದು ಕುಟುಂಬಕ್ಕೆ ಒಂದು ಬಾರಿ ಮಾತ್ರ ಅವಕಾಶ ಇರುತ್ತದೆ. ಅರ್ಹ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಇತರೆ ಪ್ರಮೂಖ ಲಿಂಕುಗಳು:

Leave a Reply

Your email address will not be published. Required fields are marked *