G-RAM-G: ಜಿ ರಾಮ್‌ ಜಿ ಯೋಜನೆ – ಭಾರಿ ಉದ್ಯೋಗ ಸೃಷ್ಟಿ : ಇಲ್ಲಿದೆ ಸಂಪೂರ್ಣ ಮಾಹಿತಿ

g-ram-g scheme in kannada

G-RAM-G scheme in kannada : ಗ್ರಾಮೀಣ ಭಾರತದ ಬೆನ್ನೆಲುಬಾಗಿರುವ MGNAREGA ಯೋಜನೆಯನ್ನು ಕೇಂದ್ರ ಸರ್ಕಾರVB-G RAM G ಎಂಬ ಮರುನಾಮಕರಣ ಮಾಡಿದೆ. ಸರ್ಕಾರ ತಂದಿರುವ ಈ ಮಸೂದೆಯು ಗ್ರಾಮೀಣ ಭಾಗದ ಕಾರ್ಮಿಕರ ಬದುಕಿನಲ್ಲಿ ಯಾವ ರೀತಿ ಬದಲಾವಣೆಗಳನ್ನು ಮಾಡುತ್ತದೆ ಮತ್ತು ಹೊಸ ಯೋಜನೆಯಡಿ ಕೆಲಸದ ಎಷ್ಟು ದಿನಗಳನ್ನು ಹೆಚ್ಚಿಸಿದ್ದಾರೆ ಇದರ ಬದಲಾವಣೆಗಳು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಹೊಸ ಯೋಜನೆಯೆಯಿಂದಾಗಿ ಕೆಲ್ಸದ ದಿನಗಳನ್ನೂ 100 ರಿಂದ 125 ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಮೀಣ ಕುಟುಂಬಗಳಿಗೆ ಹೆಚ್ಚಿನ ಆದಾಯ ತರುವ ಉದ್ದೇಶವನ್ನು ಹೊಂದಿದೆ. ಇದರಿಂದಾಗಿ ಬಡ ಜನರ ಜೀವನಮಟ್ಟ ಸುಧಾರಿಸುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಹಳೇ ಯೋಜನೆಯಲ್ಲಿ ಕೂಲಿಯ ಸಂಪೂರ್ಣ ಹಣವನ್ನು ಕೇಂದ್ರವೇ ನೀಡುತ್ತಿತ್ತು ಸರ್ಕಾರಕ್ಕೆ ಹೊರೆಯಾಗುತ್ತಿತ್ತು ಜನರಿಗೆ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು ಆದರೆ ಜೀ- ರಾಮ್-ಜಿ ಯೋಜನೆಯಲ್ಲಿ ರಾಜ್ಯ ಸರ್ಕಾರಗಳು ಕೂಡ 40% ಹಣವನ್ನು ಕೊಡಬೇಕಾಗುತ್ತದೆ

ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮhttps://kannadahelp.net/ವೆಬ್ ಸೈಟ್ ಗೆ ಭೇಟಿ ನೀಡಿ. ಹೊಸ ಮಸೂದೆಯಿಂದಾಗಿರುವ ಬದಲಾವಣೆಗಳು ಸಾಮಾನ್ಯ ಜನರಿಗೆ ಇದರಿಂದಾದ ಅನುಕೂಲಗಳು ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಸಂಪೂರ್ಣ ಮಾಹಿತಿ:-

ಕೇಂದ್ರ ಸರ್ಕಾರವು 2009 ರಲ್ಲಿ ಮಹಾತ್ಮ ಗಾಂಧಿಯವರಿಗೆ ಗೌರವ ಸೂಚಕವಾಗಿ ಆಗಿನ ಯುಪಿಎ ಸರ್ಕಾರ ನರೇಗಾ ಯೋಜನೆಗೆ ಮಹತ್ವ ಗಾಂಧಿ ಹೆಸರನ್ನು ಸೇರಿಸಿತ್ತು. ಆಗ ಪ್ರದಾನ ಮಂತ್ರಿ ಮನಮೋಹನ್ ಸಿಂಗ್ ಈ ಘೋಷಣೆಯನ್ನು ಅವರೇ ಮಾಡಿದ್ದರು. ಆದರೆ ಕೇಂದ್ರ ಸರ್ಕಾರವು 2025 ಡಿಸೇಂಬರ್ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಬದಲಿಸಿ ‘ವಿಕಸಿತ ಭಾರತ – ಜಿ ರಾಮ್ ಜಿ‘ ಎಂಬ ಹೊಸ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.

ಈ ಮಸೂದೆ ಗ್ರಾಮೀಣ ಈ ಮಸೂದೆ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೀರ್ಘಕಾಲದ ಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಇದರಲ್ಲಿ ಮುಖ್ಯವಾಗಿ ನೀರಿನ ಕೊರತೆಯನ್ನು ನೀಗಿಸುವ ಕೆಲಸಗಳು ಮೂಲಭೂತ ಸೌಕರ್ಯಗಳು ಮತ್ತು ದೈನಂದಿನ ಮೂಲಭೂತ ಸವಕಾರ್ಯಗಳನ್ನು ಒದಗಿಸುವುದು ಹಾಗು ಪ್ರಕೃತಿ ವಿಕೋಪಗಳನ್ನು ತಪ್ಪಿಸಲು ಒತ್ತು ನೀಡಲಾಗಿದೆ.

MGNAREGA ಮತ್ತು VB-G RAM G ಯೋಜನೆಯ ನಡುವಿನ ವತ್ಯಾಸ ಏನು ಗೊತ್ತಾ ?

ಈ ಯೋಜನೆಯು ಗ್ರಾಮೀಣ ಭಾಗದ ಜನರಲ್ಲಿ ಒಂದು ಹೊಸತನವನ್ನು ತುಂಬವ ಪ್ರಯತ್ನವಾಗಿದೆ ಹಲವು ಕುಟುಂಬಗಳಿಗೆ ಆಸರೆಯಾಗುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ

ವಿಭಾಗಗಳು Mನರೇಗಾ ಯೋಜನೆ 2025 ಜೀ- ರಾಮ್-ಜಿ ಯೋಜನೆ
ಕೆಲಸದ ಅವಧಿ ಪ್ರತಿ ಮನೆಗೆ 100 ದಿನ ಕೆಲಸದ ಅವಧಿಯಾಗಿತ್ತು ಪ್ರತಿ ಮನೆಗೆ ಕೆಲಸದ ಅವಧಿಯನ್ನು 125 ದಿನಕ್ಕೆ ಹೆಚ್ಚಿಸಲಾಗಿದೆ
ಹಣಕಾಸಿನ ಹೊರೆ ಕೆಸದ ಅಷ್ಟು ಹಣವನ್ನು ಅಂದರೆ 100% ಕೇಂದ್ರ ಸರ್ಕಾರ ನೀಡುತ್ತಿತ್ತು ಕೇಂದ್ರ ಸರ್ಕಾರ 60% ಮತ್ತು ರಾಜ್ಯ ಸರ್ಕಾರ 40% ಹಂಚಿಕೊಳ್ಳಬೇಕು
ಯೋಜನೆಯ ಸ್ವರೂಪ ಈ ಯೋಜನೆಯು ಬೇಡಿಕೆ ಆಧಾರಿತವಾಗಿದ್ದು ಕಾರ್ಮಿಕ ಕೆಲಸ ಕೇಳಿದಾಗ ಸರ್ಕಾರ ನೀಡಲೇಬೇಕು ಗುರಿ ಆಧಾರಿತ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಬಜೆಟ್ ಮತ್ತು ಗುರಿಯಂತೆ
ಕೃಷಿಯ ಸಮಯ ವರ್ಷ ಪೂರ್ತಿ ಕೆಲಸವಿರುತ್ತದೆ ಕೃಷಿಯಲ್ಲಿ 60 ದಿನಗಳ ಕಾಲ ವಿರಾಮ ಇರುತ್ತದೆ
ಪಾವತಿ ಅವಧಿ 15 ದಿನಗಳಿಗೊಮ್ಮೆ ಪಾವತಿ ನಿಯಮವಿತ್ತು ವಾರಕ್ಕೊಮ್ಮೆ ಪಾವತಿ ಮಾಡುವ ಉದ್ದೇಶ
ಆಡಳಿತಾತ್ಮಕ ನಿಯಂತ್ರಣ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರವಿತ್ತು ಕೇಂದ್ರ ಸರ್ಕಾರದ ನೇರ ಉಸ್ತುವಾರಿ ಮತ್ತು ಡಿಜಿಟಲ್ ಪಾರದರ್ಶಕತೆ ಹೆಚ್ಚು

ಇನ್ನು ಒಂದು ರೀತಿಯಲ್ಲಿ ಈ ಯೋಜನೆ ಬಗ್ಗೆ ವಿವರಿಸುವುದಾದರೆ!! ನಮ್ಮ ಭಾರತವು ಕೃಷಿ ಪ್ರದಾನ ರಾಷ್ಟ್ರವಾಗಿದ್ದು ಕೃಷಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದರಿಂದ ಗ್ರಾಮೀಣ ಭಾಗದ ಜನರು ಅಭಿವೃದ್ಧಿಯತ್ತಾ ಸಾಗಲಿ ಅವರ ಕುಟುಂಬಗಳಿಗೆ ಆಸರೆಯಾಗಲಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಂಡು ಎಲ್ಲರಂತೆ ನಾವು ಎಂಬ ಭಾವನೆಗನ್ನು ಅವರಲ್ಲಿ ಬಿತ್ತಿ ಅವರ ಕುಟುಂಬಗಳಿಗೆ ಅದರವಾಗಿಲಿ ಎಂಬ ಗುರಿಯನ್ನು ನಮ್ಮ ಸರ್ಕಾರಹೊಂದಿವೆ

ಇದರಿಂದ ಆದ ಬದಲಾವಣೆಗಳು:-

ಹಣಕಾಸಿನ ಜವಾಬ್ದಾರಿ ಹಳೆ ಯೋಜನೆಯಲ್ಲಿ ರಾಜ್ಯ ಸರ್ಕಾರಗಳಿಗೆ ಕೂಲಿ ನೀಡುವ ಚಿಂತೆ ಇರಲಿಲ್ಲ ಆದರೆ ಈಗ ರಾಜ್ಯಗಳು 60% ಹಣ ನೀಡಬೇಕಾಗಿರುವುದರಿಂದ ಆರ್ಥಿಕವಾಗಿ ಹಿಂದುಳಿದ ರಾಜ್ಯಗಳಲ್ಲಿ ಕೆಲಸದ ಪ್ರಮಾಣ ಕಡಿಮೆಯಾಗುವ ಅಥವಾ ವಿಳಂಬವಾಗುವ ಸಾಧ್ಯತೆ ಇದೆ

ಹೆಚ್ಚಿನ ಕೆಲಸದ ದಿನಗಳು ಹೆಚ್ಚು ಈ ಮೊದಲು ವರ್ಷಕ್ಕೆ ನೂರು ದಿನ ಮಾತ್ರ ಕೆಲಸ ಸಿಗುತ್ತಿತ್ತು. ಈಗ ಅದನ್ನು 125 ದಿನಗಳಿಗೆ ಏರಿಸುವುದರಿಂದ ಕುಟುಂಬದ ಆದಾಯ ಹೆಚ್ಚಾಗುತ್ತದೆ ಇದು ವರ್ಷದ ಹೆಚ್ಚಿನ ಭಾಗದಲ್ಲಿ ಉದ್ಯೋಗದ ಭರವಸೆ ನೀಡುತ್ತದೆ ಎಂಬ ಗುರಿಯನ್ನು ಹೊಂದಿದೆ

ವೇಗದ ವೇತನ ಪಾವತಿ ಈ ಹೊಸ ಯೋಜನೆ ಅಡಿ ಕಾರ್ಮಿಕರ ಕೂಲಿಯನ್ನು ವರಕೊಮ್ಮೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಗುರಿಯನ್ನು ಹೊಂದಲಾಗಿದೆ ಇದರಿಂದ ಕಾರ್ಮಿಕರು ತಮ್ಮ ದಿನನಿತ್ಯದ ಖರ್ಚುಗಳಿಗಾಗಿ ಹಣಕ್ಕೆ ಕಾಯುವುದು ತಪ್ಪುತ್ತದೆ.

ಕೃಷಿ ಕಾರ್ಮಿಕರಿಗೆ ಅನುಕೂಲ ಕೃಷಿಯ ಸಮಯದಲ್ಲಿ 60 ದಿನಗಳ ಕಾಲ ನರೇಗಾ ಕೆಲಸವನ್ನು ಸ್ಥಗಿತಗಿತಗೊಳಿಸುವುದರಿಂದ ರೈತರಿಗೆ ಕೃಷಿ ಕೆಲಸಕ್ಕೆ ಕಾರ್ಮಿಕರು ಸುಲಭವಾಗಿ ಸಿಗುತ್ತಾರೆ ಕಾರ್ಮಿಕರಿಗೆ ಕೃಷಿ ಕೆಲಸದಿಂದ ಹೆಚ್ಚಿನ ಕೂಲಿ ಪಡೆಯಲು ಅವಕಾಶ ಸಿಗುತ್ತದೆ ಹಾಗೂ ನರೇಗಾ ಮತ್ತು ಕೃಷಿ ಕೆಲಸಗಳ ನಡುವೆ ಸಮತೋಲನ ಏರ್ಪಡುತ್ತದೆ ಇದರಿಂದಾಗಿ ಕೃಷಿಕರಿಗೆ ಹಲವು ರೀತಿಯ ಲಾಭಗಳು ಸಿಗುತ್ತವೆ.

ಕೌಶಲ್ಯಗಳ ಅಭಿವೃದ್ಧಿ ಕೇವಲ ಮಣ್ಣು ತೆಗೆಯುವ ಕೆಲಸವನ್ನು ಮಾತ್ರವಲ್ಲದೆ ಈ ಯೋಜನೆ ಅಡಿ ಕಾರ್ಮಿಕರಿಗೆ ವೃತ್ತಿಪರ ತರಬೇತಿಗಳನ್ನು ನೀಡುವ ಅವಕಾಶವಿದ್ದು ಇದರಿಂದ ಕಾರ್ಮಿಕರು ಮುಂದೆ ಬೇರೆ ಕಡೆ ಉತ್ತಮ ಸಂಬಳದ ಕೆಲಸವನ್ನು ಪಡೆಯಲು ಸಾಧ್ಯವಾಗುತ್ತದೆ

ವಲಸೆ ಹೋಗುವುದನ್ನು ತಡೆಗಟ್ಟುವಿಕೆ ಗ್ರಾಮದಲ್ಲಿಯೇ 125 ದಿನಗಳ ಕೆಲಸ ಮತ್ತು ಉತ್ತಮ ವೇತನ ಸಿಗುವುದರಿಂದ ಜನರು ಕೆಲಸ ಹುಡುಕಿಕೊಂಡು ಬೆಂಗಳೂರು ಅಥವಾ ಬೇರೆ ನಗರಗಳಿಗೆ ವಲಸೆ ಹೋಗುವುದು ಕಡಿಮೆಯಾಗುತ್ತದೆ. ಇದರಿಂದ ಈ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬ ನಮ್ಮ ಸರ್ಕಾರ ಕನಸನ್ನು ಹೊಂದಿದೆ

ಗ್ರಾಮೀಣ ಆಸ್ತಿಗಳ ನಿರ್ಮಾಣ ಯೋಜನೆ ಕೇವಲ ಉದ್ಯೋಗ ನೀಡುವುದಲ್ಲದೆ ಹಳ್ಳಿಗಳಲ್ಲಿ ಶಾಶ್ವತ ಸೌಲಭ್ಯಗಳನ್ನು ನೀಡುತ್ತದೆ. ಹಳ್ಳಿಗಳಿಲ್ಲಿ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ ವಾಗುತ್ತವೆ

VB-G RAM G ಯೋಜನೆ ಎಂದರೇನು

ಇದು ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವುದರ ಜೊತೆಗೆ ಹಳ್ಳಿಗಳ ಆಧುನಿಕ ಅಭಿವೃದ್ಧಿಯನ್ನು ಗುರಿಯ ಗುರಿಯಾಗಿ ಇಟ್ಟುಕೊಂಡಿರುವ ಒಂದು ದೊಡ್ಡ ಅಭಿಯಾನ ಎಂದು ಹೇಳಬಹುದು ಭಾರತದಲ್ಲಿ ಬಡತನ ನಿರ್ಮೂಲನೆ ಮಾಡಿ ಕೃಷಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.

ಪ್ರಮುಖ ಅಂಶಗಳು:-

1.ಕೆಲಸದ ದಿನಗಳಿಗೆ ಗ್ಯಾರಂಟಿ

2.ಕೃಷಿ ಹಂಗಾಮಿಗೆ ವಿರಾಮ

3.ಹಣಕಾಸಿನ ಹಂಚಿಕೆ

4.ವಾರದ ಪಾವತಿ ತಂತ್ರಜ್ಞಾನದ ಬಳಕೆ

5.ತಂತ್ರಜ್ಞಾನದ ಬಳಕೆ

VB-G RAM G ಯೋಜನೆಯ ಪ್ರಮುಖ ಉದ್ದೇಶ:-

ಗ್ರಾಮೀಣ ಜನರ ಆದಾಯವನ್ನು ಹೆಚ್ಚಿಸುವುದು

  • ಕೆಲಸದ ದಿನಗಳನ್ನು ನೂರರಿಂದ 125 ದಿನಗಳಿಗೆ ಏರಿಸುವ ಮೂಲಕ ಪ್ರತಿ ಕುಟುಂಬಗಳಿಗೆ ವರ್ಷಕ್ಕೆ ಸುಮಾರು 8000 ದಿಂದ 10,000 ಹೆಚ್ಚುವರಿ ಆದಾಯ ಸಿಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಇದರಿಂದಾಗಿ ಜನರ ಜೀವನ ಮಟ್ಟದಲ್ಲಿ ಬದಲಾವಣೆಯನ್ನು ಕಾಣಬಹುದು

ಗ್ರಾಮೀಣ ಭಾಗದ ಜನರಿಗೆ ಕೃಷಿ ಉತ್ಪಾದನೆಗೆ ಬೆಂಬಲ ನೀಡುವುದು

  • ಕೃಷಿಯ ಸಮಯದಲ್ಲಿ 60 ದಿನಗಳ ಕಾಲ ನೆರೆಗ ಕೆಲಸ ತಗಿತಗೊಳ್ಳುವುದರಿಂದ ಕಾರ್ಮಿಕರು ಕೃಷಿ ಕೆಲಸಗಳಲ್ಲಿ ತೊಡಗುವಂತೆ ಮಾಡುವುದು ಇದರಿಂದ ಸಾಮಾನ್ಯ ವರ್ಗದ ರೈತರಿಗೆ ಸಹಾಯವಾಗುತ್ತದೆ ಮತ್ತು ದೇಶದದಲ್ಲಿ ಆಹಾರ ಉತ್ಪಾದನೆ ಹೆಚ್ಚಿಸುತ್ತದೆ. ಬಡತನ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತದೆ.

ಸಾಮಾನ್ಯ ವರ್ಗದ ಜನರಿಗೆ ಶಾಶ್ವತ ಆಸ್ತಿಗಳ ನಿರ್ಮಾಣ

  • ಮಣ್ಣು ತೆಗೆಯುವುದು ಕೆರೆಗಳ ನಿರ್ಮಾಣ ಕೆಲಸಕ್ಕೆ ಮಾತ್ರ ಸೀಮಿತವಾಗದೆ ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳ ನಿರ್ಮಾಣಕ್ಕೂ ಸಹಾಯವಾಗುತ್ತದೆ ಗ್ರಾಮಗಳಲ್ಲಿ ಪಕ್ಕ ರಸ್ತೆಗಳು ಶಾಲೆಗಳು ನೀರಾವರಿ ಸೌಲಭ್ಯಗಳು ದೊರಕಿಸಿ ಕೊಡುವ ಯೋಜನೆಯಾಗಿದೆ

ಜಲ ಸಂರಕ್ಷಣೆ ಮತ್ತು ಹವಮಾನದ ಬದಲಾವಣೆಗಳನ್ನು ಎದುರಿಸುವುದು

  • ಬರಗಾಲ ಮತ್ತು ನೀರಿನ ಅಭಾವವನ್ನು ತಡೆಗಟ್ಟಲು ಈ ಯೋಜನೆಯು ಹೆಚ್ಚು ಹೊತ್ತು ನೀಡುತ್ತದೆ ಹಳೇ ಕೆರೆಗಳನ್ನು ಸ್ವಚ್ಛಗೊಳಿಸಿ ಹೊಸ ಜಲಮೂಲಗಳ ನಿರ್ಮಾಣದ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ರೈತರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಮಾಡಿಕೊಡುವುದು

ರಾಜ್ಯಗಳ ಸಂಪೂರ್ಣವಾಗಿ ಪಾಲ್ಗೊಳ್ಳುವಿಕೆ

ಹಣಕಾಸು ಹಂಚಿಕೆಯನ್ನು ಕೇಂದ್ರ ಸರ್ಕಾರ 60% ನೀಡಿದರೆ ರಾಜ್ಯ ಸರ್ಕಾರ 40% ನೀಡಬೇಕಾಗಿರುತ್ತದೆ ಇದರಿಂದ ಜನರಿಗೆ ವೇಗವಾಗಿ ಹಣದ ಪೂರೈಕೆಯಾಗುತ್ತದೆ

ಪಾರದರ್ಶಕತೆ ಮತ್ತು ಬ್ರಷ್ಟಾಚಾರ ಮುಕ್ತ ವ್ಯವಸ್ಥೆ

  • ಹೆಚ್ಚು ತಂತ್ರಜ್ಞಾನ ಬಳಕೆ ಮಾಡುವುದರಿಂದ ಸಾಮಾನ್ಯ ಜನರಿಗೆ ಆಗುತ್ತಿದ್ದ ಮೋಸವನ್ನು ತಡೆಗಟ್ಟಿ ಸಂಪೂರ್ಣವಾಗಿ ಅವರ ಹಣವನ್ನು ಅವರಿಗೆ ನೇರವಾಗಿ ತಲುಪುವಂತೆ ಮಾಡುವುದು

ಅನಾನುಕೂಲಗಳು:-

ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಹೊರೆ

ಹಳೆಯ ಯೋಜನೆಯಲ್ಲಿ ಕೂಲಿಯ ಸಂಪೂರ್ಣ ಹಣವನ್ನು ಕೇಂದ್ರವೇ ನೀಡುತ್ತಿತ್ತು ಆದರೆ ಹೊಸ ಮಸೂದೆಯಲ್ಲಿ ರಾಜ್ಯಗಳು 40% ಹಣವನ್ನು ಕೊಡಬೇಕಾಗುತ್ತದೆ ಹಣಕಾಸಿನ ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ರಾಜ್ಯಗಳಿಗೆ ಹೊರೆಯಾಗುತ್ತದೆ.

  • ರಾಜ್ಯಗಳು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು
  • ರಾಜ್ಯಗಳು ಕೆಲಸ ನೀಡಲು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚು

ಕೃಷಿ ಸಮಯದಲ್ಲಿ 60 ಗಂಟೆಗಳ ಕಾಲ ವಿರಾಮ

ಎಲ್ಲಾ ಕಾರ್ಮಿಕರು ಏನು ಹೊಂದಿರುವುದಿಲ್ಲ ಅಥವಾ ಎಲ್ಲಾ ಕಾರ್ಮಿಕರಿಗೂ ಕೃಷಿ ಭೂಮಿ ಸಿಗುವುದಿಲ್ಲ ಯಾವುದೇ ರೀತಿಯ ಭೂಮಿ ಇಲ್ಲದೆ ಇರುವ ಕಾರ್ಮಿಕರು

  • 60 ದಿನಗಳ ಕಾಲ ಯಾವುದೇ ಕೆಲಸ ಸಿಗದ ಕಾರಣ ಆದಾಯದಲ್ಲಿ ಏರಿಳಿತವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು

ತಂತ್ರಜ್ಞಾನದಿಂದ ಉಂಟಾಗುವ ಅಡೆತಡೆಗಳು

  • ಹಳ್ಳಿ ಭಾಗದಲ್ಲಿ ಸರಿಯಾದ ಇಂಟರ್ನೆಟ್ ವ್ಯವಸ್ಥೆ ಇರುವುದಿಲ್ಲ
  • ತಾಂತ್ರಿಕ ದೋಷಗಳು ಅಥವಾ ಸ್ಮಾರ್ಟ್ ಫೋನ್ ಇಲ್ಲದ ಕಾರ್ಮಿಕರು ಹಾಜರಾತಿದಾಗಿ ದಾಖಲಿಸಲು ಕಷ್ಟಪಡಬೇಕಾಗುತ್ತದೆ ತಾಂತ್ರಿಕ ಕಾರಣಗಳಿಂದ ಕೂಲಿ ಹಣ ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾದ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸದೆ ಅವರೇ ಆ ಹಣವನ್ನ ಉಪಯೋಗಿಸಿಕೊಳ್ಳುವ ಸಾಧ್ಯತೆ ಹೆಚ್ಚು

ಎರಡು ಸರ್ಕಾರಗಳು ಇರುವುದರಿಂದ ಆಡಳಿತಾತ್ಮಕ ಗೊಂದಲಗಳು

  • ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಆರ್ಥಿಕ ಸಂಘರ್ಷವಾಗಬಹುದು ಇದರಿಂದ ಕೆಲಸ ಕಾಮಗಾರಿಗಳು ಕುಂಟಿತವಾಗಿ ಸಾಮಾನ್ಯ ವರ್ಗದ ಜನರಿಗೆ ತೊಂದರೆ ಆಗಬಹುದು

ಕಾರ್ಮಿಕರು ದುರ್ಬಲ ರಾಗಬಹುದು

  • ಅರವತ್ತು ದಿನಗಳ ಕಾಲ ಕೆಲಸ ಇಲ್ಲದ ಕಾರಣ ಕಾರ್ಮಿಕರು ಯಾವುದೇ ಕೆಲಸಕ್ಕೆ ಹೋಗದೆ ಸಮಯವನ್ನು ವ್ಯರ್ಥ ಮಾಡಿ ಹಣದ ಪೂರೈಕೆಗಾಗಿ ಸಾಲವನ್ನು ಮಾಡುವ ಸಂಭವವಿರುತ್ತದೆ ಇದರಿಂದ ಆರ್ಥಿಕ ಹೊರೆಯಾಗಬಹುದು

ಹಲವು ದಿನಗಳ ಕಾಲ ಯಾವುದೇ ಉದ್ಯೋಗ ಇಲ್ಲದ ಕಾರಣ

  • ಕಾರ್ಮಿಕರು ಉದ್ಯೋಗವನ್ನುಅರಸಿಕೊಂಡು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಲು ಕಾರಣವಾಗಬಹುದು

ಪ್ರಮುಖ ಷರತ್ತುಗಳು:-

  • ಅರ್ಜಿದಾರರು ಕಡ್ಡಾಯವಾಗಿ ಗ್ರಾಮೀಣ ಭಾಗದ ನಿವಾಸಿ ಆಗಿರಬೇಕು ಮತ್ತು ಭಾರತೀಯ ನಿವಾಸಿ ಆಗಿರಬೇಕು
  • ಪ್ರತಿಯೊಂದು ಕುಟುಂಬವು ಗ್ರಾಮ ಪಂಚಾಯಿತಿಯಿಂದ ಜಾಬ್ ಕಾರ್ಡ್ ಪಡೆದಿರುವುದು ಕಡ್ಡಾಯ
  • ಕೆಲಸ ಮಾಡಲು ಉತ್ತಮ ಸಾಮರ್ಥ್ಯ ದೇಹ ಮತ್ತು ಅರೋಗ್ಯ ಹೊಂದಿರುವ ಅಭ್ಯಥಿಗಳಿಗೆ ಮಾತ್ರ ಅವಕಾಶ
  • 18 ವರ್ಷ ಮೇಲ್ಪಟ್ಟಿರುವ ಅಭ್ಯರ್ಥಿಗಳಿಗೆ ಮಾತ್ರ ಕೆಲಸ ಮಾಡಲು ಅವಕಾಶ
  • ಕಾರ್ಮಿಕರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು

ಅಗತ್ಯ ದಾಖಲೆಗಳು:

  • ಜಾಬ್ ಕಾರ್ಡ್
  • BPL ಪಡಿತರ ಚೀಟಿ
  • ಆದಾಯ ಪ್ರಮಾಣಪತ್ರ 
  • ನಿವೇಶನದ ದಾಖಲೆಗಳು
  • ಆಧಾರ್ ಕಾರ್ಡ್
  • ಭಾವಚಿತ್ರ 
  • ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ
  • ಬ್ಯಾಂಕ್ ಪಾಸ್‌ಬುಕ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ನೀವೇನಾದ್ರೂ ನಿಮ್ಮ ಅವಳಿ ಮಕ್ಕಳ ಹೆಸರಿನಲ್ಲಿ ಈ ಯೋಜನೆ ಅಡಿಯಲ್ಲಿ ಖಾತೆ ತೆರೆಯಬೇಕಾದರೆ ಅವರ ಜನನ ಪ್ರಮಾಣ ಪತ್ರ ಅಥವಾ ವೈದ್ಯರು ನಿಮಗೆ ನೀಡಿರುವ ಒಂದು ಪುರಾವೆಯನ ಕೊಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೀವು ಗ್ರಾಮ ಕಚೇರಿ ಅಥವಾ ಅಧಿಕೃತ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು ಅಂದರೆ ಖಾತೆ ತೆರೆಯಬಹುದು.

ಮೊದಲು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೇಗೆ ತಿಳಿತಾ ಹೋಗೋಣ

  • ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿಯನ್ನು ಪಡೆದುಕೊಳ್ಳಿರಿ
  • ಅಲ್ಲಿ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಬರ್ತಿ ಮಾಡಿ.
  • ಅರ್ಜಿ ಸಲ್ಲಿಸಿದ 15 ದಿನದೊಳಗಾಗಿ ಜಾಬ್ ಕಾರ್ಡ್ ಅನ್ನು ಪಡೆದುಕೊಳ್ಳುವಿರಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ 

ಅಧಿಕೃತ ವೆಬ್ ಸೈಟ್ https://nrega.dord.gov.in ಗೆ ಭೇಟಿ ನೀಡಿ

ಅಪ್ಲಿಕೇಶನ್ ಫಾರಂ ಅನ್ನ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಗ್ರಾಮ ಪಂಚಾಯಿತಿಗೆ ಬೇಡಿ ನೀಡಿ ಅಧಿಕೃತ ವೆಬ್ಸೈಟ್ನಲ್ಲಿ ಫಾರಂ ಅನ್ನ ಪಡೆದುಕೊಳ್ಳಿ.

ಡೌನ್ಲೋಡ್ ಮಾಡಿಕೊಂಡ ನಂತರ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ

ಕೊನೆಯದಾಗಿ ನೀವು ಬರ್ತಿ ಮಾಡಿದ ಎಲ್ಲಾ ಹಂತಗಳು ಸರಿ ಇದೆ ಎಂದು ಪರಿಶೀಲನೆ ಮಾಡಿ ನಂತರ ನಿಮ್ಮ ಅಕ್ಕ ಪಕ್ಕದ ಅಂಚೆ ಕಚೇರಿ ಅಥವಾ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ಈ ಅರ್ಜಿಯನ್ನು ಸಲ್ಲಿಸಿ ಸಲ್ಲಿಸಿ.

ತೀರ್ಮಾನ:-

ನಮ್ಮ ಭಾರತವು ಕೃಷಿ ಪ್ರದಾನ ರಾಷ್ಟ್ರವಾಗಿದ್ದು ಕೃಷಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದರಿಂದ ಗ್ರಾಮೀಣ ಭಾಗದ ಜನರು ಅಭಿವೃದ್ಧಿಯತ್ತಾ ಸಾಗಲಿ ಅವರ ಕುಟುಂಬಗಳಿಗೆ ಆಸರೆಯಾಗಲಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಂಡು ಎಲ್ಲರಂತೆ ನಾವು ಎಂಬ ಭಾವನೆಗನ್ನು ಅವರಲ್ಲಿ ಬಿತ್ತಿ ಅವರ ಕುಟುಂಬಗಳಿಗೆ ಅದರವಾಗಿಲಿ ಎಂಬ ಗುರಿಯನ್ನು ನಮ್ಮ ಸರ್ಕಾರಹೊಂದಿವೆ.

ಕೆಲಸದ ದಿನಗಳನ್ನು 125ಕ್ಕೆ ಹೆಚ್ಚಿಸುವುದರಿಂದ ಬಡ ಕುಟುಂಬಗಳಿಗೆ ವರ್ಷಕ್ಕೆ ಹೆಚ್ಚಿನ ಆದಾಯವನ್ನು ತಂದುಕೊಡುತ್ತದೆ. 60 ದಿನ ವಿರಾಮ ನೀಡುವುದರಿಂದ ರೈತರು ತಮ್ಮ ಕಾರ್ಮಿಕರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಕೇವಲ ಗುಂಡಿ ತೆಗೆಯುವ ಕೆಲಸಕ್ಕೆ ಸೀಮಿತವಾಗದೆ ಸಾಮಾನ್ಯ ವರ್ಗದ ಜನರ ಪ್ರಮುಖ ಮೂಲ ಭೂತಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ಊರಿನ ಅಥವಾ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇನ್ನು ಕೂಡ ಇನ್ನೂ ಕೂಡ ತಿಳಿದುಕೊಳ್ಳಿ

ಇತರ ಯೋಜನೆಯ ಲಿಂಕುಗಳು :

ಸ್ವಂತ ಮನೆ ಇಲ್ಲದವರಿಗೆ ಸರ್ಕಾರದಿಂದ ಮನೆ ವಿತರಣೆ

Leave a Reply

Your email address will not be published. Required fields are marked *