ಫ್ರೆಂಡ್ಸ್ ಎಲ್ಲರಿಗೂ ನಮಸ್ಕರ , ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವಂತ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಹಾಯಧನವನ್ನು ನೀಡುತ್ತಿದ್ದಾರೆ ಈ ಒಂದು ಸಹಾಯಧನವನ್ನು ಆರ್ಥಿಕವಾಗಿ ಸ್ವಾವಲಂಬನೆ ಮತ್ತು ಆರ್ಥಿಕವಾಗಿ ಸ್ವಾತಂತ್ರವನ್ನ ಹೊಂದಲು ಈ ಸಹಾಯಧನವನ್ನು ಪಡೆದು ನೀವು ಕೂಡ ಸ್ವಂತ ಬಿಸಿನೆಸ್ ಅನ್ನ ಶುರು ಮಾಡಬಹುದು.

ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ ವ್ಯಾಪಾರ ಚಟುವಟಿಕೆಗಳು ಸೂಕ್ಷ್ಮ ಉದ್ಯಮಗಳ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಅನ್ನು ಕೊಟ್ಟಿರುವಂಥದ್ದು.
ಈ ಒಂದು ಉದ್ಯೋಗಿನಿ ಯೋಜನೆ ಅಡಿಯಲ್ಲಿ ನೀವು ಕೂಡ ಸಾಲವನ್ನು ಪಡೆದುಕೊಂಡು ಬಿಸಿನೆಸ್ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲಾಗಿದೆ.
ಯೋಜನೆಯ ಉದ್ದೇಶ:-
ಈ ಯೋಜನೆ ಹಲವಾರು ಉದ್ದೇಶಗಳನ್ನ ಒಳಗೊಂಡಿದೆ ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿ ಆಗಬೇಕು ಹಾಗೆ ಸ್ವಂತ ಉದ್ಯಮವನ್ನು ಶುರು ಮಾಡಬೇಕು ಮನೆಯಲ್ಲಿ ಇದ್ದುಕೊಂಡು ಸ್ವಾವಲಂಬನೆ ಆಗುವಂತಹ ಒಂದು ಬಿಸಿನೆಸ್ ಅನ್ನು ಶುರು ಮಾಡಬೇಕು ಅನ್ನುವಂತ ಉದ್ದೇಶವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ ಇದರ ಅಡಿಯಲ್ಲಿ ಹಲವಾರು ಬ್ಯುಸಿನೆಸ್ ಅನ್ನ ಮಾಡಬಹುದು ಅಂದ್ರೆ ಬುಕ್ ಬೈಂಡಿಂಗ್ ಇರಬಹುದು ಹಾಗೆ ಸೀಮೆ ಸುಣ್ಣ , ಜಾಮ್ , ಇತರ ಕರಕುಶಲ ವಸ್ತುಗಳನ್ನು ತಯಾರಿಸಿ ಸೇಲ್ ಮಾಡಬಹುದು.
ಈ ಯೋಜನೆಯ ಪ್ರಯೋಜನಗಳು
ಈ ಯೋಜನೆ ಹಲವಾರು ಪ್ರಯೋಜನಗಳಲ್ಲ ಒಳಗೊಂಡಿದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವಂತ ಮಹಿಳಾ ಅಭ್ಯರ್ಥಿಗಳು ಘಟಕ ವೆಚ್ಚ 1 ಲಕ್ಷದಿಂದ ಗರಿಷ್ಠ 3 ಲಕ್ಷ ಜೊತೆಗೆ 50% ಸಬ್ಸಿಡಿ ಸಾಲದೊಂದಿಗೆ ಪಡೆಯಬಹುದು.
ಕುಟುಂಬದ ವಾರ್ಷಿಕ ಆದಾಯದ ಮಿತಿ 2 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ
ಸಬ್ಸಿಡಿ ವಿವರ
ವಿಶೇಷ ವರ್ಗ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಗರಿಷ್ಠ ವೆಚ್ಚ 3 lakh ಹಾಗೆ ವಿಶೇಷ ವರ್ಗದ ಮಹಿಳೆಯರಿಗೆ ಸಾಮಾನ್ಯ ವರ್ಗದ ಮಹಿಳೆಯರಿಗೆ ಸಹಾಯಧನ 30% ಅಥವಾ ಗರಿಷ್ಠ 90% ರಷ್ಟು ಸಬ್ಸಿಡಿಯನ್ನ ಇಲ್ಲಿ ನೀಡಲಾಗುತ್ತದೆ.
ಈ ಯೋಜನೆಯ ಅರ್ಹತೆಗಳು
ಮಹಿಳಾ ಅಭ್ಯರ್ಥಿಗಳಾಗಿರಬೇಕು ಸಾಮಾನ್ಯ ಮತ್ತು ವಿಶೇಷ ವರ್ಗಗಳಿಗೆ ಸೇರಿರುವಂತಹ ಅಭ್ಯರ್ಥಿಗಳು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಇದಕ್ಕೆ ಕುಟುಂಬದ ವಾರ್ಷಿಕ ಆದಾಯ ಒಂದುವರೆ ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತೆ, ವಿಧವೆ ಅಥವಾ ಅಂಗವಿಕಲರ ಮಹಿಳೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಲ್ಲಾ ವರ್ಗಗಳಿಗೆ ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳನ್ನು ನಿಗದಿಪಡಿಸಲಾಗಿರುವಂಥದ್ದು ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳ ವಿವರವ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಸಾಲ ಪಡೆಯಲು ಬಯಸುವಂಥ ಚಟುವಟಿಕೆಗಳ ತರಬೇತಿ ಪ್ರಮಾಣ ಪತ್ರ
- ಆರ್ಥಿಕ ನೆರವು ಕೋರಿರುವ ಚಟುವಟಿಕೆ ವಿವರವಾದ ಯೋಜನೆ ಸಲ್ಲಿಸಬೇಕಾಗುತ್ತದೆ
- ಪಡಿತರ ಚೀಟಿ
- ಜಾತಿ ಪ್ರಮಾಣ ಪತ್ರ (ಎಸ್ ಸಿ ಎಸ್ ಟಿ)
- ತರಬೇತಿ ಪ್ರಮಾಣ ಪತ್ರ
- ಆರ್ಥಿಕ ನೆರವನ್ನ ಕೋರಿರುವ ಚಟುವಟಿಕೆಯ ವಿವರವಾದ ಯೋಜನೆ ವರದಿ
- ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ
ಈ ಕೆಳಗೆ ಕೊಟ್ಟಿರುವಂತಹ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೊಟ್ಟಿರುವಂತಹ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನ ಆನ್ಲೈನ ಮೂಲಕ ಅಪ್ಲೋಡ್ ಮಾಡುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಒಂದು ಅರ್ಜಿಗೆ ನೀವು ಅರ್ಹರ ಅಥವಾ ಇಲ್ಲವಾ ಅನ್ನುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಅರ್ಹರಾಗಿದ್ದರೆ ಆಯ್ಕೆಯಾದ ನಂತರ ನಿನಗೆ ಇಲ್ಲಿ ಈ ಒಂದು ಯೋಜನೆ ಅಡಿಯಲ್ಲಿ ಬಿಸಿನೆಸ್ ಮಾಡಲು ನಿಮಗೆ ಹಣವನ್ನು ಬ್ಯಾಂಕ್ ಮೂಲಕ ನೇರವಾಗಿ ಸಿಗುತ್ತದೆ.
.
ಇದನ್ನು ಓದಿ :- ಆಸ್ತಿ ನೋಂದಣಿ ಶುಲ್ಕ ಎರಡು ಪಟ್ಟು ಹೆಚ್ಚಳ