Aadhaar Biometric Update : ಭಾರತ ಸರ್ಕಾರದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದೇಶದ ಎಲ್ಲಾ ಶಾಲೆಗಳಿಗೆ ಒಂದು ಮಹತ್ವದ ಆದೇಶವನ್ನು ಹೋರಡಿಸಿದೆ.

15 ವರ್ಷ ವಯಸ್ಸಿನ ಮಕ್ಕಳ ಆಧಾರ್ ಕಾರ್ಡ್ ನಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವುದು ಇನ್ನು ಮುಂದೆ ಕಡ್ಡಾಯ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಮಕ್ಕಳ ಭವಿಷ್ಯದ ಸುರಕ್ಷತೆ ಮತ್ತು ಅನನ್ಯ ಗುರುತನ್ನ ಖಚಿತಪಡಿಸಿಕೊಳ್ಳಲು ಈ ಒಂದು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇದು ಏಕೆ ಅವಶ್ಯಕತೆ ಅನ್ನುವುದರ ಬಗ್ಗೆ
ಚಿಕ್ಕ ಮಕ್ಕಳ ಅಂದರೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬಯೋಮೆಟ್ರಿಕ್ ಮಾಹಿತಿಗಳು ವಯಸ್ಸಿನೊಂದಿಗೆ ಗಣನಿಯವಾಗಿ ಬದಲಾಗುತ್ತದೆ ಆದ್ದರಿಂದ 5 ವರ್ಷ ತುಂಬಿದ ನಂತರ ಮತ್ತು 15 ವರ್ಷ ತಲುಪುವ ಮೊದಲು ಒಮ್ಮೆ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯವಾಗಿದೆ ಇದರಿಂದ ಆಧಾರ್ ಖಾತೆಯ ನಿಖರತೆ ಮತ್ತು ಸುರಕ್ಷತೆ ಉಳಿಯುತ್ತದೆ ಹಾಗೆ ಸರ್ಕಾರಿ ಯೋಜನೆಗಳ ಲಾಭ ನೇರವಾಗಿ ಮತ್ತು ನಿಖರವಾಗಿ ಮಕ್ಕಳಿಗೆ ಲಭಿಸುತ್ತದೆ, ಭವಿಷ್ಯದಲ್ಲಿ ಯಾವುದೇ ಗುರುತಿನ ಸಮಸ್ಯೆಗಳು ಉದ್ಭವಿಸುವುದಿಲ್ಲ.
ಇದನ್ನ ಮಾಡುವುದು ಹೇಗೆ?
ಈ ನವೀಕರಣ ಪ್ರಕ್ರಿಯೆಯನ್ನು ಮಕ್ಕಳಿಗಾಗಿ ಸರಳ ಮತ್ತು ಸುಲಭವಾಗಿದೆ ಯುಐಡಿಎಐ ಶಾಲೆಗಳ ಮೂಲಕವೇ ಸಿಬಿರವನ್ನು ಕೈಗೊಂಡು ಈ ಒಂದು ಯೋಜನೆಯನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
ಶಾಲೆಯ ಪಾತ್ರ
ಭುವನೇಶ್ ಕುಮಾರ್ ಅವರು ತನ್ನ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಶಾಲೆಗಳಲ್ಲಿ ಈ ಬಯೋಮೆಟ್ರಿಕ್ ನವೀಕರಣ ಶಿಬಿರವನ್ನು ಆಯೋಜಿಸಲು ಸಹಕಾರವನ್ನು ಕೋರಿದ್ದಾರೆ.
ಶಿಕ್ಷಣ ಸಚಿವಾಲಯದ ಸಹಯೋಗ
ಶಿಕ್ಷಣ ಸಚಿವಾಲಯವು ಮತ್ತು ” ಶಿಕ್ಷಣ ಪ್ಲಸ್” ಎಂಬ ಡಿಜಿಟಲ್ ವೇದಿಕೆಯ ಮೂಲಕ ಸುಮಾರು 17 ಕೋಟಿ ಮಕ್ಕಳನ್ನು ಈ ಪ್ರಕ್ರಿಯೆಗೆ ಸೇರಿಸಲು ಸಿದ್ಧತೆ ನಡೆಸಿದೆ ಪೋಷಕರ ಪಾತ್ರ ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಇತರ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಶಾಲೆಯಿಂದ ಸೂಚನೆ ಬಂದಾಗ ನವೀಕರಣ ಶಿಬಿರದಲ್ಲಿ ಭಾಗವಹಿಸಲು ಮಗುವನ್ನು ಅನುವು ಮಾಡಿಕೊಡಬೇಕು ಎಂದು ಕೋರಲಾಗಿದೆ.
ಶಿಕ್ಷಣ ಪ್ಲೇಸ್ ಪ್ಲಾಟ್ ಫಾರ್ಮ್ ಎಂದರೇನು?
ಶಿಕ್ಷಣ ಪ್ಲಸ್ ಎಂದರೆ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ ಇದು ಶಿಕ್ಷಣ ಮಂತ್ರಾಲಯದ ಪ್ರಮುಖ ವೇದಿಕೆಯಾಗಿದ್ದು ದೇಶದಲ್ಲಿನ ಪ್ರತಿ ಶಾಲೆ ಮತ್ತು ವಿದ್ಯಾರ್ಥಿಯ ವಿವರವನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುತ್ತೆ ಈ ವೇದಿಕೆಯೊಂದಿಗೆ ಸಂಪರ್ಕಿಸುವ ಮೂಲಕ ಯಾವ ಮಕ್ಕಳಿಗೆ ಬಯೋಮೆಟ್ರಿಕ್ ನವೀಕರಣ ಅಗತ್ಯವಿದೆ ಎಂಬುದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತೆ ಹಾಗಾಗಿ ಈ ಒಂದು ಶಿಕ್ಷಣ ಪ್ಲಸ್ ಪ್ಲಾಟ್ಫಾರ್ಮ್ ಮೂಲಕ ಈ ಒಂದು ವ್ಯವಸ್ಥೆಯನ್ನು ಮಾಡಲಾಗಿದೆ.
ಪೋಷಕರು ಹಾಗೂ ಶಾಲೆಗಳ ಪಾತ್ರ
ಪೋಷಕರಾಗಿ ನಿಮ್ಮ ಮಗು ಅಥವಾ ಮಗಳು ಐದರಿಂದ 15 ವರ್ಷದ ವಯಸ್ಸಿನವರಾಗಿದ್ದರೆ ಅವರ ಆಧಾರ್ ಮಾಹಿತಿನ ನವೀಕರಣ ಮಾಡಿಸಬೇಕಾಗುತ್ತದೆ ಶಾಲೆಯಿಂದ ಬರುವ ಸೂಚನೆಗಳಿಗೆ ಸಜ್ಜಾಗಬೇಕಾಗುತ್ತೆ ಮತ್ತು ನವೀಕರಣ ಶಿಬಿರದಲ್ಲಿ ಯಶಸ್ವಿಯಾಗಿ ಭಾಗವಹಿಸಬೇಕಾಗುತ್ತದೆ ಆಡಳಿತ ಮಂಡಳಿ ಇದಕ್ಕೆ ಸಂಬಂಧಪಟ್ಟಂತೆ ಒಂದು ಶಿಬಿರವನ್ನು ಆಯೋಜಿಸಲು ಸಿದ್ಧರಾಗಬೇಕಾಗುತ್ತದೆ ಪೋಷಕರು ಇದಕ್ಕೆ ಬೇಕಾಗಿರುವಂತಹ ಪ್ರೋತ್ಸಾಹವನ್ನು ಕೊಡಬೇಕಾಗುತ್ತದೆ.
ಪ್ರಮುಖ ಸಾರಾಂಶ ಈ ಪ್ರಕ್ರಿಯೆ ಮಕ್ಕಳ ಭವಿಷ್ಯವನ್ನು ಸುಲಭಗೊಳಿಸಲು ಮತ್ತು ಸುರಕ್ಷಿತಗೊಳಿಸುವ ಒಂದು ಮಹತ್ವದ ಹೆಜ್ಜೆ ಇದಾಗಿದ್ದು ಶಾಲೆಗಳು ಮತ್ತು ಪೋಷಕರು ಜೊತೆ ಜೊತೆಯಾಗಿ ಈ ಒಂದು ಈ ಒಂದು ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ ದೇಶದ ಪ್ರತಿ ಮಗುವಿನ ಆಧಾರ್ ಖಾತೆ ನಿಖರವಾಗಿ ನವೀಕರಣಗೊಳ್ಳುವುದು ಇಲ್ಲಿ ಮುಖ್ಯವಾಗಿ ಇರುವಂತದ್ದು.