ಚರ್ಮಶಿಲ್ಪಿ ಯೋಜನೆಯು ಚರ್ಮದ ಕುಶಲಕರ್ಮಿಗಳ ಉತ್ಪಾದನೆ ವಿಧಾನವನ್ನು ಆಧುನಿಕರಿಸುವ ಗುರಿಯನ್ನು ಹೊಂದಿದೆ ಈ ಯೋಜನೆಯಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು 5 ಲಕ್ಷ ಸಬ್ಸಿಡಿಯಾಗಿ ಹಾಗೂ 5 ಲಕ್ಷ ಬ್ಯಾಂಕ್ ಸಾಲದ ಮೂಲಕ ಈ ಯೋಜನೆಗೆ ಆರ್ಥಿಕ ನೆರವನ್ನ ನೀಡಲಾಗುತ್ತದೆ ಇದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೀಡಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೊನೆಯಲ್ಲಿ ಅರ್ಜಿಯನ್ನ ಸಲ್ಲಿಸುವ ವಿಧಾನದ ಬಗ್ಗೆ ಹಾಗೂ ಅರ್ಜಿ ಸಲ್ಲಿಸುವ ಲಿಂಕನ್ನು ನೀಡಲಾಗಿದ್ದು ಅದನ್ನು ಪರಿಶೀಲಿಸಿ ಅಲ್ಲಿ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಯೋಜನೆಯ ಮುಖ್ಯ ಉದ್ದೇಶ
ಈ ಯೋಜನೆಯ ಮುಖ್ಯ ಉದ್ದೇಶವೇನು ಎಂದರೆ ಕುಶಲಕರ್ಮಿಗಳಿಗೆ ಸ್ವಾಸಾಯ ಸಂಘಗಳು ಮತ್ತು ಸಹಕಾರಿ ಸಂಘಗಳು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಆದ್ದರಿಂದ ಈ ಒಂದು ಯೋಜನೆಯ ಮುಖ್ಯ ಉದ್ದೇಶ ಇವರಿಗೆ ಆರ್ಥಿಕ ನೆರವನ್ನು ಒದಗಿಸುವಂತಹ ಉದ್ದೇಶವನ್ನು ಹೊಂದಿದೆ.
ಯೋಜನೆಯ ಪ್ರಯೋಜನಗಳು
ಚರ್ಮದ ಕುಶಲಕರ್ಮಿಗಳ ಉತ್ಪಾದನಾ ವಿಧಾನವನ್ನು ಆಧುನಿಕರಿಸುವಂತಹ ಉದ್ದೇಶದಿಂದ ಈ ಒಂದು ಯೋಜನೆಯ ಹಲವಾರು ಪ್ರಯೋಜನಗಳನ್ನು ಒಳಗೊಂಡಿದ್ದು ಒಟ್ಟು ಆರ್ಥಿಕ ನೆರವು ಪ್ರತಿ ಯೂನಿಟ್ಟಿಗೆ 10 ಲಕ್ಷದವರೆಗೆ ನೀಡಲಾಗುತ್ತದೆ
-
- 5 ಲಕ್ಷ ಸಬ್ಸಿಡಿ
- 5 ಲಕ್ಷ ಬ್ಯಾಂಕ್ ಸಾಲ
ಯೋಜನೆಗೆ ಅರ್ಹತೆ
ಅರ್ಜಿದಾರರು ಚರ್ಮದ ಕುಶಲಕರ್ಮಿಗಳು
ಕುಶಲಕರ್ಮಿಗಳ ಸ್ವಾಸಹಾಯ ಸಂಘಗಳು ಸಹಕಾರಿ ಸಂಘದವರಾಗಿರಬೇಕು
ಅರ್ಜಿದಾರರು ಉಪ ಜಾತಿಗಳಾದ
ಅರುಂಧತಿಯರ್ , ಚಮ್ಮಾಡಿಯ, ಚಮರ್, ಚಂಬರ್, ಚಮಗರ್ ,ಮಾದರ, ಮಾದಿಗ ಮಾದಿಗ, ಮಿನಿ ಮಾದಿಗ, ಜಾಂಬವಲು , ಹರಳಯ್ಯ , ಮಾಚಿಗರ್, ಮೈಮೋಚಿಗಾರ , ಮೋಜಿ, ಮುಚಿ, ತೆಲುಗು ಮೋಚಿ , ಕಾಮತೀ ಮೋಚ, ರೋಹಿದಾಸ್, ಕಕ್ಕಯ್ಯ ಡಾಕ್ಟರ್ ಪರಿಶಿಷ್ಟ ಜಾತಿಗಳಲ್ಲಿ ಆದಿ ಕರ್ನಾಟಕ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
-
- ಆರ್ ಡಿ ಸಂಖ್ಯೆಯೊಂದಿಗೆ ಜಾತಿ ಪ್ರಮಾಣ ಪತ್ರ
- ವಾರ್ಷಿಕ ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಪಡಿತರ ಚೀಟಿ
- ಅರ್ಜಿದಾರರ ಮತ್ತು ಸಂಗಾತಿಯ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ
- ಈ ಇ ಶ್ರಮ್ ಕಾರ್ಡ್
- ಸ್ವಸಹಾಯ ಸಂಘ ಬ್ಯಾಂಕ್ ಪಾಸ್ ಬುಕ್ ನ ಮೊದಲ ಪುಟ
- ವಿವರವಾದ ಯೋಜನ ವರದಿ
- ಸಾಲದ ದಾಖಲೆ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ವೆಚ್ಚಗಳ ವಿವರಣೆ
- ಯಂತ್ರೋಪಕರಣಗಳಿಗೆ : 3,50,000
- ಕೆಲಸದ ಬಂಡವಾಳಕ್ಕೆ : 6,00000
- ಇತರ ಖರ್ಚುಗಳಿಗೆ: 50,000
ನೋಂದಣಿ ಪ್ರಕ್ರಿಯೆ
-
- ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ
- ಹೊಸ ಬಳಕೆದಾರರು ಇಲ್ಲಿ ನೊಂದಾಯಿಸಿ ಅನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡನ್ನು ಭರ್ತಿ ಮಾಡಿ
- ನಿಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಓಟಿಪಿ ಕಳಿಸಲಾಗುತ್ತೆ. ಇದನ್ನ ನಮೂದಿಸಿ
- ನಂತರ ನಿಮ್ಮ ಡಿಜಿ ಲಾಕರ್ ಖಾತೆಯನ್ನು ರಚಿಸಿದ ನಂತರ ಮುಂದುವರಿಯಲು ಅನುಮತಿಸುವಲು ಕ್ಲಿಕ್ ಮಾಡಿ
- ಅದರ ನಂತರ ನಿಮ್ಮ ಇಮೇಲ್ ಐಡಿ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ ಪಾಸ್ವರ್ಡ್ ರಚಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಎರಡರಲ್ಲೂ ಓಟಿಪಿ ಬರುತ್ತೆ ಅದನ್ನ ನಮೂದಿಸಿ
- ಮೌಲಿಕರಿಸಿದ ನಂತರ ನಿಮ್ಮ ನೊಂದಣಿ ಯಶಸ್ವಿಯಾಗಿದೆ ಎಂದು ದೃಢೀಕರಣ ಸಂದೇಶವು ಸೂಚಿಸುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
- ಸೇವ ಸಿಂಧು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
- ಸಮಾಜ ಕಲ್ಯಾಣ ಇಲಾಖೆ ವಿಭಾಗ ಆಯ್ಕೆ ಮಾಡಿ
- ಚರ್ಮ ಶಿಲ್ಪಿ ಯೋಜನೆ ಮೇಲೆ ಕ್ಲಿಕ್ ಮಾಡಿ
- ಆನ್ಲೈನಲ್ಲಿ ಅರ್ಜಿ ಸಲ್ಲಿಸಿ ಅನ್ನುವುದರ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ನೋಂದಾಯಿತ ಇ-ಮೇಲ್ ಐಡಿ ಮೊಬೈಲ್ ಸಂಖ್ಯೆ ಮತ್ತು ಓಟಿಪಿ ನಮೂದಿಸಿ
- ಅಗತ್ಯವಿರುವಂತೆ ನಿಮ್ಮ ವೈಯಕ್ತಿಕ ವಿಳಾಸ ಮತ್ತು ಬ್ಯಾಂಕಿಂಗ್ ವಿವರವನ್ನು ಒದಗಿಸಿ
- ನಂತರ ನಿಮಗೆ ಅರ್ಜಿ ಐಡಿ ಸಿಗುತ್ತದೆ ಪೋರ್ಟಲ್ನಲ್ಲಿ ನಿಮ್ಮ ಅರ್ಜಿಯನ್ನು ಟ್ರ್ಯಾಕ್ ಮಾಡಲು ನೀವು ಈ ಐಡಿಯನ್ನು ಬಳಸಬಹುದು
ಅಂತಿಮ ತೀರ್ಮಾನ
ಈ ಯೋಜನೆಗೆ ಚರ್ಮಶಿಲ್ಪಿ ಕುಶಲಕರ್ಮಿಗಳು ಅರ್ಜಿಯನ್ನು ಸಲ್ಲಿಸಿ 10 ಲಕ್ಷದವರೆಗೆ ಆರ್ಥಿಕ ನೆರವನ್ನು ಪಡೆದು ತಮ್ಮ ಕೈಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಬಹುದು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.