ನಮಸ್ಕಾರ ರೈತಭಾಂದವರೇ, ಪ್ರತಿಯೊಬ್ಬ ರೈತರು ಕೂಡ ಪಿಎಂ ಕಿಸಾನ್ 22 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ರೈತರ ಈ ಕಾಯುವಿಕೆಗೆ ತೆರೆ ಬಿದ್ದಿದ್ದು, ಇನ್ನು ಕೇವಲ ಒಂದೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ 22 ನೇ ಕಂತಿನ ಹಣವನ್ನು ಜಮಾ ಮಾಡುವುದಾಗಿ ಕೇಂದ್ರ ಸರ್ಕಾರವು ತಿಳಿಸಿ ದೇಶದ ಕೋಟ್ಯಂತರ ರೈತರಿಗೆ ಗುಡ್ ನ್ಯೂಸ್ ನೀಡಿದೆ.
PM Kisan in Kannada
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಣಕಾಸಿನ ನೆರವನ್ನು ನೀಡಿ ಅವರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆಚ್ಚಿನ ಆದಾಯವನ್ನು ಗಳಿಸಿ ಆರ್ಥಿಕವಾಗಿ ಸಬಲರಾಗಲು ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ರೈತರಿಗೆ ವರ್ಷಕ್ಕೆ ₹6,000 ಸಹಾಯಧನ ಸಿಗಲಿದೆ.
ಪಿಎಂ ಕಿಸಾನ್ (PM Kisan) ಯೋಜನೆಯಡಿಯಲ್ಲಿ ಅರ್ಹ ರೈತರ ಬ್ಯಾಂಕ್ ಖಾತೆಗೆ ಈಗಾಗಲೇ 21 ಕಂತುಗಳ ಹಣವು ಯಶಸ್ವಿಯಾಗಿ ಜಮಾ ಆಗಿದ್ದು, ಇನ್ನು ಯಾವಾಗ 22 ನೇ ಕಂತಿನ ಹಣ ಜಮಾ ಆಗಬಹುದು ಎಂದು ರೈತರು ಕಾತುರದಿಂದ ಕಾಯುತ್ತಿದ್ದಾರೆ. ರೈತರ ಈ ಕಾಯುವಿಕೆಗೆ ಇನ್ನು ಒಂದೇ ದಿನಗಳಲ್ಲಿ ತೆರೆ ಬೀಳಲಿದ್ದು, ಸದ್ಯದಲ್ಲೇ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಇದೆ.
ಆದರೆ, ಕೆಲವು ರೈತರ ಬ್ಯಾಂಕ್ ಖಾತೆಗೆ ಇನ್ನು 21ನೇ ಕಂತಿನ ಹಣ ಕೂಡ ಜಮಾ ಆಗಲಿಲ್ಲ. ಇದಕ್ಕೆ ಕರಣ ಏನು? ಇದಕ್ಕೆ ಪರಿಹಾರ ಕಂಡುಕೊಳ್ಳಬಹುದೆ? ಎನ್ನುವುದನ್ನು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಹೊಸ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

ಯೋಜನೆಯ ಅವಲೋಕನ:
| ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ | ಕೇಂದ್ರ ಸರ್ಕಾರ |
| ಯೋಜನೆಯ ಹೆಸರು | ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM KISAN) |
| ಅರ್ಹ ಫಲಾನುಭವಿಗಳು | ರೈತರು |
| ಪಿಎಂ ಕಿಸಾನ್ 22 ನೇ ಕಂತಿನ ಹಣ ಬಿಡುಗಡೆ ಮಾಡುವ ದಿನಾಂಕ | 13-03-2026 |
| ಪಿಎಂ ಕಿಸಾನ್ 22 ನೇ ಕಂತಿನಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವ ಹಣ | ₹2,000 |
| ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ಒಟ್ಟು ಸಹಾಯಧನ | ವರ್ಷಕ್ಕೆ ₹6,000 |
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎಂದರೇನು?
ಭಾರತದ ರೈತರಿಗೆ ಹಣಕಾಸಿನ ನೆರವನ್ನು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರವು ಜಾರಿಗೊಳಿಸದ ಮಹತ್ವಾಕಾಂಕ್ಷೆಯ ಯೋಜನೆಯೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM KISAN). ಈ ಯೋಜನೆಯನ್ನು ಫೆಬ್ರವರಿ 24, 2019 ರಂದು ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ವೆಚ್ಚವನ್ನು ಭರಿಸಲು ಸಹಾಯವಾಗುವಂತೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
ಪಿಎಂ ಕಿಸಾನ್ (PM Kisan) ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಪ್ರತಿ 4 ತಿಂಗಳಿಗೆ ಒಮ್ಮೆ ₹2000 ದಂತೆ ವರ್ಷಕ್ಕೆ 3 ಬಾರಿ ಒಟ್ಟು ₹6000 ದ ವರೆಗೆ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಹಣವು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಯೋಜನೆಯ ಉದ್ದೇಶ:
- ಕೃಷಿ ವೆಚ್ಚವನ್ನು ಭರಿಸಲು ಹಣಕಾಸಿನ ನೆರವು:
ರೈತರು ಕೃಷಿ ಚಟುವಟಿಕೆಯನ್ನು ಮುಂದುವರೆಸಬೇಕಾದರೆ ಉತ್ತಮ ಬೆಳೆಗಳ ಇಳುವರಿ ಬರಬೇಕಾದರೆ ಗುಣಮಟ್ಟದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳನ್ನು ಖರೀದಿ ಮಾಡುವುದು ಅಗತ್ಯವಾಗಿದೆ. ಹಾಗಾಗಿ ರೈತರಿಗೆ ಅವುಗಳನ್ನು ಖರೀದಿ ಮಾಡಲು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಸಹಾಯಧನವನ್ನು ಒದಗಿಸುವುದು.
- ಆರ್ಥಿಕ ಭದ್ರತೆಯನ್ನು ಒದಗಿಸುವುದು:
ಪಿಎಂ ಕಿಸಾನ್ (PM Kisan) ಯೋಜನೆಯಡಿಯಲ್ಲಿ ವರ್ಷಕ್ಕೆ ₹6,000 ಸಹಾಯಧನವನ್ನು ನೀಡುವ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಚಟುವಟಿಕೆಯನ್ನು ಮುಂದುವರೆಸಲು ಅಗತ್ಯವಾದ ಹಣಕ್ಕಾಗಿ ಸಾಲಗಾರರ ಹಿಂದೆ ಅಲೆದಾಡುವುದನ್ನು ತಪ್ಪಿಸುವುದು.
- ಕೃಷಿ ಚಟುವಟಿಕೆಯನ್ನು ಅಧಿನೀಕರಿಸಲು ಉತ್ತೇಜನ ನೀಡುವುದು:
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಒಂದಿಷ್ಟು ಸಹಾಯಧನವನ್ನು ಒದಗಿಸುವ ಮೂಲಕ ಈ ಸಹಾಯಧನವನ್ನು ಬಳಸಿಕೊಂಡು ತಮ್ಮ ಕೃಷಿಯನ್ನು ಆಧುನೀಕರಿಸುವಂತೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯೋಜನೆಯಿಂದ ರೈತರಿಗಾಗಿರುವ ಅನುಕೂಲ:
- ಸಾಕಷ್ಟು ರೈತರು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಸಿಕ್ಕ ಸಹಾಯಧನದಿಂದ ತಮ್ಮ ಕೃಷಿ ಚಟುವಟಿಕೆಯನ್ನು ಆಧುನೀಕರಿಸಿಕೊಂಡು ಕೃಷಿ ಇಳುವರಿಯನ್ನು ಹೆಚ್ಚಿಸಿ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ.
- ಅರ್ಹ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಇಲ್ಲಿಯ ವರೆಗೆ ಒಟ್ಟು ₹42,000 ಸಹಾಯಧನವನ್ನು ಪಡೆದುಕೊಂಡಿದ್ದಾರೆ.
- ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಇಲ್ಲಿಯವರೆಗೂ ದೇಶದಾದ್ಯಂತ ಒಟ್ಟು 9.32 ಕೋಟಿ ಜನ ನೋಂದಾಯಿಸಿಕೊಂಡಿದ್ದು, ಪ್ರತಿ ವರ್ಷ ₹6,000 ಸಹಾಯಧನವನ್ನು ಪಡೆದುಕೊಳ್ಳುತ್ತಿದ್ದಾರೆ.
- ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಹಣಕಾಸಿನ ಸಮಸ್ಯೆಗಳು ಎದುರಾದಾಗ ವರ್ಷಕ್ಕೆ ₹6,000 ದಂತೆ ಪ್ರತಿ ವರ್ಷವು ಸ್ಥಿರ ಆದಾಯವಾಗಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗದಿರಲು ಮುಖ್ಯ ಕಾರಣಗಳು:
- ಅರ್ಹರಲ್ಲದ ರೈತರು ನೋಂದಣಿ:
ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲು ವಿಳಂಬ ಆಗಿರುವ ಮೂಖ್ಯ ಕಾರಣ, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಲ್ಲದ ಸಾಕಷ್ಟು ರೈತರು ಸುಳ್ಳು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿರುವುದು ಹಾಗೂ ಒಂದೇ ಕೃಷಿ ಭೂಮಿಯ ದಾಖಲೆಗಳನ್ನು ಬಳಸಿ ಸಾಕಷ್ಟು ರೈತರು ಯೋಜನೆಗೆ ಅರ್ಜಿ ಸಲ್ಲಿಸಿರುವುದಾಗಿದೆ. ಕೇಂದ್ರ ಸರ್ಕಾರವು ಈ ಎಲ್ಲಾ ಸಮಸ್ಯೆಗಳ ತಡೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಅರ್ಹ ರೈತರ ದಾಖಲೆಗಳನ್ನು ಮರು ಪರಿಶೀಲನೆ ನಡೆಸುತ್ತಿದೆ.
- e-KYC ಪ್ರಕ್ರಿಯೆ ಪೂರ್ಣಗೊಳಿಸದೆ ಇರುವುದು:
ಪಿಎಂ ಕಿಸಾನ್ (PM Kisan) ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆಯಲು ನಿಖರವಾದ ದಾಖಲೆಗಳನ್ನು ಹೊಂದಿದ್ದು ಸಹಾಯಧನವನ್ನು ಪಡೆಯಲು ಅರ್ಹರಾಗಿದ್ದರೂ ಕೂಡ e-KYC ಪ್ರಕ್ರಿಯೆ ಪೂರ್ಣಗೊಳಿಸದೆ ಇರುವುದರಿಂದ ಹಣವನ್ನು ಪಡೆಯಲು ವಿಫಲರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರ್ವರ್ ಬ್ಯುಸಿ ಇರಬಹುದು, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆಗಳಿರಬಹುದು.
- ಆಧಾರ್ ಕಾರ್ಡ್ ಸರಿಯಾಗಿ ಲಿಂಕ್ ಆಗದೆ ಇರುವುದು:
ಯಾವುದೇ ಹಣವನ್ನು ನೇರ ನಗುದು ವರ್ಗಾವಣೆ ಮೂಲಕ ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕಾಗುತ್ತದೆ. ಈ ಒಂದು ಪ್ರಕ್ರಿಯೆ ಸರಿ ಆಗದೆ ಇದ್ದರೆ, ಹಣ ಪಡೆಯಲು ಅರ್ಹರಾಗಿದ್ದರೂ ಕೂಡ ಹಣವನ್ನು ಪಡೆದುಕೊಳ್ಳಲು ವಿಫಲರಾಗುತ್ತಾರೆ.
- ಭೂ ದಾಖಲೆಗಳನ್ನು ಸರಿಯಾಗಿ ಅಪ್ಡೇಟ್ ಮಾಡದೇ ಇರುವುದು:
ರೈತರು ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ತಮ್ಮ ಭೂ ದಾಖಲೆಗಳನ್ನು ಅಪ್ಡೇಟ್ ಮಾಡಿಸದೇ ಇದ್ದರೂ ಕೂಡ ಪಿಎಂ ಕಿಸಾನ್ ನ ಹಣ ಪಡೆಯಲು ಅನರ್ಹರಾಗುತ್ತಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?
ಸಾಕಷ್ಟು ರೈತರು ತಾಂತ್ರಿಕ ಸಮಸ್ಯೆಗಳಿಂದ ಹಾಗೂ ಸರಿಯಾದ ದಾಖಲೆಗಳನ್ನು ನೀಡಿರದೆ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಸಿಗುವ ಸಹಾಯಧನವನ್ನು ಪಡೆದುಕೊಳ್ಳಲು ಅನರ್ಹರಾಗಿದ್ದರೆ, ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎನ್ನವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
- e-KYC ಪ್ರಕ್ರಿಯೆ ಪೂರ್ಣಗೊಳಿಸುವುದು:
ಪಿಎಂ ಕಿಸಾನ್ 22 ನೇ ಕಂತಿನ ಹಣ ಇನ್ನು ಎರಡು ದಿನಗಳಲ್ಲಿ ಬಿಡುಗಡೆ ಆಗುವ ಸಾದ್ಯತೆಗೆಳಿದ್ದು, ನೀವೇನಾದರೂ ಈ- ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಇದ್ದರೆ, ಈ ಕೆಳಗೆ ನೀಡಿರುವ ಎರಡು ವಿಧಾನಗಳಲ್ಲೊಂದರೆಂತೆ ಈ – ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ, e-KYC ಪ್ರಕ್ರಿಯೆ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಆಧಾರ್ ಸಂಖ್ಯೆ ಹಾಗೂ ಒಟಿಪಿ ಬಳಸಿ e-KYC ಪೂರ್ಣಗೊಳಿಸುವುದು. ಅಥವಾ
- ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಬಯೋಮೆಟ್ರಿಕ್ ಪ್ರಕ್ರಿಯೆಯ ಮೂಲಕ ಅಂದರೆ ಬೆರಳಚ್ಚು ಗುರುತು ನೀಡುವ ಮೂಲಕ e-KYC ಪೂರ್ಣಗೊಳಿಸುವುದು.
- ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ನಿಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ಕಾರ್ಡ್ ನೊಂದಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಭೂ ದಾಖಲೆಗಳನ್ನು ಅಪ್ಡೇಟ್ ಮಾಡಿಸಿ.
- ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸರಿಯಾಗಿ ಲಿಂಕ್ ಆಗಿದೆಯೋ? ಇಲ್ಲವೋ? ಎಂದು ನೀವು ಖಾತೆಯನ್ನು ಹೊಂದಿರುವ ಬ್ಯಾಂಕ್ ಗೆ ಹೋಗಿ ಪರಿಶೀಲನೆ ನಡೆಸಿ.
ಪಿಎಂ ಕಿಸಾನ್ 22 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ?
ಪಿಎಂ ಕಿಸಾನ್ (PM Kisan) 21 ನೇ ಕಂತಿನ ಹಣ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿರುವುದರಿಂದ ಮಾರ್ಚ್ ತಿಂಗಳಲ್ಲಿ 22 ನೇ ಕಂತಿನ ಹಣ ಜಮಾ ಆಗುತ್ತದೆ ಎಂದು ನಿರೀಕ್ಷಿಸುತ್ತಿದ್ದರು. ಅದರಂತೆಯೇ 13-03-2026 ರಲ್ಲಿ ಹಣ ಬಿಡುಗಡೆ ಮಾಡುವುದಾಗಿ ಮೋದಿ ಅವರು ಹೇಳಿದ್ದು, ಒಟ್ಟು 18,640 ಕೋಟಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ದೇಶದ ಎಲ್ಲಾ ರೈತರಿಗೂ ಕಡ್ಡಾಯವಾಗಿ e-KYC ಮಾಡಿಸಲು ತಿಳಿಸಲಾಗಿದೆ.
ರೈತರು ತಮ್ಮ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ 22 ನೇ ಕಂತಿನ ಹಣ ಜಮಾ ಆಗಿದೆ ಎನ್ನುವುದನ್ನು ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹಣ ಬಂದಿದೆಯೇ ಎಂದು ಪರಿಶೀಲನೆ ಮಾಡಬಹುದಾಗಿದೆ.
ಅಂತಿಮ ತೀರ್ಮಾನ:
ನಾಳೆಯೇ ಪಿಎಂ ಕಿಸಾನ್ 22 ನೇ ಕಂತಿನ ಹಣ ಜಮಾ ಮಾಡುವುದಾಗಿ ತಿಳಿಸಿದ್ದು, ಎಲ್ಲರೂ ಕಡ್ಡಾಯವಾಗಿ e-KYC ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಲಾಗಿದೆ. ಜೊತೆಗೆ ತಾಂತ್ರಿಕ ಸಮಸ್ಯೆಗಳಿಂದ 22 ನೇ ಕಂತಿನ ಹಣ ಜಮಾ ಆಗದೇ ಇರುವ ರೈತರು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನಂತರದ ಕಂತುಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ಕಂತಿನ ಹಣವನ್ನು ಸೇರಿಸಿ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಪಿಎಂ ಕಿಸಾನ್ (PM Kisan) 22 ನೇ ಕಂತಿನ ಹಣ ಮಾರ್ಚ್ 13, 2026 ರಂದು ಜಮಾ ಆಗಲಿದೆ.
ಅರ್ಹ ಫಲಾನುಭವಿ ರೈತರಿಗೆ ಪಿಎಂ ಕಿಸಾನ್ (PM Kisan) ಯೋಜನೆಯಡಿಯಲ್ಲಿ ವರ್ಷಕ್ಕೆ ₹6,000 ಸಹಾಯಧನ ಪಡೆದುಕೊಳ್ಳಬಹುದಾಗಿದೆ.
ಫಲಾನುಭವಿ ರೈತರಿಗೆ ಪ್ರತಿ ಕಂತಿನಲ್ಲಿ ₹2,000 ಸಹಾಯಧನ ಸಿಗಲಿದೆ.
ಹೌದು, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಹಣ ಪಡೆಯಬೇಕಾದರೆ ಈ- ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ. ಇಲ್ಲದಿದ್ದರೆ ಹಣ ಪಡೆಯಲು ಸಾಧ್ಯವಿಲ್ಲ.
ಇತರೆ ಪ್ರಮುಖ ಲಿಂಕುಗಳು :
- Mobile Canteen: ರೂ. 5 ಲಕ್ಷ ಸಹಾಯಧನ +ಉಚಿತ ತರಬೇತಿ, ನಿರುದ್ಯೋಗಿಗಳಿಗೆ ಸುವರ್ಣಾವಕಾಶ!
- Raita Shakti Yojane: ಕರ್ನಾಟಕದ ರೈತರಿಗೆ ಭರ್ಜರಿ ಗುಡ್ ನ್ಯೂಸ್! ಕೇವಲ FRUITS ID ಇದ್ದರೆ ₹1250 ಸಹಾಯಧನವನ್ನು ಪಡೆದುಕೊಳ್ಳಬಹುದು
- Raitha Vidya Nidhi Scholarship: ₹11,000/-ವಿದ್ಯಾರ್ಥಿ ವೇತನ! ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- Breaking News daari: ರೈತರಿಗೆ ಗುಡ್ ನ್ಯೂಸ್! ಜಮೀನು ದಾರಿ ಬಂದ್ ಮಾಡಿದ್ರೆ ಜೈಲು ಶಿಕ್ಷೆ – 2026ರ ಹೊಸ ಆದೇಶ
- PMVY: ಕುಶಲಕರ್ಮಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ₹3 ಲಕ್ಷ ಸಾಲ + ಉಚಿತ ಟೂಲ್ ಕಿಟ್!

