Raita Shakti Yojane: ಕರ್ನಾಟಕದ ರೈತರಿಗೆ ಭರ್ಜರಿ ಗುಡ್ ನ್ಯೂಸ್! ಕೇವಲ FRUITS ID ಇದ್ದರೆ ₹1250 ಸಹಾಯಧನವನ್ನು ಪಡೆದುಕೊಳ್ಳಬಹುದು

Raita Shakti Yojane

ನಮಸ್ಕಾರ ರೈತ ಭಾಂದವರೇ, ನಾನು ಸಾಲ ಮಾಡಿ ಹಾಗೋ ಹೀಗೋ ಟ್ರಾಕ್ಟರ್ ಅಂತೂ ಖರೀದಿ ಮಾಡಿದೆ. ಆದರೆ, ಟ್ರಾಕ್ಟರ್ ಗೆ ಡೀಸೆಲ್ ಹಾಕಿಸೋಕೆ ಒಂದಿಷ್ಟು ಹಣ ಇಡಬೇಕಲ್ಲಾ ಅಂತ ಯೋಜನೆ ಮಾಡುತ್ತಿದ್ದೀರಾ? ಟ್ರಾಕ್ಟರ್ ಗೆ ಡೀಸೆಲ್ ಹಾಕಿಸೋದೇ ಒಂದು ದೊಡ್ಡ ಹೊರೆಯಾಗಿದೆಯಾ? ಹಾಗಿದ್ದರೆ ಈ ವಿಷಯದ ಕುರಿತು ಇನ್ನು ಚಿಂತೆ ಬೇಡ. ಏಕೆಂದರೆ ಕರ್ನಾಟಕ ಸರ್ಕಾರವು ನಿಮ್ಮ ನೆರವಿಗೆಂದು ಒಂದೊಳ್ಳೆಯ ಯೋಜನೆಯನ್ನು ಜಾರಿಗೆ ತಂದಿದೆ.


Raita Shakti Yojane in kannada

ಹೌದು, ಕರ್ನಾಟಕ ಸರ್ಕಾರವು ರೈತರಿಗೆ ತಮ್ಮ ಟ್ರಾಕ್ಟಾರ್ ಗೆ ಡೀಸೆಲ್ ಹಾಕಿಸಿಕೊಳ್ಳಲು ರೈತ ಶಕ್ತಿ ಯೋಜನೆಯಡಿಯಲ್ಲಿ ಸಹಾಯಧನವನ್ನು ನೀಡುತ್ತಿದ್ದು, ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ ಸಿಗುವ ಸಹಾಯಧನವು ನೇರ ನಗದು ವರ್ಗಾವಣೆ ಮೂಲಕ ನೇರವಾಗಿ ಅರ್ಹ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಯೋಜನೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿದಾರರು ಹೊಂದಿರಬೇಕಾದ ಅರ್ಹತಾ ಮಾನದಂಡಗಳೇನು? ಅರ್ಜಿದಾರರು ಹೊಂದಿರಬೇಕಾದ ಅಗತ್ಯ ದಾಖಲೆಗಳು ಯಾವುದು? ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಎಷ್ಟೆಷ್ಟು ಸಹಾಯಧನ ಸಿಗುತ್ತದೆ?ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ಇದೇ ರೀತಿಯ ರೈತರ ನೆರವಿಗೆಂದೇ ಇರುವ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

Raita Shakti Yojane

ಯೋಜನೆಯ ವಿವರಣಾತ್ಮ ನೋಟ:

ಯೋಜನೆಯನ್ನು ಜಾರಿ ಗೊಳಿಸಿದ ಸರ್ಕಾರ ಕರ್ನಾಟಕ ಸರ್ಕಾರ
ಯೋಜನೆಯ ಹೆಸರು ರೈತ ಶಕ್ತಿ ಯೋಜನೆ (Raita Shakti Yojane)
ಅರ್ಹ ಫಲಾನುಭವಿಗಳು ರೈತರು
ಯೋಜನೆಯಡಿಯಲ್ಲಿ ಸಿಗುವ ಸಹಾಯಧನ ₹1,250
Raita Shakti Yojane

ಏನಿದು ರೈತ ಶಕ್ತಿ ಯೋಜನೆ?

ರೈತ ಶಕ್ತಿ ಯೋಜನೆ (Raita Shakti Yojane) ಯು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಯಂತ್ರೋಪಕರಣಗಳನ್ನು ಬಳಸುವಂತೆ ಉತ್ತೇಜನ ನೀಡಲು ಹಾಗೂ ಯಂತ್ರೋಪಕರಣಗಳ ಬಳಸುವ ರೈತರಿಗೆ ಡೀಸೆಲ್ ಹೊರೆಯನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ರೈತ ಶಕ್ತಿ ಯೋಜನೆಯಡಿಯಲ್ಲಿ ರೈತರು ₹1,250 ವರೆಗೆ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತದೆ. ರೈತರು ಈ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ FRUITS ಪೋರ್ಟಲ್ ಮೂಲಕ ನೋಂದಣಿ ಆಗಿರಬೇಕು.

ಯೋಜನೆಯ ಉದ್ದೇಶ:

  • ಯಾಂತ್ರಿಕರಣಗಳ ಬಳಕೆಗೆ ಉತ್ತೇಜನ:

ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಸಾಂಪ್ರದಾಯಿಕ ಎತ್ತಿನಗಾಡಿ ಗಳನ್ನು ಬಳಸುವ ಬದಲು ಟ್ರಾಕ್ಟರ್ ಗಳನ್ನು ಬಳಸುವಂತೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

  • ಕೃಷಿ ವೆಚ್ಚಗಳನ್ನು ಕಡಿಮೆ ಮಾಡುವುದು:

ಕೃಷಿ ಚಟುವಟಿಕೆಯನ್ನು ನಡೆಸಲು ಅಗತ್ಯವಾದ ಬಿತ್ತನೆ ಬೀಜಗಳ ಹಾಗೂ ಗೊಬ್ಬರಗಳ ಬೆಲೆ ಏರಿಕೆಗೆ ಬೇಸತ್ತ ರೈತರಿಗೆ ಡೀಸೆಲ್ ಬೆಲೆ ಏರಿಕೆಯು ಭಾರೀ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ. ಸರ್ಕಾರವು ಅಂತಹ ರೈತರಿಗೆ ತಮ್ಮ ಟ್ರಾಕ್ಟಾರ್ ಗೆ ಡಿಸೇಲ್ ಹಾಕಿಸಿಕೊಳ್ಳಲು ಸಹಾಯಧನವನ್ನು ನೀಡುವ ಮೂಲಕ ಕೃಷಿ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.

  • ಕೃಷಿ ಉತ್ಪಾದನೆಗೆ ಉತ್ತೇಜನ:

ಸರ್ಕಾರವು ರೈತ ಶಕ್ತಿ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ರೈತರು ತಮ್ಮ ಟ್ರಾಕ್ಟರ್ ಗೆ ಡಿಸೇಲ್ ಹಾಕಿಸಲು ಬೇಕಾದ ಹಣವನ್ನು ಗುಣಮಟ್ಟದ ಬಿತ್ತನೆ ಬೀಜಗಳ ಖರೀದಿಗೆ ಹಾಗೂ ಗೊಬ್ಬರಗಳ ಖರೀದಿಗೆ ಬಳಸುವ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

  • ರೈತರ ಆದಾಯ ಹೆಚ್ಚಳಕ್ಕೆ ಉತ್ತೇಜನ:

ರೈತರಿಗೆ ರೈತ ಶಕ್ತಿ ಯೋಜನೆಯಡಿಯಲ್ಲಿ ಹಣಕಾಸಿನ ನೆರವನ್ನು ನೀಡುವ ಮೂಲಕ ಕೃಷಿ ಉತ್ಪಾದಕತೆ ವೆಚ್ಚವನ್ನು ಕಡಿಮೆ ಮಾಡಿ, ಕಡಿಮೆ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಳಸಿ ಕೃಷಿ ಇಳುವರಿಯನ್ನು ಹೆಚ್ಚಿಸಿ, ರೈತರು ಹೆಚ್ಚಿನ ಆದಾಯ ಗಳಿಸುವಂತೆ ಪ್ರೇರೇಪಿಸುವುದು.

ರೈತರಿಗೆ ಸಿಗುವ ಲಾಭಗಳು:

  • ಹೆಚ್ಚಿನ ಆದಾಯ ಗಳಿಸಲು ಅವಕಾಶ:

ರೈತರು ಕಡಿಮೆ ಕೃಷಿ ವೆಚ್ಚದಲ್ಲಿ, ಉಳಿತಾಯವಾದ ಹಣವನ್ನು ಕೃಷಿಯ ಅಭಿವೃದ್ಧಿ ಕಾರ್ಯಕ್ಕೆ ಬಳಸುವ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿ, ಹೆಚ್ಚಿನ ಆದಾಯವನ್ನು ಗಳಿಸಬಹುದು.

  • ಹಣಕಾಸಿನ ಚಿಂತೆ ಇಲ್ಲದೆ ರಾಜಾರೋಷವಾಗಿ ಯಂತ್ರೋಪಕರಣ ಬಳಸಲು ಅವಕಾಶ:

ಸಾಲ ಸೋಲ ಮಾಡಿ ಯಂತ್ರೋಪಕರಣಗಳನ್ನು ಖರೀದಿಸಿದ ರೈತರಿಗೆ ಡೀಸೆಲ್ ಹಾಕಿಸಲು ಬಾರಿ ಹೊರೆಯಾಗುತ್ತದೆ. ಅಂತಹ ರೈತರು ಈ ಯೋಜನೆಯಡಿಯಲ್ಲಿ ₹1,250 ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಯಂತ್ರೋಪಕರಣಗಳನ್ನು ಯಾವುದೇ ಹಣಕಾಸಿನ ಸಮಸ್ಯೆಯಿಲ್ಲದೆ ಬಳಸಬಹುದಾಗಿದೆ.

  • ಮಧ್ಯವರ್ತಿಗಳ ಹಾವಳಿ ಇಲ್ಲದೆ ಸಹಾಯಧನವನ್ನು ಪಡೆಯಲು ಅವಕಾಶ:

ರೈತ ಶಕ್ತಿ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಸಿಗುವ ಸಹಾಯಧನವು ನೇರ ನಗದು ವರ್ಗಾವಣೆ ಮೂಲಕ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

  • ಎಕ್ಕರೆ ಆಧಾರಿತ ಸಹಾಯಧನವನ್ನು ಪಡೆಯಲು ಅವಕಾಶ:

ರೈತರು ಪ್ರತಿ ಎಕ್ಕರೆಗೆ ₹250 ರಂತೆ ಒಟ್ಟು 5 ಎಕ್ಕರೆಗಳ ವರೆಗೂ ರೈತ ಶಕ್ತಿ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ರೈತ ಶಕ್ತಿ ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ಒಟ್ಟು ಸಹಾಯಧನ:

ರೈತ ಶಕ್ತಿ ಯೋಜನೆ (Raita Shakti Yojane) ಯಡಿಯಲ್ಲಿ ಅರ್ಹ ರೈತರು ಒಂದಿಷ್ಟು ಮಿತಿಯೊಳಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಡಿಯಲ್ಲಿ ದೊಡ್ಡ ರೈತರು ಮಾತ್ರ ಲಾಭವನ್ನು ಪಡೆದುಕೊಳ್ಳದೇ ಕೇವಲ ಒಂದು ಎಕ್ಕರೆ ಅಥವಾ ಎರಡು ಎಕ್ಕರೆಯನ್ನು ಹೊಂದಿರುವ ರೈತರು ಕೂಡ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

  • ರೈತರು ಪ್ರತಿ ಎಕ್ಕರೆಗೆ ₹250 ಸಹಾಯಧನವನ್ನು ಪಡೆದುಕೊಳ್ಳಬಹುದು.
  • ರೈತರು ಒಟ್ಟು 5 ಎಕ್ಕರೆಗೆ ಈ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದ್ದು, ಒಟ್ಟು ₹1,250 ವರೆಗೆ ಸಹಾಯಧನವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತದೆ.
ವಿಶೇಷ ಸೂಚನೆ: “ರೈತರು ಎಷ್ಟೇ ಎಕ್ಕರೆ ಜಮೀನನ್ನು ಹೊಂದಿದ್ದರೂ ಕೂಡ ಕೇವಲ 5 ಎಕ್ಕರೆ ಜಮೀನಿಗೆ ಮಾತ್ರ ರೈತ ಶಕ್ತಿ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.” Raita Shakti Yojane

ಸಹಾಯಧನವನ್ನು ಪಡೆದುಕೊಳ್ಳಲು ರೈತರು ಹೊಂದಿರಬೇಕಾದ ಅರ್ಹತಾ ಮಾನದಂಡಗಳು:

  • ಅರ್ಜಿಸದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರು ರೈತರಾಗಿರಬೇಕು.
  • ರೈತರು ತಮ್ಮ ಹೆಸರಿನಲ್ಲಿ ಕೃಷಿ ಭೂಮಿಯನ್ನು ಹೊಂದಿರಬೇಕು.
  • ಅರ್ಜಿದಾರರು FRUITS ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಆಗಿರಬೇಕು.
  • ರೈತರ ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆಯು ಲಿಂಕ್ ಆಗಿರಬೇಕು.
  • ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಯಂತ್ರೋಪಕರಣಗಳನ್ನು ಬಳಸುತ್ತಿರಬೇಕು.

ರೈತ ಶಕ್ತಿ ಯೋಜನೆ ಅರ್ಜಿ ಸಲ್ಲಿಸುವ ಅಗತ್ಯ ಇದೆಯೇ?

ರೈತರು ಪ್ರತ್ಯೇಕವಾಗಿ ರೈತ ಶಕ್ತಿ ಯೋಜನೆ (Raita Shakti Yojane) ಗೆ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ನೀವು FRUITS ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದರೆ ಸಾಕಾಗುತ್ತದೆ. ಕರ್ನಾಟಕ ಸರ್ಕಾರವು FRUITS ಪೋರ್ಟಲ್ ನಲ್ಲಿರುವ ರೈತರ ಭೂ ದಾಖಲೆಗಳ ಅನ್ವಯ ಅರ್ಹ ಫಲಾನುಭವಿಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ.

ಅರ್ಹ ಫಲಾನುಭವಿಗಳು FRUITS ಐಡಿ ಹೊಂದಿದ್ದರೆ, ಯಾವುದೇ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲದೆ ನೇರ ನಗದು ವರ್ಗಾವಣೆ ಮೂಲಕ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

FRUITS ಪೋರ್ಟಲ್ ನಲ್ಲಿ ನೋಂದಣಿ ಆಗದಿರುವ ರೈತರು ಏನು ಮಾಡಬೇಕು?

ರೈತ ಶಕ್ತಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ ರೈತರು FRUITS ಪೋರ್ಟಲ್ ನಲ್ಲಿ ನೋಂದಣಿ ಆಗುವುದು ಕಡ್ಡಾಯವಾಗಿದೆ. ಒಂದು ವೇಳೆ ನೋಂದಣಿ ಆಗದಿದ್ದರೆ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ.

  • ರೈತರು ಮೊದಲು ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ್ ಒನ್ ಗೆ ಭೇಟಿ ನೀಡಿ.
  • ಅಲ್ಲಿನ ಸಿಬ್ಬಂದಿಗಳಿಗೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಮೀನಿನ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ, ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನೀಡಿ.
  • ನಂತರ ಅವರು ನಿಮ್ಮ ವೈಯಕ್ತಿಕ ಹಾಗೂ ಜಮೀನಿನ ಪಹಣಿ ವಿವರವನ್ನು ಕಂಪ್ಯೂಟರ್ ಮೂಲಕ ಪರಿಶೀಲನೆ ನಡೆಸುತ್ತಾರೆ.
  • ನಂತರ ನಿಮ್ಮ ಗುರುತನ್ನು ಪರೀಶೀಲನೆ ನಡೆಸಲು ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಬಳಸುತ್ತಾರೆ.
  • ನಂತರ, ನೀವು ಸಲ್ಲಿಸಿದ ಎಲ್ಲ ವಿವರಗಳು ಸರಿ ಇದ್ದರೆ, ನಿಮ್ಮನ್ನು FRUITS ಪೋರ್ಟಲ್ ಮೂಲಕ ನೋಂದಾಯಿಸಿ, ನಂತರ ನಿಮಗೆ FRUITS ಐಡಿಯನ್ನು ನೀಡಲಾಗುತ್ತದೆ.

ಅಂತಿಮ ತೀರ್ಮಾನ:

ರೈತರೇ, ಕರ್ನಾಟಕ ಸರ್ಕಾರವು ನಿಮ್ಮ ಕೃಷಿ ಚಟುವಟಿಕೆಗೆ ಆರ್ಥಿಕ ನೆರವನ್ನು ನೀಡಬೇಕು ಎನ್ನವು ಉದ್ದೇಶದಿಂದ ರೈತ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ನೀವು ಕೃಷಿ ಚಟುವಟಿಕೆಯಲ್ಲಿ ಉಪಯೋಗಿಸುವ ಯಂತ್ರೋಪಕರಣಗಳಿಗೆ ಡಿಸೇಲ್ ಹಾಕಿಸಲು ₹1,250 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ನೀವು ಈ ಯೋಜನೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. FRUITS ಪೋರ್ಟಲ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ ಸಾಕಾಗುತ್ತದೆ. ಇದೇ ರೀತಿಯ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ನೀವು ಲಾಭವನ್ನು ಪಡೆದುಕೊಳ್ಳಬೇಕಾದರೆ ನೀವು FRUITS ನೋಂದಾಯಿಸಿಕೊಳ್ಳುವುದು ಕಡ್ಡಾಯ. ಹಾಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮೊದಲು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ರೈತ ಶಕ್ತಿ ಯೋಜನೆ (Raita Shakti Yojane) ಯಡಿಯಲ್ಲಿ ಅರ್ಜಿ ಸಲ್ಲಿಸಲು ಸಣ್ಣ ಹಾಗೂ ದೊಡ್ಡ ರೈತರು ಕೂಡ ಅರ್ಹರಾಗಿರುತ್ತದೆ.

ರೈತ ಶಕ್ತಿ ಯೋಜನೆ (Raita Shakti Yojane) ಯಡಿಯಲ್ಲಿ ರೈತರು 5 ಎಕ್ಕರೆ ಜಮೀನಿಗೆ ಈ ಸಹಾಯಧನವನ್ನು ಪಡೆದುಕೊಳ್ಳಬಹುದು.

ರೈತ ಶಕ್ತಿ ಯೋಜನೆ (Raita Shakti Yojane) ಯಡಿಯಲ್ಲಿ ರೈತರಿಗೆ ಸಿಗುವ ಒಟ್ಟು ಸಹಾಯಧನ ₹1,250.

ರೈತ ಶಕ್ತಿ ಯೋಜನೆಯಡಿಯಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಲು ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಆದರೆ, ಕಡ್ಡಾಯವಾಗಿ FRUITS ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬೇಕಾಗುತ್ತದೆ.


ಇತರೆ ಪ್ರಮುಖ ಲಿಂಕುಗಳು :

Leave a Reply

Your email address will not be published. Required fields are marked *