ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕುಶಲಕರ್ಮಿಗಳಿಗೆ ಹಾಗೂ ಶಿಲ್ಪಿಗಳಿಗೆ ಆರ್ಥಿಕ ನೆರವನ್ನು ಒದಗಿಸಲು ಹಾಗೂ ಅವರ ಕೌಶಲ್ಯಾಭಿವೃದ್ಧಿಯನ್ನು ಬೆಂಬಲಿಸಲು ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಪ್ರೋತ್ಸಾಹಧನವನ್ನು ಜೊತೆಗೆ ಟೂಲ್ ಕಿಟ್ ಅನ್ನು ನೀಡಲಾಗುತ್ತಿದ್ದು, ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
PMVY In Kannada
ಪಿಎಂ ವಿಶ್ವಕರ್ಮ ಯೋಜನೆ(PMVY) ಈಗಾಗಲೇ ಸಾಕಷ್ಟು ಕುಶಲಕರ್ಮಿಗಳ ಪಾಲಿಗೆ ಭರವಸೆಯ ಬೆಳಕಾಗಿದೆ. ಈ ಯೋಜನೆಯಡಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದು, ಇಲ್ಲಿಯವರೆಗೂ 23.09 ಲಕ್ಷ ಕುಶಲಕರ್ಮಿಗಳು ಕೌಶಲ್ಯ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಈ ಯೋಜನೆಯಡಿಯಲ್ಲಿ ಮೇಲಾಧಾರವಿಲ್ಲದೆ ₹3,00,000 ಸಾಲಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು, ಜೊತಗೆ ₹15,000 ಮೌಲ್ಯದ ಟೂಲ್ ಕಿಟ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾದ ಅಗತ್ಯವಾದ ದಾಖಲೆಗಳು, ಅರ್ಹತಾ ಮಾನದಂಡ ಈ ಎಲ್ಲಾ ಮಾಹಿತಿಗಳನ್ನು ಕೆಳಗಿನ ಹಂತದಲ್ಲಿ ನೀಡಲಾಗಿದ್ದು, ಅರ್ಹ ಫಲಾನುಭವಿಗಳು ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ, ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಪಿಎಂ ವಿಶ್ವಕರ್ಮ ಯೋಜನೆ (PMVY) |
| ಅರ್ಹ ಫಲಾನುಭವಿಗಳು | ಕುಶಲಕರ್ಮಿಗಳು |
| ಒಟ್ಟು ಸಾಲ ಸೌಲಭ್ಯ | 5% ಬಡ್ಡಿ ದರದಲ್ಲಿ ₹3,00,000 ಸಾಲ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಏನಿದು ಪಿಎಂ ವಿಶ್ವಕರ್ಮ (PMVY) ಯೋಜನೆ?
ಕುಶಲಕರ್ಮಿಗಳ ಉದ್ಯೋಗ ಮಟ್ಟವನ್ನು ಸುಧಾರಿಸಲು ನರೇಂದ್ರ ಮೋದಿಯವರು ಸೆಪ್ಟೆಂಬರ್ 17, 2023 ರಲ್ಲಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯು 5 ವರ್ಷಗಳ ವರೆಗೆ ಅಂದರೆ 2027-28 ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಯೋಜನೆಯು ಕುಶಲಕರ್ಮಿಗಳ ಸಾಮಾಜಿಕ ಸ್ಥಿತಿ ಹಾಗೂ ಜೀವನ ಮಟ್ಟವನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ.
ಈ ಯೋಜನೆಯ ಗುರಿ:
- ಕುಶಲಕರ್ಮಿಗಳು ತಮ್ಮ ಉದ್ಯೋಗವನ್ನು ವಿಸ್ತರಿಸಬೇಕಾದರೆ ಹಣಕಾಸಿನ ಅಗತ್ಯವಿರುತ್ತದೆ. ಅದಕ್ಕಾಗಿ ದುಬಾರಿ ಬಡ್ಡಿ ದರದಲ್ಲಿ ಸಾಲಪಡೆಯುಸುತ್ತಾರೆ. ಇದನ್ನು ತಪ್ಪಿಸಲು ಸರ್ಕಾರವೇ ಕಡಿಮೆ ಬಡ್ಡಿದರದಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಶಲಕರ್ಮಿಗಳಿಗೆ ಸಾಲಸೌಲಭ್ಯವನ್ನು ಒದಗಿಸುವ ಮೂಲಕ ಅವರ ನೆರವಿಗೆ ನಿಂತಿದೆ.
- ಆಧುನಿಕ ಜಗತ್ತಿನಲ್ಲಿ ಸಾಂಪ್ರದಾಯಕ ಕಲೆ ಮತ್ತು ಕೌಶಲ್ಯಗಳನ್ನು ಉಳಿಯುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.
- ₹15,000 ಮೌಲ್ಯದ ಟೂಲ್ ಕಿಟ್ ಉಚಿತವಾಗಿ ನೀಡುವ ಮೂಲಕ ಹಳೆಯ ಪದ್ದತಿಗೆ ಗುಡ್ ಬಾಯ್ ಹೇಳಿ ಆಧುನಿಕ ಉಪಕರಣಗಳನ್ನು ಬಳಸುವಂತೆ ಮಾಡುವುದು.
- ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾತ್ರ ಮಾರಾಟಮಾಡುವ ಬದಲು ಆನ್ಲೈನ್ ಮೂಲಕ ದೇಶ-ವಿದೇಶಗಳಿಗೆ ಮಾರಾಟಮಾಡುವಂತೆ ಬ್ರಾಂಡಿಂಗ್ ಮತ್ತು ಪ್ಯಾಕೆಜಿಂಗ್ ನೆರವನ್ನು ನೀಡುವುದು.
ಯೋಜನೆಯ ಪ್ರಯೋಜನ:
- ಕುಶಲಕರ್ಮಿಗಳಿಗೆ 5% ಬಡ್ಡಿ ದರದಲ್ಲಿ ₹3,00,000 ಸಾಲ ಸೌಲಭ್ಯ ನೀಡಲಾಗುವುದು.
- ಅರ್ಹ ಫಲಾನುಭವಿಗಳಿಗೆ ಉಚಿತ ತರಬೇತಿ ನೀಡಲಾಗುವುದು ಮತ್ತು ಇದರ ಜೊತೆಗೆ ಪ್ರತಿ ದಿನಕ್ಕೆ ₹500 ರಂತೆ ಸ್ಟೈಫಂಡ್ ನೀಡಲಾಗುವುದು.
- ಅರ್ಹ ಫಲಾನುಭವಿಗಳಿಗೆ ₹15,000 ಮೌಲ್ಯದ ಉಚಿತ ಟೂಲ್ ಕಿಟ್ ನೀಡಲಾಗುವುದು.
ಅರ್ಹ ಫಲಾನುಭವಿಗಳಿಗೆ ಉಚಿತ ತರಬೇತಿ:
ಕೇಂದ್ರ ಸರ್ಕಾರವು ಪಿಎಂ ವಿಶ್ವಕರ್ಮ(PMVY) ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದ್ದು, ತರಬೇತಿಯು ಎರಡು ಹಂತದಲ್ಲಿ ನಡೆಯುತ್ತದೆ. ಸಾಲ ಸೌಲಭ್ಯ ಪಡೆಯಬೇಕಾದರೆ ಫಲಾನುಭವಿಗಳು ಈ ತರಬೇತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
- ಅರ್ಹ ಫಲಾನುಭವಿಗಳು ಮೊದಲು 5 ರಿಂದ 7 ದಿನಗಳ ಮೂಲಭೂತ ತರೆಬೇತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ತರಬೇತಿಯಲ್ಲಿ ಪ್ರಸ್ತುತ ಕೌಶಲ್ಯವನ್ನು ಆಧುನೀಕರಿಸುವುದು ಹಾಗೂ ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವುದಾಗಿದೆ. ಮೊದಲ ಹಂತದ ಸಾಲವನ್ನು ಪಡೆಯಬೇಕಾದರೆ ಈ ತರಬೇತಿ ಕಡ್ಡಾಯವಾಗಿರುತ್ತದೆ.
- ನಂತರ, 15 ಅಥವಾ ಅದಕ್ಕಿಂತ ಹೆಚ್ಚಿನ ದಿನಗಳ ಸುಧಾರಿತ ತರಬೇತಿಯನ್ನು ನೀಡಲಾಗುವುದು, ಈ ತರಬೇತಿಯಲ್ಲಿ ಉದ್ಯಮಶೀಲತೆ, ವ್ಯವಹಾರ ವಿಸ್ತರಣೆಯ ಕುರಿತು ತರಬೇತಿ ನೀಡಲಾಗುತ್ತದೆ. ಎರಡನೆಯ ಹಂತದಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಈ ತರಬೇತಿ ಅಗತ್ಯವಾಗಿರುತ್ತದೆ.
“ಅರ್ಹ ಫಲಾನುಭವಿಗಳಿಗೆ ತರಬೇತಿಯ ಸಮಯದಲ್ಲಿ ಪ್ರತಿ ದಿನಕ್ಕೆ ₹500 ರಂತೆ ಸ್ಟೈಫಂಡ್ ನೀಡಲಾಗುವುದು.”
ಪಿಎಂ ವಿಶ್ವಕರ್ಮ ಸಾಲ ಸೌಲಭ್ಯಗಳ ವಿವರ:
ಅರ್ಹ ಫಲಾನುಭವಿಗಳಿಗೆ ಈ ಒಂದು ಯೋಜನೆಯಡಿಯಲ್ಲಿ ₹3,00,000 ಸಾಲ ಸೌಲಭ್ಯವನ್ನು ನೀಡುತ್ತಿದ್ದು, ಒಟ್ಟು ಎರಡು ಹಂತಗಳಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಬಗ್ಗೆ ಈ ಕೆಳಗೆ ನೀಡಲಾಗಿದೆ,
ಮೊದಲ ಹಂತ:
ವಿಶ್ವಕರ್ಮ ಯೋಜನೆಯಡಿಯಲ್ಲಿ(PMVY) ಅರ್ಹ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ₹1 ಲಕ್ಷ ಸಾಲ ಸೌಲಭ್ಯವನ್ನು ಒದಗಿಸಲಾಗಿದ್ದು, ಒಟ್ಟು 18 ತಿಂಗಳುಗಳ ಮರುಪಾವತಿ ಅವಧಿಯನ್ನು ನಿಗದಿಪಡಿಸಲಾಗಿದೆ.
ಎರಡನೇ ಹಂತ:
ಮೊದಲ ಹಂತದಲ್ಲಿ ಪಡೆದ ಸಾಲವನ್ನು ಸರಿಯಾದ ಅವಧಿಯಲ್ಲಿ ಮರುಪಾವತಿಸಿದ ಫಲಾನುಭವಿಗಳಿಗೆ ಎರಡನೆಯ ಹಂತದಲ್ಲಿ ₹2 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಹಾಗೂ ಸಾಲ ಮರುಪಾವತಿಸಲು 20 ತಿಂಗಳು ಕಾಲಾವಕಾಶವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆಗಳೇನು?
- PMVY ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೈ ಹಾಗೂ ಉಪಕರಣಗಳನ್ನು ಬಳಸಿ ಕೆಲಸ ಮಾಡುವ ಕುಶಲಕರ್ಮಿಗಳಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 5 ವರ್ಷಗಳ ಹಿಂದೆ ಸರ್ಕಾರದ ಯಾವುದೇ ಸಾಲ-ಸೌಲಭ್ಯವನ್ನು ಪಡೆದುಕೊಂಡಿರಬಾರದು.
- ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
| “ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಹುದ್ದೆಯಲ್ಲಿದ್ದರೆ, ಆ ಕುಟುಂಬ ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಲು ಅರ್ಹವಲ್ಲ.” |
ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಹೊಂದಿರಬೇಕಾದ ಅಗತ್ಯ ದಾಖಲೆಗಳು:
ಈ ಯೋಜನೆಗೆ (PMVY) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕುಶಲಕರ್ಮಿಗಳಾಗಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ಎಲ್ಲಾ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಡಿತರ ಚೀಟಿ
- ಇತ್ತೀಚಿನ ಪಾಸ್ಪೋರ್ಟ್ ಸೈಟ್ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಸಕ್ರಿಯ ಮೊಬೈಲ್ ಸಂಖ್ಯೆ
- ವೃತ್ತಿಯ ಕುರಿತು ಸ್ವಯಂ ಘೋಷಣಾ ಪತ್ರ
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಈ ಯೋಜನೆಯಡಿಯಲ್ಲಿ (PMVY) ಲಾಭವನ್ನು ಪಡೆದುಕೊಳ್ಳಬೇಕಾದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :
- ಪಿಎಂ ವಿಶ್ವಕರ್ಮ ಅಧಿಕೃತ ವೆಬ್ಸೈಟ್ https://pmvishwakarma.gov.in/ ಗೆ ಭೇಟಿ ನೀಡಿ.
- ಆಧಾರ್ ಸಂಖ್ಯೆಯನ್ನು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಿ.
- ನಂತರ ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
- ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತಗೆದುಕೊಳ್ಳಿ.
ಕೊನೆಯ ನುಡಿ:
| ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಸಾಲ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ, ಮೇಲೆ ನೀಡಲಾದ ತರಬೇತಿಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ. ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. |
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಫಲಾನುಭವಿಗಳು ಹೊಂದಿರಬೇಕಾದ ಕನಿಷ್ಠ ವಯೋಮಿತಿ 18 ವರ್ಷ.
ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ₹3,00,000 ದ ವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಇಲ್ಲ, ಸಾಲ ಸೌಲಭ್ಯ ಪಡೆಯಲು ಸಾಧ್ಯವಿಲ್ಲ.
ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಸಿಗುವ ಟೂಲ್ ಕಿಟ್ ನ ಒಟ್ಟು ಮೌಲ್ಯ ₹15,000 ದ್ದಾಗಿದೆ.
ಇತರೆ ಪ್ರಮುಖ ಲಿಂಕುಗಳು:
- PM-KISAN: PM ಕಿಸಾನ್ 22ನೇ ಕಂತು ಬಿಡುಗಡೆ ಯಾವಾಗ? ಸರ್ಕಾರದ ಅಧಿಕೃತ ಮಾಹಿತಿ ಇಲ್ಲಿದೆ!
- PMKSY: ನಿಮ್ಮ ಜಮೀನಿಗೆ ಡ್ರಿಪ್ ಮತ್ತು ಸ್ಪ್ರಿಂಕ್ಲರ್ ಅಳವಡಿಸಲು 90% ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ
- ಹೆಣ್ಣುಮಕ್ಕಳ ಭವಿಷ್ಯ ನೋಡಿ! ಸ್ಕೀಮ್ ಮಾಡಿ ಕೇವಲ ರೂ 250/- ಪಾವತಿಸುವ ಮೂಲಕ ₹ 55.43 ಲಕ್ಷ ಪಡೆಯಿರಿ!

