UPSC/KAS Free Coaching

ನಮಸ್ಕಾರ ರೈತಬಾಂಧವರೇ, ನೀವೇನಾದರೂ ನಿಮ್ಮ ಕೃಷಿಗೆ ಸರಿಯಾದ ನೀರಾವರಿ ಸೌಲಭ್ಯ ಇಲ್ಲವೆಂದು ಚಿಂತೆ ಮಾಡುತ್ತಿದ್ದೀರಾ? ನಿಮ್ಮ ಕೃಷಿ ಭೂಮಿಯಲ್ಲಿ ತೆರೆದ ಕಾಲುವೆ ನೀರಾವರಿ ವ್ಯವಸ್ಥೆ ಇರುವುದರಿಂದ ಹೆಚ್ಚಿನ ನೀರು ಪೋಲಾಗುತ್ತಿದೀಯಾ? ಇದರಿಂದಾಗಿ ಬೇಸಿಗೆಯ ಸಮಯದಲ್ಲಿ ನೀರಿನ ಅಭಾವ ಉಂಟಾಗುತ್ತಿದೀಯಾ? ಹಾಗಿದ್ದರೆ ಇನ್ನು ನಿಮಗೆ ಈ ವಿಷಯದ ಕುರಿತು ಚಿಂತೆ ಬೇಡ.

ಈ ಮೇಲಿನ ಎಲ್ಲಾ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಿಮಗೊಂದು ಸುವರ್ಣಾವಕಾಶ ಲಭಿಸಿದೆ. ಅದೇನೆಂದರೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)ಯಡಿಯಲ್ಲಿ ನಿಮ್ಮ ಕೃಷಿ ಭೂಮಿಗೆ ಉತ್ತಮ ನೀರಾವರಿ ಸೌಲಭ್ಯವನ್ನು ಒದಗಿಸಲು ಸರ್ಕಾರವು ಸಬ್ಸಿಡಿ ಸಹಾಯಧನವನ್ನು ನೀಡುತ್ತಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಈಗಾಗಲೇ ಸಾಕಷ್ಟು ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಈ ಒಂದು ಲೇಖನದಲ್ಲಿ ಈ ಯೋಜನೆಯಡಿಯಲ್ಲಿ ಎಷ್ಟು ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದು? ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಈ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು? ಎನ್ನುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದು, ನೀವೇನಾದರೂ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕೆಂದಿದ್ದರೆ ಇಂದೇ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. ರೈತರ ನೆರವಿಗೆಂದೇ ಇರುವ ಇನ್ನಷ್ಟು ಯೋಜನೆಗಳ ಬಗೆಗಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

ಯೋಜನೆಯ ಕಿರು ಚಿತ್ರಣ:

ಯೋಜನೆಯ ಹೆಸರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
ಅರ್ಹ ಫಲಾನುಭವಿಗಳು ರೈತರು
ರೈತರಿಗೆ ಸಿಗುವ ಲಾಭ ಸ್ಪ್ರಿಂಕ್ಲರ್ ಅಳವಡಿಸಲು 90% ವರೆಗೆ ಸಬ್ಸಿಡಿ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮತ್ತು ಆಫ್ಲೈನ್
ಯೋಜನೆಯ ಉದ್ದೇಶ ಕೃಷಿ ಚಟುವಟಿಕೆಯಲ್ಲಿ ಆಧುನೀಕೃತ ನೀರಾವರಿ ಸೌಲಭ್ಯವನ್ನು ಒದಗಿಸುವುದು

ಏನಿದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ?

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದೊಂದಿಗೆ ಜಾರಿಯಾದ ಮಹತ್ತರ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಆಧುನೀಕೃತ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಸಾಕಷ್ಟು ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ನೀರುಣಿಸಲು ಮಳೆ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಮಳೆ ನೀರನ್ನೇ ಅವಲಂಬಿತರಾಗಿರುವ ರೈತರಿಗೆ ಬೇಸಿಗೆ ಕಾಲಗಳಲ್ಲಿ ನೀರಿನ ಅಭಾವದಿಂದಾಗಿ ಹೆಚ್ಚಿನ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಇದನ್ನು ಗಮನಿಸಿದ ಸರ್ಕಾರವು ರೈತರ ಕೃಷಿ ಭೂಮಿಗೆ ಉತ್ತಮ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ರೈತರು ತಮ್ಮ ಕೃಷಿ ಭೂಮಿಗೆ ತುಂತುರು ನೀರಾವರಿ (Sprinkler) ಮತ್ತು ಹನಿ ನೀರಾವರಿ (Drip) ಅಳವಡಿಸಲು ಭಾರಿ ಮೊತ್ತದ ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಉದ್ದೇಶ:

1. ಕೃಷಿ ಚಟುವಟಿಕೆಯನ್ನು ಆಧುನೀಕರಿಸುವುದು:

  • ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ರೈತರಿಗೆ ತುಂತುರು ಹಾಗೂ ಹನಿ ನೀರಾವರಿಯಂತಹ ಆಧುನೀಕೃತ ನೀರಾವರಿ ಸೌಲಭ್ಯವನ್ನು ಅಳವಡಿಸಲು 45% ಇಂದ 90% ವರೆಗೆ ಸಬ್ಸಿಡಿ ಸಹಾಯಧನವನ್ನು ನೀಡುವ ಮೂಲಕ ಕೃಷಿ ಚಟುವಟಿಕೆಯನ್ನು ಅದೋನೀಕರಿಸಲು ಉತ್ತೇಜನವನ್ನು ನೀಡುವುದು.

2. ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವುದು:

  • ರೈತರಿಗೆ ಈ ಒಂದು ಯೋಜನೆಯಡಿಯಲ್ಲಿ ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಳೆ ನೀರಿನ ಮೇಲಿನ ಅವಲಂಬನೆಯನ್ನು ತಪ್ಪಿಸಿ ವರ್ಷಕ್ಕೆ ಒಂದು ಬೆಳೆಗಳನ್ನು ಬೆಳೆಯುವ ಬದಲು 2-3 ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡುವುದು.

3. ನೀರಿನ ಸುರಕ್ಷಿತ ಬಳಕೆ ಪ್ರೋತ್ಸಾಹ ನೀಡುವುದು:

ರೈತರಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಲು ಉತ್ತೇಜನ ನೀಡುವ ಮೂಲಕ ನೀರಿನ ಪೋಲಾಗುವಿಕೆಯನ್ನು ತಡೆಗಟ್ಟಬಹುದಾಗಿದೆ.

ತುಂತುರು ಹಾಗೂ ಹನಿ ನೀರಾವರಿಯನ್ನು ಅಳವಡಿಸಲು ರೈತರಿಗೆ ಸಿಗುವ ಸಬ್ಸಿಡಿ ಸಹಾಯಧನ ಎಷ್ಟು?

ವಿವಿಧ ವರ್ಗಗಳ ರೈತರಿಗೆ ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯವನ್ನು ಅಳವಡಿಸಲು ಬೇರೆ ಬೇರೆ ಸಬ್ಸಿಡಿ ಸಹಾಯಧನವನ್ನು ಸರ್ಕಾರವು ನೀಡುತ್ತಿದ್ದು, ಅದಕ್ಕೆ ಸಂಬಂಧಿಸಿದ ವಿವರ ಈ ಕೆಳಕಂಡಂತಿದೆ.

  • ಸಾಮಾನ್ಯ ವರ್ಗದ ರೈತರು ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಅಳವಡಿಸಲು ಸರ್ಕಾರದಿಂದ 45% ಸಬ್ಸಿಡಿ ಸಹಾಯಧನವನ್ನು ಪಡೆದುಕೊಳ್ಳುತ್ತಾರೆ.
  • ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಅಳವಡಿಸಲು ಸರ್ಕಾರದಿಂದ 55% ಸಬ್ಸಿಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಗಳ ರೈತರಿಗೆ ತಮ್ಮ ಕೃಷಿ ಭೂಮಿಗೆತುಂತುರು ನೀರಾವರಿ ಹಾಗೂ ಹನಿ ನೀರಾವರಿಯನ್ನು ಅಳವಡಿಸಲು ಸರ್ಕಾರದಿಂದ 90% ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ರೈತರು ಕೇವಲ 10% ಹಣವನ್ನು ಪಾವತಿ ಮಾಡಿದರೆ ಸಾಕಾಗುತ್ತದೆ.

ರೈತರು ತಮ್ಮ ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಅಳವಡಿಸುವುದರಿಂದ ಸಿಗುವ ಪ್ರಯೋಜನಗಳು:

1. ನೀರಿನ ಉಳಿತಾಯ:

ರೈತರು ತಮ್ಮ ಕೃಷಿ ಭೂಮಿಗೆ ಕಾಲುವೆ ನೀರಿನಂತಹ ಸಾಂಪ್ರದಾಯಿಕ ನೀರಾವರಿ ಸೌಲಭ್ಯದ ಬದಲು ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯವನ್ನು ಅಳವಡಿಸುವ ಮೂಲಕ ನೀರಿನ ವ್ಯರ್ಥವನ್ನು ತಡೆದು ಶೇಕಡಾ 40% ಇಂದ 70% ನೀರನ್ನು ಉಳಿತಾಯ ಮಾಡಬಹುದು.

2. ಬೆಳೆಗಳ ಇಳುವರಿ ಹೆಚ್ಚಳ:

ರೈತರು ತಮ್ಮ ಕೃಷಿ ಭೂಮಿಗೆ ತುಂತುರು ಹಾಗೂ ಹನಿ ನೀರಾವರಿಯನ್ನು ಅಳವಡಿಸುವುದರಿಂದ ನೀರು ನೇರವಾಗಿ ಬೆಳೆಗಳಿಗೆ ಹೋಗಿ ಬೆಳೆಗೆ ಅಗತ್ಯವಾಗುವಷ್ಟು ನೀರು ನಿರಂತರವಾಗಿ ಸಿಗುವುದರಿಂದ ಬೆಳೆಗಳ ಇಳುವರಿಯೂ ಹೆಚ್ಚುತ್ತದೆ. ಇದರಿಂದಾಗಿ ರೈತರ ಆದಾಯವು ವೃದ್ಧಿಯಾಗುತ್ತದೆ.

3. ಕಾರ್ಮಿಕರಿಗೆ ಕೂಲಿ ಹಣ ಪಾವತಿಸುವ ಚಿಂತೆ ಇಲ್ಲ:

ರೈತರು ತಮ್ಮ ಕೃಷಿ ಭೂಮಿಗೆ ತುಂತುರು ಹಾಗೂ ಹನಿ ನೀರಾವರಿ ಅಳವಡಿಸುವುದರಿಂದ ತಮ್ಮ ಕೃಷಿ ಭೂಮಿಗೆ ಗಂಟೆ ಗಟ್ಟಲೆ ನೀರನ್ನು ಉಣಿಸಲು ಕಾರ್ಮಿಕರಿಗೆ ಜವಾಬ್ದಾರಿ ವಹಿಸುವ ಅಗತ್ಯ ಇರುವುದಿಲ್ಲ. ಇದರಿಂದಾಗಿ ಕಾರ್ಮಿಕರ ಕೂಲಿ ಹಣವನ್ನು ಉಳಿತಾಯ ಮಾಡಬಹುದು.

4. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು:

ರೈತರು ತಮ್ಮ ಕೃಷಿ ಭೂಮಿಗೆ ತುಂತುರು ಹಾಗೂ ಹನಿ ನೀರಾವರಿಯನ್ನು ಅಳವಡಿಸುವ ಮೂಲಕ ನೀರು ಅಲ್ಲಲ್ಲಿ ನಿನ್ನುವುದಿಲ್ಲ ಇದರಿಂದಾಗಿ ಮಣ್ಣಿನ ಮೇಲ್ಪದರವು ಕೊಚ್ಚಿ ಹೋಗುವುದಿಲ್ಲ ಹಾಗೂ ಮಣ್ಣು ಚೌಳು ಆಗುವುದಿಲ್ಲ. ಬದಲಾಗಿ ಮಣ್ಣು ಹೆಚ್ಚಿನ ಪಲವತ್ತತೆಯಿಂದ ಕೂಡಿರುತ್ತದೆ.

Leave a Reply

Your email address will not be published. Required fields are marked *