‘ಶಕ್ತಿ’ ಯೋಜನೆಗೆ ಡಿಜಿಟಲ್ ಟಚ್ – ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಕಾರ್ಡ್! ಅರ್ಜಿ ಸಲ್ಲಿಸೋದು ಹೇಗೆ?

Shakti Scheme Smart Card

ಕರ್ನಾಟಕ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿಯ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ ಇದೀಗ ಡಿಜಿಟಲ್ ಟಚ್ ಕೊಡಲು ಸರ್ಕಾರ ಮುಂದಾಗಿದೆ.

Shakti Scheme Smart Card in Kannada


ಹೌದು ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಮಾಡಲು ಮುಂದಾಗಿರುವ ಸರ್ಕಾರ ಮಹಿಳೆಯರಿಗೆ ಈ ಸ್ಮಾರ್ಟ್ ಕಾರ್ಡ್ ವಿತರಣೆಯಿಂದ ಆಧಾರ್ ಕಾರ್ಡ್ ಬಳಕೆಯನ್ನು ನಿಷೇಧಿಸಲಾಗುತ್ತದೆ. ನಂತರ ಕಡ್ಡಾಯವಾಗಿ ಈ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಿ ಶಕ್ತಿ ಯೋಜನೆಯ ಉಚಿತ ಲಾಭವನ್ನು ಪಡೆದುಕೊಳ್ಳಬಹುದು.

ಹಾಗಾದರೆ ಈ ಉಚಿತ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ? ಎಲ್ಲಿ ಸಿಗುತ್ತದೆ? ಹೇಗೆ ಅಪ್ಲಿಕೇಶನ್ ಹಾಕುವುದು? ಯಾರು ಅರ್ಹರು? ಈ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಸಂಪೂರ್ಣವಾಗಿ ನೀಡಲಾಗಿದ್ದು ಶಕ್ತಿ ಯೋಜನೆಯ ಲಾಭ ಪಡೆಯುವ ಮಹಿಳಾ ಅಭ್ಯರ್ಥಿಗಳು ಈ ಯೋಜನೆಗೆ ಯೋಜನೆಯ ಬಗ್ಗೆ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಯೋಜನೆಯ ಬಗ್ಗೆ:

‘ಶಕ್ತಿ’ ಯೋಜನೆಯು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು ಇದರ ಮೂಲಕ ಕರ್ನಾಟಕದ ಮಹಿಳೆಯರು ಸೇರಿದಂತೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಬಸ್ ಪ್ರಯಾಣವನ್ನ ಮಾಡಲು ಜಾರಿಗೆ ತಂದಿರುವಂತ ಯೋಜನೆ ಇದಾಗಿದೆ.

ಈ ಯೋಜನೆಯ ಮೂಲಕ ಕರ್ನಾಟಕದ ಮಹಿಳೆಯರಿಗೆ ರಾಜ್ಯ ಸರ್ಕಾರ ಕೊಟ್ಟಿರುವಂತಹ ಒಂದು ಭರ್ಜರಿ ಗುಡ್ ನ್ಯೂಸ್ ಇದಾಗಿದ್ದು ಈ ಶಕ್ತಿ ಯೋಜನೆಗೆ ಇದೀಗ ಮತ್ತೊಂದು ಹೊಸ ರೂಪವನ್ನು ತರಲು ಸರ್ಕಾರ ಮುಂದಾಗಿದೆ.

ಸ್ಮಾರ್ಟ್ ಕಾರ್ಡ್ ನೀಡುವುದರ ಹಿಂದಿನ ಉದ್ದೇಶ:

ಪ್ರಯಾಣಿಕರಿಗೆ ಸುಲಭ ಮತ್ತು ಸುರಕ್ಷಿತವಾದ ಪ್ರಯಾಣವನ್ನ ಮಾಡಲು ಈ ಸ್ಮಾರ್ಟ್ ಕಾರ್ಡ್ ಬಳಕೆಯನ್ನು ಜಾರಿಗೆ ತರಲು ಮುಂದಾಗಿದೆ, ಆಧಾರ್ ಕಾರ್ಡ್ ಕಳೆದುಕೊಳ್ಳುವಂತಹ ಅಥವಾ ದುರ್ಬಳಕೆ ಮಾಡುವಂತಹ ಸಮಸ್ಯೆಯ ನಿವಾರಣೆಯನ್ನು ಈ ಸ್ಮಾರ್ಟ್ ಕಾರ್ಡ್ ಬಳಕೆಯಿಂದ ತಪ್ಪಿಸಬಹುದು.

ಡಿಜಿಟಲ್ ವ್ಯವಸ್ಥೆಯ ಮೂಲಕ ಸ್ಪಷ್ಟ ದಾಖಲೆ ನಿರ್ವಹಣೆ ಮಾಡಲು ಸಹಕಾರಿ ಆಗಲಿದೆ ನಕಲಿ ಪ್ರಯಾಣವನ್ನು ತಡೆಯುವುದು ಸರ್ಕಾರದ ಮೂಲ ಉದ್ದೇಶವಾಗಿದೆ.

ಈ ಯೋಜನೆಗೆ ಅರ್ಹತೆ ಯಾರಿಗಿದೆ:

  • ಕರ್ನಾಟಕದ ಕಾಯಂ ನಿವಾಸಿಯಾಗಿರುವ ಮಹಿಳೆಯರು
  • ಲಿಂಗತ್ವ ಅಲ್ಪಸಂಖ್ಯಾತರು
  • ಶಕ್ತಿ ಯೋಜನೆಯ ಲಾಭ ಪಡೆಯುತ್ತಿರುವವರು
  • 18 ವರ್ಷ ಮೇಲ್ಪಟ್ಟವರು (ಸರ್ಕಾರದ ಮಾರ್ಗಸೂಚಿಯಂತೆ)

ಸ್ಮಾರ್ಟ್ ಕಾರ್ಡ್ ಪಡೆಯುವುದರ ಹಿಂದಿನ ಉದ್ದೇಶ:

  • ಆಧಾರ್ ಕಾರ್ಡ್ ಕಡ್ಡಾಯವಿಲ್ಲ
  • ಸರ್ಕಾರಿ ಬಸ್ಸಿಗೆ ಹತ್ತುವಾಗ ಕಾರ್ಡ್ ತೋರಿಸಿದರೆ ಸಾಕು
  • ಸುಲಭ ವೇಗವಾದ ಮತ್ತು ಸುರಕ್ಷಿತ ಪ್ರಯಾಣವನ್ನು ಮಾಡಬಹುದು ಹಾಗೂ ಇನ್ನಿತರ ಉಪಯೋಗಗಳನ್ನು ಪಡೆದುಕೊಳ್ಳಬಹುದು

ಪ್ರಮುಖ ಪ್ರಯೋಜನಗಳು:

  • ಉದ್ಯೋಗ ಶಿಕ್ಷಣ ಆರೋಗ್ಯ ಸೇವೆಗೆ ಸುಲಭ ಪ್ರವೇಶವನ್ನು ಮಾಡಬಹುದು
  • ಮಹಿಳೆಯರ ಸ್ವಾವಲಂಬನೆಯ ಹೆಚ್ಚಳ ಮಾಡಬಹುದು
  • ಲಿಂಗತ್ವ ಅಲ್ಪಸಂಖ್ಯಾತರಿಗೆ ಗೌರವಯುತ ಪ್ರಯಾಣ ಸೌಲಭ್ಯ
  • ಡಿಜಿಟಲ್ ವ್ಯವಸ್ಥೆಯಿಂದ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು

ಯಾವ ಸಂಸ್ಥೆಗಳು ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಮಾಡುತ್ತವೆ:

  • ರಾಜ್ಯ ಸರ್ಕಾರದ ನಾಲ್ಕು ಸಾರಿಗೆ ನಿಗಮಗಳ ಮೂಲಕ ಸ್ಮಾರ್ಟ್ ಕಾರ್ಡ್ ವಿತರಣೆ ಸೌಲಭ್ಯ ಸಿಗಲಿದೆ
    • ಕೆ ಎಸ್ ಆರ್ ಟಿ ಸಿ (KSRTC)
    • ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ (NWKRTC)
    • ಕೆ ಕೆ ಆರ್ ಟಿ ಸಿ (KKRTC)
    • ಬಿ ಎಂ ಟಿ ಸಿ (BMTC)

ಸ್ಮಾರ್ಟ್ ಕಾರ್ಡ್ ಪಡೆಯುವ ವಿಧಾನ:

ಈ ಕೆಳಗೆ ಕೊಟ್ಟಿರುವ ಕೆಲವು ವಿಧಾನಗಳ ಮೂಲಕ ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಮಹಿಳೆಯರಿಗೆ ಮಾಡಲಾಗುತ್ತದೆ.

  • ನಿಮ್ಮ ಹತ್ತಿರದ ಸರ್ಕಾರಿ ಬಸ್ ಡಿಪೋ ಅಥವಾ ನಿಗದಿತ ಕೇಂದ್ರಗಳಿಗೆ ಭೇಟಿ ನೀಡಬೇಕು
  • ಆಧಾರ್ ಕಾರ್ಡ್ ಹಾಗೂ ವಿಳಾಸ ಪುರವೆಯನ್ನ ಸಲ್ಲಿಸಬೇಕು
  • ಅವರು ಕೊಟ್ಟಿರುವ ಅರ್ಜಿ ಪ್ರತಿಯನ್ನು ಭರ್ತಿ ಮಾಡಬೇಕು
  • ಫೋಟೋ ತೆಗೆದುಕೊಳ್ಳಲಾಗುತ್ತದೆ
  • ಪರಿಶೀಲನೆ ನಂತರ ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಮಾಡಲಾಗುತ್ತದೆ

ಕೊನೆಯ ಮಾತು:

ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಅಡಿ ಉಚಿತವಾಗಿ ಸ್ಮಾರ್ಟ್ ಕಾರ್ಡ್ ನೀಡುವಂತಹ ನಿರ್ಧಾರವು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಇನ್ನಷ್ಟು ಸುಗಮವಾಗಿ ಪ್ರಯಾಣ ನಡೆಸಲು ಸಾಧ್ಯವಾಗುತ್ತದೆ ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಲು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ನಡೆಸಲು ಈ ಒಂದು ಯೋಜನೆ ತುಂಬಾನೇ ಸಹಕಾರಿಯಾಗಲಿದ್ದು ಇದು ಪ್ರಸ್ತುತ ಡಿಜಿಟಲ್ ವ್ಯವಸ್ಥೆಗೆ ಅಡಿಗಲ್ಲು ಹಾಕಿದಂತೆ ಆಗುತ್ತದೆ.

ಇತರೆ ಪ್ರಮುಖ ಲಿಂಕುಗಳು :-

Leave a Reply

Your email address will not be published. Required fields are marked *