JioLink : ಜಿಯೋದಿಂದ ಮತ್ತೊಂದು ಧಮಾಕಾ – ದಿನಕ್ಕೆ 5GB ಹೈ-ಸ್ಪೀಡ್ ಡೇಟಾ!

JioLink

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಜಿಯೋ ಇಂಟರ್ನೆಟ್ ಬಳಕೆ ಮಾಡುತ್ತಿದ್ದೀರಾ? ದಿನಕ್ಕೆ 2 GB ಡೇಟಾ ಸಾಲುತ್ತಿಲ್ಲವಾ? ನಿಮಗಾಗಿ ಜಿಯೋ ಲಿಂಕ್ ಹೊಸ ರಿಚಾರ್ಜ್ ಪ್ಲಾನ್ (JioLink) ಅನ್ನು ಘೋಷಣೆ ಮಾಡಿದೆ.


JioLink

ಈಗಿನ ಕಾಲಘಟ್ಟದಲ್ಲಿ ಎಲ್ಲವೂ ಇಂಟರ್ ನೆಟ್ ಇಂದ ಕೂಡಿದ್ದು, ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಇಂಟರ್ನೆಟ್ ಅಗತ್ಯವಾಗಿದೆ ಹಾಗೂ ಮನೆಯಲ್ಲೇ ಕುಳಿತು ಕೆಲಸ ಮಾಡುವವರಿಗೂ ಇಂಟರ್ನೆಟ್ ಅಗತ್ಯವಾಗಿದೆ. ಅಂತಹ ಸಂದರ್ಭದಲ್ಲಿ ಕೇವಲ ದಿನಕ್ಕೆ 2 GB ಡೇಟಾ ಏನಕ್ಕೂ ಸಾಲುವುದಿಲ್ಲ. ಇದಕ್ಕಾಗಿಯೇ ಜಿಯೋ ಮೂರು ರೀತಿಯ ರಿಚಾರ್ಜ್ ಪ್ಲಾನ್ ಅನ್ನು ಗ್ರಾಹಕರಿಗೆ ಪರಿಚಯಿಸಿದೆ.

ಹೊಸ ರಿಚಾರ್ಜ್ ಪ್ಲಾನ್ ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ? ಅನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳುತ್ತ ಹೋಗೋಣ. ಇನ್ನಷ್ಟು ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ ಕನ್ನಡಹೆಲ್ಫ್ ಗೆ ಭೇಟಿ ನೀಡಿ.

ಜಿಯೋ ಲಿಂಕ್ (JioLink) ಪರಿಚಯಿಸಿದ ಹೊಸ ರಿಚಾರ್ಜ್ ಪ್ಲಾನ್ ಬಗ್ಗೆ:

ಜಿಯೋ ಲಿಂಕ್ ಹೆಚ್ಚು ಇಂಟರ್ನೆಟ್ ಬಳಸುವ ಗ್ರಾಹಕರಿಗೆ ಮೂರು ರೀತಿಯ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದ್ದು, ಈ ರಿಚಾರ್ಜ್ ಪ್ಲಾನ್ ನಲ್ಲಿ ದಿನಕ್ಕೆ 2 GB ಡೇಟಾ ಬದಲು 5 GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಕೆಲವು ದಿನಗಳ ಉಚಿತ ವ್ಯಾಲಿಡಿಟಿ ಆಫರ್ ಗಳನ್ನೂ ಪಡೆದುಕೊಳ್ಳಬಹುದಾಗಿದೆ.

ಇವುಗಳ ಬಗ್ಗೆ ಮಾಹಿತಿಯನ್ನು ಕೆಳಗಿನ ಹಂತದಲ್ಲಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಜಿಯೋ ಲಿಂಕ್ (JioLink) ಪ್ಲಾನ್ ವಿಶೇಷತೆ:
ಇಂಟರ್ನೆಟ್ ಬಳಕೆದಾರರಿಗೆ ಪ್ರತಿ ದಿನಕ್ಕೆ 5 GB ಹೈ ಸ್ಪೀಡ್ ಡೇಟಾ.
ಉಚಿತ ವ್ಯಾಲಿಡಿಟಿ ಸೌಲಭ್ಯ.
ಹೆಚ್ಚಿನ ಇಂಟರ್ನೆಟ್ ಬಳಕೆದಾರರಿಗೆ ಉತ್ತಮ ಹಾಗೂ ಲಾಭದಾಯಕ ಆಯ್ಕೆ

ಮೂರು ರೀತಿಯ ಜಿಯೋ ಲಿಂಕ್ (JioLink) ಡೇಟಾ ಪ್ಲಾನ್ಸ್:

  • ಒಂದು ತಿಂಗಳ ರಿಚಾರ್ಜ್ ಪ್ಲಾನ್:

₹699 ರೂ ಮೌಲ್ಯದ ರಿಚಾರ್ಜ್ ಪ್ಲಾನ್ ಆಗಿದ್ದು, ಇದು 28 ದಿನದ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಜೊತೆಗೆ ಪ್ರತಿ ದಿನಕ್ಕೆ 5 GB ಡೇಟಾವನ್ನು ಪಡೆದುಕೊಳ್ಳಬಹುದು. ಈ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡುವ ಗ್ರಾಹಕರಿಗೆ 16 GB ಡೇಟಾ ಉಚಿತವಾಗಿ ದೊರೆಯಲಿದೆ.

  • ತ್ರೈಮಾಸಿಕ ರಿಚಾರ್ಜ್ ಪ್ಲಾನ್:

₹2,099 ರೂ ಮೌಲ್ಯದ ರಿಚಾರ್ಜ್ ಪ್ಲಾನ್ ಆಗಿದ್ದು, ಇದು 84 ದಿನದ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಜೊತೆಗೆ ಪ್ರತಿ ದಿನಕ್ಕೆ 5 GB ಡೇಟಾವನ್ನು ಪಡೆದುಕೊಳ್ಳಬಹುದು. ಈ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡುವ ಗ್ರಾಹಕರಿಗೆ 48 GB ಡೇಟಾ ಉಚಿತವಾಗಿ ದೊರೆಯಲಿದೆ ಹಾಗೂ ಒಟ್ಟು 14 ದಿನಗಳ ಎಕ್ಸ್ಟ್ರಾ ವ್ಯಾಲಿಡಿಟಿ ಸಿಗಲಿದೆ.

  • ಅರ್ಧ ವಾರ್ಷಿಕ ರಿಚಾರ್ಜ್ ಪ್ಲಾನ್:

₹4,199 ರೂ ಮೌಲ್ಯದ ರಿಚಾರ್ಜ್ ಪ್ಲಾನ್ ಆಗಿದ್ದು, ಇದು 168 ದಿನದ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಜೊತೆಗೆ ಪ್ರತಿ ದಿನಕ್ಕೆ 5 GB ಡೇಟಾವನ್ನು ಪಡೆದುಕೊಳ್ಳಬಹುದು. ಈ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡುವ ಗ್ರಾಹಕರಿಗೆ 96 GB ಡೇಟಾ ಉಚಿತವಾಗಿ ದೊರೆಯಲಿದೆ ಹಾಗೂ ಒಟ್ಟು 28 ದಿನಗಳ ಎಕ್ಸ್ಟ್ರಾ ವ್ಯಾಲಿಡಿಟಿ ಸಿಗಲಿದೆ.

ಗ್ರಾಹಕರಿಗೆ ಸಿಗುವ ಲಾಭ:

  • ಸಾಮಾನ್ಯ ಮೊಬೈಲ್ ರಿಚಾರ್ಜ್ ಪ್ಲಾನ್ ಗಳಿಂದ ಪ್ರತಿ ದಿನಕ್ಕೆ 1.5 GB ದಿಂದ 2 GB ಡೇಟಾವನ್ನು ಪಡೆದುಕೊಂಡರೆ ಜಿಯೋ ಲಿಂಕ್ ನ ಈ ಮೂರು ರಿಚಾರ್ಜ್ ಪ್ಲಾನ್ ಗಳು ಪ್ರತಿ ದಿನಕ್ಕೆ 5 GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.
  • ತ್ರೈಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ಆಯ್ಕೆ ಮಾಡುವ ಗ್ರಾಹಕರಿಗೆ 14 ದಿನಗಳ ವ್ಯಾಲಿಡಿಟಿ ಉಚಿತವಾಗಿ ನೀಡಿದರೆ, ಅರ್ಧ ವಾರ್ಷಿಕ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡುವ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಉಚಿತವಾಗಿ ನೀಡಲಾಗುತ್ತದೆ.
  • ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣವನ್ನು ಪಡೆಯಲು ಹಾಗೂ ವರ್ಕ್ ಫ್ರಮ್ ಹೋಂ ಮಾಡುತ್ತಿರುವವರಿಗೆ ದಿನಪೂರ್ತಿ ವಿಡಿಯೋ ಕಾಫೆರೆನ್ಸ್ ಹಾಗೂ ಕೆಲಸಕ್ಕೆ ಸಂಬಂಧಿಸಿದ ಫೈಲ್ ಗಳನ್ನು ಅಪ್ಲೋಡ್ ಮಾಡಿಲು 5 GB ಡೇಟಾ ಸಾಕಾಗುತ್ತದೆ.
  • ಗ್ರಾಹಕರು ಪ್ರತಿ ರಿಚಾರ್ಜ್ ಗೆ ಉಚಿತ ವ್ಯಾಲಿಡಿಟಿ ಜೊತೆಗೆ ಹೆಚ್ಚುವರಿ ಬೋನಸ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.
  • ಈ ಒಂದು ರಿಚಾರ್ಜ್ ಪ್ಲಾನ್ ಇಂದ ಜಿಯೋ ಟಿವಿ, ಜಿಯೋ ಸಿನಿಮಾದಂತಹ ಆಪ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.
ವಿಶೇಷ ಸೂಚನೆ: “ಜಿಯೋ ಲಿಂಕ್ (JioLink) ನ ಈ ರಿಚಾರ್ಜ್ ಪ್ಲಾನ್ ಕೇವಲ ಡೇಟಾ ಹಾಗೂ ವೈಫೈ ಸೌಲಭ್ಯವನ್ನು ಪಡೆಯಲು ಮಾತ್ರ ಸೀಮಿತವಾಗಿರುತ್ತದೆ. ಇದರಲ್ಲಿ ಕರೆ ಮಾಡುವ ಸೌಲಭ್ಯ ಇರುವುದಿಲ್ಲ.”

ಜಿಯೋ ಸಿಮ್ ಕಾರ್ಡ್ ಹೊಂದಿದವರಿಗೆ ಈ ರಿಚಾರ್ಜ್ ಪ್ಲಾನ್ ಲಭ್ಯವಿದೆಯೇ?

ಎಲ್ಲಾ ಜಿಯೋ ಸಿಮ್ ಬಳಕೆದಾರರಿಗೂ ಈ ಒಂದು ಪ್ರಶ್ನೆ ಮೂಡುವುದು ಸಹಜ. ಈ ರಿಚಾರ್ಜ್ ಪ್ಲಾನ್ ಜಿಯೋ ಸಿಮ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಲಭ್ಯವಾಗುವುದಿಲ್ಲ. ಬದಲಿಗೆ ಜಿಯೋ ಲಿಂಕ್ ಎನ್ನುವ ವಿಶೇಷ ಸಾಧನ ಬಳಸುವವರಿಗೆ ಮಾತ್ರ ಸೀಮಿತವಾಗಿರುತ್ತದೆ.

ಜಿಯೋ ಲಿಂಕ್ (JioLink) ರಿಚಾರ್ಜ್ ಪ್ಲಾನ್ ಗಳ ತುಲನಾತ್ಮಕ ನೋಟ:

ರಿಚಾರ್ಜ್ ಪ್ಲಾನ್ ಮೌಲ್ಯ ವ್ಯಾಲಿಡಿಟಿ ಹೆಚ್ಚುವರಿ ವ್ಯಾಲಿಡಿಟಿ ಸೌಲಭ್ಯ ಬೋನಸ್ ಡೇಟಾ
₹69928 ದಿನಗಳು 16 GB
₹2,09984 ದಿನಗಳು 14 ದಿನಗಳು 48 GB
₹4,199168 ದಿನಗಳು 28 ದಿನಗಳು 96 GB

ಅಂತಿಮವಾಗಿ:

ಜಿಯೋ ಲಿಂಕ್ ಮೂರು ರೀತಿಯ ರಿಚಾರ್ಜ್ ಪ್ಲಾನ್ ಅನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಈ ರಿಚಾರ್ಜ್ ಪ್ಲಾನ್ ಕೇವಲ ಜಿಯೋ ಲಿಂಕ್ ಡಿವೈಸ್ ಹೊಂದಿದವರಿಗೆ ಮಾತ್ರ ಅನ್ವಹಿಸುತ್ತದೆ. ಹಾಗೂ ಇದರಲ್ಲಿ ಕೇವಲ ಡೇಟಾ ಮಾತ್ರ ಬಳಸಲು ಸಾಧ್ಯವಾಗುತ್ತದೆ. ಕರೆಯ ಸೌಲಭ್ಯಗಳಿರುವುದಿಲ್ಲ.

ನೀವೇನಾದರೂ ಜಿಯೋ ಲಿಂಕ್ ಡಿವೈಸ್ ಹೊಂದಿದ್ದರೆ, ಈ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಅನ್ನು ಬಳಸಿಕೊಂಡು ಹೆಚ್ಚಿನ ವ್ಯಾಲಿಡಿಟಿ ಪಡೆಯಿರಿ ಹಾಗೂ ಬೋನಸ್ ಡೇಟಾವನ್ನು ಫ್ರೀ ಆಗಿ ಪಡೆಯಿರಿ.


ಇತರೆ ಪ್ರಮುಖ ಲಿಂಕುಗಳು:

One thought on “JioLink : ಜಿಯೋದಿಂದ ಮತ್ತೊಂದು ಧಮಾಕಾ – ದಿನಕ್ಕೆ 5GB ಹೈ-ಸ್ಪೀಡ್ ಡೇಟಾ!

Leave a Reply

Your email address will not be published. Required fields are marked *