Free Bus: ಸರ್ಕಾರ ಘೋಷಣೆ: ಪರೀಕ್ಷೆಗೆ ಹೋಗಲು ಬಸ್ ಪಾಸ್ ಬೇಕಿಲ್ಲ, ಹಾಲ್ ಟಿಕೆಟ್ ಇದ್ರೆ ಸಾಕು!

Free Bus

ಕರ್ನಾಟಕ : ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂತು ಭರ್ಜರಿ ಗುಡ್ ನ್ಯೂಸ್. ಹೌದು ಪರೀಕ್ಷೆಗೆ ಹಾಜರಾಗುವ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸರ್ಕಾರಿ ಸೌಲಭ್ಯವನ್ನಇದೀಗ ಘೋಷಿಸಿದೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ  (PUC Exam) ದಿನಗಳಲ್ಲಿ ಉಚಿತ ಪ್ರಯಾಣ (Free Bus) ಸೌಲಭ್ಯವನ್ನು ಮಾಡಿಕೊಟ್ಟಿದೆ. ಇಂತ ಒಂದು ಯೋಜನೆಯನ್ನ ಯಾವ ಸರ್ಕಾರಗಳು ಇದುವರೆಗೂ ಘೋಷಣೆ ಮಾಡಿರಲಿಲ್ಲ. ಆದರೆ ಇದೀಗ 2026 ನೇ ಸಾಲಿನಲ್ಲಿ ನಮ್ಮ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಒಂದು ಭಾಗ್ಯವನ್ನು ಕಲ್ಪಿಸಿಕೊಟ್ಟಿದೆ.

Free Bus Information In Kannada

Free Bus

“ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಸಾಕು, ಬಸ್ ಪಾಸ್ ಅಗತ್ಯವಿಲ್ಲ”

ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಒಂದು ರೀತಿಯ ಒತ್ತಡ, ಆತಂಕ ಮತ್ತು ಇನ್ನೊಂದು ಕಡೆ ಪ್ರಯಾಣದ ಚಿಂತೆ, ಪರೀಕ್ಷೆಗೂ ಮುನ್ನವೇ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಈ ರೀತಿಯ ಚಿಂತೆ ತಪ್ಪಿದ್ದಲ್ಲ. ಇಂತಹ ಕಷ್ಟವನ್ನು ರಾಜ್ಯ ಸರ್ಕಾರ ಅರಿತುಕೊಂಡು ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ (Free Bus) ಸೌಲಭ್ಯ ಒದಗಿಸಲು ಸಜ್ಜಾಗಿದೆ.

ಕರ್ನಾಟಕ ರಾಜ್ಯದಲ್ಲಿ 2025/26ನೇ ಸಾಲಿನ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಅನುಕೂಲ ಇದೀಗ ಸರ್ಕಾರ ಕಲ್ಪಿಸಿದೆ.  KSRTC ಮತ್ತು BMTC ಬಸ್ ನಲ್ಲಿ ಸಾಮಾನ್ಯ (Ordinary) ಪ್ರಯಾಣ ಪ್ರಯಾಣ ಬೆಳೆಸುವ ವಿದ್ಯಾರ್ಥಿಗಳು ಟಿಕೆಟ್ ಹಣ ಕೊಡುವ ಅಗತ್ಯವಿಲ್ಲ ಫ್ರೀಯಾಗಿ ತಮ್ಮ ಹಾಲ್ ಟಿಕೆಟ್ ತೋರಿಸಿ ಎಕ್ಸಾಮ್ ಸೆಂಟರ್ ಗೆ ತೆರಳಬಹುದು.

“ಸರ್ಕಾರದ ಯೋಜನೆಯಿಂದ ಸಾವಿರಾರು ವಿದ್ಯಾರ್ಥಿಗಳು ಈ ವರ್ಷ ಪ್ರಯೋಜನ ಪಡೆಯುವುದಂತೂ ಹೌದು”

ಸರ್ಕಾರದ ಬಸ್ ಭಾಗ್ಯದ ಹೈಲೈಟ್ಸ್ :-

ಮುಖ್ಯ ಅಂಶಸ್ಪಷ್ಟ ವಿವರ
ಅರ್ಹರು 2ನೇ PUC ಪರೀಕ್ಷಾರ್ಥಿಗಳು
ಅಗತ್ಯ ದಾಖಲೆಹಾಲ್ ಟಿಕೆಟ್ (ಬಸ್ ಪಾಸ್ ಬೇಡ)
ಬಸ್ ಪ್ರಕಾರKSRTC & BMTC ಸಾಮಾನ್ಯ (Ordinary) ಬಸ್‌ಗಳು
ಅನ್ವಯ ದಿನಗಳುಪರೀಕ್ಷೆ ನಡೆಯುವ ದಿನಗಳು ಮಾತ್ರ
ಪ್ರಯಾಣ ಮಾರ್ಗಮನೆ ⇨ ಪರೀಕ್ಷಾ ಕೇಂದ್ರ ⇨ ಮನೆ
ಪ್ರಯೋಜನಗಳುಆರ್ಥಿಕ ಸಹಾಯ, ಸಮಯಕ್ಕೆ ತಲುಪಲು ಅನುಕೂಲ, ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಯಾಣ ಸುಲಭ
ಗಮನಿಸಬೇಕಾದುದುಹಾಲ್ ಟಿಕೆಟ್ ಇಲ್ಲದಿದ್ದರೆ ಪ್ರಯಾಣ ಸಿಗುವುದಿಲ್ಲ; ಕೇವಲ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣ; ಬಸ್ ಸಿಬ್ಬಂದಿ ಸೂಚನೆಗಳನ್ನು ಪಾಲಿಸಬೇಕು

ಈ ಸೌಲಭ್ಯವನ್ನು ಸರ್ಕಾರ ಯಾಕೆ ನೀಡಿದೆ ಎಂಬುದರ ಅರಿವು ನಿಮಗಿದೆಯೇ ?

  • ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್ (Free Bus)ಪ್ರಯಾಣ ಸೌಲಭ್ಯ ಕಲ್ಪಿಸುವುದರಿಂದ ಅವರಿಗೆ ಮಹತ್ವದ ಆರ್ಥಿಕ ಸಹಾಯ ದೊರೆತಂತಾಗುತ್ತದೆ. ಹಲವು ಕುಟುಂಬಗಳಿಗೆ ಪರೀಕ್ಷೆಯ ದಿನದಲ್ಲಿ ಆಗುವ ಪ್ರಯಾಣ ವೆಚ್ಚವು ದುಬಾರಿ ಎನಿಸುತ್ತದೆ ಹಾಗಾಗಿ ಈ ಸೌಲಭ್ಯದಿಂದ ವಿದ್ಯಾರ್ಥಿಗಳು ಯಾವುದೇ ಹಣದ ಚಿಂತೆ ಇಲ್ಲದೆ ತಮ್ಮ ಪಿಯುಸಿ ಪರೀಕ್ಷೆ ಬರೆಯಲು ಸಿದ್ಧರಾಗಬಹುದು. ಈ ಕಾರಣದಿಂದಾಗಿ ಸರ್ಕಾರವು ಇಂಥ ಒಂದು ಆರ್ಥಿಕ ಸಹಾಯ ಒದಗಿಸಲು ಮುಂದಾಗಿದೆ.
  • ಪರೀಕ್ಷಾ ದಿನದಲ್ಲಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪುವುದು ಬಹಳಷ್ಟು ಮುಖ್ಯವಾಗಿರುತ್ತದೆ. ಉಚಿತ ಪ್ರಯಾಣ (Free Bus) ಸೌಲಭ್ಯದಿಂದ ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆಯನ್ನು ಸುಲಭವಾಗಿ ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬಹುದು ಇದರಿಂದ ತಡವಾಗುವ ಆತಂಕವು ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಾ ಬರುತ್ತದೆ.
  • ಗ್ರಾಮೀಣ ಹಾಗೂ ದೂರದ ಪ್ರದೇಶದಲ್ಲಿ ನೆಲೆಯಾಗಿರುವ ವಿದ್ಯಾರ್ಥಿಗಳಿಗೆ ಈ ಯೋಚನೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಹಾಗೆ ಕೆಲವು ಗ್ರಾಮೀಣ ಅಥವಾ ದೂರದ ಪ್ರದೇಶದಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇರುತ್ತದೆ ಹಾಗೆ ಅಲ್ಲಿ ಆಟೋ, ಖಾಸಗಿ ಬಸ್, ಟ್ಯಾಕ್ಸಿ ಅಥವಾ ಇತರ ಸಾರಿಗೆ ವ್ಯವಸ್ಥೆಗಳು ಹೆಚ್ಚು ಲಭ್ಯವಿರುವುದಿಲ್ಲ ಅಂತಹ ಸ್ಥಳದಲ್ಲಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಮುಖ್ಯವಾಗಿ ಸರ್ಕಾರ ನಡೆಸಿರುವ ಬಸ್ ಗಳನ್ನು ಜನರು ಅವಲಂಬಿಸಿರುತ್ತಾರೆ. ಆದ್ದರಿಂದ ಈ ಉಚಿತ ಪ್ರಯಾಣ ಅವಕಾಶವೂ ಗ್ರಾಮೀಣ ವಿದ್ಯಾರ್ಥಿಗಳಿಗಂತು ಹೆಚ್ಚು ಅನುಕೂಲವನ್ನು ಮಾಡಿಕೊಡುತ್ತದೆ
  • ಸರ್ಕಾರದ ಈ ನಿರ್ಧಾರದಿಂದ ಪ್ರಯಾಣ ವೆಚ್ಚದ ಭಾರ ಕಡಿಮೆಯಾಗುವುದರಿಂದ ಪೋಷಕರಿಗೂ ಸಹಾಯವಾಗುತ್ತದೆ. ವಿಶೇಷವಾಗಿ ಒಂದಕ್ಕಿಂತ ಹೆಚ್ಚು ಮಕ್ಕಳು ಪರೀಕ್ಷೆಗೆ ಹಾಜರಾಗುವ ಕುಟುಂಬಗಳಿಗೆ ಇದು ದೊಡ್ಡ ಆರ್ಥಿಕ ನೆರವಾಗಿ ಪರಿಗಣಿಸುತ್ತದೆ. ಅಷ್ಟೇ ಅಲ್ಲದೆ ಒಟ್ಟಾರೆ ಈ ಸೌಲಭ್ಯವು ವಿದ್ಯಾರ್ಥಿಗಳ ಶಿಕ್ಷಣದ ಪ್ರಯಾಣವನ್ನು ಸುಗಮಗೊಳಿಸುವ ಮಹತ್ವದ ಯೋಜನೆ ಎಂದರೆ ತಪ್ಪಾಗುವುದಿಲ್ಲ.

ಸೌಲಭ್ಯ ಲಭ್ಯವಾಗುವ ಅವಧಿ :-

ಸರ್ಕಾರವು ವಿದ್ಯಾರ್ಥಿಗಳಿಗಾಗಿ ಈ ಯೋಜನೆಯನ್ನ ಸಿದ್ಧಪಡಿಸಿರುವುದು ಕೆಲವೇ ದಿನಗಳು ಮಾತ್ರ. ಹಾಗಿದ್ರೆ ಎಷ್ಟು ದಿನ ಯೋಜನೆ ಜಾರಿ ಇರುತ್ತೆ ? ಇವೆಲ್ಲವನ್ನೂ ನೋಡುತ್ತಾ ಹೋಗೋಣ ಬನ್ನಿ.

“ಪರೀಕ್ಷೆ ನಡೆಯುವ ದಿನಗಳಲ್ಲಿ ಮಾತ್ರ ಅಂದರೆ ಸರ್ಕಾರ ಅಥವಾ ಸಂಸ್ಥೆ ನೀಡಿರುವ ಉಚಿತ ಪ್ರಯಾಣದ ಸೌಲಭ್ಯವು ಸೀಮಿತ ಕಾಲಕ್ಕೆ ಲಭ್ಯವಿರುತ್ತದೆ. ಈ ಸಮಯವು ಕೇವಲ ವಿದ್ಯಾರ್ಥಿಯ ಪರೀಕ್ಷೆಯ ದಿನಗಳನ್ನು ಮಾತ್ರ ಒಳಗೊಂಡಿರುತ್ತದೆ”.

  • ಅಂದರೆ ಉದಾಹರಣೆಯಾಗಿ ಈ ಕೆಳಗೆ ನೋಡಿ : ಪರೀಕ್ಷೆ ಸರಣಿ ಮೂರು ದಿನಗಳಿದ್ದರೆ ಈ ಉಚಿತ ಪ್ರಯಾಣ ಪ್ರಯಾಣದ (Free Bus) ಅವಕಾಶವೂ ಕೇವಲ ಮೂರು ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದು ಪರೀಕ್ಷೆ ಇಲ್ಲದ ದಿನಗಳಲ್ಲಿ ಯಾವುದೇ ಉಚಿತ ಪ್ರಯಾಣ ಸೌಲಭ್ಯಗಳು ಲಭ್ಯವಿರುವುದಿಲ್ಲ. ಈ ದಿನದಲ್ಲಿ ವಿದ್ಯಾರ್ಥಿಗಳು ಸಾಮಾನ್ಯರಂತೆ ಟಿಕೆಟ್ ಗೆ ಹಣ ಕೊಟ್ಟು ತೆರಳಬೇಕಾಗುತ್ತದೆ.
  • ವಿದ್ಯಾರ್ಥಿಗಳು ಮನೆಯಿಂದ ಪರೀಕ್ಷೆ ಬರೆಯುವ ಕೇಂದ್ರದ ವರೆಗೆ ಅಂದರೆ ವಿದ್ಯಾರ್ಥಿಯು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಲು.
  • ವಿದ್ಯಾರ್ಥಿಯು ಪರೀಕ್ಷೆಗೆ ಹೋಗುವ ದಾರಿ ಮತ್ತು ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವ ದಾರಿ ಎರಡಕ್ಕೂ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಒದಗಿಸಿದೆ.

ವಿದ್ಯಾರ್ಥಿಗಳಿಗೆ ಯಾವ ಬಸ್ ನಲ್ಲಿ ಉಚಿತ ಪ್ರಯಾಣ ಭಾಗ್ಯ :-

  • 2025/26 ನೇ ಸಾಲಿನ ಉಚಿತ ಬಸ್ (Free Bus) ಪ್ರಯಾಣವು ಸಾಮಾನ್ಯ ಬಸ್ ಗಳಿಗೆ ಮಾತ್ರ ಅನ್ವಯವಾಗಿರುತ್ತದೆ.
  • ವಿದ್ಯಾರ್ಥಿಗಳು ತಮ್ಮ ಹಾಡ್ ಟಿಕೆಟ್ ತೋರಿಸಿ ಕೆಎಸ್ಆರ್ಟಿಸಿ ಸಾಮಾನ್ಯ ಭಟ್ ನಲ್ಲಿ ತಮ್ಮ ಪ್ರಯಾಣವನ್ನ ಸುಖಕರವಾಗಿ ಬೆಳೆಸಬಹುದು.
  • ಸರ್ಕಾರವು ವಿದ್ಯಾರ್ಥಿಗಳಿಗಾಗಿ ಕೇವಲ ಸಾಮಾನ್ಯ ಬಸ್ಗಳಿಗೆ ಈ ಉಚಿತ ಪ್ರಯಾಣದ ಅವಕಾಶವನ್ನು ಮಾಡಿಕೊಟ್ಟಿದೆ ವಿಶೇಷ ಬಸ್ಗಳಿಗೆ ಈ ಸೌಲಭ್ಯ ಇರುವುದಿಲ್ಲ.
  • KSRTC ಬಸ್ ನಲ್ಲಿ ಮಾತ್ರ ಈ ಸೌಲಭ್ಯ ಇರದೆ ಬಿಎಂಟಿಸಿ ಬಸ್ ನಲ್ಲಿಯೂ ವಿದ್ಯಾರ್ಥಿಗಳು ಈ ಸೌಲಭ್ಯದ ಲಾಭವನ್ನು ಪಡೆಯಬಹುದು.
  • ವೋಲ್ವೋ, ಎಸಿ, ರಾಜಹಂಸ, ಸ್ಲೀಪರ್ ಅಥವಾ ಇತರೆ ಐಷಾರಾಮಿ ಬಸ್‌ಗಳಿಗೆ ಸರ್ಕಾರ ಈ ಸೌಲಭ್ಯ ನೀಡಿದೆ.

ಯೋಜನೆಯ ಸೌಲಭ್ಯ ಪಡೆಯಲು ಯಾರು ಅರ್ಹರು ?

ಸ್ನೇಹಿತರೆ ಸರ್ಕಾರ ಯಾವುದೇ ಒಂದು ಯೋಜನೆಯನ್ನ ಅನುಷ್ಠಾನಗೊಳಿಸಿದರು ಅದಕ್ಕೆ ಒಂದಿಷ್ಟು ಮಾನದಂಡಗಳನ್ನ ರೂಪಿಸಿರುತ್ತದೆ ಅಂದರೆ ಯಾರು ಯೋಚನೆಗೆ ಅರ್ಹರು, ಯಾರು ಅರ್ಹರಾಗಿರುವುದಿಲ್ಲ ಎನ್ನುವ ಮಾಹಿತಿಯನ್ನು ಹೊರಡಿಸಿರುತ್ತದೆ. ಅದೇ ರೀತಿ ಈ ಒಂದು ಯೋಜನೆಯಲ್ಲಿ ಲಾಭ ಪಡೆಯಲು ಯಾರು ಅರ್ಹರು ಎನ್ನುವುದನ್ನ ಈ ಕೆಳಗೆ ನೋಡೋಣ.

  • ವಿದ್ಯಾರ್ಥಿಗಳು 2025 26ನೇ ಸಾಲಿನ ಪರೀಕ್ಷೆ  (PUC Exam) ಬರೆಯಲು ಸಿದ್ಧವಿರುವ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
  • ಹಾಗೆ ಸೆಕೆಂಡ್ ಪಿಯುಸಿ ಎಕ್ಸಾಮ್ ಬರೆಯಲು ಸಿದ್ದರಾಗುತ್ತಿರುವ ವಿದ್ಯಾರ್ಥಿಗಳು ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು.
  • ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು
  • ರಾಜ್ಯ ಮಟ್ಟದ ಅಥವಾ ಸರ್ಕಾರಿ ಪರೀಕ್ಷಾರ್ಥಿಗಳು

ವಿದ್ಯಾರ್ಥಿಗಳಲ್ಲಿ ಕಡ್ಡಾಯವಾಗಿ ಇರಬೇಕಾದ ಪ್ರಮುಖ ದಾಖಲಾತಿಗಳು :-

ಕರ್ನಾಟಕ ಸರ್ಕಾರ ತಂದಿರುವ ಮತ್ತೊಂದು ಭಾಗ್ಯವೇನೆಂದರೆ ಕೇವಲ ಹಾಲ್ ಟಿಕೆಟ್ ಮೂಲಕ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗೆ ತೆರಳುವ ಅವಕಾಶವನ್ನ ಮಾಡಿ ಕೊಟ್ಟಿದೆ.

  • ವಿದ್ಯಾರ್ಥಿಗಳು ಬಸ್ ನಲ್ಲಿ ಪ್ರಯಾಣ (Free Bus) ಮಾಡಲು ಕಡ್ಡಾಯವಾಗಿ ಹಾಲ್ ಟಿಕೆಟ್ ಇರಬೇಕಾಗುತ್ತದೆ
  • ಬಸ್ ಪಾಸ್ ಅಗತ್ಯವಿಲ್ಲ
  • ಯಾವುದೇ ಹೆಚ್ಚುವರಿ ದಾಖಲೆ ಬೇಡ

ವಿದ್ಯಾರ್ಥಿಗಳು ಈ ಸೂಚನೆಯನ್ನು ಗಮನಿಸಲೇಬೇಕು :

  • ಹಾಲ್ ಟಿಕೆಟ್ ಮರೆತರೆ ಉಚಿತ ಪ್ರಯಾಣ (Free Bus) ಸಿಗುವುದಿಲ್ಲ
  • ಪರೀಕ್ಷಾ ದಿನದಲ್ಲಿ ಮಾತ್ರ ಸೌಲಭ್ಯ ವಿದ್ಯಾರ್ಥಿಗಳಿಗೆ ಸಿಗುತ್ತದೆ
  • ಸಾಮಾನ್ಯ ಬಸ್ ಮಾತ್ರ ಬಳಸಬೇಕು ಇನ್ನುಳಿದ ಯಾವುದೇ ಬಸ್ ನಲ್ಲಿ ಈ ಸೌಲಭ್ಯ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ
  • ವಿದ್ಯಾರ್ಥಿಗಳು ತಪ್ಪದೆ ಬಸ್ ಸಿಬ್ಬಂದಿಯ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು

ಕೊನೆಯದಾಗಿ ವಿದ್ಯಾರ್ಥಿಗಳಿಗೆ ನನ್ನ ಸಲಹೆ :-

“ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕಿಂತ ಮೊದಲು ತಲುಪುವಂತೆ ಪ್ರಯಾಣ ಯೋಚನೆ ಮಾಡಿಕೊಳ್ಳಿ. ಹಾಗೆಯೇ ಹಾಕಿದೆ ಅಲ್ಲ ಸುಡಕ್ಷವಾಗಿ ಇಟ್ಟುಕೊಳ್ಳುವುದು ವಿದ್ಯಾರ್ಥಿಗಳು ಜವಾಬ್ದಾರಿ ಆಗಿರುತ್ತದೆ ಮತ್ತು ಸಾಧ್ಯವಾದರೆ ಒಂದು ಜೆರಾಕ್ಸ್ ಪ್ರತಿಯನ್ನು ಕೂಡ ಇಟ್ಟುಕೊಳ್ಳಿ”.

ಕೊನೆಯ ಮುಖ್ಯ ಅಂಶ :-

2025-26ನೇ ಸಾಲಿನ PUC ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರದ ವರೆಗೆ ಹೋಗಲು ಮತ್ತು ಬರಲು ಪ್ರವೇಶ ಪತ್ರ ತೋರಿಸಿ ಸಂಸ್ಥೆಯ ಸಾಮಾನ್ಯ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಬಸ್ ಕಂಡಕ್ಟರ್ ಗೆ ಹಾಲ್ ಟಿಕೆಟ್ ತೋರಿಸಿ ವಿದ್ಯಾರ್ಥಿಗಳು ಪ್ರಯಾಣಿಸಬಹುದು.

ಇತರೆ ಪ್ರಮುಖ ಲಿಂಕುಗಳು :-

2 thoughts on “Free Bus: ಸರ್ಕಾರ ಘೋಷಣೆ: ಪರೀಕ್ಷೆಗೆ ಹೋಗಲು ಬಸ್ ಪಾಸ್ ಬೇಕಿಲ್ಲ, ಹಾಲ್ ಟಿಕೆಟ್ ಇದ್ರೆ ಸಾಕು!

Leave a Reply

Your email address will not be published. Required fields are marked *